ನಿಮ್ಮ ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಆಯುಷ್ಯ ಬೇಗ ಕಡಿಮೆಯಾಗುತ್ತದೆ...!

ನಾವು ವಾಸಿಸುವ ಸ್ಥಳ ಮತ್ತು ಪರಿಸರವು ನಮ್ಮ ಆತ್ಮ ವಿಶ್ವಾಸ ಮತ್ತು ಪ್ರಯತ್ನದ ಜೊತೆಗೆ ನಮ್ಮ ಜೀವನ ಮತ್ತು ಅದರ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಈ ಹೇಳಿಕೆಯು ವಾಸ್ತು ಶಾಸ್ತ್ರಕ್ಕೆ 100% ಅನ್ವಯಿಸುತ್ತದೆ.

ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ನಾವು ನಮ್ಮ ಮನೆಯಲ್ಲಿ ಕಳೆಯುತ್ತೇವೆ. ಈ ಸ್ಥಳ ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತಪ್ಪು ದಿಕ್ಕಿನಲ್ಲಿ ತಪ್ಪು ಕ್ರಮಗಳು ಆ ಮನೆಯ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ತಿಳಿಯಬಹುದು.

Vastu mistakes in a house that affect your health in kannada

ಅಡಿಗೆ ಮನೆಯಿಂದ ಆರೋಗ್ಯದ ಮೇಲೆ ಪರಿಣಾಮ

ನೈಋತ್ಯದಲ್ಲಿರುವ ಅಡುಗೆಮನೆಯು ಆ ಮನೆಯ ಸದಸ್ಯರಿಗೆ ಕಾಲುಗಳಲ್ಲಿ ನೋವು ಅಥವಾ ಜನ್ಮ ದೋಷಗಳನ್ನು ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹೀಗಾಗಿ ಅಡುಗೆ ಮನೆಯ ದಿಕ್ಕು ಸರಿಯಾಗಿರುವುದನ್ನು ಖತಿತಪಡಿಸಿಕೊಳ್ಳುವುದು ಉತ್ತಮ.

ಬಣ್ಣಗಳ ಪ್ರಾಮುಖ್ಯತೆ

ವಾಸ್ತು ಪ್ರಕಾರ ನಿಮ್ಮ ಆರೋಗ್ಯವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ನೀವು ಬಳಸುವ ಬಣ್ಣಗಳು. ಈಶಾನ್ಯದಲ್ಲಿ ಕೆಂಪು ಅಥವಾ ನೇರಳೆ ಬಣ್ಣವು ಕುಟುಂಬ ಸದಸ್ಯರಲ್ಲಿ ತಲೆನೋವು ಮತ್ತು ಮೈಗ್ರೇನ್ಗಳನ್ನು ಉಂಟುಮಾಡಬಹುದು.

ವಸ್ತುಗಳನ್ನು ಇರಿಸಲಾಗಿರುವ ದಿಕ್ಕು

ಬೇರೆ ಬೇರೆ ವಸ್ತುಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಕುಟುಂಬದ ಸದಸ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮನೆಯ ಮಧ್ಯಭಾಗದಲ್ಲಿ ತ್ಯಾಜ್ಯ ತೊಟ್ಟಿ ಇದ್ದರೆ ಖಿನ್ನತೆ ಮತ್ತು ಮಾದಕ ವ್ಯಸನಕ್ಕೆ ಕಾರಣವಾಗಬಹುದು. ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಕಸದ ಡಬ್ಬಿ ಇಡುವುದರಿಂದ ಕಾಲಕ್ರಮೇಣ ಯಕೃತ್ ಸಂಬಂಧಿ ಕಾಯಿಲೆಗಳು ಬರಬಹುದು.

ಅನೈರ್ಮಲ್ಯ ಮತ್ತು ನೀರಿನ ಸೋರಿಕೆ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ನೀರಿನ ಸೋರಿಕೆಯು ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಗೋಡೆಗಳಲ್ಲಿ ತೇವ, ಸೋರಿಕೆ, ಗೋಡೆಗಳು ಮತ್ತು ಚಾವಣಿಯ ಬಿರುಕುಗಳು ಕುಟುಂಬದಲ್ಲಿ ಅನೇಕರಿಗೆ ಆರೋಗ್ಯ ಸಮಸ್ಯೆಗಳ ಅರ್ಥವಾಗಿದೆ. ಆದ್ದರಿಂದ ನಿಮ್ಮ ಕುಟುಂಬದಲ್ಲಿ ಯಾರಾದರೂ ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಪಾಯಕಾರಿ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಈ ಸಮಸ್ಯೆಗಳನ್ನು ಸರಿಪಡಿಸಬೇಕು.

ಎಲೆಕ್ಟ್ರಾನಿಕ್ ಉತ್ಪನ್ನಗಳು

ನಾವು ಈಗ ವಿವಿಧ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಉಪಕರಣಗಳಿಗೆ ಚೆನ್ನಾಗಿ ಹೊಂದಿಕೊಂಡಿದ್ದೇವೆ. ಅವು ಹೊರಸೂಸುವ ಇಎಮ್ಎಫ್ ವಿಕಿರಣದ ಪರಿಣಾಮ ನಮ್ಮ ಮನಸ್ಸಿನ ಮೇಲೆ ತುಂಬಾ ಕೆಟ್ಟದಾಗಿದೆ. ಅವುಗಳನ್ನು ತೊಡೆದುಹಾಕಲು ಅಸಾಧ್ಯವಾದರೂ, ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಮಲಗುವ ಸಮಯದಲ್ಲಿ ನಿಮ್ಮ ಮೊಬೈಲ್ ಫೋನ್‌ಗಳನ್ನು ನಿಮ್ಮ ಹಾಸಿಗೆಯಿಂದ ಕನಿಷ್ಠ ಏಳು ಅಡಿ ದೂರದಲ್ಲಿ ಇರಿಸಿ ಮತ್ತು ವೈ-ಫೈ ರೂಟರ್‌ಗಳನ್ನು ಸ್ಥಾಪಿಸಬೇಡಿ ಅಥವಾ ಅವುಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿ ಬಳಕೆಗೆ ಬಿಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+