PCOD, ಥೈರಾಯ್ಡ್ ಸಮಸ್ಯೆ ಇರೋರು ಮಧ್ಯಾಹ್ನ ನಿದ್ದೆ ಮಾಡುವುದು ಸರಿನಾ..? ತಪ್ಪಾ..?
ನಿದ್ದೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಆರೋಗ್ಯವಂತ ಜೀವನಕ್ಕೆ ನಿದ್ದೆ ಅತಿ ಮುಖ್ಯ. ಇಡೀ ದಿನ ಕೆಲಸ ಮಾಡಿ ದಣಿಯುವ ನಮ್ಮ ಮೆದುಳಿನ ಜೀವಕೋಶಗಳು ನಿದ್ದೆಯಿಂದ ವಿಶ್ರಾಂತಿ ಪಡೆಯುತ್ತವೆ. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಸಮತೋಲನವಾಗಿರುತ್ತದೆ. ನಮ್ಮ ಮಾನಸಿಕ ಆರೋಗ್ಯ ಉತ್ತಮವಾಗಿರಲು ಪ್ರತಿನಿತ್ಯ 8 ಗಂಟೆಗಳ ನಿದ್ದೆ ಬಹಳ ಅತ್ಯವಶ್ಯಕ.
ಪ್ರತಿನಿತ್ಯ ನಿಯಮಿತ ನಿದ್ದೆ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೈಹಿಕವಾಗಿಯೂ ಆರೋಗ್ಯವಂತರನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಆರೋಗ್ಯಕರ ಹೃದಯ, ರಕ್ತದಲ್ಲಿನ ಸಕ್ಕರೆ ಕಂಟ್ರೋಲ್ ಹಾಗೂ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಪ್ರತಿ ದಿನ ಏಳರಿಂದ ಎಂಟು ಗಂಟೆಗಳ ಅವಧಿ ನಿದ್ದೆ ಮಾಡಬೇಕು. ರಾತ್ರಿ ನಿರ್ದಿಷ್ಟ ಪ್ರಮಾಣದ ನಿದ್ದೆ ಮಾಡುವುದು ಉತ್ತಮ. ಆದರೆ ಕೆಲವರು ಮಧ್ಯಾಹ್ನ ಸಹ ನಿದ್ರಿಸುತ್ತಾರೆ.

ಮಧ್ಯಾಹ್ನನ ನಿದ್ರೆ ಮಾಡುವವರು ಸೋಂಬೇರಿಗಳು, ದೇಹದಲ್ಲಿ ಜಡತ್ವ ಬರುತ್ತದೆ, ಇದೊಂದು ಸಮಯ ವ್ಯರ್ಥದ ನಿದ್ದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ ನೆನಪಡಿಸಿ ಮಧ್ಯಾಹ್ನದ ನಿದ್ದೆ ಕೂಡ ಆರೋಗ್ಯಕ್ಕೆ ಉತ್ತಮ. ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನ ಅಧ್ಯಯನದ ಪ್ರಕಾರ, ಸುಮಾರು 33 ಪ್ರತಿಶತ ಹದಿಹರೆಯದವರು ನಿಯಮಿತವಾಗಿ ಮಧ್ಯಾಹ್ನದ ನಂತರ ನಿದ್ರೆ ಮಾಡುತ್ತಾರೆ. ಹಾಗೂ ಮಧ್ಯಾಹ್ನದ ನಿದ್ರೆಯು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಮಧ್ಯಾಹ್ನ ಊಟ ಮುಗಿಸಿ ಕೆಲವರು ಒಂದು ಗಂಟೆಯಿಂದ ಸಂಜೆ ನಾಲ್ಕರ ಸಮಯದೊಳಗೆ ಮಲಗುತ್ತಾರೆ. ಮಧ್ಯಾಹ್ನ ಊಟದ ಬಳಿಕ ದೇಹದ ಉಷ್ಣತೆಯು ಸ್ವಲ್ಪ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ಜಡತ್ವ ಮೂಡುತ್ತದೆ. ಈ ಸಮಯದಲ್ಲಿ ಸ್ವಲ್ಪ ನಿದ್ರೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.
ಮಧ್ಯಾಹ್ನ ಅಥವಾ ರಾತ್ರಿಯ ನಿದ್ರೆಗಳು ದೇಹದಲ್ಲಿ ಸ್ನಾಯುವಿನ ವಿಶ್ರಾಂತಿಯನ್ನು ಸುಧಾರಿಸುತ್ತದೆ. ಇದರಿಂದ ಸ್ನಾಯು ಸೆಳೆಯದಂತಹ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತೆ. ಮಧ್ಯಾಹ್ನದ ನಿದ್ದೆ ಕೂಡ ಅಧಿಕ ಬಿಪಿಯನ್ನು ನಿಯಂತ್ರಿಸುತ್ತದೆ. ಜೊತೆಗೆ ಬೆಳ್ಳಗಿನಿಂದ ಉಂಟಾದ ಒತ್ತಡವನ್ನು ಕಡಿಮೆ ಮಾಡಿ. ನಿದ್ದೆಯ ನಂತರ ಹೊಸ ರಿಲ್ಯಾಕ್ಸ್‌ಅನ್ನು ನೀಡುತ್ತದೆ.

ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಪಿಸಿಒಡಿ ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಮಧ್ಯಾಹ್ನದ ನಿದ್ದೆ ಪರಿಹಾರವಾಗಿದೆ. ಪಿಸಿಒಡಿ ಹಾಗೂ ಥೈರಾಯ್ಡ್ ಸಮಸ್ಯೆ ನಿವಾರಣೆಯಾದರೆ ಲೈಂಗಿಕ ಸಮಸ್ಯೆ ಕೂಡ ದೂರವಾಗುತ್ತದೆ. ಇನ್ನು ಮಧುಮೇಹ ಇರುವವರಿಗೆ ಮಧ್ಯಾಹ್ನನದ ನಿದ್ದೆ ಅತ್ಯವಶ್ಯಕ. ಅಲ್ಲದೇ ಮಧ್ಯಾಹ್ನನದ ನಿದ್ದೆಯು ನಿಮ್ಮಲಿನ ಆತಂಕವನ್ನು ಕಡಿಮೆ ಮಾಡುವುದರ ಜೊತೆಗೆ ಜೀವನೋತ್ಸವವನ್ನು ಹೆಚ್ಚಿಸುತ್ತದೆ.
(ಈ ಮೇಲಿನ ಮಾಹಿತಿಯು ಅಂತರ್ಜಲದಲ್ಲಿ ನೀಡಿದ ಮಾಹಿತಿ ಅನುಸಾರ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications