Get Updates
Get notified of breaking news, exclusive insights, and must-see stories!

ಆಶಾಭಾವನೆಯೇ ನಮ್ಮ ಬದುಕಿಗೆ ಟಾನಿಕ್: ಯಾಕೆ ಗೊತ್ತಾ?

ಬದುಕು ಅನುಭವಗಳ ಸಂತೆ. ಇಲ್ಲಿ ಸುಖ, ದುಃಖ, ನೋವು, ನಲಿವು, ಸೋಲು, ಗೆಲುವು ಹೀಗೆ ಯಾವುದು ಇಲ್ಲ ಹೇಳಿ? ಎಲ್ಲವೂ ಇದೆ. ಎಂದ ಮೇಲೆ ಅದೆಲ್ಲವನ್ನು ಮೀರಿ ಬದುಕುವುದು ಕೂಡ ಅನಿವಾರ್ಯವೇ... ಹೀಗಾಗಿ ಎಲ್ಲ ನೋವುಗಳನ್ನು ನುಂಗಿ ಸಂತಸದಿಂದ ಬದುಕಬೇಕಾದರೆ ಅದಕ್ಕೆ ಟಾನಿಕ್ ಆಶಾಭಾವನೆ ಎಂದರೆ ತಪ್ಪಾಗಲಾರದು.

ನಾವೆಲ್ಲರೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಿದವರೇ ಕೆಲವು ಸಮಸ್ಯೆಗಳು ಆಕಸ್ಮಿಕವಾಗಿ ಬಂದು ನಮ್ಮನ್ನು ತಟ್ಟಿರಬಹುದು. ಮತ್ತೆ ಕೆಲವು ಸಮಸ್ಯೆಗಳನ್ನು ನಾವೇ ಮೈಮೇಲೆ ಎಳೆದುಕೊಂಡಿರುತ್ತೇವೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ಹೀಗಿರುವಾಗ ಸಣ್ಣಪುಟ್ಟ ಸಮಸ್ಯೆಗೆ ಹೆದರಿ ಅದಕ್ಕೆ ಬದುಕನ್ನೇ ಬಲಿಕೊಡುವ ಬದಲು ಎದುರಿಸಿ ನಿಲ್ಲಬೇಕು. ಅದು ಸಾಧ್ಯವಾಗಬೇಕಾದರೆ ನಮ್ಮ ಬದುಕಿನಲ್ಲಿ ಆಶಾಭಾವನೆ ಬೆಳೆಸಿಕೊಳ್ಳಬೇಕು.

Life Tips Hope Is The Best Tonic For Your Beautiful Life

ಜೀವನದಲ್ಲಿ ಮೇಲಿಂದ ಮೇಲೆ ಬರುವ ಸೋಲು, ಕಷ್ಟ ಕಾರ್ಪಣ್ಯಗಳು, ನನ್ನಿಂದ ಇನ್ನು ಮುಂದೆ ಏನೂ ಸಾಧ್ಯವಾಗಲಾರದೆಂಬ ಭಾವನೆ, ಅಸಹಾಯಕತೆ, ಇಲ್ಲಿಗೆ ಬದುಕು ಮುಗಿದೇ ಬಿಟ್ಟಿತೆಂಬ ನಿರಾಸೆ.. ಇದೆಲ್ಲವೂ ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ಕಾಪಾಡುವುದು ಆಶಾಭಾವನೆ ಮಾತ್ರ ಎಂದರೆ ತಪ್ಪಾಗಲಾರದು.

ನಿರಾಸೆ ಕಾಡುವುದೇಕೆ? ಚಿಂತಕರು ಹೇಳುವುದೇನು?

ಜೀವನದ ಬಗ್ಗೆ ನಿರಾಸೆ ಕಾಡಿತೆಂದರೆ ಮತ್ತೆ ನಾವು ಮೇಲೇಳುವುದು ಕಷ್ಟ ಸಾಧ್ಯ. ಬಹಳಷ್ಟು ಮಂದಿಯ ಬದುಕಿನ ಇತಿಶ್ರೀಗೂ ನಿರಾಸೆಯೇ ಕಾರಣವಾಗಿ ಬಿಡುತ್ತದೆ. ಬದುಕಿನಲ್ಲಿ ನಿರಾಸೆ ಇಣುಕಿತೆಂದರೆ ಏನೇನು ಮಾಡಲು ಮಾಡಲು ಸಾಧ್ಯವಾಗುವುದಿಲ್ಲ. ಒಂದೊಂದು ಕ್ಷಣವೂ ನರಕವಾಗಿ ಪರಿಣಮಿಸುತ್ತದೆ. ಮುಂದೆ ನಡೆಯಲು ಮಾರ್ಗ ಇಲ್ಲವೇನೋ ಎಂಬ ಭಾವ ಕಾಡುತ್ತದೆ. ಇಂತಹ ನಿರಾಸೆಯನ್ನು ಹೊಡೆದೊಡಿಸಿ ಆಶಾಭಾವನೆ ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ.

Life Tips Hope Is The Best Tonic For Your Beautiful Life

ಹಾಗಾದರೆ ನಿರಾಸೆ ಕಾಡುವುದೇಕೆ ಎಂಬ ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕರು ಅಜ್ಞಾನವೇ ಕಾರಣ ಎಂಬ ಉತ್ತರವನ್ನು ನೀಡುತ್ತಾರೆ. ಅಷ್ಟೇ ಅಲ್ಲ. ನಮ್ಮಲ್ಲಿರುವ ಅಪಾರವಾದ ಪ್ರತಿಭೆ, ಸೃಜನಶೀಲತೆ ಇವುಗಳನ್ನು ಗುರುತಿಸಿಕೊಳ್ಳದಿರವುದೂ ನಿರಾಸೆಗೆ ಕಾರಣವಾಗಿ ಬಿಡುತ್ತದೆ. ನಮ್ಮನ್ನು ಅನಾರೋಗ್ಯ ಕಾಡಬಹುದು. ಅದು ಭಯಂಕರ ರೋಗವೂ ಆಗಿರಬಹುದು. ರೋಗ ಬಂದಿದೆ ಎಂದ ತಕ್ಷಣ ಜೀವನದಲ್ಲೇನಿದೆ? ನಾನು ಸಾಯುವುದು ಖಂಡಿತಾ ಎಂಬ ನಿರಾಸೆ ನಮ್ಮನ್ನು ಕಾಡಿದರೆ ಬಹಳಷ್ಟು ಬೇಗನೇ ಆರೋಗ್ಯ ಹದಗೆಟ್ಟು ಸಾವಿಗೆ ಶರಣಾಗಿ ಬಿಡುತ್ತೇವೆ. ಅದರ ಬದಲಿಗೆ ಆ ಬಗ್ಗೆ ಯೋಚಿಸದೆ ನಗು ನಗುತ್ತಾ ಇರಬೇಕು. ಏಕೆಂದರೆ ಆರೋಗ್ಯ ಹದಗೆಟ್ಟಿದ್ದರೂ ಜೀವನದಲ್ಲಿ ನಗು ನಗುತ್ತಾ ಬದುಕುತ್ತಿರುವವರು ಇದ್ದಾರೆ ಎಂಬುದನ್ನು ನಾವು ಮರೆಯಬಾರದು.

ಆಶಾಭಾವ ಜೀವನ, ನಿರಾಸೆ ಭಾವ ಮರಣ

ಜೀವನದಲ್ಲಿ ಕಷ್ಟಗಳು ಬರುತ್ತವೆ. ನೋವುಗಳಿರುತ್ತವೆ. ಆತಂಕ, ತಂಟೆ, ತಕರಾರು, ಸಮಸ್ಯೆ ಎಲ್ಲವೂ ಇದ್ದೇ ಇರುತ್ತದೆ. ಆದರೆ ಅದನ್ನೇ ಯೋಚಿಸುತ್ತಾ ನರಳಾಡಿದರೆ ಯಾವುದೇ ಪರಿಹಾರ ಸಿಗದು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಬೆಳಕಿನ ದಾರಿ ಇದ್ದೇ ಇದೆ. ಬುದ್ದಿವಂತರು ತಮ್ಮ ಬುದ್ದಿವಂತಿಕೆಯನ್ನು ಬಳಸಿಕೊಂಡು ಬೆಳಕಿನ ದಾರಿ ಹಿಡಿಯುತ್ತಾರೆ, ಮುನ್ನಡೆಯುತ್ತಾರೆ, ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ.

ಬುದ್ದಿವಂತನಾದವನು, ವಿವೇಕಿಯಾದವನು, ಚತುರನಾದವನು, ಕ್ರಿಯಾಶೀಲನಾದವನು, ಜ್ಞಾನಿಯಾದವನು ಒಂದು ಸಮಸ್ಯೆಗೆ ನೂರಾರು ಪರಿಹಾರದ ದಾರಿಗಳನ್ನು ಕಂಡು ಹಿಡಿಯುತ್ತಾನೆ. ಆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುತ್ತಾನೆ. ಜೀವನದಲ್ಲಿ ಆಶಾಭಾವನೆ ಬೇಕು. ಏಕೆಂದರೆ ಬದುಕಿನಲ್ಲಿ ಆಶಾಕಿರಣಗಳ ಹೊಂಬಿಸಿಲು ತುಂಬಿರಬೇಕು. ನಿರಾಶವಾದಿಯಾಗಬಾರದು. ಆಶಾಭಾವನೆಯೇ ಜೀವನ, ನಿರಾಸಭಾವನೆಯೇ ಮರಣ ಎನ್ನುವುದನ್ನು ಮರೆಯಬಾರದು.

ಆಶಾಭಾವನೆಯು ರೂಪುಗೊಳ್ಳುವುದು ಹೇಗೆ?

ಆಧ್ಯಾತ್ಮಿಕ ಚಿಂತಕರ ಪ್ರಕಾರ ಸಮಯ ಪರಿಪಾಲನೆ ಮಾಡುವವರಲ್ಲಿ ನಿರಾಸೆಗೆ ಅವಕಾಶವಿರುವುದಿಲ್ಲ.. ಸಮಸ್ಯೆಗಳು ವಕ್ಕರಿಸಿದರೂ ಸಮಯ ಪರಿಪಾಲನಾಶೀಲವುಳ್ಳವರು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಸಮಯ ನಿಯೋಜನೆಯ ಗುಣಶೀಲನು ಉನ್ನತ ಮನೋಬಲವುಳ್ಳವನಾಗಿರುತ್ತಾನೆ. ಸಮಯಶೀಲನಿಗೆ ಜೀವನದಲ್ಲಿ ಆತ್ಮವಿಶ್ವಾಸದ ಭರವಸೆಯಿರುತ್ತದೆ. ಆಶಾಭಾವನೆಯು ರೂಪುಗೊಳ್ಳಲು ಸಮಯಪ್ರಜ್ಞೆ ಮುಖ್ಯವಾಗಿದ್ದು, ಸಮಯ ಪರಿಪಾಲನೆ, ಸದುಪಯೋಗ ಕಾಪಾಡುತ್ತದೆ.

ಸಮಯ ಪ್ರಜ್ಞೆಯು ಆಶಾಜ್ಯೋತಿಯನ್ನು ಬೆಳಗಿಸುತ್ತದೆ. ಸೋಮಾರಿಯಾಗಿರದೆ ನಿರಂತರ ಕ್ರಿಯಾಶೀಲ ಚಟುವಟಿಕೆಯಿಂದ ಆಸಕ್ತಿಯಿಂದ ಎಲ್ಲರೊಂದಿಗೆ ಬೆರೆಯುವುದನ್ನು ರೂಢಿ ಮಾಡಿ ಮಾಡಿಕೊಳ್ಳಬೇಕು. ಜತೆಗೆ ಬದುಕು ಇಲ್ಲಿಗೆ ಮುಗಿದಿಲ್ಲ ಮುಂದೆಯೂ ಇದೆ ಎಂಬ ಆಶಾ ಭಾವನೆಯನ್ನು ಬೆಳೆಸಿಕೊಂಡು ಮುನ್ನಡೆದರೆ ನಮ್ಮನ್ನು ಕವಿದಿರುವ ನಿರಾಸೆಯ ಮಂಕು ದೂರವಾಗಿ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಏನು ಮಾಡುತ್ತಿದ್ದೇವೆಯೋ ಅದನ್ನು ಖುಷಿಖುಷಿಯಾಗಿ ಮಾಡುವುದನ್ನು ಕಲಿತರೆ ನಾವು ಕೂಡು ಖುಷಿಯಾಗಿರಲು ಸಾಧ್ಯವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+