ಶಿವಲಿಂಗಕ್ಕೆ ಅರ್ಪಿಸಿದ ನೈವೇದ್ಯ ಪ್ರಸಾದವಾಗಿ ಸೇವಿಸಬಾರದು, ಯಾಕೆ? ಇಲ್ಲಿದೆ ಕಾರಣ

ಹಿಂದೂ ಸಂಸ್ಕೃತಿಯಲ್ಲಿ, ಪ್ರಸಾದವು ಕೇವಲ ಆಹಾರವಲ್ಲ. ಅದು ಭಕ್ತರು ದೇವರಿಗೆ ಭಕ್ತಿ ಭಾವದಿಂದ ಅರ್ಪಿಸುವ ಪವಿತ್ರವಾದ ನೈವೇದ್ಯ. ನೈವೇದ್ಯವನ್ನು ದೇವರಿಗೆ ಅರ್ಪಿಸಿದ ನಂತರ ಅದರಲ್ಲಿ ದೇವರ ಅನುಗ್ರಹ ಸೇರಿಕೊಳ್ಳುತ್ತದೆ ಎನ್ನುವುದು ನಂಬಿಕೆ. ಎಲ್ಲಾ ದೇವರಿಗೂ ನೈವೇದ್ಯ ಅರ್ಪಿಸುತ್ತೇವೆ. ಬಳಿಕ ಅದನ್ನು ಪ್ರಸಾದವಾಗಿಯೂ ತಿನ್ನುತ್ತೇವೆ. ಆದರೆ ಶಿವನ ವಿಷಯಕ್ಕೆ ಬಂದಾಗ ಇದು ಸ್ವಲ್ಪ ಬದಲಾಗುತ್ತದೆ. ಶಿವಲಿಂಗಕ್ಕೆ ನೇರವಾಗಿ ಅರ್ಪಿಸಿದ ನೈವೇದ್ಯವನ್ನು ಸೇವಿಸಬಾರದಂತೆ. ಇದು ಬಲವಾದ ಆಧ್ಯಾತ್ಮಿಕ ಮತ್ತು ಧಾರ್ಮಿಕ ನಂಬಿಕೆ. ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ಪ್ರಸಾದವಾಗಿ ಸೇವಿಬಾರದು ಎನ್ನುವುದಕ್ಕೂ ಕಾರಣವಿದೆ.

ಶಿವಲಿಂಗ ಅಂದರೆ ಅದು ಶಿವನ ಒಂದು ರೂಪ. ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ಶಿವಲಿಂಗಕ್ಕೇ ಪೂಜೆ ಸಲ್ಲಿಸುವುದು. ಶ್ರಾವಣ ಮಾಸದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ ಶ್ರಾವಣ ಶಿವನಿಗೆ ಅರ್ಪಿತವಾದ ಮಾಸ. ಶ್ರಾವಣ ಸೋಮವಾರ ಶಿವ ಭಕ್ತರು ದೇವಸ್ಥಾನಗಳಿಗೆ ಹೋಗುತ್ತಾರೆ. ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ. ಹೀಗೆ ಮಾಡುವುದರಿಂದ ಇಷ್ಟಾರ್ಥ ನೆರವೇರುತ್ತದೆ ಎನ್ನಲಾಗುತ್ತದೆ.

Prasada Offered To Shivalinga

ಶಿವಲಿಂಗದ ಮೇಲೆ ಬಿಡುವುದು: ದಂತ ಕತೆ

ಸಾಮಾನ್ಯ ದಿನಗಳಲ್ಲಿಯೂ ಶಿವಲಿಂಗಕ್ಕೆ ನೀರು, ಹಾಲು, ಮೊಸರು, ಜೇನುತುಪ್ಪ, ಶ್ರೀಗಂಧದ ಲೇಪ, ಹಣ್ಣುಗಳು ಮತ್ತು ಹೂವುಗಳನ್ನು ಅರ್ಪಿಸಿಯೇ ಪೂಜೆ ಮಾಡುತ್ತಾರೆ. ಆದರೆ ಶಿವಲಿಂಗಕ್ಕೆ ಅರ್ಪಿಸಿದ ಹಣ್ಣುಗಳು ಮತ್ತು ಹೂವುಗಳನ್ನು ಎಂದಿಗೂ ಭಕ್ತರಿಗೆ ವಾಪಸ್‌ ನೀಡುವುದಿಲ್ಲ. ಅಭಿಷೇಕದ ಸಮಯದಲ್ಲಿ ಈ ವಸ್ತುಗಳನ್ನು ಶಿವಲಿಂಗದ ಮೇಲೆ ಇರಿಸಿದ ನಂತರ, ಅದನ್ನು ಹಾಗೆಯೇ ಹರಿಯಲು ಬಿಡುವುದನ್ನು ನೀವು ಕೂಡಾ ಗಮನಿಸಿರಬಹುದು. ಹೀಗೆ ಯಾಕೆ ಎಂದು ಕೇಳಿದರೆ ಇದರ ಹಿಂದೆ ಒಂದು ಪ್ರಸಿದ್ಧ ದಂತ ಕತೆಯಿದೆ.

ಈ ಕತೆಯ ಪ್ರಕಾರ ಭೂತ ಗಣಗಳ ಮುಖ್ಯಸ್ಥನಾದ ಚಂಡೇಶ್ವರನ ಕಾರಣದಿಂದಲೇ ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ಪ್ರಸಾದವಾಗಿ ತಿನ್ನಬಾರದಂತೆ. ಶಿವನ ಬಾಯಿಯ ಮೇಲೆ, ಚಂಡೇಶ್ವರ ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಶಿವನ ಮುಖವನ್ನು ಸ್ಪರ್ಶಿಸುವ ಯಾವ ವಸ್ತುವೇ ಆಗಿರಲಿ ಅದು ಚಂಡೇಶ್ವರ ಮತ್ತು ಅವನ ಕುಲಕ್ಕೆ ಅಂದರೆ ಗಣಗಳಿಗೆ ಸೇರುತ್ತದೆ. ಚಂಡೇಶ್ವರನಿಂದ ಇದನ್ನು ವಾಪಸ್‌ ತೆಗೆದುಕೊಳ್ಳುವುದು ಎಂದರೆ ಅದು ಪಾಪಕ್ಕೆ ಸಮ.

ಮಾತ್ರವಲ್ಲದೇ ಪ್ರಸಾದವನ್ನು ಭಕ್ತರು ತೆಗೆದುಕೊಂಡರೆ ಶಿವನ ಒಂದು ಭಾಗಕ್ಕೆ ಧರ್ಮಪ್ರಕಾರವಾಗಿ ಸೇರಬೇಕಾಗಿರುವ ವಸ್ತುವನ್ನು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ನಂಬಿಕೆ. ಹಾಗಾಗಿ ಶಿವಲಿಂಗದ ಮೇಲೆ ಅರ್ಪಿಸುವ ವಸ್ತು ಅದು ಏನೇ ಇರಲಿ ಅದು ಚಂಡೇಶ್ವರ ಮತ್ತು ಆತನ ಗಣಗಳಿಗೆ ಸೇರಿರುವಂಥದ್ದು. ಹಾಗಾಗಿ ಅದನ್ನು ಪ್ರಸಾದ ರೂಪದಲ್ಲಿ ನಾವು ಸೇವಿಸುವಂತಿಲ್ಲ.

ಧರ್ಮಗ್ರಂಥಗಳ ವ್ಯಾಖ್ಯಾನಗಳು ಕೂಡಾ ಇಲ್ಲಿ ಬಹಳ ಮುಖ್ಯವಾಗುತ್ತದೆ. ಹಲವಾರು ಶೈವ ಸಂಪ್ರದಾಯಗಳ ಪ್ರಕಾರ, ಶಿವಲಿಂಗಕ್ಕೆ ಅರ್ಪಿಸುವ ನೈವೇದ್ಯಗಳನ್ನು ತ್ಯಾಗ ಎಂದು ಕರೆಯಲಾಗುತ್ತದೆ. ಅಂದರೆ ಇವು ಸಂಪೂರ್ಣ ಶರಣಾಗತಿಯ ಕ್ರಿಯೆಗಳು. ಒಮ್ಮೆ ಶಿವನಿಗೆ ಅರ್ಪಿಸಿದ ನೈವೇದ್ಯ ಮತ್ತೆ ಭಕ್ತನಿಗೆ ಸೇರುವುದಿಲ್ಲ. ಅದನ್ನು ನಾವು ಶಿವನಿಗಾಗಿ ತ್ಯಾಗ ಮಾಡಿದ ಹಾಗೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಬೇರೆ ಎಲ್ಲಾ ದೇವರಿಗೆ ಅರ್ಪಿಸುವ ನೈವೇದ್ಯದ ಹಾಗಲ್ಲ ಶಿವನಿಗೆ ಅರ್ಪಿಸುವ ನೈವೇದ್ಯ. ಶಿವನ ನೈವೇದ್ಯಗಳನ್ನು ಅವನೊಂದಿಗೆ ಅವನಿಗಾಗಿಯೇ ಬಿಡಬೇಕು. ಮತ್ತೆ ಅದರಲ್ಲಿ ಪಾಲು ಕೇಳುವ ಹಾಗಿಲ್ಲ.

ಎರಡನೇ ಕಾರಣ ಹೀಗಿದೆ

ಭಕ್ತರು ಪ್ರಸಾದವನ್ನು ಸೇವಿಸಬಾರದು ಎಂದು ಹೇಳಲು ಇನ್ನೊಂದು ಕಾರಣವೆಂದರೆ ಸಮುದ್ರ ಮಂಥನ ದಂತಕಥೆ. ಸಮುದ್ರ ಮಂಥನದ ಸಮಯದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವ ಕುಡಿದಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ವಿಷ ಶಿವನ ಇಡೀ ದೇಹವನ್ನು ತಲುಪದಂತೆ ಪಾರ್ವತಿ ತಡೆಯುತ್ತಾಳೆ. ಈಶ್ವರನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿಯುವ ಮೂಲಕ ಆ ವಿಷ ಶಿವನ ದೇಹ ಸೇರದಂತೆ ನೋಡಿಕೊಳ್ಳುತ್ತಾಳೆ. ಆ ವಿಷ ಶಿವ ಗಂಟಲಿನಲ್ಲಿಯೇ ಉಳಿದು ಅವ ನೀಲಕಂಠನಾಗುತ್ತಾನೆ.

ಅಂದಿನಿಂದ, ವಿಷ ಮತ್ತು ಅದರ ಕೆಲವು ಗುಣಲಕ್ಷಣಗಳು ಅವನ ಗಂಟಲಿನಲ್ಲಿ ಮತ್ತು ಶಿವಲಿಂಗದಲ್ಲಿ ಶಾಶ್ವತವಾಗಿ ನೆಲೆಗೊಂಡಿವೆ ಎನ್ನುವುದು ಕೂಡಾ ನಂಬಿಕೆ. ಆದ್ದರಿಂದ, ನೀವು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ಸೇವಿಸಿದಾಗ, ಅದು ವಿಷದ ಕೆಲವು ಗುಣಲಕ್ಷಣಗಳನ್ನು ಹೊಂದಿರಬಹುದು ಎನ್ನುವ ಕಾರಣಕ್ಕಾಗಿ ಶಿವಲಿಂಗಕ್ಕೆ ಅರ್ಪಿಸಿದ ನೈವೇದ್ಯವನ್ನು ಯಾರೂ ತಿನ್ನಬಾರದು ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+