Tips for Love: ಈ 5 ವಾಸ್ತು ಸಲಹೆಗಳನ್ನು ಅನುಸರಿಸಿದರೆ ಬಯಸಿದ ಪ್ರೀತಿ ಸಿಗುತ್ತೆ
ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯು ನಿಜವಾದ ಪ್ರೀತಿಯನ್ನು ಹುಡುಕಲು ಬಯಸುತ್ತಾನೆ. ಆದರೆ ಅನೇಕ ಜನರು ಅದೆಷ್ಟೇ ಕಷ್ಟಪಟ್ಟರು ನಿಜವಾದ ಪ್ರೀತಿಯನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಹೀಗಾದರೆ ಜೀವನ ಅಪೂರ್ಣವಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಕೆಲ ವಿಧಾನಗಳಿವೆ. ನೀವು ಅವುಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಆಕರ್ಷಿಸಬಹುದು. ಇದರರ್ಥ ನೀವು ಬಯಸಿದ ಪ್ರೀತಿಯನ್ನು ಪಡೆಯಲು ಬಯಸಿದರೆ, ನೀವು ವಾಸ್ತು ಶಾಸ್ತ್ರದ ಈ ಪರಿಹಾರಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದರೆ ವಾಸ್ತು ಶಾಸ್ತ್ರದ ಯಾವ ಪರಿಹಾರಗಳಿಂದ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ನೀವು ಪಡೆಯಬಹುದು ಎಂಬುದನ್ನು ತಿಳಿಯೋಣ.

ಮಲಗುವ ಕೋಣೆಯಲ್ಲಿ ಪ್ರೀತಿಯ ಪಕ್ಷಿಗಳ ಫೋಟೋ
ನಿಜವಾದ ಪ್ರೀತಿಯನ್ನು ಪಡೆಯಲು, ಎರಡು ಸುಂದರವಾದ ಪಕ್ಷಿಗಳ ಫೋಟೋಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಆಕರ್ಷಿಸುತ್ತದೆ. ಹಕ್ಕಿಗಳ ಜೋಡಿ ಫೋಟೋ ನಿಮ್ಮ ಮನೆಗೆ ಪ್ರೀತಿಯ ಶಕ್ತಿಯನ್ನು ಆಕರ್ಷಿಸುತ್ತದೆ.
ಮನೆಯಲ್ಲಿ ಬಿಳಿ ಬೆಳಕನ್ನು ಇರಿಸಿ
ಅನೇಕ ಜನರು ರಾತ್ರಿಯಲ್ಲಿ ಹಳದಿ ಬಲ್ಬ್‌ಗಳನ್ನು ಬೆಳಗಿಸಲು ಇಷ್ಟಪಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ಅದು ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಅಡ್ಡಿಪಡಿಸಬಹುದು. ನಿಮ್ಮ ಮನೆಯಲ್ಲಿ ಪ್ರೀತಿ ಮತ್ತು ಸಕಾರಾತ್ಮಕ ಶಕ್ತಿ ಇರಬೇಕು. ಇದಕ್ಕಾಗಿ ನೀವು ರಾತ್ರಿಯಲ್ಲಿ ಬಿಳಿ ಬಣ್ಣದ ಲೈಟ್ ಅಂದರೆ ಬಿಳಿ ಬಣ್ಣದ ಬಲ್ಬ್ ಅನ್ನು ಮಾತ್ರ ಹಾಕಬೇಕು.
ನೈಸರ್ಗಿಕ ಬೆಳಕು ಮನೆಯೊಳಗೆ ಬರಲಿ
ಮನೆಯಲ್ಲಿ ನೈಸರ್ಗಿಕ ಬೆಳಕು ಅಂದರೆ ಸೂರ್ಯನ ಬೆಳಕು ಕೂಡ ಬಹಳ ಮುಖ್ಯ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡುತ್ತದೆ. ನಿಮ್ಮ ಮನೆಯಲ್ಲಿ ಕಿಟಕಿಗಳು ಇರಬೇಕು. ಇದರಿಂದ ಸೂರ್ಯನ ಬೆಳಕು ಕೋಣೆಗೆ ತಲುಪುತ್ತದೆ. ಇದರಿಂದ ಪ್ರೀತಿ ನಿಮ್ಮ ಜೀವನದಲ್ಲಿ ಉಳಿಯುತ್ತದೆ.

ಮನೆಯಲ್ಲಿ ರಾಧಾ-ಕೃಷ್ಣರ ಫೋಟೋ ಹಾಕಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ರಾಧಾ-ಕೃಷ್ಣರ ಫೋಟೋಗಳನ್ನು ಹಾಕಿದರೆ ನಿಮ್ಮ ಜೀವನದಲ್ಲಿ ಎಂದಿಗೂ ಪ್ರೀತಿಗೆ ಕೊರತೆಯಾಗುವುದಿಲ್ಲ. ಹೀಗೆ ಮಾಡುವುದರಿಂದ ಬಯಸಿದ ಪ್ರೀತಿಯೂ ನಿಮ್ಮ ಜೀವನದಲ್ಲಿ ಆಕರ್ಷಿತವಾಗುತ್ತದೆ. ಮನೆಯಲ್ಲಿ ರಾಧಾ-ಕೃಷ್ಣರ ಫೋಟೋಗಳನ್ನು ಇಡುವುದರಿಂದ ನಿಮ್ಮ ಮನೆಗೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಮನೆಯ ಗೋಡೆಗಳಿಗೆ ಬಿಳಿ ಅಥವಾ ನೀಲಿ ಬಣ್ಣ ಬಳಿಸಿ
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಗೋಡೆಗಳಿಗೆ ಹಸಿರು, ಕೆಂಪು, ಕೇಸರಿ ಅಥವಾ ಹಳದಿ ಬಣ್ಣ ಬಳಸಬೇಡಿ. ನೀವು ಬಯಸಿದ ಪ್ರೀತಿಯನ್ನು ಪಡೆಯಲು, ಮನೆಯ ಗೋಡೆಗಳಿಗೆ ಎಂದಿಗೂ ಕೆಂಪು ಬಣ್ಣವನ್ನು ಬಳಸಬೇಡಿ. ಇದು ನಿಮ್ಮ ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಗೋಡೆಗೆ ಬಿಳಿ ತಿಳಿ ನೀಲಿ ಬಣ್ಣಗಳು ಸೂಕ್ತವಾಗಿವೆ.












Click it and Unblock the Notifications