Get Updates
Get notified of breaking news, exclusive insights, and must-see stories!

Rainy Season Tips: ಮಳೆ ಶುರುವಾಯ್ತು ಛತ್ರಿಯೊಂದೇ ಅಲ್ಲ ನಿಮ್ಮೊಂದಿಗೆ ಈ ವಸ್ತುಗಳು ಇರಲಿ...

ಬಂಗಾಳ ಕೊಲ್ಲಿಯಲ್ಲಿ ಸುಳಿಗಾಲಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಈ ವೇಳೆ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ.. ಯಾಕೆಂದರೆ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ.

ಹೌದು.. ಸಾಮಾನ್ಯವಾಗಿ ವರ್ಷದ ಮೊದಲ ಮಳೆ ತೀವ್ರ ಗಾಳಿ, ಗುಡುಗು, ಮಿಂಚಿನಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಯಾಕೆಂದರೆ ಬಲವಾದ ಗಾಳಿ ಬೀಸಿದಾಗ ಮರ ಗಿಡಗಳು ಅಥವಾ ಅದರ ರೆಂಬೆ ಕೊಂಬೆಗಳು ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆ ಬಂದಾಗ ಮರ ಗಿಡಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು. ಅಲ್ಲದೆ ಬೀಳುವ ಹಂತದಲ್ಲಿರುವ ಶೆಡ್ ಅಥವ ಇನ್ನಿತರ ಆಶ್ರಯದ ಸ್ಥಳಗಳಿಂದ ದೂರವಿರಬೇಕು. ವಾಹನಗಳನ್ನು ಜಾಗರೂಕತೆಯಿಂದ ಓಡಿಸಬೇಕು.

Rainy Season Tips things you should have with you in rainy season apart from umbrella

ಇದಲ್ಲದೆ ಮಳೆ ಸಂದರ್ಭಗಳಲ್ಲಿ ಯಾವೆಲ್ಲಾ ವಸ್ತುಗಳನ್ನ ನಮ್ಮೊಂದಿಗೆ ಇಟ್ಟುಕೊಳ್ಳುವುದು ಸೂಕ್ತ ಎಂದು ತಿಳಿಯೋಣ. ಸಾಮಾನ್ಯವಾಗಿ ಮಳೆ ಬಂದಾಗ ಛತ್ರಿ ಒಂದು ಇದ್ದರೆ ಸಾಕು ಇನ್ನೇನು ಇಟ್ಟುಕೊಳ್ಳೋಣ ಅಂತ ನೀವು ಥಟ್ ಅಂತ ಹೇಳಿಬಿಡಬಹುದು. ಆದರೆ ಛತ್ರಿ ಜೋರಾಗಿ ಗಾಳಿ ಬೀಸಿದಾಗ ಹಾರಿ ಹೋಗುವ ಸಾಧ್ಯತೆ ಇದೆ. ಹೀಗಾಗಿ ಛತ್ರಿ ಬದಲಾಗಿ ಮಳೆ ಸಂದರ್ಭದಲ್ಲಿ ನೀವು ಏನೆಲ್ಲಾ ವಸ್ತುಗಳನ್ನು ನಿಮ್ಮೊಂದಿಗೆ ಇಷ್ಟುಕೊಳ್ಳಬಹುದು ಎಂದು ತಿಳಿಯೋಣ.

1. ರೇನ್ ಕೋಟ್

ಮಳೆಗಾಲದಲ್ಲಿ ನಿಮ್ಮೊಂದಿಗೆ ರೇನ್ ಕೋಟ್ ಇಟ್ಟುಕೊಳ್ಳುವುದು ಸೂಕ್ತ. ಇದನ್ನು ಸುಲಭವಾಗಿ ಕೊಂಡೊಯ್ಯಬಹುದು. ಜೊತೆಗೆ ಸುಲಭವಾಗಿ ಬಳಸಬಹುದಾಗಿದೆ. ಅಡಿಯಿಂದ ಮುಡಿಯವರೆಗೆ ಈ ರೇನ್ ಕೋಟ್ ನಿಂದ ನಿಮ್ಮ ದೇಹವನ್ನು ಮಳೆ, ಗಾಳಿಯಿಂದ ರಕ್ಷಿಸಿಕೊಳ್ಳಬಹುದು. ಹೀಗಾಗಿ ವಾಹನ ಸವಾರರು, ಬಸ್‌ ಅಥವಾ ಕಾಲ್ನಡಿಗೆಯಲ್ಲಿ ಓಡಾಡುವವರು ಇದನ್ನು ಇಟ್ಟುಕೊಳ್ಳುವುದು ಒಳ್ಳೆಯದು.

2. ಬ್ಯಾಗ್ ಕವರ್

ಮಳೆಗಾಲದಲ್ಲಿ ನೀವು ಮಾತ್ರವಲ್ಲ ನಿಮ್ಮ ಬ್ಯಾಗ್‌ ಗಳ ರಕ್ಷಣೆ ಕೂಡ ಅಗತ್ಯವಾಗಿರುತ್ತದೆ. ಕೆಲಸಕ್ಕೆ ಹೋಗುವವರು ಲ್ಯಾಪ್‌ಟಾಪ್, ಮೊಬೈಲ್, ಪರ್ಸ್ ಹೊಂದಿರುವವರಿಗೆ ರೇನ್ ಕವರ್ ಅತ್ಯಗತ್ಯ. ಹೀಗಾಗಿ ಮಳೆ ಸಂದರ್ಭದಲ್ಲಿ ಒಂದು ಬ್ಯಾಗ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

3. ಮಳೆಗಾಲದಲ್ಲಿ ಸೂಕ್ತವಾದ ಪಾದರಕ್ಷೆ

ಮಳೆಗಾಲದಲ್ಲಿ ಸೂಕ್ತವಾದ ಪಾದರಕ್ಷೆಗಳನ್ನು ಬಳಸುವುದು ತುಂಬಾ ಮುಖ್ಯ. ಮಳೆ ಸಂದರ್ಭದಲ್ಲಿ ಕೆಸರು ಅಧಿಕ ನೀರಿನ ಹರಿವಿನಿಂದಾಗಿ ಕಾಲು ಜಾರುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಾಗರೂಕರಾಗಿ ನಡೆಯಬೇಕು. ಮಳೆ ನೀರು ನಿಂತುಕೊಂಡ ಸ್ಥಳಗಳಲ್ಲಿ ಎಷ್ಟು ಹುಷಾರಾಗಿದ್ದರೂ ಕಡಿಮೆಯೇ.

ಯಾಕೆಂದರೆ ಮಳೆ ನೀರು ನಿಂತ ಕಡೆಗಳಲ್ಲಿ ತಗ್ಗು, ಗುಂಡಿ ಇರುವುದು ಗೊತ್ತಾಗುವುದಿಲ್ಲ. ಯಾಮಾರಿ ಕಾಳಿಟ್ಟರೆ ಅಥವಾ ಕಾಲು ಜಾರಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಜಾಗರೂಕರಾಗಿ ನಡೆಯಬೇಕಾಗುತ್ತದೆ. ಮಳೆಗಾಲದಲ್ಲಿ ಚಪ್ಪಲಿಗಳಿಗೆ ಹಾಕುವ ಕವರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ ಅದನ್ನು ಕೂಡ ನೀವು ಬಳಸಿ, ನಿಮ್ಮ ಚಪ್ಪಲಿ ಕೊಳೆಯಾಗದಂತೆ ಕಾಪಾಡಿಕೊಳ್ಳಬಹುದು.

Rainy Season Tips things you should have with you in rainy season apart from umbrella

4. ವಾಟರ್ ಪ್ರೂಫ್ ಕ್ಯಾಪ್

ಮಳೆಗಾಲದಲ್ಲಿ ನಿಮ್ಮೊಂದಿಗೆ ರೇನ್ ಕೋಟ್ ಇಟ್ಟುಕೊಳ್ಳುವುದು ಕಷ್ಟವಾದರೆ ವಾಟರ್ ಪ್ರೂಫ್ ಕ್ಯಾಪ್ ಇಟ್ಟುಕೊಳ್ಳಬಹುದು. ಇದರಿಂದ ನೀವು ನಿಮ್ಮನ್ನು ಕೊಂಚ ಮಟ್ಟಿಗೆ ರಕ್ಷಣೆ ಮಾಡಿಕೊಳ್ಳಬಹುದು. ವಾಟರ್ ಪ್ರೂಫ್ ಕ್ಯಾಪ್ ಬಳಕೆಯಿಂದ ನಿಮ್ಮ ತಲೆ ಒದ್ದೆಯಾಗುವುದನ್ನು ತಡೆಯಬಹುದು.

5. ಮಾಸ್ಕ್

ಮಳೆಗಾಲದಲ್ಲಿ ಆರೋಗ್ಯ ಹಾಳಾಗುವುದು ಹೆಚ್ಚು. ಜ್ವರ, ಶೀತ, ಕೆಮ್ಮು ಇಂತೆಲ್ಲಾ ಕಾಯಿಲೆಗಳು ಬಹುಬೇಗ ಬಂದುಬಿಡುತ್ತವೆ. ಹೀಗಾಗಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೀಔಉ ಜಾಗೃತಿ ವಹಿಸಬೇಕು. ಇದಕ್ಕಾಗಿ ನಿಮ್ಮೊಂದಿಗೆ ಮಾಸ್ಕ್‌ ಇಟ್ಟುಕೊಳ್ಳುವುದು ಉತ್ತಮ. ಇದರಿಂದ ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

6. ಹ್ಯಾಂಡ್ ಸ್ಯಾನಿಟೈಸರ್

ಮಳೆ ಸಂದರ್ಭದಲ್ಲಿ ಕಾಯಿಲೆಗಳು ಬಹುಬೇಗ ಬಂದುಬಿಡುತ್ತವೆ. ಇದಕ್ಕಾಗಿ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ನೀವು ಕೆಲಸಕ್ಕಾಗಿ ಮನೆಯಿಂದ ಹೊರಗೆ ನಿತ್ಯ ಓಡಾಡುತ್ತಿದ್ದರೆ ನಿಮ್ಮೊಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಇಟ್ಟುಕೊಳ್ಳುವುದು ಉತ್ತಮ. ಮನೆಯಲ್ಲಿ ಮಕ್ಕಳಿದ್ದರೆ, ವಯಸ್ಸಾದವರಿದ್ದರೆ ಕಾಯಿಲೆಗಳು ಬಹುಬೇಗ ನಿಮ್ಮಿಂದ ಹರಡಿಬಿಡುತ್ತವೆ. ಇದಕ್ಕೆ ನೀವು ಅವಕಾಶ ಮಾಡಿಕೊಡಬಾರದು ಅಂತಿದ್ದರೆ ಆಗಾಗ ಹ್ಯಾಂಡ್ ಸ್ಯಾನಿಟೈಸರ್ ಮಾಡಿಕೊಳ್ಳಿ. ನಿಮ್ಮ ಕೈಯಿಂದ ಮುಖ, ಮೂಗು ಮುಟ್ಟಿಕೊಳ್ಳಬೇಡಿ.

7. ಹ್ಯಾಂಡ್‌ಗ್ಲೌಸ್

ಮಳೆಬಂದಾಗ ಹ್ಯಾಂಡ್‌ಗ್ಲೌಸ್ ನಿಮ್ಮ ಕೈಗಳನ್ನು ಚಳಿಯಿಂದ ಬೆಚ್ಚಗಾಗಿಸುತ್ತವೆ. ಅಲ್ಲದೆ ನಿಮ್ಮ ಕೈಗಳು ಒದ್ದೆಯಾಗಿ ಜಾರದಂತೆ ರಕ್ಷಣೆಗೂ ಇದನ್ನು ನೀವು ಬಳಸಬಹುದು. ವಿಶೇಷವಾಗಿ ಬೈಕ್ ಸವಾರಿ ಮಾಡುವವರ ಕೈಗಳು ಮಳೆಗೆ ಒದ್ದೆಯಾಗಿ ವಾಹನ ಚಲಾಯಿಸಲು ಕಷ್ಟವಾಗಬಹುದು. ಅಂಥವರು ಮಳೆಯಲ್ಲಿ ಹ್ಯಾಂಡ್‌ಗ್ಲೌಸ್ ಬಳಸಬಹುದು.

8. ವಿಕ್ಸ್, Pain Relief Spray

ಮಳೆಗಾಲದಲ್ಲಿ ಇದ್ದಕ್ಕಿದ್ದಂತೆ ಮೂಗು ಕಟ್ಟುವುದು, ಮೈ-ಕೈ ನೋವಾಗುವುದು ಕಾಣಿಸಿಕೊಳ್ಳುತ್ತದೆ. ಇದನ್ನು ಹಾಗೇ ಬಿಟ್ಟರೆ ಆರೋಗ್ಯ ಸಮಸ್ಯೆ ಗಂಭೀರವಾಗಬಹುದು. ಹೀಗಾಗಿ ನಿಮ್ಮೊಂದಿಗೆ ವಿಕ್ಸ್, Pain Relief Spray ಇದ್ದರೆ ಒಳ್ಳೆಯದು. ನಿಮಗೆ ಮೂಗು ಕಟ್ಟುವ ಅನುಭವವಾದಾಗ ನೀವು ವಿಕ್ಸ ಬಳಸಬಹುದು. ಹೀಗೆ ಮಳೆಗಾಲದಲ್ಲಿ ಇಂತೆಲ್ಲಾ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.

Rainy Season Tips things you should have with you in rainy season apart from umbrella

ಕರ್ನಾಟಕದಲ್ಲಿ ಮಳೆ

ರಣಭಯಂಕರ ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಕರ್ನಾಟಕ ರಾಜಧಾನಿ ಬೆಂಗಳೂರಿನ ಜನರಿಗೆ ನಿನ್ನೆಯಿಂದ ಜೀವನವೇ ತಂಪಾದಂತಾಗಿದೆ. ನಿನ್ನೆ ಸಂಜೆಯಿಂದ ತಡರಾತ್ರಿ ವರೆಗೆ ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಬರೋಬ್ಬರಿ 5 ತಿಂಗಳ ಬಳಿಕ ವಾತಾವರಣ ತಂಪು ತಂಪಾದಂತಾಗಿದೆ.ಬೆಂಗಳೂರು ಮಾತ್ರವಲ್ಲದೇ ಮೈಸೂರು, ಚಾಮರಾಜನಗರ, ಮಂಡ್ಯ ಕೋಲಾರ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದ್ದು, ಇಂದು ಕೂಡ ಅನೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ಮಾಹಿತಿ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ ಈಶಾನ್ಯ ಭಾರತದಲ್ಲಿ ಮಿಂಚು ಮತ್ತು ಬಲವಾದ ಗಾಳಿ (ಗಂಟೆಗೆ 40-50 ಕಿಮೀ) ಜೊತೆಗೆ ಸಾಧಾರಣ ಮಳೆ ಮತ್ತು ಗುಡುಗುಗಳನ್ನು ನಿರೀಕ್ಷಿಸಲಾಗಿದೆ. ಜೊತೆಗೆ ಇಂದು ಮೇ 7 ಮತ್ತು ಮೇ 8 ರಂದು ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು.

ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ತಮಿಳುನಾಡು, ಆಂಧ್ರಪ್ರದೇಶ ಜೊತೆಗೆ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಮೈಸೂರು, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಇನ್ನಿತರ ಕಡೆಗಳಲ್ಇ ಆಲಿಕಲ್ಲು ಸಹಿತ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ಮಳೆಯಾಗಿದೆ. ಅದರಲ್ಲೂ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ರಾಮನಗರ ಸೇರಿದಂತೆ ಮತ್ತಿತರ ಕಡೆ ಭಾರೀ ಮಳೆ ಸುರಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+