Heart Attack: ಹಾರ್ಟ್ ಆಟ್ಯಾಕ್ ಭಯವೇ? : ತಪ್ಪದೇ ಈ ಐದು ಆಹಾರಗಳನ್ನ ನೀವು ಬಳಸಿ
ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ದಿನ ನಿತ್ಯದ ಆಹಾರ ಪದ್ದತಿಯೂ ಸಹ ಹೃದಯಘಾತಕ್ಕೆ ಪ್ರಮುಖ ಕಾರಣ ಎಂದು ವೈದ್ಯರು ಹೇಳುತ್ತಾರೆ. ನಮಗೆ ದೇಹದಲ್ಲಿ ಪ್ರತಿಯೊಂದು ಅಂಗವೂ ಬಹಳ ಮುಖ್ಯ.ಣ್ಣು, ಕೈ, ಕಾಲುಗಳ ಕಾಳಜಿ ಹೇಗೆ ತೆಗೆದುಕೊಳ್ಳುತ್ತೇವೋ ಹಾಗೆಯೇ ನಮ್ಮ ಹೃದಯದ ಬಗ್ಗೆಯೂ ಕಾಳಜಿ ವಹಿಸಬೇಕು, ಹೃದಯ ಕಾಳಜಿ ವಹಿಸದೇ ಇರುವುದರಿಂದ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ಹೌದು, ಹಿಂದಿನ ಕಾಲದಲ್ಲಿ ಮಧ್ಯವಯಸ್ಕ ಅಥವಾ ವೃದ್ಧಾಪ್ಯದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ದಿನ ತಿತ್ಯದಲ್ಲಿ ಅತೋ ಹೆಚ್ಚಾಗಿ ನಾವು ಬಳಸು ಅತೀಯಾದ ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯಘಾತ ಸಂಭವಿಸಬಹುದು ಎಂದು ವೈದೈರು ಹೇಳುತ್ತಾರೆ.

ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹವಾದಾಗ ಅಪಧಮನಿಗಳು ಕಿರಿದಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ರಕ್ತವು ಹೃದಯವನ್ನು ತಲುಪಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಇದರಿಂದಾಗಿ ಮೊದಲು ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ನಂತರ ಹೃದಯಾಘಾತ ಸಂಭವಿಸುತ್ತದೆ.
ಈ ಹೃದಯಘಾತವನ್ನ ತಪ್ಪಿಸಲು ಹಾಗೂ ಹೃದಯದ ಆರೋಗ್ಯವನ್ನ ಕಾಪಾಡಿಕೊಳ್ಳಲು ಮ್ಮ ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ನೀವು ರೂಢಿಸಿಕೊಳ್ಳಬೇಕು ಎಂದು ಡಾ. ವೆಂಕಟರಾಮಣ ಹೆಗಡೆ ಅವರು ಕೆಲವು ಸಲಹೆಗಳನ್ನ ನೀಡಿದ್ದಾರೆ. (HDL) ಒಳ್ಳೆಯ ಕೊಲೆಸ್ಟಾಲ್ ಕಡಿಮೆ ಇರುವುದರಿಂದ ಹೆಚ್ಚಾಗಿ ಭಾರತದಲ್ಲಿ ಹಾರ್ಟ್ ಆಟ್ಯಾಕ್ ಆಗುತ್ತದೆ ಎಂದು ವೈಜ್ಞಾನಿಕವಾಗಿ ಸಾಭೀತಾಗಿದೆ ಎನ್ನುತ್ತಾರೆ ವೈದ್ಯರು.
ವಿಶೇಷವಾಗಿ ನೀವು ಹೃದಯದ ಕಾಯಿಲೆ ಇರುವ ರೋಗಿಗಳಾಗಿದ್ದರೆ ಹೃದಯಾಘಾತದ ಸಾಮಾನ್ಯ ಲಕ್ಷಣಗಳಾದ ಉಸಿರಾಟದ ತೊಂದರೆ, ತ್ವರಿತ ಹೃದಯ ಬಡಿತ ಮತ್ತು ಆಯಾಸ ಇವುಗಳ ಕಡೆ ಗಮನಹರಿಸಬೇಕು. ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ.

ಇನ್ನೂ ಹಲವಯ ಸಮಸ್ಯೆಗಳನ್ನು ತಡೆಗಟ್ಟಲು, ನಾವು ನಮ್ಮ ಜೀವನಶೈಲಿಯನ್ನು ಸುಧಾರಿಸಬೇಕು, ದಿನನಿತ್ಯದ ಆಹಾರ ವ್ಯವಸ್ಥೆಯಲ್ಲಿ ಬದಲಾವಣೆಯನ್ನ ಮಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು, ಧೂಮಪಾನವನ್ನು ತ್ಯಜಿಸಬೇಕು ಮತ್ತು ಮದ್ಯಪಾನ ಸೇವನೆಯನ್ನು ಮಿತಿಗೊಳಿಸಬೇಕು. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಹೀಗಾಗಿ ನಾವು ಮೊದಲು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿಕೊಳ್ಳುವುದರಿಂದ ಹೃದಯದ ಆರೋಗ್ಯವನ್ನ ಕಾಪಾಡಬಹುದು.
ಈ ಆಹಾರವನ್ನ ಸೇವಿಸುವ ಮೂಲಕ ಹೃದಯದ ಆರೋಗ್ಯವನ್ನ ಕಾಪಾಡಿ
ಕೊಲೆಸ್ಟಾಲ್ ಅಂದ್ರೆ ಯಾರಿಗೆ ತಾನೇ ಭಯ ಇಲ್ಲ. ಕೆಟ್ಟ ಕೊಲೆಸ್ಟಾಲ್ ನಿಂದ ಹೆಚ್ಚಾಗಿ ಹೃಯದಘಾತ ಪ್ರಕರಣಗಳು ಸಂಭವಿಸುತ್ತಿವೆ. ಒಳ್ಳೆಯ ಕೊಲೆಸ್ಟಾಲ್ ಹೆಚ್ಚಿಗೆ ಮಾಡಿಕೊಳ್ಳುವುದರಿಂದ ಹಾರ್ಟ್ ಆಟ್ಯಾಕ್ ಕಡಿಮೆ ಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾಗಾದ್ರೆ ಒಳ್ಳೆಯ ಕೊಲೆಸ್ಟಾಲ್ ಹೆಚ್ಚಾಗಿ ಮಾಡುವ ವಿಧಾನ ಯಾವುದು? ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಲು ಸೇವಿಸಬೇಕಾದ ಆಹಾರ ಪದ್ದತಿ ಇಲ್ಲಿದೆ ನೋಡಿ.
- ತುಪ್ಪ, ಬೆಣ್ಣೆ, ಮಜ್ಜಿಗೆ ಕೊಬ್ಬರಿ ಎಣ್ಣೆಯನ್ನ ನಾವು ಆಹಾರದಲ್ಲಿ ಪ್ರತಿನಿತ್ಯ ಬಳಸುವುದರಿಂದ ಒಳ್ಳೆಯ ಕೊಲೆಸ್ಟಾಲ್ ಹೆಚ್ಚಾಗುತ್ತದೆ. ಇದರಿಂದ ಹೃದಯಘಾತವನ್ನ ತಡೆಗಟ್ಟಬಹುದಾಗಿದೆ.
- ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ನಟ್, ಶೇಂಗಾವನ್ನು ದಿನಕ್ಕೆ 50 ಗ್ರಾಂ ನಷ್ಟು ತಿನ್ನುವವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
- ಒಮೆಗಾ-3 ಪೂರಕಗಳು ಎಡಿಎಚ್‌ಡಿಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಎಂದು ಹಲವಾರು ಅಧ್ಯಯನಗಳು ಹೇಳುತ್ತವೆ. ಒಮೆಗಾ-3 ಗಳು ಅಜಾಗರೂಕತೆ ಮತ್ತು ಕಾರ್ಯ ಪೂರ್ಣಗೊಳಿಸುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವು ಹೈಪರ್ ಆಕ್ಟೀವ್, ಚಡಪಡಿಕೆ ಮತ್ತು ಆಕ್ರಮಣಶೀಲತೆಯನ್ನು ಸಹ ಕಡಿಮೆ ಮಾಡುತ್ತವೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
- ದ್ವಿದಳ ಧಾನ್ಯಗಳು ಹಾಗೂ ಶೇಂಗಾ, ಹೆಸರು ಕೊಳಕೆ ಕಾಳುಗಳನ್ನ ಸೇವಿಸುವುದರಿಂದ ಆರೋಗ್ಯದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವ ಮೂಲಕ ಹೃದಯಘಾತವನ್ನ ತಡೆಗಟ್ಟಲು ಸಹಾಯಕವಾಗಿದೆ.
- ದಿನಕ್ಕೆ ಎರಡರಿಂದ ಮೂರು ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಮಿಟಮಿನ್ ಗಳು, ಪ್ರೋಟಿನ್ ಸಿಗುತ್ತದೆ. ಇದರಿಂದಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಮೂರು ತಿಂಗಳು ಈ ಆಹಾರವನ್ನು ಸೇವಿಸುವುದರಿಂದ ಒಳ್ಳೆಯ ಕೊಲೆಸ್ಟಾಲ್ ಹೆಚ್ಚಾಗುತ್ತದೆ.












Click it and Unblock the Notifications