Potato: ಮೊಳಕೆ ಬಂದ ಆಲೂಗಡ್ಡೆ ತಿನ್ನಲು ಯೋಗವೇ?

ಹೆಚ್ಚಿನ ಜನರು ಇಷ್ಟಪಡುವ ತರಕಾರಿಗಳಲ್ಲಿ ಆಲೂಗಡ್ಡೆ ಒಂದು. ಇದಕ್ಕಾಗಿಯೇ ಅನೇಕ ಜನರು ತಮ್ಮ ಮನೆಗಳಲ್ಲಿ ಆಲೂಗಡ್ಡೆಯನ್ನು ಹೆಚ್ಚಾಗಿ ಖರೀದಿ ಮಾಡಿ ಇಡುತ್ತಾರೆ. ನೀವು ಈ ರೀತಿ ಬಹಳಷ್ಟು ಆಲೂಗಡ್ಡೆಗಳನ್ನು ಖರೀದಿಸಿ ಸಂಗ್ರಹಿಸಿದಾಗ, ಕೆಲವೊಮ್ಮೆ ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ.

ಅಲ್ಲದೆ ಕೆಲವರು ಹಸಿ ಆಲೂಗಡ್ಡೆಯನ್ನು ಖರೀದಿಸುವಾಗ ಮೊಳಕೆ ಬಂದ ಆಲೂಗಡ್ಡೆಯನ್ನೇ ಆರಿಸಿ ಖರೀದಿಸಿರಬಹುದು. ಹಾಗಾದರೆ ಮೊಳಕೆಯೊಡೆದ ಆಲೂಗಡ್ಡೆ ತಿನ್ನಬಹುದೇ ಎಂದು ಅನೇಕ ಜನರು ಪ್ರಶ್ನೆಯಾಗಿದೆ. ಆದರೆ ಪೌಷ್ಟಿಕಾಂಶ ತಜ್ಞರ ಪ್ರಕಾರ ಮೊಳಕೆಯೊಡೆದ ಆಲೂಗಡ್ಡೆ ವಿಷಕಾರಿಯಾಗಿದ್ದು, ಇದರಿಂದ ತಯಾರಿಸಿ ಆಹಾರ ಕೂಡ ವಿಷಕಾರಿಯಾಗಬಹುದು. ಇದು ಕೆಲವೊಮ್ಮೆ ಜೀವಕ್ಕೆ ಅಪಾಯವನ್ನುಂಟುಮಾಡಬಹುದು.

Is it healthy to eat green or sprouted potatoes

ಮೊಳಕೆಯೊಡೆದ ಆಲೂಗಡ್ಡೆ ಏಕೆ ಅಪಾಯಕಾರಿ?

ಆಲೂಗಡ್ಡೆಯಲ್ಲಿ ಕಂಡುಬರುವ ಎರಡು ಗ್ಲೈಕೋಲ್ಕಲಾಯ್ಡ್ಸ್ ಅಂಶಗಳೆಂದರೆ ಸೋಲನೈನ್ ಮತ್ತು ಚಾಕೋನೈನ್. ಇವು ಟೊಮೆಟೊ ಮತ್ತು ಬಿಳಿಬದನೆಗಳಲ್ಲಿಯೂ ಕಂಡುಬರುತ್ತವೆ. ಇವನ್ನು ಮಿತವಾಗಿ ಸೇವಿಸಿದಾಗ ದೇಹಕ್ಕೆ ಕೆಲವು ಪ್ರಯೋಜನಗಳನ್ನು ಒದಗಿಸುತ್ತವೆ. ಆದರೆ ಅತಿಯಾಗಿ ಸೇವಿಸಿದಾಗ ಅದು ಆಹಾರವನ್ನು ವಿಷವಾಗಿ ಬದಲಾಯಿಸಬಹುದು. ಜೊತೆಗೆ ಜೀವಕ್ಕೆ ಅಪಾಯವನ್ನುಂಟುಮಾಡಬಹುದು.

ಆಲೂಗಡ್ಡೆಯ ಹಸಿರು ಬಣ್ಣವು ಕ್ಲೋರೊಫಿಲ್ ನಿಂದ ಬರುತ್ತದೆ. ಇದು ವಿಷಕಾರಿಯಲ್ಲ. ಆದರೆ ಇದು ಹೆಚ್ಚಿನ ಪ್ರಮಾಣದ ಗ್ಲೈಕೋಲ್ಕಲಾಯ್ಡ್ ಗಳನ್ನು ಹೊಂದಿರುತ್ತದೆ. ಅಲ್ಲದೆ ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸಿದಾಗ ಅವುಗಳಲ್ಲಿ ಗ್ಲೈಕೋಲ್ಕಲಾಯ್ಡ್ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಅಂತಹ ಆಲೂಗಡ್ಡೆಯನ್ನು ಸೇವಿಸಿದ ಕೆಲವು ಗಂಟೆಗಳಿಂದ ಒಂದು ದಿನದೊಳಗೆ ಕೆಲವು ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಸೋಲನೈನ್ ಕೂಡ ಒಂದು ವಿಷಕಾರಿ ವಸ್ತುವಾಗಿದೆ. ಇದು ವಾಕರಿಕೆ, ವಾಂತಿ, ಅತಿಸಾರ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಸೋಲನೈನ್ ಭರಿತ ಆಹಾರವನ್ನು ಹೆಚ್ಚು ಸೇವಿಸಿದಾಗ ಅದರಲ್ಲಿ ಈ ಕೆಳಗಿನ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ.

ತೀವ್ರ ಜ್ವರ

ಗೊಂದಲ

ಕಡಿಮೆ ರಕ್ತದೊತ್ತಡ

ತ್ವರಿತ ಹೃದಯ ಬಡಿತ

ತಲೆನೋವು

ಸಾವು (ಅಪರೂಪ)

ಮೊಳಕೆಯೊಡೆದ ಆಲೂಗಡ್ಡೆಯ ವಿಷತ್ವವನ್ನು ಕಡಿಮೆ ಮಾಡುವುದು ಹೇಗೆ?

ಮೊಳಕೆಯೊಡೆದ ಆಲೂಗಡ್ಡೆಯ ವಿಷತ್ವವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅವುಗಳನ್ನು ಎಸೆಯುವುದು. ಆಲೂಗಡ್ಡೆಯ ಒಂದು ಭಾಗ ಮಾತ್ರ ಹಸಿರು ಬಣ್ಣವನ್ನು ಹೊಂದಿದ್ದರೆ, ನೀವು ಆ ಭಾಗವನ್ನು ತೆಗೆದು ಉಳಿದ ಭಾಗವನ್ನು ಅಡುಗೆಗೆ ಬಳಸಬಹುದು.

ಮತ್ತೊಂದು ವಿಚಾರ ಅಂದರೆ ಮೊಳಕೆ ಬಂದ ಆಲುಗಡ್ಡೆಯನ್ನು ಬೇಯಿಸುವುದರಿಂದ ಅದರಲ್ಲಿ ಇರುವ ವಿಷಕಾರಿ ಅಂಶಗಳು ನಾಶವಾಗುವುದಿಲ್ಲವಾದ್ದರಿಂದ ಅದನ್ನು ಸೇವಿಸುವುದಕ್ಕಿಂತ ಎಸೆಯುವುದು ತುಂಬಾ ಒಳ್ಳೆಯದು. ಆಲೂಗಡ್ಡೆ ಖರೀದಿಸುವಾಗ ಅವು ಹಸಿರು ಭಾಗಗಳಿಂದ ಮುಕ್ತವಾಗಿವೆ ಎಂದು ಗಮನಿಸಿ ಖರೀದಿ ಮಾಡಿ.

ಮೊಳಕೆಯೊಡೆಯದಂತೆ ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸುವುದು?

ಬಹುತೇಕ ಜನ ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸುತ್ತಾರೆ. ಆದರೆ ನೀವು ಅದನ್ನು ಸರಿಯಾಗಿ ಸಂಗ್ರಹಿಸಿದಾಗ ಮಾತ್ರ ಆಲೂಗಡ್ಡೆ ಹಾಳಾಗುವುದನ್ನು ತಡೆಯಬಹುದು. ಹಾಗಾದರೆ ಆಲುಗಡ್ಡೆ ಮೊಳಕೆ ಬಾರದಂತೆ ಸಂಗ್ರಹಿಸುವುದು ಹೇಗೆ? ಇಲ್ಲಿದೆ ನೋಡಿ ವಿಧಾನ..

* ಆಲೂಗಡ್ಡೆ ಬೇಗನೆ ಹಾಳಾಗದಂತೆ ತಡೆಯಲು ತಂಪಾದ ಮತ್ತು ಕತ್ತಲೆಯ ಸ್ಥಳದಲ್ಲಿ ಇಡಬೇಕು.

* ಈರುಳ್ಳಿಯ ಬಳಿ ಆಲೂಗಡ್ಡೆ ಇಡುವುದನ್ನು ತಪ್ಪಿಸುವುದು ಮುಖ್ಯ. ಏಕೆಂದರೆ ನೀವು ಆಲೂಗಡ್ಡೆಯನ್ನು ಈರುಳ್ಳಿಯ ಬಳಿ ಇಟ್ಟರೆ, ಈರುಳ್ಳಿಯಿಂದ ಬಿಡುಗಡೆಯಾಗುವ ಅನಿಲವು ಆಲೂಗಡ್ಡೆ ಬೇಗನೆ ಮೊಳಕೆಯೊಡೆಯಲು ಕಾರಣವಾಗುತ್ತದೆ.

* ಆಲೂಗಡ್ಡೆಯನ್ನು ಬಿಸಿ ಸ್ಥಳಗಳಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ.

* ಆಲೂಗಡ್ಡೆಯನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಏಕೆಂದರೆ ಸೂರ್ಯನ ಬೆಳಕು ಆಲೂಗಡ್ಡೆಗೆ ಬಿದ್ದಾಗ ಹೆಚ್ಚು ಸೋಲನೈನ್ ಉತ್ಪತ್ತಿಯಾಗುತ್ತದೆ.

* ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಸಹ ನೀವು ತಪ್ಪಿಸಬೇಕು. ಏಕೆಂದರೆ ಅದನ್ನು ತುಂಬಾ ತಣ್ಣನೆಯ ಸ್ಥಳದಲ್ಲಿ ಇರಿಸಿದಾಗ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಪರಿಣಾಮವಾಗಿ ಆಲೂಗಡ್ಡೆ ಬೇಯಿಸಿದಾಗ ಸಿಹಿಯಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+