ಶೇ.33 ರಷ್ಟು ದಂಪತಿಗಳಿಗೆ ಗರ್ಭಧಾರಣೆಯ ನಷ್ಟ..! ಕಾರಣವೇನು?
ಬೆಂಗಳೂರು, ಮೇ 02: ಕರ್ನಾಟಕದ ಬೆಂಗಳೂರು ಸೇರಿದಂತೆ ಭಾರತಾದ್ಯಂತ ದಂಪತಿಗಳು ಹೆಚ್ಚಿನ ಪ್ರಮಾಣದಲ್ಲಿ ಗರ್ಭಧಾರಣೆಯ ನಷ್ಟ (Pregnancy Loss) ಅನುಭವಿಸುತ್ತಿದ್ದಾರೆ. ಈ ಸಂಬಂಧ 'ರೆಡ್‌ಕ್ಲಿಫ್' (Redcliffe) ಅಧ್ಯಯನ ವರದಿ ಮಾಹಿತಿ ನೀಡಿದೆ. ಇದಕ್ಕೆ ಇತ್ತೀಚಿನ ಆಹಾರ ಪದ್ಧತಿ, ಜೀವನ ಶೈಲಿ ಸೇರಿದಂತೆ ಪ್ರಮುಖ ಕಾರಣವೊಂದನ್ನು ವಿವರಿಸಲಾಗಿದೆ.
ದಂಪತಿಗಳಲ್ಲಿ ಗರ್ಭಧಾರಣೆಯ ನಷ್ಟ ಮತ್ತು ಪ್ರಾಥಮಿಕ ಬಂಜೆತನ ಪುನರಾವರ್ತಿತವಾಗುತ್ತಿದೆ. ಈ ಪ್ರಮಾಣ ಶೇಕಡಾ 33ರಷ್ಟಿದೆ. ಇದಕ್ಕೆ ದಂಪತಿಗಳು ಹೆಚ್ಚಾಗಿ ಎದುರಿಸುತ್ತಿರುವ ಕ್ರೋಮೋಸೋಮ್ ಪಾಲಿಮಾರ್ಫಿಸಂಸ್ (ಸಿಪಿಎಂ) ಪ್ರಾಬಲ್ಯವೇ ಇಲ್ಲವೇ ಹರಡುವಿಕೆ ಕಾರಣ ಎಂದು 'ರೆಡ್‌ಕ್ಲಿಫ್' ಲ್ಯಾಬ್ ಅಧ್ಯಯನವು ಹೇಳಿದೆ ಎಂದು TNIE ವರದಿ ಮಾಡಿದೆ.

700 ದಂಪತಿಗಳ ಅಧ್ಯಯನ
ಗರ್ಭಧಾರಣೆಯ ನಷ್ಟ ಮತ್ತು ಪ್ರಾಥಮಿಕ ಬಂಜೆತನ ಪನರವರ್ತನೆ ಆಗುತ್ತಿರುವುದಕ್ಕೆ 'ರೆಡ್‌ಕ್ಲಿಫ್' ಬೆಂಗಳೂರು ಒಳಗೊಂಡಂತೆ ದೇಶಾದ್ಯಂತ ಪುನರಾವರ್ತಿತ ಗರ್ಭಧಾರಣೆಯ ನಷ್ಟ ಅನುಭವಿಸಿದ ಸುಮಾರು 700 ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ವಿಶ್ಲೇಷಿಸಿದೆ.
ಕ್ರೋಮೋಸೋಮಲ್ ಪಾಲಿಮಾರ್ಫಿಸಂ (CPM) ಕ್ರೋಮೋಸೋಮ್‌ನ ಶಾರ್ಟ್ ಆರ್ಮ್ ಹಾಗೂ ನ್ಯೂಕ್ಲಿಯೊಲಾರ್ ಆರ್ಗನೈಸಿಂಗ್ (NOR) ಪ್ರದೇಶದಲ್ಲಿನ ವ್ಯತ್ಯಾಸಗಳಿಂದ ದಂಪತಿಗಳು ಮೇಲಿಂದ ಮೇಲೆ ಗರ್ಭಧಾರಣೆಯ ನಷ್ಟ ಎದುರಿಸುವ ಸಾಧ್ಯತೆಗಳು ಇವೆ ಎಂದು ಪ್ಯಾನ್-ಇಂಡಿಯಾ ಡಯಾಗ್ನೋಸ್ಟಿಕ್ಸ್ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಮತ್ತು ರೆಡ್‌ಕ್ಲಿಫ್ ಲ್ಯಾಬ್ಸ್ ಸೈಟೊಜೆನೆಟಿಕ್ಸ್ ಮುಖ್ಯಸ್ಥ ಡಾ. ಆಶಿಶ್ ಫೌಜ್ದಾರ್ ಅಧ್ಯಯನದ ಅಂಶಗಳನ್ನು ತಿಳಿಸಿದ್ದಾರೆ.
ಐವರ ತಜ್ಞರು ತಂಡದಿಂದ ಸಂಶೋಧನೆ
ಐವರ ತಜ್ಞರು ತಂಡದಿಂದ ನಡೆದ ಈ ಅಧ್ಯಯನ ನಡೆದಿದೆ. ಸಾಮಾನ್ಯ ರೂಪವಾಗಿರುವ ಈ ಕ್ರೋಮೋಸೋಮ್ ಪಾಲಿಮಾರ್ಫಿಸಂಗಳು ಹೆಚ್ಚಾಗಿ ಗರ್ಭಧಾರಣೆಯ ನಷ್ಟಗಳು ಪುನರಾವರ್ತನೆಗೆ ಆಗಲು ಪ್ರಮುಖ ಕಾರಣವಾಗಿದೆ ಅಧ್ಯಯನ ತಂಡದ ಡಾ.ಫೌಜ್ದರ್ ಹೇಳಿದರು.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ದಂಪತಿಗಳು ಇಂತಹ ಪ್ರಾಥಮಿಕ ಬಂಜೆತನ ಎದುರಿಸುವ ಸಂಕಷ್ಟ ಸಾಕಷ್ಟು ಪ್ರಮಾಣದಲ್ಲಿದೆ. ಪುನರಾವರ್ತಿತ ಗರ್ಭಧಾರಣೆ ನಷ್ಟ ಅನುಭವಿಸಿದವರ ಪೈಕಿ ಶೇಕಡಾ 7.4ರಷ್ಟು ಹೆಚ್ಚಿನವುಗಳಿಗೆ ಯಾವುದೇ ನಿರ್ಣಾಯಕ ಕಾರಣಗಳು ಇಲ್ಲ ಎಂದರು.
ವೈದ್ಯಕೀಯವಾಗಿ ದಂಪತಿಗೆ ನೆರವು
ಮಹಿಳೆ ಗರ್ಭಾವಸ್ಥೆಯಲ್ಲಿ ಸಿಪಿಎಂ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ನಮ್ಮ ಅಧ್ಯಯನ ಇಂತಹ ದಂಪತಿಗಳಿಗೆ (ರೋಗಿಗಳಿಗೆ) ಸಲಹೆ ನೀಡಲು ವೈಧ್ಯರಿಗೆ ಸಹಾಯಕ್ಕೆ ಬರಬಹುದು. ಅಲ್ಲಲೇ ಗರ್ಭಧಾರಣೆಯ ನಷ್ಟ ಎದುರಿಸಿದ ದಂಪತಿಗಳು ಮತ್ತೆ ಭವಿಷ್ಯದ ಗರ್ಭಧಾರಣೆಯನ್ನು ಯೋಜಿಸಿದರೆ, ಅಂತವರಿಗೆ ಈ ಸಂಶೋಧನೆಯು ಸೂಕ್ತ ತಜ್ಞ ವೈದ್ಯರನ್ನ ಸಂಪರ್ಕಿಸುವ, ಚಿಕಿತ್ಸೆ, ಮಾರ್ಗದರ್ಶನ ಪಡೆಯಲು ಸಹಾಯವಾಗುತ್ತದೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.












Click it and Unblock the Notifications