Pitru Paksha 2024: ಪಿತೃ ಪಕ್ಷದ ದಿನಾಂಕ ಇಂದು ಅಥವಾ ನಾಳೆ? ಶ್ರಾದ್ಧ ಮಾಡುವ ದಿನಾಂಕಗಳ ವಿವರ ಇಲ್ಲಿದೆ...
ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಪಿತೃ ಪಕ್ಷದ ಸಮಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದ್ದು 15 ದಿನಗಳ ಕಾಲ ಪೂಜೆ ಮಾಡಲಾಗುತ್ತದೆ. ಈ ಬಾರಿಯ ಪಿತೃ ಪಕ್ಷವು ಸೆಪ್ಟೆಂಬರ್ 17 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತದೆ ಮತ್ತು 2 ನೇ ಅಕ್ಟೋಬರ್ 2024 ರಂದು ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ ಪೂರ್ವಜರಿಗೆ ದಾನ, ಬ್ರಾಹ್ಮಣರ ಆಹಾರ, ಪ್ರಾಣಿ ಪಕ್ಷಿಗಳ ಸೇವೆ ಇತ್ಯಾದಿ ಕಾರ್ಯಗಳನ್ನು ಮಾಡಲಾಗುತ್ತದೆ.
ಪೂರ್ವಜರ ಪೂಜಾ ಕಾರ್ಯಗಳನ್ನು ವರ್ಷವಿಡೀ ಮಾಡಿದರೂ, ಅವರಿಗೆ ವಿಶೇಷವಾದ ದಿನವನ್ನು ಶ್ರಾದ್ಧ ಪಕ್ಷ ಎಂದು ಕರೆಯಲಾಗುತ್ತದೆ. ಭಾದ್ರಪದ ಪೂರ್ಣಿಮೆಯಿಂದ ಅಶ್ವಿನ್ ಅಮಾವಾಸ್ಯೆಯವರೆಗಿನ ಹದಿನಾರು ದಿನಗಳ ಅವಧಿಯನ್ನು ಪಿತೃ ಪಕ್ಷ, ಶ್ರಾದ್ಧ ಪಕ್ಷ ಅಥವಾ ಮಹಾಲಯ ಎಂದು ಕರೆಯಲಾಗುತ್ತದೆ.

ಶ್ರಾದ್ಧ ಪಕ್ಷದ ಸಮಯದಲ್ಲಿ, ಪೂರ್ವಜರು ತಮ್ಮ ಸಂಬಂಧಿಕರಿಂದ ನೀರು, ಆಹಾರ ಇತ್ಯಾದಿಗಳನ್ನು ಸ್ವೀಕರಿಸಲು ಭೂಮಿಗೆ ಬರುತ್ತಾರೆ ಎಂದು ನಂಬಲಾಗುತ್ತದೆ. ಈ ಸಮಯದಲ್ಲಿ ಅವರ ಸಂತೋಷಕ್ಕಾಗಿ ಶ್ರಾದ್ಧ, ತರ್ಪಣ, ಪಿಂಡ ದಾನ ಮುಂತಾದ ಆಚರಣೆಗಳನ್ನು ಮಾಡಲಾಗುತ್ತದೆ.
ಶ್ರಾದ್ಧ ಪಕ್ಷದ ಕೊನೆಯ ದಿನದಂದು ಸರ್ವಪಿತೃ ಅಮಾವಾಸ್ಯೆ
ಮರಣ ದಿನಾಂಕ ತಿಳಿದಿಲ್ಲದ ಪೂರ್ವಜರ ಶಾಂತಿಗಾಗಿ ಮತ್ತು ಅಜ್ಞಾತ ಪೂರ್ವಜರ ಶಾಂತಿಗಾಗಿ, ಶ್ರಾದ್ಧ ಪಕ್ಷದ ಕೊನೆಯ ದಿನವಾದ ಸರ್ವಪಿತೃ ಅಮವಾಸ್ಯೆಯಂದು ಶ್ರಾದ್ಧವನ್ನು ಮಾಡಲಾಗುತ್ತದೆ. ಯಾರ ಮರಣದ ದಿನಾಂಕ ಪೂರ್ಣಿಮೆಯೋ ಆ ಪೂರ್ವಜರ ಶ್ರಾದ್ಧವನ್ನು ಭಾದ್ರಪದ ಪೂರ್ಣಿಮೆಯ ದಿನದಂದು ಮಾಡಲಾಗುತ್ತದೆ.

ಶ್ರದ್ಧಾಪಕ್ಷ 2024ರ ದಿನಾಂಕಗಳು
17 ಸೆಪ್ಟೆಂಬರ್: ಪ್ರೌಷ್ಟಪದಿ ಪೂರ್ಣಿಮಾ ಶ್ರಾದ್ಧ
ಸೆಪ್ಟೆಂಬರ್ 18: ಪ್ರತಿಪದ ಶ್ರಾದ್ಧ
19 ಸೆಪ್ಟೆಂಬರ್: ದ್ವಿತೀಯ ಶ್ರಾದ್ಧ
20 ಸೆಪ್ಟೆಂಬರ್: ತೃತೀಯಾ ಶ್ರಾದ್ಧ
ಸೆಪ್ಟೆಂಬರ್ 21: ಚತುರ್ಥಿ ಶ್ರಾದ್ಧ, ಭರಣಿ ಶ್ರಾದ್ಧ
22 ಸೆಪ್ಟೆಂಬರ್: ಪಂಚಮಿ ಶ್ರಾದ್ಧ
23 ಸೆಪ್ಟೆಂಬರ್: ಷಷ್ಠಿ ಶ್ರಾದ್ಧ, ಮಧ್ಯಾಹ್ನ 1:51 ರಿಂದ ಸಪ್ತಮಿ ಶ್ರಾದ್ಧ
24 ಸೆಪ್ಟೆಂಬರ್: ಅಷ್ಟಮಿ ಶ್ರಾದ್ಧ
25 ಸೆಪ್ಟೆಂಬರ್: ನವಮಿ ಶ್ರಾದ್ಧ, ಸೌಭಾಗ್ಯವತಿಯ ಶ್ರಾದ್ಧ.
26 ಸೆಪ್ಟೆಂಬರ್: ದಶಮಿ ಶ್ರಾದ್ಧ
27 ಸೆಪ್ಟೆಂಬರ್: ಏಕಾದಶಿ ಶ್ರಾದ್ಧ
28 ಸೆಪ್ಟೆಂಬರ್: ಏಕಾದಶಿಯ ಏಕೋದಿಷ್ಟ ಶ್ರಾದ್ಧ
29 ಸೆಪ್ಟೆಂಬರ್: ದ್ವಾದಶಿ ಶ್ರಾದ್ಧ, ಸನ್ಯಾಸಿಗಳ ಶ್ರಾದ್ಧ, ಮಾಘ ಶ್ರಾದ್ಧ
30 ಸೆಪ್ಟೆಂಬರ್: ತ್ರಯೋದಶಿ ಶ್ರಾದ್ಧ
1 ಅಕ್ಟೋಬರ್: ಚತುರ್ದಶಿ ಶ್ರಾದ್ಧ
2 ಅಕ್ಟೋಬರ್: ಸರ್ವಪಿತೃ ಅಮಾವಾಸ್ಯೆ ಶ್ರಾದ್ಧ
ಶ್ರಾದ್ಧವು ಮಧ್ಯಾಹ್ನ ನಡೆಯುವುದರಿಂದ, ಸೆಪ್ಟೆಂಬರ್ 17 ರಂದು ಹುಣ್ಣಿಮೆ ಶ್ರಾದ್ಧವಿರುತ್ತದೆ. ಆದರೆ ಅದೇ ದಿನ ಅನಂತ ಚತುರ್ದಶಿವೂ ನಡೆಯುತ್ತದೆ. ಸರ್ವಪಿತೃ ಅಮಾವಾಸ್ಯೆಯ ದಿನದಂದು ತಿಳಿದಿರುವ ಮತ್ತು ತಿಳಿದಿಲ್ಲದ ಎಲ್ಲಾ ಪೂರ್ವಜರಿಗೆ ಶ್ರಾದ್ಧವನ್ನು ಮಾಡಲಾಗುತ್ತದೆ. ಪೂರ್ವಜರ ಮರಣದ ದಿನಾಂಕ ತಿಳಿದಿಲ್ಲದಿದ್ದರೆ, ಈ ದಿನ ಶ್ರಾದ್ಧವನ್ನು ಮಾಡಲಾಗುತ್ತದೆ.
ಪಿತೃ ಪಕ್ಷ 15 ದಿನಗಳ ಕಾಲ ನಡೆಯುವ ಆರಚಣೆಯಾಗಿದ್ದು, ಈ 15 ದಿನಗಳಲ್ಲಿ ಯಾವುದೇ ದಿನ ಬೇಕಾದರೂ ಪೂರ್ವಜನರಿಗೆ ತರ್ಪಣವನ್ನು ನೀಡುವ ಮೂಲಕ ಶ್ರಾದ್ಧ ಕಾರ್ಯವನ್ನು ಮಾಡಬಹುದು. ಈ ಸಮಯದಲ್ಲಿ ಮಾಂಸ ಮತ್ತು ಮದ್ಯಪಾನದಂತಹ ಮಾದಕ ವಸ್ತುಗಳಿಂದ ದೂರವಿರಬೇಕು. ಅಲ್ಲದೆ ಈ ಅವಧಿಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಇಲ್ಲದೆ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಅಲ್ಲದೆ, ಪಿತೃ ಪಕ್ಷದಲ್ಲಿ ಬ್ರಹ್ಮಚರ್ಯವನ್ನು ಆನುಸರಬೇಕು. ಇದಲ್ಲದೆ ನಮ್ಮ ಸುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.












Click it and Unblock the Notifications