ಪ್ರಕೃತಿಯೇ ಪರೋಪಕಾರಿಯಾಗಿರುವಾಗ ನಾವೇಕೆ ಸ್ವಾರ್ಥಿಗಳಾಗುತ್ತಿದ್ದೇವೆ?
ಪ್ರಕೃತಿ ನಮಗೆ ವರದಾನವಾಗಿದೆ. ಇಲ್ಲಿರುವ ಪ್ರಾಣಿ, ಪಕ್ಷಿ ಮರಗಿಡಗಳೆಲ್ಲವೂ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಗಳೇ.. ಹೀಗಿರುವಾಗ ಚಿಂತನಾಶೀಲ ಶಕ್ತಿಯಿರುವ ಮನುಷ್ಯರಾದ ನಾವೇಕೆ ಬರೀ ಸ್ವಾರ್ಥವನ್ನೇ ತುಂಬಿಕೊಂಡು ನಾನು, ನನ್ನದು ಎಂಬುದರಲ್ಲೇ ಬದುಕನ್ನು ಕಳೆಯುತ್ತಾ ಸ್ವಾರ್ಥಿಗಳಾಗುತ್ತಿದ್ದೇವೆ. ನಮಗೆ ಗೊತ್ತಿಲ್ಲದಂತೆ ನಮ್ಮಲ್ಲಿ ಪರೋಪಕಾರಣದ ಗುಣ ಸತ್ತು ಹೋಗುತ್ತಿದೆ. ಇದು ನಮ್ಮೊಳಗಿನ ಸಂಬಂಧವನ್ನೇ ಕಡಿದುಕೊಳ್ಳುವಷ್ಟರ ಮಟ್ಟಿಗೆ ಹೋಗಿ ನಿಲ್ಲುತ್ತಿದೆ.
ಮನುಷ್ಯ ಸಂಘಜೀವಿಯಾಗಿದ್ದು, ಎಲ್ಲರ ನಡುವೆ ಬದುಕಬೇಕಾಗಿದೆ. ಹೀಗಿರುವಾಗ ಸ್ವಲ್ಪ ಮಟ್ಟಿಗೆಯಾದರೂ ನಾವು ಪರೋಪಕಾರದ ಗುಣಗಳನ್ನು ಹೊಂದದಿದ್ದರೆ ಕಷ್ಟವಾಗುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಸ್ವಾರ್ಥಿಗಳಾಗಿದ್ದೇವೆ. ಅದಕ್ಕಿಂತ ಹೆಚ್ಚಾಗಿ ಇದ್ದುದರಲ್ಲಿ ನೆಮ್ಮದಿ ಕಾಣುವ ಜಾಯಮಾನವೂ ನಮ್ಮದಲ್ಲ. ಏನು ಸಿಕ್ಕರೂ ಅದರಲ್ಲಿ ತೃಪ್ತಿ ಹೊಂದುತ್ತಿಲ್ಲ. ಇನ್ನು ಬೇಕೆಂಬ ದುರಾಸೆ ಮತ್ತು ನಾನು, ನನ್ನದು ಎಂಬ ಅಹಂ, ಮೊದಲಾವುಗಳು ಸೇರಿ ನಮ್ಮಲ್ಲಿರುವ ಪರೋಪಕಾರದ ಗುಣಗಳನ್ನು ನಾಶ ಮಾಡುತ್ತಿವೆ.

ನಿಸರ್ಗ ಸೃಷ್ಠಿಯಲ್ಲಿರುವ ಪ್ರಾಣಿ, ಪಕ್ಷಿ, ಮರಗಿಡಗಳು ಮಾನವನಿಗೆ ಹಲವು ರೀತಿಯಲ್ಲಿ ಉಪಯೋಗಿಗಳಾಗಿವೆ. ಮರ, ನೆರಳು, ಹಣ್ಣು ನೀಡುತ್ತದೆ. ಇನ್ನು ನದಿಗಳ ಉಪಯೋಗ ಒಂದೆರಡಲ್ಲ. ಬೆಟ್ಟಗಳು ಬೀಸುವ ಮಾರುತಗಳನ್ನು ತಡೆದು ಮಳೆ ಸುರಿಸುತ್ತವೆ. ಹೀಗೆ ಈ ಭೂಮಿ ಮೇಲೆ ಸೃಷ್ಠಿಯಾಗಿರುವ ಸಕಲ ಜೀವ ರಾಶಿಯೂ ಒಂದೊಂದು ರೀತಿಯಲ್ಲಿ ಉಪಯೋಗಿಯಾಗಿರುವಾಗ ನಾವು ಮಾತ್ರ ಕೇವಲ ನಮಗಾಗಿ ಬದುಕುತ್ತೇವೆ. ಮಾಡಿದ ಸಂಪಾದನೆಯಲ್ಲಿ ನಾಳೆಗೆ, ಮಕ್ಕಳಿಗೆ ಎಂದು ಕೂಡಿಡುತ್ತೇವೆ. ಮನೆ, ಆಸ್ತಿ, ಕಾರು ಹೀಗೆ ಒಂದು ಆದ ಮೇಲೊಂದು ಪಡೆಯುತ್ತಲೇ ಹೋಗುತ್ತೇವೆ.
ನಮ್ಮ ಜೀವನ ಸಾರ್ಥಕ್ಯಗೊಳಿಸಬೇಕು
ನಮ್ಮ ಸಂಪಾದನೆಯಲ್ಲಿ ಒಂದಷ್ಟು ಬಡ ಜನತೆಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹೆಚ್ಚಿನವರಿಗಿಲ್ಲ. ಕೆಲವರಿದ್ದಾರೆ ದಾನ, ಧರ್ಮ ಮಾಡುತ್ತಾರಾದರೂ ಅದನ್ನು ಎಲ್ಲರ ಎದುರು ಗುರುತಿಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಾರೆ. ಮನುಷ್ಯ ಜೀವನ ಶ್ರೇಷ್ಠವಾದದ್ದು, ಪ್ರಾಣಿ, ಪಕ್ಷಿಗಳಿಗೆ ಹೋಲಿಸಿದರೆ ಚಿಂತನಾಶೀಲ ಮನಸ್ಸಿದೆ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ. ಕೈಕಾಲು, ಕಿವಿ, ಕಣ್ಣು, ಮೂಗು, ನಾಲಿಗೆಯಂತಹ ಪಂಚೇಂದ್ರಿಯಗಳನ್ನು ಹೊಂದಿದ್ದಾನೆ. ಹೀಗಿರುವಾಗ ಇದೆಲ್ಲವನ್ನು ಬಳಸಿಕೊಂಡು ಜೀವನವನ್ನು ಸಾರ್ಥೈಕ್ಯಗೊಳಿಸಬೇಕು.

ಇವತ್ತಿನ ಪರಿಸ್ಥಿತಿಯಲ್ಲಿ ಹಣ ಮಾಡಬೇಕು ಅದರಿಂದ ಸುಖಸಂಪತ್ತನ್ನು ಗುಡ್ಡೆ ಹಾಕಿಕೊಳ್ಳಬೇಕೆಂದು ಬಯಸುತ್ತೇವೆ. ಆ ಮೂಲಕ ಪ್ರಾಣಿಗಳಿಗಿಂತ ಕಡೆಯಾಗಿ ಜೀವನ ಸಾಗಿಸುತ್ತಿದ್ದೇವೆ. ನಿಜ ಹೇಳಬೇಕೆಂದರೆ ಪ್ರಾಣಿಗಳಿಗೆ ವಿವೇಚನಾಶಕ್ತಿಯಿಲ್ಲ. ಅವು ಹುಟ್ಟಿದಕ್ಕಾಗಿ ಬದುಕುತ್ತವೆ. ಹಸಿವಾದಾಗ ಆಹಾರ ತಿನ್ನುತ್ತವೆ. ಇವತ್ತು ಸಿಕ್ಕಿದನ್ನು ನಾಳೆಗೆ ಉಳಿಸಿಕೊಳ್ಳುವ ಜಾಣ್ಮೆ ಅವುಗಳಿಗಿಲ್ಲ. ಅವುಗಳು ಅವತ್ತಿಗೆ ಆ ಹೊತ್ತಿಗೆ ಏನು ಸಿಗುತ್ತೋ ಅದನ್ನು ತಿನ್ನುತ್ತವೆ. ಹಸಿವಾದಾಗ ಆಹಾರಕ್ಕಾಗಿ ಏನು ಬೇಕಾದರೂ ಮಾಡುತ್ತವೆ. ಆದರೆ ಇವತ್ತು ಆ ಕಾಡು ಪ್ರಾಣಿಗಳು ಕೂಡ ಉಪದ್ರವಿಗಳಾಗುತ್ತಿವೆ. ಇದಕ್ಕೆ ಮನುಷ್ಯನಾದ ನಾವೇ ಕಾರಣ ಎಂದರೂ ತಪ್ಪಾಗಲಾರದು.
ಸಮಾಜಕ್ಕೆ ಕೊಡುಗೆಯಾಗಿ ಉಳಿಯಬೇಕು
ಪ್ರಕೃತಿಯಲ್ಲಿ ಕಾಲ ಕಾಲಕ್ಕೆ ಏನೆಲ್ಲ ಆಗಬೇಕೋ ಅದೆಲ್ಲವೂ ಆಗುತ್ತಿದ್ದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಮಳೆಗಾಲದಲ್ಲಿ ಮಳೆ, ಬೇಸಿಗೆಯಲ್ಲಿ ಬಿಸಿಲು, ಚಳಿಗಾಲದಲ್ಲಿ ಚಳಿ ಇದೆಲ್ಲವೂ ಆಯಾಯ ಕಾಲಕ್ಕೆ ತಕ್ಕಂತೆ ಇಲ್ಲದಿದ್ದರೆ ನಾವೆಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಿರುವಾಗ ನಾವು ಮನುಷ್ಯರು ಮತ್ತೊಬ್ಬರನ್ನು ತುಳಿಯುವ, ಆತನ ಬದುಕನ್ನು ಹಾಳು ಮಾಡುವ ಕೃತ್ಯಕ್ಕಿಳಿಯದೆ ಒಳ್ಳೆಯದನ್ನು ಮಾಡೋಣ. ಒಬ್ಬನಿಗೆ ಒಳ್ಳೆ ಬದುಕನ್ನು ನೀಡಲು ಸಾಧ್ಯವಿಲ್ಲದ ಮೇಲೆ ಅವನ ಬದುಕನ್ನು ಹಾಳು ಮಾಡುವುದೆಷ್ಟರ ಮಟ್ಟಿಗೆ ಸರಿ?.
ನಾವು ಹುಟ್ಟಿದ್ದೇ ನಮಗಾಗಿ ಬದುಕಲು ಎಂಬುದನ್ನು ಮರೆತು ಯಾವುದಾದರೊಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಆ ಮೂಲಕ ಪರೋಪಕಾರಿಗಳಾಗಬಹುದು. ಈ ಜಗತ್ತಿನಲ್ಲಿ ಹೂವು, ಹಣ್ಣು ಎಲ್ಲವೂ ಬೇರೆಯವರಿಗಾಗಿ ಬದುಕುವಾಗ ಮನುಷ್ಯರಾದ ನಾವು ಕೇವಲ ನಮಗಾಗಿ ಬದುಕುವುದರಲ್ಲಿ ವಿಶೇಷವೇನಿದೆ? ನಾವು ಮನಸ್ಸು ಮಾಡಿದರೆ ನಮ್ಮ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇವೆಗಳ ಮೂಲಕವೇ ಸಮಾಜಕ್ಕೆ ಕೊಡುಗೆಯಾಗಬಹುದು. ಆದರೆ ನಾವು ಮನಸ್ಸು ಮಾಡಬೇಕಷ್ಟೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications