ಬಿರು ಬೇಸಿಗೆಯಲ್ಲಿಯೂ ಎಸಿ, ಕೂಲರ್‌ ಇಲ್ಲದೆ ಮನೆಯನ್ನು ತಂಪಾಗಿರಿಸಲು ಇಲ್ಲಿದೆ ಟಿಪ್ಸ್‌

ಬಿಸಿಲಿನ ತಾಪಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ಕಾವು ಏರುತ್ತಲೇ ಇದೆ. ತಣ್ಣನೆಯ ಗಾಳಿಗಾಗಿ ಜನರು ಫ್ಯಾನ್‌, ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ದಿನವಿಡೀ ಎಸಿ ಅಥವಾ ಏರ್‌ ಕೂಲರ್‌ ಕೆಳಗಿರುವುದು ಸಾಧ್ಯವಾಗುವುದಿಲ್ಲ. ದಿನಪೂರ್ತಿ ಎಸಿ, ಕೂಲರ್‌ ಆನ್‌ ಮಾಡಿ ಕುಳಿತರೆ ತಿಂಗಳಾಂತ್ಯದಲ್ಲಿ ಬರುವ ವಿದ್ಯುತ್‌ ಬಿಲ್‌ ಜೇಬು ಸುಟ್ಟು ಬಿಡಬಹುದು. ಅಲ್ಲದೆ, ಎಲ್ಲರಿಗೂ ಎಸಿ, ಕೂಲರ್‌ ಖರೀದಿ ಸಾಧ್ಯವಾಗುತ್ತದೆ ಎಂದು ಹೇಳುವುದೂ ಸರಿಯಲ್ಲ. ಯಾಕೆಂದರೆ ಎಸಿ, ಕೂಲರ್‌ ಫ್ಯಾನ್‌ನಂತೆ ಅಗ್ಗವಲ್ಲ ಅವು ದುಬಾರಿ ವಸ್ತುಗಳು.

ತೀವ್ರವಾದ ಸೂರ್ಯನ ಬೆಳಕು ಮನೆಯನ್ನು ಬಹಳ ಬೇಗನೆ ಬಿಸಿ ಮಾಡುತ್ತದೆ. ಮನೆಯಲ್ಲಿ ಹವಾನಿಯಂತ್ರಣ ಅಥವಾ ಕೂಲರ್‌ಗಳಿಲ್ಲದವರಿಗೆ ಇದು ಸಮಸ್ಯೆಯನ್ನು ಉಂಟು ಮಾಡಬಹುದು. ಹಾಗಾಗಿ ಎಸಿ, ಕೂಲರ್‌ ಇಲ್ಲದೆಯೇ ಮನೆಯ ಕೋಣೆಯನ್ನು ತಂಪಾಗಿರಿಸುವ ನೈಸರ್ಗಿಕ ಮಾರ್ಗಗಳನ್ನು ಕಂಡುಕೊಂಡರೆ ಹೇಗೆ? ಹೌದು, ಕೆಲವೊಂದು ಹ್ಯಾಕ್‌ಗಳನ್ನು ಬಳಸುವ ಮೂಲಕ ಬಿರು ಬೇಸಿಗೆಯಲ್ಲಿಯೂ ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಬಹುದು.

Summer Hacks

1. ಕಿಟಕಿಗಳಿಗೆ ಬ್ಲ್ಯಾಕ್‌ ಔಟ್‌ ಪರದೆ ಬಳಸಿ: ಸೂರ್ಯನ ಕಿರಣ ನೇರ ಮನೆಗೆ ಪ್ರವೇಶ ಮಾಡುವುದರಿಂದ ಒಳಾಂಗಣ ತಾಪಮಾನ ಏರುತ್ತದೆ. ಮಧ್ಯಾಹ್ನದ ಅವಧಿಗಂತೂ ಇದು ತೀರಾ ಹೆಚ್ಚಾಗಿರುತ್ತದೆ. ಇದನ್ನು ಮೊದಲು ತಪ್ಪಿಸಬೇಕು. ಇದಕ್ಕಾಗಿ ಬ್ಲ್ಯಾಕ್‌ಔಟ್‌ ಕರ್ಟನ್‌ ಬಳಕೆ ಸೂಕ್ತ. ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ ಔಟ್‌ ಕರ್ಟನ್‌ ಸಿಗುತ್ತದೆ. ಇದು ಸ್ವಲ್ಪ ದಪ್ಪ ಇರುತ್ತದೆ. ಇದು ಶೇ. 100 ರಷ್ಟು ಸೂರ್ಯನ ತಾಪವನ್ನು ನಿಗ್ರಹಿಸುತ್ತದೆ. ಬೆಡ್‌ರೂಮ್‌ಗಳಿಗೆ ಇದು ಮೊದಲ ಆಯ್ಕೆ.

2. ಡಬ್ಬಲ್‌ ಕರ್ಟನ್‌ ಬಳಸಿ: ಮೊದಲು ಸೂರ್ಯನ ತಾಪ ಮನೆಯೊಳಗೆ ಬರುವುದನ್ನು ತಡೆಯಬೇಕು. ಇದಕ್ಕೆ ಡಬ್ಬಲ್‌ ಪರದೆ ಬಳಸಬಹುದು. ಡಬ್ಬಲ್‌ ಪರದೆ ಬಳಕೆಯಿಂದ ನೇಸರನ ಕಿರಣ ನೇರ ಮನೆಯೊಳಗೆ ಬರುವುದಿಲ್ಲ. ಅದರ ಶಾಖವೂ ಕಡಿಮೆ ಇರುತ್ತದೆ. ಹಾಗಾಗಿ, ಮನೆ ಅಥವಾ ಕೋಣೆ ಶಾಂತ ಮತ್ತು ತಂಪಾಗಿರುತ್ತದೆ.

Vastu Shastra: ವಾಸ್ತು ಶಾಸ್ತ್ರವನ್ನು ಸಂಪೂರ್ಣ ಪಾಲಿಸಿದ್ರೆ ಶ್ರೀಮಂತ ಆಗ್ತರಾ? ನಿಜಾಂಶ ಇಲ್ಲಿದೆ
Vastu Shastra: ವಾಸ್ತು ಶಾಸ್ತ್ರವನ್ನು ಸಂಪೂರ್ಣ ಪಾಲಿಸಿದ್ರೆ ಶ್ರೀಮಂತ ಆಗ್ತರಾ? ನಿಜಾಂಶ ಇಲ್ಲಿದೆ

3. ಸಂಜೆಯಾದ ಮೇಲೆ ಕಿಟಕಿಗಳನ್ನು ತೆರೆದಿಡಿ: ಸೂರ್ಯಾಸ್ತದ ಬಳಿಕ ತಾಪಮಾನ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ಗಾಳಿಯಲ್ಲಿ ತೇವಾಂಶವೂ ಹೆಚ್ಚಾಗಿ, ತಂಪಾಗಿರುತ್ತದೆ. ಕಿಟಕಿ ತೆರೆದಾಗ ಹೊರಗಡೆಯ ತಂಪುಗಾಳಿ ಮನೆಯೊಳಗೆ ಸೇರುತ್ತದೆ. ಜೊತೆಗೆ, ಮನೆಯೊಳಗಿದ್ದ ಬಿಸಿಗಾಳಿ ಅದೇ ತೀವ್ರತೆಯಲ್ಲಿ ಹೊರಹೋಗುತ್ತದೆ. ಇದು ಕೆಲವೊಮ್ಮೆ ನೈಸರ್ಗಿಕ ಎಸಿ ರೀತಿಯಲ್ಲಿ ಕೆಲಸ ಮಾಡುತ್ತದ.

4. ಸಂಜೆಗೆ ಕಿಟಕಿ ಬಳಿ ಟೇಬಲ್‌ ಫ್ಯಾನ್‌ ಇಡಿ: ಕಿಟಕಿ ಬಳಿ ಇರುವ ಟೇಬಲ್‌ ಫ್ಯಾನ್‌ ಹೊರಭಾಗದ ತಂಪುಗಾಳಿಯನ್ನು ಒಳಗೆ ಸೆಳೆಯುತ್ತದೆ. ಒಂದು ರೀತಿಯಲ್ಲಿ ಇದು ರಿವರ್ಸ್‌ ಎಕ್ಸಾಸ್ಟ್‌ ಫ್ಯಾನ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಹೊರಗಡೆ ತಂಪುಗಾಳಿ ಮನೆಯೊಳಗೆ ಸೇರಿದರೆ ಮನೆ ಪ್ರಶಾಂತವಾಗುತ್ತದೆ.

5. ಮನೆಯೊಳಗೆ ಗಿಡಗಳನ್ನಿಡಿ: ಮನೆಯೊಳಗೆ ಯಾವ ಗಿಡಗಳನ್ನಿಡಬೇಕು ಎಂಬ ಮಾಹಿತಿ ಗೊತ್ತಿರಬೇಕು. ಕೆಲವೊಂದು ಗಿಡಗಳು ನೈಸರ್ಗಿಕವಾಗಿ ತೇವಾಂಶ ಬಿಡುಗಡೆ ಮಾಡುತ್ತವೆ. ಇದರಿಂದ ಸುತ್ತಮುತ್ತಲಿನ ಸ್ಥಳ ತಂಪಾಗುತ್ತದೆ. ಅಲೋವೆರಾ, ಸ್ನೇಕ್‌ ಪ್ಲಾಂಟ್‌, ಅಡಿಕೆ ಪಾಮ್‌, ತುಳಸಿ, ರಬ್ಬರ್‌ ಪ್ಲಾಂಟ್‌ ಮತ್ತು ಪೀಸ್‌ ಲಿಲ್ಲಿ ಮೊದಲಾದ ಗಿಡಗಳು ಒಳಾಂಗಣಕ್ಕೆ ಹೇಳಿ ಮಾಡಿಸಿದಂತಿವೆ. ಅವುಗಳನ್ನು ಸಾಧ್ಯವಾದಷ್ಟೂ ಮನೆಯೊಳಗಿಡಿ. ಒಳಾಂಗಣ ಅಲಂಕಾರವೂ ಹೆಚ್ಚುತ್ತದೆ. ಮನೆ ಕೂಡಾ ತಂಪು ತಂಪು.

Statues Vastu: ಮನೆಗೆ ಈ 5 ಮೂರ್ತಿಗಳನ್ನು ಇಟ್ಟರೆ ಲಕ್ಷ್ಮೀ ಕೃಪೆ ಖಚಿತ!
Statues Vastu: ಮನೆಗೆ ಈ 5 ಮೂರ್ತಿಗಳನ್ನು ಇಟ್ಟರೆ ಲಕ್ಷ್ಮೀ ಕೃಪೆ ಖಚಿತ!

6. ಅಧಿಕ ಶಾಖದ ಬಲ್ಬ್‌, ಓವೆನ್‌, ಇಸ್ತ್ರಿ ಬಳಕೆ ಬೇಡ: ಬಿಸಿಗಾಳಿ ಬೀಸುವಾಗ ಹೈವೋಲ್ಟೇಜ್‌ ಬಲ್ಬ್‌ ಬಳಸಬೇಡಿ. ಕೂಲ್‌ ಲೈಟ್‌ ಬಳಕೆ ಸೂಕ್ತ. ಓವೆನ್‌, ಇಸ್ತ್ರಿ ಬಳಕೆ ಬೇಡವೇ ಬೇಡ. ಇವು ಮನೆಯೊಳಗಿನ ಉಷ್ಣತೆಯನ್ನ ಇನ್ನಷ್ಟು ಏರಿಸುತ್ತವೆ.

7. ಛಾವಣಿ, ಬಾಲ್ಕನಿಗಳನ್ನು ತಂಪಾಗಿಡಿ: ಛಾವಣಿಯಲ್ಲಿ ಗಾರ್ಡನಿಂಗ್‌ ಮಾಡಿ. ಬಾಲ್ಕನಿಗಳಲ್ಲಿ ಸಾಕಷ್ಟು ಗಿಡಗಳಿರಲಿ. ಆ ಗಿಡಗಳಿಗೆ ಸಾಕಷ್ಟು ನೀರು ಹಾಕಿ. ಛಾವಣಿ, ಬಾಲ್ಕನಿಗಳಲ್ಲಿ ಸಾಕಷ್ಟು ಗಿಡಗಳಿದ್ದರೆ ಮನೆಯೊಳಗೆ ಅದರ ಪರಿಣಾಮ ಅನುಭವಕ್ಕೆ ಬರುತ್ತದೆ. ಮನೆ, ಮನಸ್ಸು ಎರಡೂ ಕೂಲಾಗಿರುತ್ತದೆ.

8. ಹಸಿರು ಬಣ್ಣದ ಶೇಡ್‌ ನೆಟ್‌ಗಳನ್ನು ಬಳಸಿ: ಹಸಿರು ಬಣ್ಣದ ಶೇಡ್‌ ನೆಟ್‌ಗಳನ್ನು ನೀವು ನೋಡಿರಬಹುದು. ಈ ಶೇಡ್‌ ನೆಟ್‌ ಶಾಖ ಹೀರಿಕೊಳ್ಳುತ್ತದೆ. ಇದನ್ನು ಮನೆಯ ಸುತ್ತ, ಛಾವಣಿಗೆ, ಬಾಲ್ಕನಿಗೆ, ಅಂಗಳದ ಸುತ್ತ ಹಾಕಿದರೆ, ಸೂರ್ಯನ ತಾಪ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

9. ಒಳಾಂಗಣದಲ್ಲಿ ನೀರಿನ ಬಕೆಟ್‌ಗಳಿರಲಿ: ಇದು ಸ್ವಲ್ಪ ವಿಪರೀತ ಅನ್ನಿಸಬಹುದು. ಮನೆಯ ಹಾಲ್‌ನ ಮೂಲೆಯಲ್ಲಿ, ಕೋಣೆಗಳಲ್ಲಿ, ವರಾಂಡದಲ್ಲಿ ನೀರಿನ ಬಕೆಟ್‌ಗಳನ್ನಿಡಿ. ಇದರ ಮೇಲೆ ಫ್ಯಾನ್‌ ತಿರುಗಿದ್ರೆ ಆ ಜಾಗದ ಗಾಳಿಯ ತೇವಾಂಶ ಹೆಚ್ಚಾಗುತ್ತದೆ. ಸೆಖೆ ಕಡಿಮೆ ಆಗುತ್ತದೆ.

10. ಬಟ್ಟೆಯ ಬಣ್ಣಗಳ ಬಳಕೆ ಗೊತ್ತಿರಲಿ: ಸಾಮಾನ್ಯವಾಗಿ ತಿಳಿ ಬಣ್ಣದ ಬಟ್ಟೆ ಬಳಸಿ. ಗಾಢ ಬಣ್ಣದ ಬಟ್ಟೆಗಳ ಬಳಕೆ ಬೇಡ. ಜೊತೆಗೆ ಹತ್ತಿಯ ಬಟ್ಟೆ ಬಳಕೆ ಉಪಯುಕ್ತ. ಲಿನೆನ್‌, ವೂಲನ್‌ ಬಟ್ಟೆಗಳು ಬೇಡ. ಬೇಸಿಗೆಯಲ್ಲಿ ಬಟ್ಟೆಗಳೂ ಗಾಳಿಯಾಡುತ್ತಿರಬೇಕು.

11. ಕಿಟಕಿಗಳನ್ನು ಯಾವಾಗ ತೆರೆದಿಡಬೇಕು ಗೊತ್ತಾ?: ಕಿಟಕಿಗಳು ಸದಾಕಾಲ ತೆರೆದಿಡುವುದು ಸೂಕ್ತ ಅಲ್ಲ. ಬೆಳಗ್ಗೆ 5 ರಿಂದ 9 ಗಂಟೆಯ ತನಕ ಮತ್ತು ಸಂಜೆ 8 ರಿಂ 10 ಗಂಟೆಯ ತನಕ ಕಿಟಕಿ ತೆರೆದಿಡಿ. ಪ್ರಖರ ಸೂರ್ಯಕಿರಣಗಳು ಬೀಳುವಾಗ ಅಂದರೆ, ಮಧ್ಯಾಹ್ನದ ಹೊತ್ತಿಗೆ ಕಿಟಕಿ ಮುಚ್ಚಿ. ಕರ್ಟನ್‌ಗಳ ಬಳಕೆ ಹೆಚ್ಚಿಗೆ ಮಾಡಿ. ಕೊಠಡಿಯಲ್ಲಿ ಗಾಳಿಯಾಡುತ್ತಿರಲಿ. ರಾತ್ರಿಯ ಹೊತ್ತು ಅವಶ್ಯಕತೆಗನುಗುಣವಾಗಿ ಕಿಟಕಿ ಬಳಸಿ

ಇನ್ನೂ ಕೆಲವೊಂದು ಅಂಶಗಳನ್ನು ಗಮನಿಸಲೇಬೇಕು. ಕೊಠಡಿಯಲ್ಲಿ ಅನಗತ್ಯ ವಸ್ತುಗಳಿಡಬೇಡಿ. ಕಾರ್ಪೆಟ್‌ಗಳನ್ನು ತೆಗೆದು ಮಡಚಿಡಿ. ಸಾಧ್ಯವಾದರೆ ಛಾವಣಿಗೆ ಬಿಳಿಬಣ್ಣ ಬಳಸಿ. ದಿನಕ್ಕೆರಡು ಸಲ ನೆಲ ಒರೆಸಿ. ಮನೆ ಸುತ್ತ ಸಸ್ಯ ತೋಟ ಬೆಳೆಸಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+