Yugadi Recipe: ಯುಗಾದಿ ಹಬ್ಬದ ಸಂಭ್ರಮವನ್ನ ಹೆಚ್ಚಿಸಲು ಈ ಪಾಯಸ, ಪಚಡಿ ಮಾಡಿ
ಕರ್ನಾಟಕದಲ್ಲಿ ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲ್ಪಡುವ ಹಬ್ಬ ಅಂದ್ರೆ ಯುಗಾದಿ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ ಮತ್ತು ಹೊಸ ಆರಂಭದ ಸಮಯವಾಗಿದೆ. ಯುಗಾದಿ ಹಬ್ಬರ ಕರುಗಾಡ ಜನರಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಯುಗಾದಿ ಹಬ್ಬವು ಮನೆಗಳನ್ನು ಸ್ವಚ್ಛಗೊಳಿಸುವ ಮತ್ತು ಅಲಂಕರಿಸುವ, ಹೊಸ ಬಟ್ಟೆಗಳನ್ನು ಖರೀದಿಸುವುದ ಜೊತೆಗೆ ವಿವಿಧ ತಿಂದಿ ತಿನಿಸುಗಳನ್ನ ತಯಾರಿ ಮಾಡುವುದು ವಿಶೇಷವಾಗಿರುತ್ತದೆ.
ಹೊಸ ವರ್ಷವನ್ನು ಸ್ವಾಗತಿಸಲು ಹಾಗೂ ಹಬ್ಬ ಸಂದರ್ಭದಲ್ಲಿ ಕುಟುಂಬ ಮತ್ತು ಸ್ನೇಹಿತರು ಒಟ್ಟಾಗಿ ಸೇರಿ ಯುಗಾದಿಯನ್ನ ಆಚರಿಸಲಾಗುತ್ತದೆ. ಇನ್ನೂ ಯುಗಾದಿ ಅಂದ್ರೆನೆ ಹೊಸ ವರ್ಷ. ಈ ಹೊಸ ಯುಗದ ಆರಂಭಕ್ಕೆ ವಿವಿಧ ಬಗೆಯ ಭಕ್ಷ್ಯಗಳೇ ಹಬ್ಬದ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಯುಗಾದಿ ಹಬ್ಬದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸುವ ಸಾಂಪ್ರದಾಯಿಕ ತಿನಿಸುಗಳು ಇಲ್ಲಿವೆ ನೋಡಿ.

ಪಾಯಸ
ದಕ್ಷಿಣ ಭಾರತದ ಸಿಹಿ ತಿನಿಸುಗಳಲ್ಲಿ ಪಾಯಸವು ಯುಗಾದಿ ಆಚರಣೆಗೆ ಪ್ರಮುಖವಾದ ಆಹಾರವಾಗಿದೆ. ಹಾಲು, ಬೆಲ್ಲ ಅಥವಾ ಸಕ್ಕರೆಯಿಂದ ತಯಾರಿಸಲ್ಪಟ್ಟ ಮತ್ತು ಏಲಕ್ಕಿಯಿಂದ ಸುವಾಸನೆ ಮಾಡಲ್ಪಟ್ಟ ಈ ಸಿಹಿ ಖಾದ್ಯವು ಸಮೃದ್ಧಿ ಮತ್ತು ಸಂತೋಷವನ್ನು ಸಂಕೇತಿಸುತ್ತದೆ. ಅನ್ನ, ಅಥವಾ ಬೇಳೆಗಳೊಂದಿಗೆ ತಯಾರಿಸಿದರೂ, ಪಾಯಸದ ಸುವಾಸನೆಯು ಹಬ್ಬ ಸಂತೋಷವನ್ನ ಇನ್ನಷ್ಟು ಹೆಚ್ಚಿಸುತ್ತದೆ.
ಹಾಲು, ಶಾವಿಗೆ, ಬೆಲ್ಲ (ಅಥವಾ ಸಕ್ಕರೆ), ಏಲಕ್ಕಿ ಪುಡಿ, ತುಪ್ಪ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನ ತೆಗೆದುಕೊಳ್ಳಿ. ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ ಮತ್ತು ಪಕ್ಕಕ್ಕೆ ಇರಿಸಿ. ಶಾವಿಗೆಯನ್ನು ಹುರಿದು, ನಂತರ ಹಾಲು ಸೇರಿಸಿ ಮೃದುವಾಗುವವರೆಗೆ ಕುದಿಸಿ. ಬೆಲ್ಲ ಅಥವಾ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ, ಕೆಲವು ನಿಮಿಷ ಬೇಯಿಸಿ. ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನ ಹಾಕಿದರೆ. ರುಚಿಯಾದ ಪಾಯಸ ರೆಡಿಯಾಗುತ್ತದೆ.
ಯುಗಾದಿ ಪಚಡಿ
ಬೇಸಿಗೆಯಲ್ಲಿ ಬಂದಿರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆಯವರೆಲ್ಲರ ಆರೋಗ್ಯವನ್ನು ಕಾಳಜಿಯು ತುಂಬಾ ಮುಖ್ಯ. ಯುಗಾದಿ ಪಚಡಿ. ಆದರೆ ತುಂಬಾ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಸಾಂಪ್ರದಾಯಿಕವಾಗಿ ಹಬ್ಬ ಮಾಡುವವರಿಗೆ ಗೊತ್ತಿರಬಹುದು. ಹುಣಸೆ ಹಣ್ಣು, ಬೆಲ್ಲ, ಬೇವು, ಮೆಣಸಿನಕಾಯಿ, ಮಾವಿನಕಾಯಿ ಮತ್ತು ಉಪ್ಪು. ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳ ಸೀಸನ್ ಈಗಲೇ ಇರುವುದು. ಇವುಗಳನ್ನೇ ಬಳಸಿ ಯುಗಾದಿ ಪಚಡಿ ತಯಾರು ಮಾಡುತ್ತಾರೆ.
ಒಂದೊಂದು ಆಹಾರ ಪದಾರ್ಥ ಕೂಡ ಮನುಷ್ಯನ ಒಂ ದೊಂದು ಭಾವನೆಗಳನ್ನು ವ್ಯಕ್ತಪಡಿ ಸುತ್ತದೆ. ಅಂದರೆ ಸಂತೋಷ, ಆಶ್ಚರ್ಯ, ಕೋಪ, ಭಯ, ಜಿಗುಪ್ಸೆ, ಕಿರಿಕಿರಿ ಹೀಗೆ. ಎಲ್ಲದರ ಸಮ್ಮಿಶ್ರಣದಿಂದ ತಯಾರಾದ ಯುಗಾದಿ ಪಚಡಿ ಆರೋಗ್ಯಕ್ಕೆ ಬೇಸಿಗೆಯಲ್ಲಿ ಅದ್ಭುತ ಲಾಭಗಳನ್ನು ಕೊಡುತ್ತದೆ. ಯುಗಾದಿ ಪಚಡಿ ಒಂದು ವಿಶೇಷ ಖಾದ್ಯವಾಗಿದ್ದು, ಇದು ಜೀವನದ ವಿವಿಧ ಭಾವನೆಗಳನ್ನು ಸಂಕೇತಿಸುತ್ತದೆ, ಅದರ ಆರು ರುಚಿಗಳು ಸಿಹಿ (ಬೆಲ್ಲ), ಹುಳಿ (ಹುಣಸೆ), ಕಹಿ (ಬೇವಿನ ಹೂವು), ಖಾರ (ಮೆಣಸು), ಉಪ್ಪು (ಉಪ್ಪು), ಮತ್ತು ಖಾರ (ಹಸಿ ಮಾವು). ಇದು ಜೀವನದ ಎಲ್ಲಾ ಅಂಶಗಳನ್ನು ಸಮತೋಲನದಿಂದ ಅಳವಡಿಸಿಕೊಳ್ಳಲು ನಮಗೆ ನೆನಪಿಸುತ್ತದೆ.
ಯುಗಾದಿ ಪಚಡಿಯನ್ನ ಮಾಡುವ ವಿಧಾನ ಏನೆಂದರೆ, ಹುಣಸೆ ಹಣ್ಣಿನ ತಿರುಳು, ಬೆಲ್ಲ, ಹಸಿ ಮಾವಿನಕಾಯಿ, ಬೇವಿನ ಹೂವುಗಳು, ಕರಿಮೆಣಸು, ಉಪ್ಪು ಮತ್ತು ನೀರನ್ನ ತೆಗೆದುಕೊಳ್ಳಿಹುಣಸೆ ಹಣ್ಣಿನ ತಿರುಳು ಮತ್ತು ಬೆಲ್ಲ ಕರಗುವ ತನಕ ಮಿಶ್ರಣ ಮಾಡಿ. ಕತ್ತರಿಸಿದ ಮಾವು, ಬೇವಿನ ಹೂವು, ಮೆಣಸು ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ, ನೀರು ಹಾಕಿದರೆ ಯುಗಾದಿಯ ಪಚಡಿ ರೆಡಿಯಾಗುತ್ತದೆ.












Click it and Unblock the Notifications