ದೇವಭೂಮಿ ಉತ್ತರಾಖಂಡ: ಗಣೇಶನ ಕತ್ತರಿಸಿದ ತಲೆ ಇಲ್ಲಿ ಇಡಲಾಗಿದೆ....
ದೇವಭೂಮಿ ಎಂದು ಖ್ಯಾತಿ ಪಡೆದ ಉತ್ತರಾಖಂಡದಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳಿವೆ. ಈ ಧಾರ್ಮಿಕ ಕೇಂದ್ರಗಳಿಗೆ ಅದರದ್ದೇ ಆದ ವಿಶೇಷತೆ ಹಿರಿಮೆ ಗರಿಮೆಯ ಕಥೆ ಇದೆ.
ಸುಂದರ ಪ್ರಕೃತಿಯ ನಡುವೆ ಇರುವ ಈ ದೇವ ಸನ್ನಿಧಿಗಳ ಭೇಟಿ ಮನಸ್ಸಿಗೂ ಬಲು ಆನಂದ ನೀಡುತ್ತದೆ ಎಂಬುದು ಸತ್ಯ. ಹೀಗೆ ಭಕ್ತರನ್ನು ಸೆಳೆಯುವ ಅಪರೂಪದ ಸನ್ನಿಧಿಗಳಲ್ಲಿ ಉತ್ತರಾಖಂಡದಲ್ಲಿರುವ ಪಾತಾಳ ಭುವನೇಶ್ವರ ದೇವಸ್ಥಾನ ಕೂಡ ಒಂದು. ಈ ಗುಹೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಯೊಂದು ಇಲ್ಲಿದೆ.

ತಾಯಿ ಪಾರ್ವತಿ ತನ್ನ ಮಗ ಗಣೇಶನ ದೇಹವನ್ನು ರಚಿಸಿದಾಗ ಅದು ತುಂಬಾ ಸುಂದರವಾಗಿತ್ತು. ಗಣೇಶನ ಮುಖವೂ ಇತರ ದೇವರುಗಳಂತೆ ಪ್ರಕಾಶಮಾನವಾಗಿತ್ತು. ಒಮ್ಮೆ ತಾಯಿ ಪಾರ್ವತಿ ಸ್ನಾನಕ್ಕೆ ಹೋಗಿ ತನ್ನ ಪ್ರೀತಿಯ ಮಗ ಗಣೇಶನನ್ನು ಕಾವಲಿನಲ್ಲಿಟ್ಟು ಯಾರನ್ನೂ ಒಳಗೆ ಬಿಡಬಾರದು ಎಂದು ಹೇಳಿದಳು.
ತಾಯಿ ಸ್ನಾನ ಮಾಡುತ್ತಿದ್ದಾಗ ಶಂಕರ ದೇವ ಬಾಗಿಲಿಗೆ ಬಂದು ಒಳಗೆ ಹೋಗಲು ಬಿಡುವಂತೆ ಗಣೇಶನನ್ನು ವಿನಂತಿಸಿದನು. ಆದರೆ ಗಣೇಶನು ಶಂಕರಿನಿಗೆ ಒಳಗೆ ಪ್ರವೇಶಿಸುವುದನ್ನು ನಿರಾಕರಿಸಿದನು. ನಂತರ ಶಿವನು ತುಂಬಾ ಕೋಪಗೊಂಡನು.

ಅವನು ತನ್ನ ತ್ರಿಶೂಲವನ್ನು ಎತ್ತಿಕೊಂಡು ಗಣೇಶನ ತಲೆಯನ್ನು ಕತ್ತರಿಸಿದನು. ಸ್ಕಂದ ಪುರಾಣದ ಪ್ರಕಾರ, ಅವನ ಕತ್ತರಿಸಿದ ತಲೆಯನ್ನು ಉತ್ತರಾಖಂಡದ ಈ ಗುಹೆಯಲ್ಲಿ ಇರಿಸಲಾಗಿತ್ತು ಮತ್ತು ಆನೆಯ ತಲೆಯನ್ನು ಗಣೇಶನ ದೇಹಕ್ಕೆ ಜೋಡಿಸಲಾಯಿತು.
ಇಲ್ಲಿ ಗಣೇಶನ ಕತ್ತರಿಸಿದ ತಲೆ ಇದೆ
ಉತ್ತರಾಖಂಡ ರಾಜ್ಯದ ಪಿಥೋರಗಢ್ ಜಿಲ್ಲೆಯ ಭುವನೇಶ್ವರ ಗ್ರಾಮದ ಗಂಗೊಳ್ಳಿಹತ್ ಸಮೀಪ ಈ ಗುಹಾಂತರ ದೇವಾಲಯ ಇದೆ. ಗುಂಗೊಳ್ಳಿಹತ್‌ನಿಂದ 14 ಕಿಮೀ ದೂರ ಕ್ರಮಿಸಿದರೆ ಬೃಹತ್ ಕಲ್ಲಿನಿಂದ ಆವೃತ್ತವಾದ ಗುಹಾಂತರ ದೇವಾಲಯವನ್ನು ತಲುಪಬಹುದು. ಸುಂದರವಾದ ಬೆಟ್ಟದ ಮೇಲಿರುವ ಈ ಗುಹೆಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
ಸಮುದ್ರ ಮಟ್ಟದಿಂದ 1,350 ಮೀಟರ್ ಎತ್ತರದಲ್ಲಿರುವ ಪಾತಾಳ ಭುವನೇಶ್ವರ ಗುಹೆಯು 160 ಮೀಟರ್ ಉದ್ದ ಮತ್ತು ಮುಖ್ಯ ದ್ವಾರದಿಂದ 90 ಮೀಟರ್ ಆಳದಲ್ಲಿದೆ. ಈ ಗುಹೆಯಲ್ಲಿ ಗಣೇಶನ ತಲೆಯು ಬಂಡೆಯ ಆಕಾರದಲ್ಲಿದೆ. ಅದರ ಮೇಲೆ 108 ದಳಗಳನ್ನು ಹೊಂದಿರುವ ಬ್ರಹ್ಮಕಮಲವಿದೆ. ಇಲ್ಲಿ ಬ್ರಹ್ಮಕಮಲವನ್ನು ಶಂಕರ ದೇವರು ಸ್ಥಾಪಿಸಿದನೆಂದು ನಂಬಲಾಗಿದೆ.
ಗುಹೆಯ ಬಗ್ಗೆ ವಿಶೇಷ ವಿಷಯಗಳು
ಸ್ಕಂದಪುರಾಣದ ಪ್ರಕಾರ ಕೇದಾರನಾಥ, ಬದರಿನಾಥ ಮತ್ತು ಅಮರನಾಥ ಗುಹೆಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿ ಕಾಮಧೇನು ಹಸುವಿನ ಕೆಚ್ಚಲಿದ್ದು ಅದರಿಂದ ನೀರು ಹರಿಯುತ್ತಲೇ ಇರುತ್ತದೆ.
ಪಾತಾಳ ಭುವನೇಶ್ವರ ಗುಹೆಯಲ್ಲಿ ಭೈರವ ನಾಲಿಗೆಯೂ ಇದೆ. ಈ ಬಾಯಿಯ ಮೂಲಕ ಗರ್ಭವನ್ನು ಪ್ರವೇಶಿಸಿ ಬಾಲವನ್ನು ತಲುಪಿದವನು ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.
ಇದಲ್ಲದೆ, ಗುಹೆಯಲ್ಲಿ ಶೇಷನಾಗನ ಪ್ರತಿಮೆ ಮತ್ತು ಗರುಡನ ಪ್ರತಿಮೆಯೂ ಇದೆ. ಗುಹೆಯಲ್ಲಿ ಅನೇಕ ಕೊಳಗಳಿವೆ, ಅವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಉತ್ತರಾಖಂಡಕ್ಕೆ ಹೋಗುವ ಭಕ್ತರಿಗೆ ಮಾಹಿತಿ ಇದ್ದರೆ ಖಂಡಿತ ಒಮ್ಮೆ ಇಲ್ಲಿಗೆ ಭೇಟಿ ನೀಡಿ.












Click it and Unblock the Notifications