Ribbon Pakoda Recipe: ಹೆಸರು ಬೇಳೆ ರಿಬ್ಬನ್ ಪಕೋಡ ತಯಾರಿಸುವ ವಿಧಾನ- ಸಂಜೆ ತಿಂಡಿಗೆ ಮಾಡಿ ನೋಡಿ..
ನಿಮ್ಮ ಮಕ್ಕಳು ಸಂಜೆ ಏನಾದರೂ ಕುರುಕಲು ಬೇಕು ಅಂತ ಹಠ ಮಾಡ್ತಾರಾ? ಪ್ರತಿದಿನ ಸಂಜೆ ಮಕ್ಕಳಿಗೆ ತಿಂಡಿ ಮಾಡಲು ಕಷ್ಟವಾಗುತ್ತಿದಿಯಾ? ಹಾಗಾದರೆ ರಿಬ್ಬನ್ ಪಕೋಡ ಮಾಡಿ.
ಈ ರಿಬ್ಬನ್ ಪಕೋಡ ತುಂಬಾ ರುಚಿಕರವಾಗಿದೆ ಮತ್ತು ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಅಂಗಡಿಯಲ್ಲಿ ತಿಂಡಿಗಳನ್ನು ಖರೀದಿಸುವುದನ್ನು ತಪ್ಪಿಸಲು ಬಯಸಿದರೆ, ಈ ರಿಬ್ಬನ್ ಪಕೋಡವನ್ನು ತಯಾರಿಸಿ ಕೆಲ ದಿನಗಳವರೆಗೆ ತಾಜಾವಾಗಿ ಇಡಬಹುದು.

ಹಾಗಾದರೆ ತಡ ಮಾಡುವುದು ಬೇಡ. ರಿಬ್ಬನ್ ಪಕೋಡ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ರಿಬ್ಬನ್ ಪಕೋಡ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ಹೆಸರು ಬೇಳೆ - 1 ಕಪ್
* ನೀರು - 3 ಕಪ್
* ಕಡಲೇಬೇಳೆ ಹಿಟ್ಟು - 4 ಕಪ್
* ಎಳ್ಳು - 1 ಚಮಚ
* ಉಪ್ಪು - ರುಚಿಗೆ ತಕ್ಕಂತೆ
* ಇಂಗು ಪುಡಿ - 1/2 ಟೀಸ್ಪೂನ್
* ಮೆಣಸಿನ ಪುಡಿ - 1 1/2 ಟೀಸ್ಪೂನ್
* ಎಣ್ಣೆ - ಕರಿಯಲು

ತಯಾರಿಸುವ ವಿಧಾನ:
* ಮೊದಲು ಬೇಳೆಯನ್ನು ನೀರಿನಿಂದ 2 ಬಾರಿ ತೊಳೆಯಿರಿ.
* ನಂತರ ತೊಳೆದ ಹೆಸರು ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಅದರಲ್ಲಿ 3 ಕಪ್ ನೀರು ಹಾಕಿ ಕುಕ್ಕರ್ ಮುಚ್ಚಿ ಒಲೆಯ ಮೇಲೆ ಇಟ್ಟು 5 ವಿಶಲ್ ಆದ ನಂತರ ಇಳಿಸಿ.
* ಬಳಿಕ ಕುದ್ದ ಬೇಳೆಯನ್ನು ನಿಧಾನವಾಗಿ ಮ್ಯಾಶ್ ಮಾಡಿ.
* ನಂತರ ಅಗಲವಾದ ಪಾತ್ರೆಯಲ್ಲಿ ಕಡಲೆಬೇಳೆ ಹಿಟ್ಟನ್ನು ತೆಗೆದುಕೊಳ್ಳಿ.
* ನಂತರ ಇದಕ್ಕೆ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಪುಡಿ, ಮೆಣಸಿನ ಪುಡಿ ಹಾಕಿ ಕೈಯಿಂದ ಒಮ್ಮೆ ಕದಡಿ.
* ನಂತರ ಅದಕ್ಕೆ ಕುದುಸಿದ ಬೇಳೆಯನ್ನು ಹಾಕಿ ನೀರು ಹಾಕದೆ ಚೆನ್ನಾಗಿ ನಾದಿಕೊಳ್ಳಿ.
* ತುಂಬಾ ದಪ್ಪವಾಗಿದ್ದರೆ ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ನಾದಿಕೊಳ್ಳಿ.

* ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಎಣ್ಣೆ ಚೆನ್ನಾಗಿ ಬಿಸಿಯಾದಾಗ, ಅದನ್ನು ಮಧ್ಯಮ ಉರಿಯಲ್ಲಿ ಇರಿಸಿ.
* ಚಕುಲಿ ಒತ್ತುವ ಬಟ್ಟಲು ತೆಗೆದುಕೊಂಡು ಅದರಲ್ಲಿ ರಿಬ್ಬನ್ ಪ್ಲೇಟ್ ಇಟ್ಟು ಹಿಟ್ಟನ್ನು ಹಾಕಿ ಎಣ್ಣೆಯಲ್ಲಿ ಬಿಡಿ.
* ಪಕೋಡವನ್ನು ಹಿಂಡಿದ ತಕ್ಷಣ, 1 ನಿಮಿಷ ಅವುಗಳನ್ನು ತಿರುಗಿಸದೆ ಬಿಟ್ಟುಬಿಡಿ. ನಂತರ ಅವುಗಳನ್ನು ತಿರುಗಿಸಿ ಮತ್ತು ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ. ಅದೇ ರೀತಿಯಲ್ಲಿ ರುಚಿಕರವಾದ ರಿಬ್ಬನ್ ಪಕೋಡ ಎಣ್ಣೆಯಲ್ಲಿ ಒತ್ತಿ ಫ್ರೈ ಮಾಡಿದರೆ ರುಚಿಕರವಾದ ರಿಬ್ಬನ್ ಪಕೋಡ ಸವಿಯಲು ಸಿದ್ದ.












Click it and Unblock the Notifications