Rava Coconut Burfi Recipe: ಕೇವಲ 3 ಸಾಮಾಗ್ರಿಗಳಿಂದ ಸಂಜೆ 15 ನಿಮಿಷದಲ್ಲಿ ರುಚಿಕರವಾದ ಸಿಹಿ ತಯಾರಿಸಿ...

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಹಬ್ಬಕ್ಕೆ ಮಾತ್ರ ಸಿಹಿ ತಿಂಡಿಗಳನ್ನು ಮಾಡಲಾಗುತ್ತದೆ. ಆದರೆ ಮನೆಯಲ್ಲಿ ಮಕ್ಕಳಿದ್ದರೆ ಆಗಾಗ ಸಿಹಿ ತಿಂಡಿ ತಿನ್ನಲು ಬಯಸುತ್ತಾರೆ. ಆಗ ಹೊರಗಿನ ಸಿಹಿ ತಿಂಡಿಗಳಿಗಿಂತ ಮನೆಯಲ್ಲಿ ಮಾಡುವ ಸಿಹಿ ತಿಂಡಿಗಳನ್ನು ಮಕ್ಕಳಿಗೆ ಕೊಡುವುದು ಸೂಕ್ತ. ಹೀಗಾಗಿ ಇಂದು ನಾವು ನಿಮಗೆ ರವಾ ತೆಂಗಿನಕಾಯಿ ಬರ್ಫಿ ತಯಾರಿಸುವ ವಿಧಾನವನ್ನು ಹೇಳಿಕೊಡುತ್ತೇವೆ.

ಇದು ಹೆಚ್ಚು ರುಚಿಯಾಗಿರುತ್ತದೆ. ಅಲ್ಲದೆ ಮನೆಯಲ್ಲಿರುವ ಮೂರೇ ಪದಾರ್ಥಗಳಿಂದ ಸುಲಭವಾಗಿ ಇದನ್ನು ತಯಾರಿಸಬಹುದು. ಹಾಗಾದರೆ ತಡ ಮಾಡುವುದು ಬೇಡ ರವಾ ತೆಂಗಿನಕಾಯಿ ಬರ್ಫಿ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Rava Coconut Burfi Recipe Know How to Make Rava Coconut Burfi in Kannada

ಅಗತ್ಯವಿರುವ ವಸ್ತುಗಳು:

* ತೆಂಗಿನ ತುರಿ - 1 ಕಪ್

* ರವೆ - 1/2 ಕಪ್

* ಸಕ್ಕರೆ - 1 1/4 ಕಪ್

* ನೀರು - 1/2 ಕಪ್

* ಉಪ್ಪು - 1 ಚಿಟಿಕೆ

* ಏಲಕ್ಕಿ - 1/4 ಟೀಸ್ಪೂನ್

* ತುಪ್ಪ - 2 ಟೀಸ್ಪೂನ್

Rava Coconut Burfi Recipe Know How to Make Rava Coconut Burfi in Kannada

ರವಾ ತೆಂಗಿನಕಾಯಿ ಬರ್ಫಿ ತಯಾರಿಸುವ ವಿಧಾನ:

* ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ಹುರಿದು ತಟ್ಟೆಯಲ್ಲಿ ಇಟ್ಟುಕೊಳ್ಳಿ.

* ನಂತರ ರವೆ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ ಮತ್ತು ತೆಂಗಿನಕಾಯಿಯೊಂದಿಗೆ ಬೆರೆಸಿ ತೆಗೆದಿಟ್ಟುಕೊಳ್ಳಿ.

* ನಂತರ ಅದೇ ಬಾಣಲೆಯಲ್ಲಿ ಸಕ್ಕರೆ ಹಾಕಿ ನೀರು ಸುರಿದು ಅದಕ್ಕೆ 1 ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಕಿ. ಸಕ್ಕರೆ ಪಾಕ ಮಾಡಿಕೊಳ್ಳಿ.

* ನಂತರ ಅದಕ್ಕೆ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಕಿ ಮಧ್ಯಮ ಉರಿಯಲ್ಲಿ ಇಟ್ಟು ನೊರೆ ಬರುವವರೆಗೆ ಕುದಿಸಿ.

* ನಂತರ ಅದಕ್ಕೆ ಹುರಿದ ಕೊಬ್ಬರಿ ಮತ್ತು ರವೆ ಹಾಕಿ

* ಇದು ಬಾಣಲೆಗೆ ಅಂಟಿಕೊಳ್ಳದಂತೆ ಚೆನ್ನಾಗಿ ಕಲಿಸಬೇಕು

* ನಂತರ ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣವನ್ನು ಹರಡಿ ತಣ್ಣಗಾಗಲು ಬಿಡಿ. ನಂತರ ಅದನ್ನು ಚಾಕುವಿನಿಂದ ಚೌಕಾಕಾರದ ತುಂಡುಗಳಾಗಿ ಕತ್ತರಿಸಿದರೆ ರುಚಿಕರವಾದ ರವಾ ತೆಂಗಿನಕಾಯಿ ಬರ್ಪಿ ರೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+