Vastu Tips: ವಾಸ್ತು ದೋಷಗಳನ್ನು ಹೋಗಲಾಡಿಸಲು ಈ ಕೆಲಸ ತಪ್ಪದೇ ಮಾಡಿ..

ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಜಗಳಗಳು ಉಂಟಾಗಲು ಪ್ರಾರಂಭಿಸಿದರೆ, ಇದಕ್ಕೆ ಕಾರಣ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ. ವಾಸ್ತು ದೋಷಗಳು ನಕಾರಾತ್ಮಕ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗಬಹುದು. ಅನೇಕ ಬಾರಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು ಕೂಡ ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ಈ ದೋಷವನ್ನು ನೀವು ಹೇಗೆ ತೊಡೆದುಹಾಕಬಹುದು ಎಂಬುದನ್ನು ಈಗ ತಿಳಿಯೋಣ.

ವಾಸ್ತು ದೋಷಗಳನ್ನು ಹೋಗಲಾಡಿಸುವ ವಿಧಾನಗಳು:-

ಈ ಒಂದು ಕೆಲಸ ಮಾಡಿ

ನಕಾರಾತ್ಮಕತೆ ಹೆಚ್ಚಾಗುವುದರಿಂದ ಕುಟುಂಬದಲ್ಲಿ ಜಗಳಗಳು ಹೆಚ್ಚಾಗುತ್ತವೆ. ಅದನ್ನು ಹೋಗಲಾಡಿಸಲು ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಪ್ರತಿದಿನ ನೆಲವನ್ನು ಒರೆಸಬೇಕು. ಹೀಗೆ ಮಾಡುವುದರಿಂದ ಋಣಾತ್ಮಕ ಶಕ್ತಿಯು ಕ್ರಮೇಣ ದೂರವಾಗಲು ಪ್ರಾರಂಭಿಸುತ್ತದೆ. ಮನೆಯಲ್ಲಿ ಸಂತೋಷ ನೆಲೆಸುತ್ತದೆ.

Vastu Tips Adopt these steps to remove Vastu Dosha happiness will be there in house

ಧನಾತ್ಮಕ ಶಕ್ತಿ ಹೆಚ್ಚಳ

ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು, ಮನೆಯ ಎಲ್ಲಾ ವಸ್ತುಗಳು ಸಂಘಟಿತವಾಗಿರಿಸುವುದು ಮುಖ್ಯ. ಅಲ್ಲದೆ ಮನೆಯಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಮನೆಯಲ್ಲಿ ಸಾಕಷ್ಟು ನೈಸರ್ಗಿಕ ಬೆಳಕು ಇರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು ಈ ಕೆಲಸಗಳೂ ಸಹ ಸಹಾಯವಾಗುತ್ತವೆ.\

ಮುಖ್ಯ ದ್ವಾರದಲ್ಲಿ ಈ ಕೆಲಸ ಮಾಡಿ

ಬೆಳಗ್ಗೆ ಮನೆಯ ಮುಖ್ಯ ಬಾಗಿಲಿಗೆ ಅರಿಶಿನ ಬೆರೆಸಿದ ನೀರನ್ನು ಚಿಮುಕಿಸಿ ತೋರಣ ಕಟ್ಟಬೇಕು. ಇದರೊಂದಿಗೆ ಮುಖ್ಯದ್ವಾರದಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಬೇಕು. ನಕಾರಾತ್ಮಕತೆಯನ್ನು ತೊಡೆದುಹಾಕಲು, ನೀವು ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ

ಮನೆಯಲ್ಲಿ ಅನಗತ್ಯ ವಸ್ತುಗಳನ್ನು ಸಂಗ್ರಹಿಸಬಾರದು. ಅಲ್ಲದೆ ವಿಶೇಷವಾಗಿ ಮನೆಯ ಮುಖ್ಯ ದ್ವಾರದಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಇಲ್ಲಿಂದಲೇ ನಿಮ್ಮ ಮನೆಗೆ ಧನಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಇದರೊಂದಿಗೆ ಮಂಗಳವಾರ ಮತ್ತು ಶನಿವಾರದಂದು ಧೂಪ ಮತ್ತು ಕರ್ಪೂರ ಹಚ್ಚುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

Vastu Tips Adopt these steps to remove Vastu Dosha happiness will be there in house

ಅಡುಗೆ ಮನೆ ಹೀಗಿರಲಿ...

ಅಡುಗೆ ಮನೆ ಮನೆಯ ಪ್ರಮುಖ ಭಾಗವಾಗಿದೆ. ಇದನ್ನು ಅಚ್ಚುಕಟ್ಟಾಗಿಡುವುದು ತುಂಬಾ ಮುಖ್ಯ. ಉಳಿದ ಅಡುಗೆ, ಅವಧಿ ಮುಗಿದ ಮಸಾಲೆಗಳು, ಅಥವಾ ಇನ್ನಿತರ ಯಾವುದೇ ತುಕ್ಕು ಹಿಡಿದ ವಸ್ತುಗಳನ್ನು ಮನೆಯ ಒಳಗಡೆ ಇಡಬೇಡಿ. ತಕ್ಷಣ ಅದನ್ನು ತೆಗೆದು ಹಾಕುವುದು ತುಂಬಾ ಮುಖ್ಯ.

ಮನೆಯಲ್ಲಿ ಈ ಗಿಡ ಇಡಿ..

ಮನೆಯಲ್ಲಿ ಬೆಳಕು ಗಾಳಿ ತುಂಬಾ ಮುಖ್ಯ. ಹೀಗಾಘಿ ಮನೆಯೊಳಗೆ ಉತ್ತಮ ಗಾಳಿ ಆಡಲು ಕಿಟಕಿ ಬಾಗಿಲು ಸದಾ ತೆರೆದಿಡಿ. ಅಲ್ಲದೆ ಮನಿ ಅಥವಾ ಬಂಬೂ ಟ್ರೀಯನ್ನು ಮನೆಯಲ್ಲಿ ಇಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮನೆಯಲ್ಲಿ ಈ ಗಿಡಗಳು ತಾಜಾ ಗಾಳಿಯನ್ನು ಹರಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+