Potato Dry Chips Recipe: ಬೇಸಿಗೆಯಲ್ಲಿ ಆಲುಗಡ್ಡೆ ಸ್ಲೈಸ್ ಒಣಗಿಸಿ- ಮಳೆಗಾಲದಲ್ಲಿ ತಿನ್ನಿ ಮಜಾನೇ ಬೇರೆ..
ಸಾಮಾನ್ಯವಾಗಿ ಆಲುಗಡ್ಡೆ ಚಿಪ್ಸ್ ಬಹುತೇಕರ ನೆಚ್ಚಿನ ಕುರುಕುಲು ತಿಂಡಿ. ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಈ ತಿಂಡಿಯನ್ನು ವಿಧವಿಧವಾಗಿ ತಯಾರಿಸಲಾಗುತ್ತದೆ. ಈ ತಿಂಡಿ ಎಲ್ಲಾ ಕಾಲಕ್ಕೂ ಸರಿ ಹೊಂದುವುದರಿಂದ ಬಹುತೇಕರ ಫೇವರಿಟ್ ಕೂಡ ಹೌದು. ನೀವು ಕೂಡ ಆಲುಗಡ್ಡೆ ಚಿಪ್ಸ್ ಪ್ರಿಯರಾಗಿದ್ದರೆ ಹೊಸ ರೀತಿಯಲ್ಲಿ ಚಿಪ್ಸ್ ರೆಡಿ ಮಾಡಿ ಸವಿಯಬಹುದು.
ಹೌದು... ಫ್ರೆಂಚ್ ಪ್ರೈಸ್, ಚಿಪ್ಸ್ ತಿಂದು ಬೇಜಾರಾಗಿದ್ದರೆ ಆಲುಗಡ್ಡೆ ಸ್ಲೈಸ್‌ನಿಂದ ವಿಭಿನ್ನ ಬಗೆಯ ಚಿಪ್ಸ್ ರೆಡಿ ಮಾಡಿ. ಇದನ್ನು ಹಲವಾರು ತಿಂಗಳುಗಳ ಕಾಲ ಶೇಖರಿಸಿ ಇಡಬಹುದು. ಹಾಗಾದರೆ ತಡ ಮಾಡುವುದು ಬೇಡ ಆಲುಗಡ್ಡೆಯಿಂದ ಬೇಸಿಗೆಯಲ್ಲಿ ಯಾವ ರೀತಿ ಚಿಪ್ಸ್ ಮಾಡಿ ಇಟ್ಟುಕೊಳ್ಳಬಹುದು ಎಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಆಲುಗಡ್ಡೆ 10
* ಉಪ್ಪು ರುಚಿಗೆ ತಕ್ಕಷ್ಟು
* ಖಾರದ ಪುಡಿ ಅಗತ್ಯ ಇರುವಷ್ಟು
* ಅರಿಶಿಣ ಅರ್ಧ ಚಮಚ
* ಅಡುಗೆ ಎಣ್ಣೆ
* ಜೀರಿಗೆ ಪುಡಿ
ತಯಾರಿಸುವ ವಿಧಾನ:-
* ಆಲುಗಡ್ಡೆ ಡ್ರೈ ಚಿಪ್ಸ್ ತಯಾರಿಸುವುದು ತುಂಬಾ ಸುಲಭ. ಮೊದಲಿಗೆ ತಾಜಾ ಆಲುಗಡ್ಡೆಯನ್ನು ತೆಗೆದುಕೊಂಡು ತೊಳೆದು ನೀರಿಲ್ಲದಂತೆ ಒಣಗಿಸಿ.
* ನಂತರ ಆಲುಗಡ್ಡೆ ಸ್ಲೈಸ್ ಮಾಡಿ, ಅದನ್ನು ಬಿಸಿಲಿಗೆ ಹಾಕಿ ಚೆನ್ನಾಗಿ ಒಣಗಲು ಬಿಡಿ.
* ಆಲುಗಡ್ಡೆ ಸಂಪೂರ್ಣವಾಗಿ ನೀರಿನಾಂಶ ಇಲ್ಲದಂತೆ ಒಣಗಬೇಕು.
* ನಂತರ ಒಂದು ಪಾತ್ರೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ, ಒಣಗಿದ ಆಲುಗಡ್ಡೆ ಸ್ಲೈಸ್ ಅನ್ನು ಎಣ್ಣೆಯಲ್ಲಿ ಹಾಕಿ
* ಆಲುಗಡ್ಡೆ ಸ್ಲೈಸ್ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಬಿಡಿ
* ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ಖಾರದ ಪುಡಿ, ಸ್ವಲ್ಪ ಜೀರಿಗೆ ಪುಡಿ, ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆಲುಗಡ್ಡೆ ಡ್ರೈ ಚಿಪ್ಸ್ ಸವಿಯಲು ಸಿದ್ಧ.
ಇದು ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುತ್ತದೆ. ಆದರೆ ಮನೆಯಲ್ಲಿ ತಯಾರಿಸುವ ಆಲುಗಡ್ಡೆ ಡ್ರೈ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ರುಚಿ ಕೂಡ ತುಂಬಾ ಚೆನ್ನಾಗಿ ಇರುತ್ತದೆ.











Click it and Unblock the Notifications