ಭಾರತದ ಅತ್ಯುತ್ತಮ ಸ್ಟ್ರೀಟ್ ಫುಡ್‌ಗಳು ಮತ್ತು ಕರ್ನಾಟಕದ ವಿಶೇಷ ತಿಂಡಿಗಳು

ಭಾರತದ ಸ್ಟ್ರೀಟ್ ಫುಡ್‌ಗಳಲ್ಲಿ ಕರ್ನಾಟಕದ ಸ್ಟ್ರೀಟ್ ಫುಡ್‌ಗಳಿಗೆ ವಿಶೇಷ ಸ್ಥಾನವಿದೆ. ಕರಾವಳಿ ಭಾಗದಿಂದ ಉತ್ತರ ಕರ್ನಾಟಕದವರೆಗೆ ವಿಭಿನ್ನ ರುಚಿ, ಮಸಾಲೆ ಮತ್ತು ಭಿನ್ನ ರುಚಿಯನ್ನು ಹೊಂದಿರುವ ಈ ಖಾದ್ಯಗಳು ಸ್ಥಳೀಯ ಆಹಾರ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಕಡಿಮೆ ಬೆಲೆಯಲ್ಲಿ ಸಿಗುವ ಈ ರುಚಿಕರ ತಿಂಡಿಗಳು ದಿನನಿತ್ಯದ ಜೀವನದಲ್ಲಿ ಜನರ ಫೇವರಿಟ್ ಸ್ನ್ಯಾಕ್‌ಗಳಾಗಿವೆ. ಉಪ್ಪು, ಖಾರ, ಹುಳಿ ಹಾಗೂ ಸಿಹಿ ರುಚಿಗಳ ಸಂಯೋಜನೆಯಲ್ಲಿರುವ ಭಾರತೀಯ ಸ್ಟ್ರೀಟ್ ಫುಡ್‌ಗಳು ಪ್ರವಾಸಿಗರನ್ನು ಕೂಡ ಸೆಳೆಯುತ್ತವೆ.

ಮಂಗಳೂರು ಬಜ್ಜಿ

ಕರಾವಳಿ ಕರ್ನಾಟಕದ ಜನಪ್ರಿಯ ರಸ್ತೆ ಬದಿ ತಿಂಡಿಯಾದ ಮಂಗಳೂರು ಬಜ್ಜಿಯನ್ನು ಬಾಳೆಕಾಯಿ, ಮೈದಾ ಮತ್ತು ಮಸಾಲೆ ಬಳಸಿ ತಯಾರಿಸಲಾಗುತ್ತದೆ. ಬಿಸಿ ಬಿಸಿ ಚಹಾ ಜೊತೆ ಇದನ್ನು ಸವಿಯಲು ಅನೇಕರು ಇಷ್ಟಪಡುತ್ತಾರೆ.

Top Indian Street Foods

ಗಿರ್ಮಿಟ್

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧವಾಗಿರುವ ಗಿರ್ಮಿಟ್‌ ಮಸಾಲೆ ಚುರುಮುರಿ, ಈರುಳ್ಳಿ, ಟೊಮ್ಯಾಟೊ ಮತ್ತು ಖಾರದ ಮಿಶ್ರಣದಿಂದ ತಯಾರಾಗುತ್ತದೆ. ಖಾರ ಮತ್ತು ಹುಳಿ ರುಚಿಯಿಂದ ಇದು ಸಂಜೆ ವೇಳೆಯ ಫೇವರಿಟ್ ಸ್ನ್ಯಾಕ್‌ ಆಗಿದೆ. ಚಹಾದೊಂದಿಗೆ ಸವಿಯುವುದಕ್ಕೆ ಬೆಸ್ಟ್‌ ಖಾದ್ಯವಾಗಿದೆ.

ಅವಲಕ್ಕಿ ಮಿಕ್ಸ್ಚರ್

ಅವಲಕ್ಕಿ, ಕಡಲೆಕಾಯಿ, ಕರಿಬೇವು ಮತ್ತು ಮಸಾಲೆಗಳಿಂದ ತಯಾರಿಸುವ ಅವಲಕ್ಕಿ ಮಿಕ್ಸ್ಚರ್‌ ಕರ್ನಾಟಕದ ಸಾಂಪ್ರದಾಯಿಕ ಹಗುರ ತಿಂಡಿಯಾಗಿದೆ. ಇದು ಚಹಾ ಅಥವಾ ಕಾಫಿಯ ಜೊತೆ ಹೆಚ್ಚು ರುಚಿ ನೀಡುತ್ತದೆ.

ಗೋಬಿ ಮಂಚೂರಿ

ಹುರಿದ ಹೂಕೋಸು ತುಂಡುಗಳನ್ನು ಖಾರದ ಸಾಸ್‌ನಲ್ಲಿ ಮಿಶ್ರಣ ಮಾಡಿ ತಯಾರಿಸುವ ಗೋಬಿ ಮಂಚೂರಿ ಯುವಕರ ಅತ್ಯಂತ ಪ್ರಿಯ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದೆ. ರಸ್ತೆ ಬದಿ ಅಂಗಡಿಗಳಲ್ಲಿ ಬಿಸಿ ಬಿಸಿ ಗೋಬಿ ಮಂಚೂರಿಯ ಸುವಾಸನೆ ಆಹಾರ ಪ್ರಿಯರನ್ನು ಸೆಳೆಯುತ್ತದೆ.

ವೆಜ್ ಫ್ರೈಡ್ ರೈಸ್

ತರಕಾರಿಗಳು, ಸಾಸ್ ಮತ್ತು ಮಸಾಲೆಗಳನ್ನು ಸೇರಿಸಿ ತಯಾರಿಸುವ ವೆಜ್ ಫ್ರೈಡ್ ರೈಸ್ ನಗರ ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಚೈನೀಸ್ ಶೈಲಿಯ ಈ ಖಾದ್ಯವನ್ನು ಮಕ್ಕಳು ಮತ್ತು ಯುವಕರು ವಿಶೇಷವಾಗಿ ಇಷ್ಟಪಡುತ್ತಾರೆ.

ಭೇಲ್ ಪುರಿ

ಮುರುಮುರಿ, ಈರುಳ್ಳಿ, ಟೊಮ್ಯಾಟೊ, ಚಟ್ನಿ ಮತ್ತು ಮಸಾಲೆಗಳನ್ನು ಮಿಶ್ರಣ ಮಾಡಿ ತಯಾರಿಸುವ ಭೇಲ್ ಪುರಿ ಸಿಹಿ, ಹುಳಿ ಮತ್ತು ಖಾರದ ರುಚಿಯ ಸಮತೋಲನ ಹೊಂದಿರುವ ಜನಪ್ರಿಯ ಸ್ಟ್ರೀಟ್ ಸ್ನ್ಯಾಕ್ ಆಗಿದೆ. ಸಂಜೆ ವೇಳೆಯಲ್ಲಿ ಅನೇಕರು ಇದನ್ನು ಸವಿಯಲು ಇಷ್ಟಪಡುತ್ತಾರೆ.

ಪಾವ್ ಭಾಜಿ

ಪ್ರಮುಖ ಸ್ಟ್ರೀಟ್ ಫುಡ್‌ ಆಗಿರುವ ಪಾವ್ ಭಾಜಿಯಲ್ಲಿ ಬೆಣ್ಣೆಯಲ್ಲಿ ಹುರಿದ ಪಾವ್ ಜೊತೆ ಮಸಾಲೆ ಹಾಕಿ ಮ್ಯಾಶ್ ಮಾಡಿದ ತರಕಾರಿ ಗ್ರೇವಿ ನೀಡಲಾಗುತ್ತದೆ. ಬೆಣ್ಣೆಯ ಸುವಾಸನೆ ಮತ್ತು ಖಾರದ ರುಚಿಯಿಂದ ಇದು ಎಲ್ಲರ ಫೇವರಿಟ್‌ ಆಗಿದೆ.

ಛೋಲೆ ಭಟೂರೆ

ಉತ್ತರ ಭಾರತದ ಪ್ರಸಿದ್ಧ ಖಾದ್ಯವಾದ ಛೋಲೆ ಭಟೂರೆ, ಬಿಸಿ ಬಿಸಿ ಭಟೂರೆ ಜೊತೆಗೆ ಖಾರದ ಕಡಲೆ ಕರಿಯನ್ನು ಒಳಗೊಂಡಿರುತ್ತದೆ. ಈ ಖಾದ್ಯವನ್ನು ಈರುಳ್ಳಿ, ಉಪ್ಪಿನಕಾಯಿ ಮತ್ತು ಲಸ್ಸಿಯೊಂದಿಗೆ ಸವಿಯಲಾಗುತ್ತದೆ.

ದಹಿ ಪುರಿ

ಕರಕರೆ ಪುರಿಗಳೊಳಗೆ ಮೊಸರು, ಆಲೂಗಡ್ಡೆ, ಚಟ್ನಿ ಮತ್ತು ಸೇವ್ ಹಾಕಿ ತಯಾರಿಸುವ ದಹಿ ಪುರಿ ಸಿಹಿ, ಹುಳಿ ಮತ್ತು ಖಾರದ ರುಚಿಯನ್ನು ಒಂದೇ ಸಮಯದಲ್ಲಿ ನೀಡುತ್ತದೆ.

ವಡಾ ಪಾವ್

ಮುಂಬೈನ 'ದೇಶಿ ಬರ್ಗರ್' ಎಂದೇ ಕರೆಯಲಾಗುವ ವಡಾ ಪಾವ್‌ನಲ್ಲಿ ಖಾರದ ಆಲೂಗಡ್ಡೆ ಬೊಂಡಾವನ್ನು ಪಾವ್‌ನೊಳಗೆ ಇಟ್ಟು ಚಟ್ನಿ ಮತ್ತು ಹಸಿಮೆಣಸಿನಕಾಯಿಯೊಂದಿಗೆ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+