Mango Health Benefits: ಮಾವಿನ ಹಣ್ಣು ತಿಂದರೆ ಕಣ್ಣರಳುತ್ತೆ ಸಂಗಾತಿ ಕಂಡರೆ- ಈ ಪ್ರೇಮಫಲದ ಬಗ್ಗೆ ನಿಮಗಿದು ಗೊತ್ತೇ..?
ಇದು ಮಾವಿನ ಸೀಸನ್. ಮಾರುಕಟ್ಟೆಯಲ್ಲಿ ಮಾವು ಮಾರಾಟ ಆರಂಭವಾಗಿದೆ. ಮಾವು ಪ್ರಿಯರು ಈ ಸೀಸನ್‌ಗಾಗಿ ಕಾತರದಿಂದ ಕಾಯುತ್ತಾರೆ. ಯಾಕೆಮದರೆ ಮಾವು ರುಚಿಗೆ ಮಾತ್ರವಲ್ಲದೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ. ಅಲ್ಲದೆ ಮಾವಿನ ಹಣ್ಣು ಪತಿ ಪತ್ನಿಯ ಬಾಂಧವ್ಯದಲ್ಲಿ ಪ್ರೀತಿ ಹೆಚ್ಚಿಸುತ್ತದೆ. ಹಾಗಾದರೆ ಮಾವಿನ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
ಬೇಸಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಹೀಗಾಗಿ ಇದನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ. ಇದರ ರುಚಿಯು ಅದ್ಭುತವಾಗಿರುವುದು. ಒಂದೊಂದು ಜಾತಿಯ ಮಾವಿನ ಹಣ್ಣು ಬೇರೆ ಬೇರೆ ರೀತಿಯ ರುಚಿ ಹೊಂದಿರುತ್ತವೆ. ಈ ಹಣ್ಣು ಹಳದಿ, ಕೆಂಪು, ಕಿತ್ತಳೆ ಹಾಗೂ ಹಸಿರು ಬಣ್ಣದಲ್ಲಿ ಸಿಗುತ್ತವೆ.

ಮಾವಿನ ಹಣ್ಣಿನ 10 ಪ್ರಯೋಜನಗಳು:-
1. ಕಣ್ಣುಗಳಿಗೆ ಕಣ್ಣಾಗಿರುವ ಮಾವು
ಮಾವು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ. ಒಂದು ಮಾವಿನ ಹಣ್ಣು ಪೂರ್ಣ ತಿನ್ನುವುದರಿಂದ 25 ಪ್ರತಿಶತ ವಿಟಮಿನ್ ಎ ಪೋಷಣೆಯನ್ನು ಒದಗಿಸುತ್ತದೆ. ಇದು ಕುರುಡುತನ ಮತ್ತು ಒಣ ಕಣ್ಣುಗಳ ಸಮಸ್ಯೆಯಿಂದ ರಕ್ಷಿಸುತ್ತದೆ.
2. ಕ್ಯಾನ್ಸರ್ ವಿರುದ್ಧ ಹೋರಾಡುವ ಹಣ್ಣು
ಮಾವಿನ ಹಣ್ಣು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕಾರಣ, ಇದನ್ನು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಕರುಳಿನ ಮತ್ತು ಸ್ತನ ಕ್ಯಾನ್ಸರ್ ವಿರುದ್ಧ ಇದು ಹೋರಾಡುವ ಶಕ್ತಿಯನ್ನು ಹೊಂದಿದೆ. ಇದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.

3. ಕೂದಲು ಮತ್ತು ತ್ವಚೆ ಸ್ನೇ ಮಾವು
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಯಥೇಚ್ಚವಾಗಿದೆ. ಇದು ಚರ್ಮವನ್ನು ತೇವಗೊಳಿಸಲು ಕೆಲಸ ಮಾಡುತ್ತದೆ. ತ್ವಚೆಯನ್ನು ಒಣಗದಂತೆ ನೋಡಿಕೊಳ್ಳುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಇದರಿಂದಾಗಿ ಮಾವಿನ ಹಣ್ಣನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ.
4. ಮಧುಮೇಹಕ್ಕೆ ಶತ್ರು ಈ ರಾಜ
ಮಾವಿನ ಹಣ್ಣನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ. ಮಾವು ಮಧುಮೇಹ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಲ್ಲದೆ ಐದರಿಂದ ಆರು ಮಾವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ರಾತ್ರಿಯಿಡೀ ನೀರಿನಲ್ಲಿ ಬಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿದರೆ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
5. ಮಾವಿನ ಹಣ್ಣಿನಿಂದ ಪತಿ ಪತ್ನಿಯರ ಬಾಂಧವ್ಯದಲ್ಲಿ ಪ್ರೀತಿ ಹೆಚ್ಚಳ
ಮಾವು ಆರೋಗ್ಯಕರ ಲೈಂಗಿಕತೆಗೆ ಅಗತ್ಯವಾದ ಕಾಮೋತ್ತೇಜಕ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದಲೇ ಇದನ್ನು ಪ್ರೇಮಫಲ ಎಂದೂ ಕರೆಯುತ್ತಾರೆ. ಇದು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಇದು ಲೈಂಗಿಕ ಹಾರ್ಮೋನುಗಳನ್ನು ನಿಯಮಿತವಾಗಿರಿಸುತ್ತದೆ. ಹೀಗಾಗಿ ಇದು ಸಂಗಾತಿಯ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
6. ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡುವ ಹಣ್ಣು
ಮಾವಿನಹಣ್ಣು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ರಚನೆಯ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮಾವು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಮೂತ್ರಪಿಂಡದಲ್ಲಿ ಕಲ್ಲುಗಳ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡುತ್ತದೆ.
7. ಜೀರ್ಣಕ್ರಿಯೆಯಲ್ಲಿ ಸುಧಾರಣೆ
ಮಾವು ನಾರಿನಂಶವನ್ನು ಹೊಂದಿದ್ದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದಿಲ್ಲ.
8. ಗರ್ಭಿಣಿ ಮಹಿಳೆಯರಿಗೆ ಉತ್ತಮ
ಇದು ವಿಟಮಿನ್ ಎ, ವಿಟಮಿನ್ ಬಿ 6, ವಿಟಮಿನ್ ಸಿ ಮತ್ತು ಕಬ್ಬಿಣವನ್ನು ಒಳಗೊಂಡಿರುವ ಕಾರಣ, ಇದು ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದಾಗ್ಯೂ ಇದನ್ನು ಗರ್ಭಿಣಿ ಮಹಿಳೆಯರು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
9. ರೋಗನಿರೋಧಕ ಶಕ್ತಿ ಹೆಚ್ಚಳ
ಮಾವಿನಹಣ್ಣು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ವಿಟಮಿನ್ ಎ ಮತ್ತು ಸಿ ಅನ್ನು ಹೊಂದಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೀಗಾಗಿ ಮಾವಿನ ಹಣ್ಣು ದೇಹಕ್ಕೆ ಶಕ್ತಿ ನೀಡಿ ರಕ್ಷಿಸುತ್ತದೆ.
10. ಮಾನಸಿಕ ಆರೋಗ್ಯ ಸುಧಾರಣೆ
ಮಾವಿನಹಣ್ಣಿನಲ್ಲಿ ವಿಟಮಿನ್ ಬಿ6 ಇದೆ. ಇದನ್ನು ಮೆದುಳಿನ ಆಹಾರ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ನಿದ್ರೆ, ಮನಸ್ಥಿತಿ ಮತ್ತು ಮೆದುಳಿನ ಕಾರ್ಯಕ್ಕೂ ಇದು ಮುಖ್ಯವಾಗಿದೆ. ಹೀಗಾಗಿ ಮಾವಿನ ಹಣ್ಣು ರುಚಿಗೆ ಮಾತ್ರವಲ್ಲದೆ ಅನೇಕ ಆರೋಗ್ಯಕರ ಪ್ರಯೋಜನ ಹೊಂದಿದೆ. ಇದನ್ನು ನಿತ್ಯ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.











Click it and Unblock the Notifications