Best Time to Open Window, Doors: ಮನೆಯ ಕಿಟಕಿ ಬಾಗಿಲು ತೆರೆಯಲು ಉತ್ತಮ ಸಮಯ ಯಾವುದು?
ಅನೇಕ ಜನರು ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಬೇಕೆಂದು ಬಯಸುತ್ತಾರೆ. ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ಬಯಕೆಯನ್ನು ಹೊಂದಿರುತ್ತಾರೆ. ನೀವು ಕೂಡ ಇದನ್ನೇ ಬಯಸಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿಯನ್ನು ಮನೆಗೆ ತರಲು ಈ ಸಲಹೆಗಳನ್ನು ಅನುಸರಿಸಿ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯ. ಮನೆ ನಿರ್ಮಾಣದಿಂದ ಅಲಂಕಾರದವರೆಗೆ ವಾಸ್ತು ಬಹಳ ಮಹತ್ವದ್ದಾಗಿದೆ. ಲಕ್ಷ್ಮಿ ಮನೆಗೆ ಬಂದಾಗ ಕಿಟಕಿ ಬಾಗಿಲು ಮುಚ್ಚುವುದು ತಪ್ಪು. ಆದ್ದರಿಂದ ಬಾಗಿಲು ಮತ್ತು ಕಿಟಕಿಗಳನ್ನು ಯಾವಾಗ ತೆರೆಯಬೇಕು ಮತ್ತು ಮುಚ್ಚಬೇಕು ಎಂದು ನಿಮಗೆ ತಿಳಿದಿರುವುದು ಅತ್ಯಗತ್ಯ. ಹಾಗಾದರೆ ಮನೆಯ ಟಿಕಟಿ ಬಾಗಿಲನ್ನು ಯಾವ ಸಮಯದಲ್ಲಿ ತೆಗೆದಿದ್ದರೆ ತುಂಬಾ ಒಳ್ಳೆಯದು.

ಸಂಪತ್ತು ವೃದ್ಧಿಗಾಗಿ ಈ ಸಮಯದಲ್ಲಿ ಮನೆ ಬಾಗಿಲು ತೆರೆಯಿರಿ
ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿ ಮನೆಗೆ ಬಂದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯು ಪ್ರತಿ ವರ್ಷ ದೀಪಾವಳಿಯ ಸಂಜೆ ಮನೆಗೆ ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ದೇವಿಯು ದಿನಕ್ಕೆ ಒಮ್ಮೆ ಮನೆಗೆ ಭೇಟಿ ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಅಂದರೆ ಸೂರ್ಯೋದಯದ ಸಮಯದಲ್ಲಿ ಬ್ರಹ್ಮನ ಕಾಲದಲ್ಲಿ ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ. ಆದ್ದರಿಂದ ಈ ಸಮಯದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿರುವುದು ಉತ್ತಮ.

ಹಾಗಾಗಿ ಸೂರ್ಯಾಸ್ತದ ಸಮಯದಲ್ಲಿ ಮನೆಗೆ ದೀಪ ಹಚ್ಚಿ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿರುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಬರುತ್ತದೆ ಎಂಬ ನಂಬಿಕೆ ಇದೆ.
ಹಾಗೆಯೇ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಮತ್ತು ತುಳಸಿ ಗಿಡದ ಬಳಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿಯ ಕೃಪೆ ಹೆಚ್ಚಾಗುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗುತ್ತದೆ. ಅಲ್ಲದೆ ಮನೆಯ ಮುಖ್ಯದ್ವಾರದ ಮೂಲಕ ಧನಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಮನೆಯು ಧನಾತ್ಮಕ ಶಕ್ತಿಯಿಂದ ತುಂಬಿದ್ದರೆ, ಮನೆಯು ಸಮೃದ್ಧವಾಗಿರುತ್ತದೆ.
ತುಳಸಿ ಪೂಜೆ
ತುಳಸಿ ಗಿಡ ಅತ್ಯಂತ ಪವಿತ್ರವಾದ ಸಸ್ಯ. ತುಳಸಿ ಗಿಡವಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಅಲ್ಲದೆ ತುಳಸಿ ಗಿಡವು ಉತ್ತಮವಾದ ವಾಸನೆಯನ್ನು ಹೊಂದಿರುವುದರಿಂದ ಇದು ಪರಿಸರವನ್ನು ಉತ್ತಮವಾಗಿಡುತ್ತದೆ. ಇದಲ್ಲದೇ ತುಳಸಿ ಗಿಡ ನೆಗೆಟಿವ್ ಎನರ್ಜಿ ಮನೆಗೆ ಬರದಂತೆ ತಡೆಯುತ್ತದೆ.

ಹಾಗಾಗಿ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಬೇಕೆಂದರೆ ತುಳಸಿ ಗಿಡವನ್ನು ಖರೀದಿಸಿ ನಿಮ್ಮ ಮನೆ ಬಾಗಿಲಲ್ಲಿ ಇಟ್ಟುಕೊಳ್ಳಿ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅದೃಷ್ಟವನ್ನು ಆಕರ್ಷಿಸಲು ಮತ್ತು ಹಣವನ್ನು ಹೆಚ್ಚಿಸಲು ಮಂಗಳಕರವಾದ ಸಸ್ಯವೆಂದು ಪರಿಗಣಿಸಲಾಗಿದೆ.
ಈ ಗಿಡವನ್ನು ಮನೆ ಬಾಗಿಲಿಗೆ ಇಟ್ಟರೆ ಈ ಗಿಡ ಬೆಳೆಯುತ್ತಿದ್ದಂತೆ ಮನೆಯಲ್ಲಿ ಸಂಪತ್ತು ಕೂಡ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಮನಿ ಪ್ಲಾಂಟ್ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಾಗಾಗಿ ಈ ಮನಿ ಪ್ಲಾಂಟ್ ಖರೀದಿಸಿ ಇಟ್ಟುಕೊಳ್ಳಬಹುದು. ವಾಸ್ತು ಪ್ರಕಾರ ಬಾಗಿಲಲ್ಲಿ ಮಲ್ಲಿಗೆ ಗಿಡವನ್ನು ಬೆಳೆಸುವುದು ತುಂಬಾ ಶುಭ. ಮಲ್ಲಿಗೆ ಪರಿಮಳಯುಕ್ತವಾಗಿದೆ. ಲಕ್ಷ್ಮಿ ದೇವಿಯು ಪರಿಮಳಯುಕ್ತ ಸ್ಥಳದಲ್ಲಿ ನೆಲೆಸಿರುತ್ತಾಳೆ.
ಹಾಗಾಗಿ ಮಲ್ಲಿಗೆ ಗಿಡವನ್ನು ಬಾಗಿಲಿಗೆ ಇಟ್ಟರೆ ಮನೆಯಲ್ಲಿ ಅದೃಷ್ಟ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಈ ಸಸ್ಯದಿಂದ ಅರಳುವ ಹೂವುಗಳು ಪರಿಸರವನ್ನು ಪರಿಮಳಯುಕ್ತವಾಗಿಸುವುದಲ್ಲದೆ ಸಂಪತ್ತನ್ನು ಹೆಚ್ಚಿಸುತ್ತವೆ.












Click it and Unblock the Notifications