Get Updates
Get notified of breaking news, exclusive insights, and must-see stories!

Sabja Seeds Health Benefits: ಆರೋಗ್ಯ ಸಂಜೀವಿನಿ ತುಳಿಸಿ ಬೀಜಗಳು ಈ ರೋಗಗಳು ಉಲ್ಬಣಗೊಳ್ಳಲು ಅನುಮತಿಸುವುದಿಲ್ಲ...

ಆಯುರ್ವೇದ ಗುಣಗಳಿಂದ ತುಂಬಿರುವ ತುಳಸಿಯು ಭಾರತದ ಬಹುತೇಕ ಮನೆಗಳಲ್ಲಿ ಕಂಡುಬರುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಶೀತ ಮತ್ತು ಕೆಮ್ಮಿನಿಂದ ಹಿಡಿದು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ.

ತುಳಸಿ ಮಾತ್ರವಲ್ಲ ಅದರ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತುಳಸಿ ಬೀಜಗಳು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿವೆ. ಇದು ಅನೇಕ ರೋಗಗಳಿಂದ ಪರಿಹಾರವನ್ನು ನೀಡುತ್ತದೆ. ಹಾಗಾದರೆ ತುಳಸಿ ಬೀಜಗಳ ಪ್ರಯೋಜನಗಳನ್ನು ತಿಳಿಯೋಣ.

sabja-seeds-in-kannada

ತುಳಸಿ ಬೀಜಗಳ ಅದ್ಭುತ ಪ್ರಯೋಜನಗಳು:-

1. ಮಾನಸಿಕ ಒತ್ತಡ ನಿವಾರಣೆ

ತುಳಸಿ ಬೀಜಗಳ ಆರೋಗ್ಯಕರ ಪ್ರಯೋಜನಗಳು ಕೆಲವು ಜನರಿಗೆ ಮಾತ್ರ ತಿಳಿದಿದೆ. ಆದರಿದು ಅನೇಕ ಆರೋಗ್ಯ ಪ್ರಯೋಜನಗಳುನ್ನು ಹೊಂದಿದೆ. ಇದು ಉದ್ವೇಗವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಆತಂಕ ಅಥವಾ ಮಾನಸಿಕ ಒತ್ತಡದಿಂದ ದಣಿದ ಅಥವಾ ತೊಂದರೆಗೊಳಗಾದವರಿಗೆ ತುಳಸಿ ಬೀಜಗಳು ತುಂಬಾ ಪ್ರಯೋಜನಕಾರಿ. ಖಿನ್ನತೆ ಅಥವಾ ಒತ್ತಡದಿಂದ ಹೊರಬರಲು ಬಯಸುವವರಿಗೆ ತುಳಸಿ ಬೀಜಗಳು ಉತ್ತಮ ಆಯ್ಕೆಯಾಗಿದೆ.

2. ತೂಕವನ್ನು ಕಡಿಮೆ ಮಾಡಲು ಸಹಾಯ

ಕೆಲವು ಜನರು ಸಾಮಾನ್ಯವಾಗಿ ಕೆಟ್ಟ ಆಹಾರ ಪದ್ಧತಿಗಳಿಂದ ತೂಕವನ್ನು ಹೆಚ್ಚಿಸಿಕೊಂಡಿರುತ್ತಾರೆ. ಇದರಿಂದಾಗಿ ಅವರಲ್ಲಿ ತುಂಬಾ ಅಸಮಾಧಾನವಿರುತ್ತದೆ. ತುಳಸಿ ಬೀಜಗಳು ಇದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಇದರಲ್ಲಿರುವ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳು ತೂಕವನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿದಂತೆ ಮಾಡುತ್ತವೆ.

sabja-seeds-in-kannada

3. ಜೀರ್ಣಕ್ರಿಯೆ ಸುಧಾರಣೆ

ಬೇಸಿಗೆ ಕಾಲದಲ್ಲಿ ಕೆಲವರಿಗೆ ಮಲಬದ್ಧತೆ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಇರುತ್ತದೆ. ನೀವು ಅದನ್ನು ತೊಡೆದುಹಾಕಲು ಬಯಸಿದರೆ, ತುಳಸಿ ಬೀಜಗಳನ್ನು ಸೇವಿಸಬಹುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ. ತುಳಸಿ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

4. ರೋಗನಿರೋಧಕ ಶಕ್ತಿ ಹೆಚ್ಚಳ

ಸರಿಯಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಇದು ಅನೇಕ ರೋಗಗಳು ಮತ್ತು ಸೋಂಕುಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ತುಳಸಿ ಬೀಜಗಳ ಕಷಾಯವು ತುಂಬಾ ಪ್ರಯೋಜನಕಾರಿಯಾಗಿದೆ.

5.ಸಕ್ಕರೆ ಮಟ್ಟ ನಿಯಂತ್ರಣ

ವಿವಿಧ ಅಧ್ಯಯನಗಳ ಪ್ರಕಾರ, ತುಳಸಿ ಬೀಜಗಳಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ತುಳಸಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ನೆನೆಸಿದ ಬೀಜಗಳನ್ನು ಬೆಳಿಗ್ಗೆ ಒಂದು ಲೋಟ ಹಾಲಿಗೆ ಸೇರಿಸಿ ಕುಡಿದರಿ. ಇದನ್ನು ಪ್ರತಿದಿನ ಕುಡಿಯುವುದರಿಂದ ನಿಮ್ಮ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ.

6.ಬಾಯಿಯ ಆರೋಗ್ಯ

ತುಳಸಿ ಬೀಜಗಳು ಉರಿಯೂತದ ಗುಣಗಳನ್ನು ಹೊಂದಿದ್ದು, ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಇವು ಆಂಟಿಮೈಕ್ರೊಬಿಯಲ್, ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿದ್ದು, ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

7.ಉರಿಯೂತ ನಿವಾರಣೆ

ತುಳಸಿ ಬೀಜಗಳಲ್ಲಿನ ಉರಿಯೂತದ ಲಕ್ಷಣಗಳು ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

8.ರಕ್ತನಾಳದ ಆರೋಗ್ಯ

ತುಳಸಿ ಬೀಜಗಳಲ್ಲಿ ಒಲೀಕ್ ಆಮ್ಲ ಮತ್ತು ಲಿನೋಲೆನಿಕ್ ಆಮ್ಲಗಳಂತಹ ಫೈಟೊಕೆಮಿಕಲ್ಸ್'ಗಳು ಹೆಚ್ಚಾಗಿವೆ. ತುಳಸಿ ಬೀಜದ ಎಣ್ಣೆಯು ಕೊಬ್ಬಿನಾಮ್ಲಗಳ ಉತ್ತಮ ಮೂಲವೂ ಆಗಿದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಹೃದಯರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು. ನೀವು ಅಡುಗೆ ಎಣ್ಣೆಯಾಗಿ ತುಳಸಿ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

9.ಹೃದಯದ ಆರೋಗ್ಯ

ತುಳಸಿ ಬೀಜಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡಕ್ಕೆ ಪರಿಹಾರವಾಗಿ ತುಳಸಿ ಬೀಜಗಳನ್ನು ಬಳಸಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದರೆ ತುಳಿಸಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಟ್ಟಿನಲ್ಲಿ ಹೃದಯದ ಆರೋಗ್ಯ ಕಾಪಾಡುವಲ್ಲಿ ತುಳಸಿ ಬೀಜಗಳು ಪ್ರಮುಖ ಪಾತ್ರವಹಿಸತ್ತವೆ.

10. ಜ್ವರವನ್ನು ತಗ್ಗಿಸಲು ಬಳಕೆ

ನೆಗಡಿ, ಅಸ್ತಮಾ ಮತ್ತು ಕೆಮ್ಮಿದ್ದಾಗ ತುಳಸಿ ಬೀಜಗಳನ್ನು ಮನೆಮದ್ದಾಗಿ ನೀಡುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಅವು ಆಂಟಿಸ್ಪಾಸ್ಮೋಡಿಕ್ ಗುಣಗಳನ್ನು ಹೊಂದಿದ್ದು, ನೆಗಡಿ ಮತ್ತು ಕೆಮ್ಮನ್ನು ಸುಧಾರಣೆಗೆ ತರಲು ಸಹಾಯ ಮಾಡುತ್ತದೆ. ಜ್ವರವನ್ನು ತಗ್ಗಿಸಲು ನೀವು ತುಳಸಿ ಬೀಜಗಳನ್ನು ಬಳಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+