Vangi Bath Recipe: ಪೌಡರ್ ಇಲ್ಲದೆ ಬದನೆಕಾಯಿ ಬಾತ್ ತಯಾರಿಸುವ ವಿಧಾನ
ಎಣ್ಣೆಗಾಯಿ, ಬದನೆಕಾಯಿ ಚಟ್ನಿ, ಬದನೆಕಾಯಿ ಪಲ್ಯ, ಬದನೆಕಾಯಿ ಬಜ್ಜಿ, ಸಾಂಬರ್, ಉಪ್ಪಿನಕಾಯಿ ಇವೆಲ್ಲದರ ರುಚಿಯನ್ನು ನೀವು ನೋಡಿರುತ್ತೀರಿ. ಜೊತೆಗೆ ವಾಂಗಿ ಬಾತ್ ಅಥವಾ ಬದನೆಕಾಯಿ ಬಾತ್ ಕೂಡ ನೀವು ಮನೆಯಲ್ಲಿ ಮಾಡಿ ತಿಂದಿರುತ್ತೀರಿ. ಸಾಮಾನ್ಯವಾಗಿ ಬದನೆಕಾಯಿ ಇಷ್ಟಪಡುವವರು ವಾಂಗಿ ಬಾತ್ ಅನ್ನ ಮನೆಯಲ್ಲಿ ಮಾಡೇ ಮಾಡಿರುತ್ತಾರೆ. ಅದರ ರುಚಿ ಹೆಚ್ಚಿಸಲು ಅದಕ್ಕೆ ವಾಂಗಿ ಬಾತ್ ಪೌಡರ್ ಕೂಡ ಬಳಸಿರುತ್ತಾರೆ. ಒಂದು ವೇಳೆ ಮನೆಯಲ್ಲಿ ವಾಂಗಿ ಬಾತ್ ಪೌಡರ್ ಇಲ್ಲಾ ಅಂತಾದರೆ ವಾಂಗಿ ಬಾತ್ ಮಾಡುವುದು ಹೇಗೆ?
ಪೌಡರ್ ಇಲ್ಲದೇ ಮನೆಯಲ್ಲಿ ಸುಲಭವಾಗಿ ಹಾಗೂ ರುಚಿಯಾಗಿ ಬದನೆಕಾಯಿ ಬಾತ್ ಮಾಡಬಹುದು. ಅದರ ವಿಧಾನವನ್ನು ಸದ್ಯ ನಾವು ನಿಮಗೆ ಹೇಳಿಕೊಡುತ್ತೇವೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ, ರುಚಿ ನೋಡಿ, ಜೊತೆಗೆ ನಮ್ಮೊಂದಿಗೆ ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ವಾಂಗಿ ಬಾತ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ವಾಂಗಿ ಬಾತ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ಉದ್ದ ಬದನೆಕಾಯಿ 4-5
* ಅಕ್ಕಿ ಒಂದು ಕಪ್
* ಟೊಮೇಟೋ 2
* ಈರುಳ್ಳಿ 1
* ಕೊತ್ತಂಬರಿ ಸೊಪ್ಪು
* ಕರಿಬೇವು
* ಉಪ್ಪು
* ಅರಿಶಿಣ ಅರ್ಧ ಸ್ಪೂನ್
* ಬ್ಯಾಡಗಿ ಮೆಣಸಿನ ಖಾರದ ಪುಡಿ ಒಂದು ಚಮಚ
* ಮೆಂತೆಕಾಳು 2
* ಎಣ್ಣೆ 4-5 ಸ್ಪೂನ್
*ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತೆಕಾಳು ಕಾಲು ಚಮಚ

ತಯಾರಿಸುವ ವಿಧಾನ:
* ಒಂದು ಕುಕ್ಕರ ಅನ್ನು ಒಲೆಯ ಮೇಲೆ ಇಟ್ಟು 4-5 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಇದು ಬಿಸಿಯಾದ ನಂತರ ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ.
* ಟೊಮೇಟೋ ಹಾಕಿ ಮೆದುವಾಗುವವರೆಗೂ ಹುರಿಯಿರಿ. ಬಳಿಕ ಇದಕ್ಕೆ ಉದ್ದ ಹೆಚ್ಚಿದ ಬದನೆಕಾಯಿಯನ್ನು ಸೇರಿಸಿ ಚೆನ್ನಾಗಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ.
* ಬಳಿಕ ಇದಕ್ಕೆ ಕರಿಬೇವು, ಉಪ್ಪು, ಅರಿಶಿಣ, ಬ್ಯಾಡಗಿ ಮೆಣಸಿನ ಖಾರದ ಪುಡಿ, ಮೆಂತೆಕಾಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಎರಡು ಕಪ್ ನೀರು ಹಾಕಿ ಕುದಿಯಲು ಬಿಡಿ
* ನೀರು ಕುದಿಯುವಾಗ ತೊಳಿದ ಅಕ್ಕಿಯನ್ನು ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ. 2-3 ಮಿಸಿಲ್ ಬರುವವರೆಗೂ ಬಿಡಿ.
* ಒಂದು ತವೆಯನ್ನು ಬಲೆಯ ಮೇಲೆ ಇಟ್ಟು ಇದರಲ್ಲಿ ಕಾಲ್ ಚಮಚ ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತೆಕಾಳು ಹಾಕಿ ಹುರಿದು ರುಬ್ಬಿಕೊಳ್ಳಿ
* ವಿಸಿಲ್ ಆದ ಬಳಿಕ ಮುಚ್ಚಳ ತೆಗೆದು ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಬಿಡಿ.
* 10-15 ನಿಮಿಷ ಬಿಟ್ಟು ನಂತರ ಈ ಬಿಸಿ ಬಿಸಿ ವಾಂಗಿ ಬಾತ್ ಸವಿಯಬಹುದು.
ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ರುಚಿನೋಡಿ ಜೊತೆಗೆ ನಮ್ಮೊಂದಿಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.












Click it and Unblock the Notifications