Ram Kand Mool Benefits: ಶ್ರೀರಾಮ 14 ವರ್ಷ ವನವಾಸದಲ್ಲಿದ್ದಾಗ ತಿನ್ನುತ್ತಿದ್ದ ರಾಮ್ ಕಂಡ್ಮೂಲ್ ಬಗ್ಗೆ ನಿಮಗೆಷ್ಟು ಗೊತ್ತು?
ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಿದೆ. ಹೀಗಾಗಿ ಎಲ್ಲೆಡೆ ರಾಮ ನಾಮದ್ದೇ ಜಪ ಶುರುವಾಗಿದೆ. ಈ ವೇಳೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ಗೆಡ್ಡೆಯ ಬಗೆಗಿನ ಸುದ್ದಿಯೊಂದು ಕೇಳಿ ಬಂದಿದೆ. ಜೊತೆಗೆ ಶ್ರೀರಾಮನು ತನ್ನ 14 ವರ್ಷಗಳ ವನವಾಸದಲ್ಲಿ ತನ್ನ ಪತ್ನಿ ಸೀತೆ ಮತ್ತು ಸಹೋದರ ಲಕ್ಷಣನ ಜೊತೆಯಲ್ಲಿ ಸೇವಿಸಿದ ಆಹಾರ ಇದೊಂದೇ ಎಂದು ಹೇಳಲಾಗುತ್ತದೆ.
ಅದುವೇ ರಾಮ್ ಕಂಡ್ಮೂಲ್ (Ram Kand Mool). ರಾಮ್ ಕಂಡ್ಮೂಲ್ ಸೇವನೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಯುರ್ವೇದದಲ್ಲಿ ಇದನ್ನು ಅನೇಕ ರೋಗಗಳ ಗುಣಪಡಿಸುವಿಕೆಗಾಗಿ ಸೇವಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ರಾಮ್ ಕಂಡ್ಮೂಲ್ ನ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯೋಣ.

ರಾಮ್ ಕಂಡ್ಮೂಲ್ ಎಂದರೇನು?
ರಾಮ್ ಕಂಡ್ಮೂಲ್ ಎನ್ನುವುದು ಒಂದು ಗೆಡ್ಡೆ. ಇದು ಸಿಲಿಂಡರ್ ಆಕಾರದಲ್ಲಿರುತ್ತದೆ. ನೋಟದಲ್ಲಿ ಕಂದು ಬಣ್ಣದ್ದಾಗಿರುತ್ತದೆ. ಇದು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ ಮತ್ತು ಚೆನ್ನೈನಲ್ಲಿ ಇದನ್ನು ಅಪರೂಪದ ಗೆಡ್ಡೆಗಳ ವರ್ಗದಲ್ಲಿ ಇರಿಸಲಾಗಿದೆ.
ಈ ಗೆಡ್ಡೆಯನ್ನು ದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಭಾರತದ ಜನರು ಇದನ್ನು ರಾಮ್ ಕಾಂಡ್ ಅಥವಾ ರಾಂಫಲ್ ಎಂದು ಕರೆಯುತ್ತಾರೆ. ಆದರೆ ತಮಿಳುನಾಡಿನಲ್ಲಿ ಈ ತರಕಾರಿಯನ್ನು ಕಿಜಾಂಗು ಎಂದು ಕರೆಯಲಾಗುತ್ತದೆ ಮತ್ತು ಛತ್ತೀಸ್ಗಢದಲ್ಲಿ ಇದನ್ನು ಕಂಡ ಕುನ್ಸ ಎಂದು ಕರೆಯಲಾಗುತ್ತದೆ. ಈ ಗೆಡ್ಡೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ. ರಾಮ್ ಕಂಡ್ಮೂಲ್ ಅನ್ನು ಗದ್ದೆಗಳಲ್ಲಿ ಬೆಳೆಯುವುದಿಲ್ಲ, ಬದಲಿಗೆ ಕಾಡಿನಲ್ಲಿ ತಾನೇ ಬೆಳೆಯುವುದು ಇದರ ವಿಶೇಷತೆಯಾಗಿದೆ. ಇದು ಬೆಳೆಯಲು 12-15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ರಾಮ್ ಕಂಡ್ಮೂಲ್ ವಿಶೇಷವೆಂದರೆ ಇದನ್ನು ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ ಮತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ರಾಮ್ ಕಂಡ್ಮೂಲ್ ಆರೋಗ್ಯಕರ ಪ್ರಯೋಜನಗಳು:
ರಾಮ್ ಕಂಡ್ಮೂಲ್ ವಾಸ್ತವವಾಗಿ ಕಾಡು ಗೆಡ್ಡೆಯಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಇದೆ. ಇದು ಸಿಹಿಗೆಣಸಿನಂತೆ ಕಾಣುತ್ತದೆ. ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ ಮತ್ತು ಕೆಮ್ಮಿನ ಸಮಯದಲ್ಲಿಯೂ ಸಹ ನೀವು ಇದನ್ನು ತಿನ್ನಬಹುದು. ಇದಲ್ಲದೆ ಕೆಳಗಿನ ಈ ಮೂರು ಸಂದರ್ಭಗಳಲ್ಲಿ ಇದು ಪ್ರಯೋಜನಕಾರಿಯಾಗಿದೆ.

1. ಹೊಟ್ಟೆಗೆ ಪ್ರಯೋಜನಕಾರಿ
ಗೆಡ್ಡೆಯನ್ನು ತಿನ್ನುವುದರಿಂದ ಹೊಟ್ಟೆಗೆ ಹಲವಾರು ಪ್ರಯೋಜನಗಳಿವೆ. ಈ ಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಲ್ಲಿ ಕಬ್ಬಿಣಾಂಶವಿದ್ದು ದೇಹದಲ್ಲಿನ ರಕ್ತಹೀನತೆಯನ್ನು ತಡೆಯುತ್ತದೆ. ಮಾತ್ರವಲ್ಲದೆ ಮಲವನ್ನು ದೊಡ್ಡ ಪ್ರಮಾಣದಲ್ಲಿ ಸೇರದಿರಲು ಕೆಲಸ ಮಾಡುತ್ತದೆ. ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
2. ತೂಕ ಮತ್ತು ಕೊಲೆಸ್ಟ್ರಾಲ್ ತಡೆಯುವ ಗೆಡ್ಡೆ
ನೀವು ತೂಕ ಹೆಚ್ಚಾಗುವ ಅಥವಾ ಹೆಚ್ಚಿದ ಕೊಲೆಸ್ಟ್ರಾಲ್ ಬಗ್ಗೆ ಚಿಂತೆ ಮಾಡುತ್ತಿದ್ದರೆ ರಾಮ್ ಕಂಡ್ಮೂಲ್ ಗೆಡ್ಡೆಗಳನ್ನು ತಿನ್ನಬಹುದು. ಈ ಗೆಡ್ಡೆಯಲ್ಲಿ ಹೆಚ್ಚಿನ ನಾರಿನಂಶ ಮತ್ತು ಒರಟು ಅಂಶವಿರುವುದರಿಂದ ತೂಕ ಹೆಚ್ಚಾಗಲು ಅವಕಾಶ ನೀಡುವುದಿಲ್ಲ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾಗಿದೆ.
3. ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬಲ
ರಾಮ್ ಕಂಡ್ಮೂಲ್ ಗೆಡ್ಡೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಅಷ್ಟೇ ಅಲ್ಲ ಈ ಹಣ್ಣು ಸೋಂಕುಗಳ ವಿರುದ್ಧ ಹೋರಾಡಲು ಹೆಚ್ಚುವರಿ ಶಕ್ತಿಯನ್ನು ನೀಡುತ್ತದೆ.

4. ಕೀಲು ನೋವಿನಿಂದ ಪರಿಹಾರ
ಈ ಅಪರೂಪದ ತರಕಾರಿಯಲ್ಲಿ ಸಾಕಷ್ಟು ಪೋಷಕಾಂಶಗಳು ಕಂಡುಬರುತ್ತವೆ. ಇದು ಸಂಧಿವಾತ, ಕೀಲು ನೋವು ಮತ್ತು ಊತದಂತಹ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ನಿಭಾಯಿಸುತ್ತದೆ.
ಕಡಿಮೆ ಸೇವನೆ:
ಈ ಹಣ್ಣನ್ನು ಸಾಮಾನ್ಯವಾಗಿ ತೆಳುವಾದ ತುಂಡುಗಳಾಗಿ ಕತ್ತರಿಸಿ ಕೆಂಪು ಮೆಣಸಿನ ಪುಡಿ, ಉಪ್ಪು, ಸಕ್ಕರೆ ಮತ್ತು ನಿಂಬೆ ರಸದಂತಹ ಮಸಾಲೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಇದರ ಸೇವೆಯ ಗಾತ್ರ 200-300 ಗ್ರಾಂ. ವರದಿಗಳನ್ನು ನಂಬುವುದಾದರೆ, ರಾಮ್ ಕಂಡ್ಮೂಲ್ ಉತ್ತಮ ಪ್ರಮಾಣದ ಆಲ್ಕಲಾಯ್ಡ್‌ಗಳನ್ನು ಹೊಂದಿರುತ್ತದೆ. ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ವಿಷದ ರೂಪ ತಳೆಯುತ್ತದೆ. ಮಾರಾಟಗಾರರು ಅದರ ತೆಳುವಾದ ತುಂಡುಗಳನ್ನು ಮಾತ್ರ ಮಾರಾಟ ಮಾಡಲು ನಿಜವಾದ ಕಾರಣ ಇದಾಗಿದೆ.












Click it and Unblock the Notifications