ರಾಜನನ್ನು ಜೀವಂತವಾಗಿ ನುಂಗಿದ ಇರುವೆ.... ಏಪ್ರಿಲ್ ಫೂಲ್ ಆಚರಣೆ ಶುರುವಾಗಿದ್ದು ಹೀಗೆ....!
ಏಪ್ರಿಲ್ 1 ಅನ್ನು ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಯಾರನ್ನಾದರೂ ಮೂರ್ಖರನ್ನಾಗಿಸುವುದೇ ಈ ದಿನದ ವಿಶೇಷತೆ. ಹೀಗಾಗಿ ಈ ದಿನಕ್ಕಾಗಿ ತುಂಬಾ ಜನ ಕಾತುರದಿಂದ ಕಾಯುತ್ತಾರೆ. ಎದುರಿಗಿರುವ ವ್ಯಕ್ತಿಯನ್ನು ಏಪ್ರಿಲ್ ಫೂಲ್ ಮಾಡುವ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ನೀವೂ ಕೂಡ ಇನ್ನೊಬ್ಬರನ್ನು ಏಪ್ರಿಲ್ ಫೂಲ್ ಮಾಡಿರಬಹುದು.
ಏಪ್ರಿಲ್ ಫೂಲ್ ದಿನದಂದು ಕೆಲವರು ಕೆಲವರನ್ನು ಮೂರ್ಖರನ್ನಾಗಿಸುತ್ತಾರೆ. ಈ ದಿನ ಸಾಮಾನ್ಯವಾಗಿ ಜನರು ಪರಸ್ಪರ ಕಾಲುಗಳನ್ನು ಎಳೆದುಕೊಂಡು, ತಮಾಷೆ ಮಾಡಿಕೊಂಡು ಎಂಜಾಯ್ ಮಾಡುತ್ತಾರೆ. ಭಾರತ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಆಚರಣೆ ಮಾಡಲಾಗುತ್ತದೆ.

ಏಪ್ರಿಲ್ ಫೂಲ್ ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಎಂಬುದಾಗಿ ಇತಿಹಾಸಕಾರರು ಹೇಳುತ್ತಾರೆ. ಬಳಿಕ ಇದು ಯುರೋಪ್ ದೇಶಗಳಲ್ಲೂ ಆಚರಿಸಲು ಆರಂಭಿಸಿದರು. ನಂತರ ಅಲ್ಲಿಂದ ಹಲವು ದೇಶಗಳಿಗೆ ವ್ಯಾಪಿಸಿದೆ.
ಏಪ್ರಿಲ್ 1 ರಂದು ಮೂರ್ಖರಾಗುವ ಸಂಪ್ರದಾಯದ ಪ್ರಾರಂಭದ ಹಿಂದೆ ಅನೇಕ ದಂತಕಥೆಗಳಿವೆ. ಅಂತಹ ಒಂದು ದಂತಕಥೆಯ ಪ್ರಕಾರ, ಈ ಅಭ್ಯಾಸವನ್ನು ರಾಜನು ತನ್ನ ಕನಸಿನ ಅರ್ಥವನ್ನು ತಿಳಿದ ನಂತರ ಪ್ರಾರಂಭಿಸಿದನು. ಹಾಗಾದರೆ ಆ ಕಥೆ ಯಾವುದು? ಈ ಕಥೆಯಲ್ಲಿ ಏನಿದೆ ಅನ್ನೋದನ್ನು ತಿಳಿಯೋಣ.

ರಾಜನನ್ನು ಜೀವಂತವಾಗಿ ನುಂಗಿದ ಇರುವೆ....
ಶತಮಾನಗಳ ಹಿಂದೆ ಗ್ರೀಸ್‌ನಲ್ಲಿ ಒಬ್ಬ ರಾಜನಿದ್ದ. ಆತ ಒಂದು ದಿನ ತನ್ನ ಕನಸಿನಲ್ಲಿ ಇರುವೆ ತನ್ನನ್ನು ಜೀವಂತವಾಗಿ ನುಂಗಿದ್ದನ್ನು ನೋಡಿದನು. ಬೆಳಗ್ಗೆ ಎದ್ದು ನಿದ್ದೆಯಲ್ಲೇ ಜೋರಾಗಿ ಅಳತೊಡಗಿದನು. ಆತನ ಪಕ್ಕದಲ್ಲಿ ಮಲಗಿದ್ದ ರಾಣಿ ಭಯ ಭೀತಳಾಗಿ ರಾಜನನ್ನು ಎಚ್ಚರಗೊಳಿಸಿದಳು.
ಆಕೆ ರಾಜನಿಗೆ ಅಳುವುದಕ್ಕೆ ಕಾರಣವೇನು ಎಂದು ಕೇಳಿದಾಗ ರಾಜ, ರಾತ್ರಿಯಲ್ಲಿ ಭಯಂಕರವಾದ ಕನಸನ್ನು ನಾನು ಕಂಡೆ. ಅದರಲ್ಲಿ ಇರುವೆ ನನ್ನನ್ನು ಜೀವಂತವಾಗಿ ನುಂಗಿದ್ದನ್ನು ನಾನು ನೋಡಿದೆ ಎಂದು ಹೇಳಿದನು. ರಾಜನ ಕನಸನ್ನು ಕೇಳಿ ರಾಣಿಯೂ ಅಳಲು ಪ್ರಾರಂಭಿಸಿದಳು. ಆಗ ರಾಜನಿಗೂ ಈ ಬಗ್ಗೆ ಗೊಂದಲ ಶುರುವಾಯಿತು. ತಕ್ಷಣ ರಾಜ ಜ್ಯೋತಿಷಿಯನ್ನು ಬರ ಹೇಳಿದ. ಮಹಾರಾಜ ಜ್ಯೋತಿಷಿಗೆ ಆ ಕನಸಿನ ಅರ್ಥವೇನು ಎಂದು ಕೇಳಿದನು.
ಆಗ ಜ್ಯೋತಿಷಿ ಈ ಕನಸಿನ ಅರ್ಥ, ಪ್ರಭು ಇರುವೆ ತುಂಬಾ ಚಿಕ್ಕದು. ಅದು ನಿಮ್ಮನ್ನು ನುಂಗುವುದಿರಲಿ ಕಚ್ಚಲು ಆಗದು. ಹೀಗಾಗಿ ಈ ಕನಸನ್ನು ನಂಬಬೇಡಿ. ಯಾರಾಗಿದಾರೂ ನೀವು ಕನಸಿನಿಂದ ಅಳುವುದು ತಿಳಿದರೆ ನೀವು ಮೂರ್ಖರಾಗುತ್ತೀರಿ. ಹೀಗಾಗಿ ನೀವು ಇಂದು ನಗು ಮತ್ತು ವಿನೋದದಿಂದ ಕಳೆಯಬೇಕು ಎಂದರು. ಆ ದಿನವು ಏಪ್ರಿಲ್ ಮೊದಲ ದಿನವಾಗಿತ್ತು. ಅಂದಿನಿಂದ ನಗು ಮತ್ತು ವಿನೋದದಿಂದ ತುಂಬಿದ ದಿನವನ್ನು ಪ್ರತಿ ವರ್ಷ ಆಚರಿಸಲು ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ.
ಜ್ಯೋತಿಷಿಯು ರಾಜನಿಗೆ ಬಿದ್ದ ಕನಸಿನ ಗಂಭೀರ ಫಲಿತಾಂಶವನ್ನು ತಮಾಷೆಯ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ರಾಜನನ್ನು ಮೂರ್ಖನನ್ನಾಗಿ ಮಾಡಿದನು. ಏಪ್ರಿಲ್ 1 ರಂದು ಮಾತ್ರವಲ್ಲ, ಪ್ರತಿದಿನವೂ ನಗುತ್ತಾ ಮತ್ತು ತಮಾಷೆ ಮಾಡುತ್ತಾ ಸಂತೋಷದ ಜೀವನವನ್ನು ನಡೆಸಬೇಕು. ಕೆಲವೊಮ್ಮೆ ನಗುವುದು ಮತ್ತು ತಮಾಷೆ ಮಾಡುವುದು ಮಂದ ಜೀವನದಲ್ಲಿ ಸಂತೋಷವನ್ನು ತರುತ್ತದೆ.












Click it and Unblock the Notifications