ಮನೆಯ ಈ ವಾಸ್ತು ದೋಷಗಳಿಂದ ನೀವು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗಬಹುದು...
ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತೀರಾ? ಅಥವಾ ನೀವು ಯಾವಾಗಲೂ ಆಯಾಸವನ್ನು ಅನುಭವಿಸುತ್ತೀರಾ? ನಿಮ್ಮ ಉತ್ತರ ಹೌದು ಎಂದಾದರೆ, ಕೆಲವು ವಾಸ್ತು ದೋಷಗಳು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ವಾಸ್ತುಗೆ ಸಂಬಂಧಿಸಿದ ತಪ್ಪುಗಳಿಂದ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಕೆಲವು ವಸ್ತುಗಳಿಂದಾಗಿ ನಕಾರಾತ್ಮಕ ಶಕ್ತಿ ನಿಮ್ಮ ಮನೆಗೆ ಬರುತ್ತದೆ. ಉದಾಹರಣೆಗೆ ನಿಮ್ಮ ಕೋಣೆಯಲ್ಲಿ ಬೇಡದ ವಸ್ತುಗಳು ಬಿದ್ದಿದ್ದರೆ ಅಥವಾ ನಿಮ್ಮ ಹಾಸಿಗೆ ಸ್ವಚ್ಛವಾಗಿಲ್ಲದಿದ್ದರೆ, ನೀವು ಸೋಮಾರಿತನವನ್ನು ಅನುಭವಿಸುತ್ತೀರಿ. ಜೊತೆಗೆ ಏನನ್ನೂ ಮಾಡಲು ಬಯಸುವುದಿಲ್ಲ.

ವಾಸ್ತು ಶಾಸ್ತ್ರದ ಪ್ರಕಾರ, ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಬರಬಹುದು. ಅದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ ಉತ್ತಮ ಆರೋಗ್ಯಕ್ಕಾಗಿ ನೀವು ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂದು ತಿಳಿಯೋಣ.
ಹಾಸಿಗೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ
ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದಕ್ಷಿಣ ದಿಕ್ಕಿಗೆ ಪಾದಗಳನ್ನು ಇಟ್ಟು ಮಲಗುವುದನ್ನು ತಪ್ಪಿಸಬೇಕು. ವಾಸ್ತು ಪ್ರಕಾರ ದಕ್ಷಿಣಾಭಿಮುಖವಾಗಿ ಪಾದಗಳನ್ನು ಚಾಚಿ ಮಲಗುವುದರಿಂದ ತಲೆ ಮತ್ತು ಕಾಲುಗಳಿಗೆ ನೋವು ಉಂಟಾಗುತ್ತದೆ. ಇದಲ್ಲದೆ, ನೀವು ಯಾವಾಗಲೂ ದೇಹದ ಇತರ ಭಾಗಗಳಲ್ಲಿ ನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತೀರಿ.
ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಬೇಡಿ
ಯಾವಾಗಲೂ ಮುಚ್ಚಿದ ಆಹಾರ ಹಾಳಾಗುವ ಸಂದರ್ಭ ಹೆಚ್ಚು. ಹಾಗೇ ಗಾಳಿ ಬೆಳಕು ಇಲ್ಲದ ಮನೆಯಲ್ಲಿ ನೀವು ವಾಸಿಸುತ್ತಿದ್ದರೆ ಇಂಥಹ ತಪ್ಪು ಮಾಡಬೇಡಿ. ಹೊರಗಡೆ ಮಾತ್ರ ಗಾಳಿ ಬೆಳಕು ಇದ್ದರೆ ಸಾಕಾಗುವುದಿಲ್ಲ. ನೀವು ವಾಸಿಸುವ ಮನೆಯಲ್ಲೂ ಗಾಳಿ ಬೆಳಕು ಬರುವುದು ಮುಖ್ಯ. ಹೀಗಾಗಿ ನೀವು ಮನೆಯಲ್ಲಿ ಗಾಳಿಯ ಬಗ್ಗೆ ಕಾಳಜಿ ವಹಿಸಬೇಕು. ಯಾವಾಗಲೂ ಮನೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಬಾರದು. ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನೈಸರ್ಗಿಕ ದೀಪ
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸುವ ಪ್ರವೃತ್ತಿಯು ಹೆಚ್ಚಾಗಿದೆ. ಇದರಿಂದಾಗಿ ಜನರು ಹಗಲಿನಲ್ಲಿಯೂ ಈ ದೀಪಗಳನ್ನು ಇಡಲು ಇಷ್ಟಪಡುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ ಮನೆಯಲ್ಲಿ ನೈಸರ್ಗಿಕ ಬೆಳಕು ಬೀಳುವುದಿಲ್ಲ ಎಂತಾಗಿರಬಹುದು. ಇದರಿಂದಾಗಿ ಎಲ್ಲಾ ಸಮಯದಲ್ಲೂ ದೀಪಗಳನ್ನು ಹಚ್ಚಲಾಗುತ್ತದೆ. ಆದರೆ ಈ ದೀಪಗಳು ಎಷ್ಟೇ ಸುಂದರವಾಗಿ ಕಂಡರೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮ ಮನೆಯಲ್ಲಿ ನೈಸರ್ಗಿಕ ಬೆಳಕು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ.
ಮನೆಯಲ್ಲಿ ಮರಗಳು ಮತ್ತು ಸಸ್ಯಗಳ ಇಡಿ
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಕಡಿಮೆ ಸ್ಥಳವಿರುತ್ತದೆ. ಹೀಗಾಗಿ ಆದ್ದರಿಂದ ಮನೆಗಳಲ್ಲಿ ಮರಗಳನ್ನು ನೆಡುವುದು ತುಂಬಾ ಕಷ್ಟ. ಆದರೆ ಉತ್ತಮ ಆರೋಗ್ಯಕ್ಕಾಗಿ, ನೀವು ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಇಡಬಹುದು. ನಿಮ್ಮ ಮನೆಯಲ್ಲಿ ಹಸಿರು ಇದ್ದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಮನೆಯಲ್ಲಿ ಸುಲಭವಾಗಿ ಇರಿಸಬಹುದಾದ ಕೆಲವು ಸಸ್ಯಗಳಿವೆ. ಅವುಗಳಲ್ಲಿ ಏರ್ ಪ್ಯೂರಿಫೈಯರ್ ಸಸ್ಯಗಳನ್ನು ಇಡುವುದು ತುಂಬಾ ಒಳ್ಳೆಯದು.












Click it and Unblock the Notifications