ನೀವು ಅಪಾರ್ಟ್ಮೆಂಟ್ನಲ್ಲಿದ್ದೀರಾ? ವಾಸ್ತು ದೋಷ ಹೋಗಲಾಡಿಸಲು ಇದನ್ನು ಅನುಸರಿಸಿ...

ನಮಗೆಲ್ಲರಿಗೂ ಸ್ವಂತ ಮನೆ ಹೊಂದುವ ಕನಸು ಇರುತ್ತದೆ. ಮೊದಲು ಜನ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಭೂಮಿ ಖರೀದಿಸಿ ಮನೆ ನಿರ್ಮಿಸಿಕೊಳ್ಳುತ್ತಿದ್ದರು.

ವಾಸ್ತು ಪ್ರಕಾರ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮನೆಯನ್ನು ಕಟ್ಟಿಸಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಈಗೇನಿದ್ದರೂ ಕೆಲಸಕ್ಕೆ ಹತ್ತಿರವಿರುವ ಮನೆ ಸಿಕ್ಕರೆ ಸಾಕು ಎಂಬಾತಾಗಿದೆ. ಹಾಗೊಂದು ವೇಳೆ ಎಲ್ಲಾದಕ್ಕು ಹತ್ತಿರದಲ್ಲಿರುವ ಮನೆ ಸಿಕ್ಕರೆ ಹಿಂದೆ ಮುಂದೆ ನೋಡದೆ ನಾವು ಮನೆ ಖರೀದಿ ಮಾಡುತ್ತೇವೆ.

Vastu tips to get rid of negative energy at home in kannada

ಇನ್ನೂ ಬೆಲೆ ವಿಚಾರಕ್ಕೆ ಬಂದರೆ ಈಗ ಅನೇಕ ಫ್ಲಾಟ್ ಅಪಾರ್ಟ್ ಮೆಂಟ್ ಮನೆಗಳು ಕಡಿಮೆ ಬೆಲೆಗೆ ಲಭ್ಯವಿವೆ. ಆದರೆ ಈ ಅಪಾರ್ಟ್ ಮೆಂಟ್ ಮನೆಗಳು ಸಂಪೂರ್ಣವಾಗಿ ವಾಸ್ತು ಪ್ರಕಾರವೆ ಎಂದು ಹೇಳಲಾಗುವುದಿಲ್ಲ. ಕೆಲವು ವಿಷಯಗಳು ಮಾತ್ರ ವಾಸ್ತು ಪ್ರಕಾರವಾಗಿ ಇವುಗಳನ್ನು ನಿರ್ಮಿಸಲಾಗಿರುತ್ತದೆ.

ಅದಾಗ್ಯೂ ಕೂಡ ನಾವು ಇವುಗಳಲ್ಲಿ ವಾಸ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಇಂತಹ ವಾಸ್ತು ದೋಷಗಳಿರುವ ಮನೆಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ಇರುತ್ತದೆ. ಇಂತಹ ಮನೆಗಳಲ್ಲಿ ಇದ್ದರೆ ಆ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗಿ ವೈವಾಹಿಕ ಜೀವನ ಮತ್ತು ಸಂಸಾರದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ.

ಹಾಗಂತ ಈ ವಾಸ್ತು ದೋಷಗಳನ್ನು ಹೋಗಲಾಡಿಸಲು ಅಪಾರ್ಟ್‌ಮೆಂಟ್‌ಗಳನ್ನು ಕೆಡವಿ ದುರಸ್ತಿ ಮಾಡಲಾಗುವುದಿಲ್ಲ. ಆದರೆ ಮನೆಯಲ್ಲಿರುವ ವಾಸ್ತು ದೋಷಗಳನ್ನು ಹೋಗಲಾಡಿಸಲು ಕೆಲವು ಸರಳ ಮಾರ್ಗಗಳಿವೆ. ಈಗ ಅದರ ಬಗ್ಗೆ ನೋಡೋಣ.

Vastu tips to get rid of negative energy at home in kannada

ಇದನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಿ

ವಾಸ್ತು ಪ್ರಕಾರ ಮನೆಯ ಈಶಾನ್ಯ ದಿಕ್ಕು ಅತ್ಯಂತ ಶುಭ ದಿಕ್ಕು. ಈ ದಿಕ್ಕಿನಲ್ಲಿ ಬಹಳಷ್ಟು ಧನಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ, ಈಶಾನ್ಯ ದಿಕ್ಕಿನಲ್ಲಿ ಕೆಲ ವಸ್ತುಗಳನ್ನು ಇಡಬಹುದು. ಉದಯಿಸುವ ಸೂರ್ಯ, ಹಾರುವ ಪಕ್ಷಿಗಳು, ಮನಿ ಪ್ಲಾಂಟ್, ಹಾವಿನ ಗಿಡ ಮುಂತಾದವುಗಳ ಚಿತ್ರಣವನ್ನು ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ವಾಸ್ತು ದೋಷಗಳ ಪರಿಣಾಮ ಕಡಿಮೆಯಾಗುತ್ತದೆ.

ಕುದುರೆಯ ಪ್ರತಿಮೆಯನ್ನು ಇರಿಸಿ

ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಮನೆಯ ಪ್ರವೇಶದ್ವಾರದ ಮೂಲಕ ಪ್ರವೇಶಿಸುತ್ತವೆ. ಹಾಗಾಗಿ ಮನೆಯಲ್ಲಿ ಸದಾ ಪಾಸಿಟಿವ್ ಎನರ್ಜಿ ತುಂಬಿದ್ದರೆ ಮನೆಯ ಪ್ರವೇಶ ದ್ವಾರದಲ್ಲಿ ಕುದುರೆಯ ಮೂರ್ತಿ ಇಡುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಕುದುರೆಯ ಮೂರ್ತಿಯನ್ನು ಈ ರೀತಿ ಇರಿಸಿದಾಗ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.

ಕೆಂಪು ದೀಪ ಇರಿಸಿ

ನಿಮ್ಮ ಮನೆಯ ಅಡುಗೆ ಮನೆಯಲ್ಲಿ ವಾಸ್ತು ಕೊರತೆ ಇದ್ದರೆ ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿ ಮಣ್ಣಿನ ದೀಪವನ್ನು ಇರಿಸಿ ಮತ್ತು ಅದು ಯಾವಾಗಲೂ ಉರಿಯುತ್ತಿರಲಿ. ಹೀಗೆ ಮಾಡುವುದರಿಂದ ಅಡುಗೆ ಮನೆಯಲ್ಲಿ ವಾಸ್ತು ಕೊರತೆಯಿಂದ ಎದುರಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.

ಸಮುದ್ರದ ಉಪ್ಪು ಸೇರಿಸಿ

ವಾಸ್ತು ಪ್ರಕಾರ, ಮನೆಯಲ್ಲಿನ ವಾಸ್ತು ಕೊರತೆಯನ್ನು ಹೋಗಲಾಡಿಸಲು ಕಲ್ಲು ಉಪ್ಪು ಬಹಳಷ್ಟು ಸಹಾಯ ಮಾಡುತ್ತದೆ. ಅದಕ್ಕಾಗಿ ಆ ಕಲ್ಲು ಉಪ್ಪನ್ನು ಒಂದು ಬಟ್ಟಲಿನಲ್ಲಿ ಹಾಕಿ ಟಾಯ್ಲೆಟ್ ಮತ್ತು ಬಾತ್ ರೂಂನಲ್ಲಿ ಇಡಿ. ಈ ಉಪ್ಪನ್ನು ವಾರಕ್ಕೊಮ್ಮೆ ನೀರಿನಲ್ಲಿ ಕರಗಿಸಬೇಕು ಮತ್ತು ಮತ್ತೆ ಬೌಲ್ ಅನ್ನು ತಾಜಾ ಕಲ್ಲು ಉಪ್ಪಿನಿಂದ ತುಂಬಿಸಬೇಕು. ಅಲ್ಲದೆ ವಾರಕ್ಕೊಮ್ಮೆ ನೀರಿಗೆ ಕಲ್ಲು ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಆ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸಿ.

ಸಮುದ್ರದ ಫೋಟೋ

ಮಲಗುವ ಕೋಣೆ ಸರಿಯಾದ ದಿಕ್ಕಿನಲ್ಲಿರಬೇಕು. ಅಂದರೆ ಅದು ನೈಋತ್ಯ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಹಾಗಾಗದಿದ್ದಲ್ಲಿ ವಾಸ್ತು ದೋಷಗಳಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ ಮತ್ತು ಒಳ್ಳೆಯ ನೆಮ್ಮದಿಯ ನಿದ್ದೆ ಬರದಂತೆ ತಡೆಯುತ್ತದೆ. ನೀವು ಮಲಗುವ ಕೋಣೆಯಲ್ಲಿ ಶಾಂತ ಸಾಗರ ಫೋಟೋವನ್ನು ಇರಿಸಬಹುದು. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+