Depression: ನಿರಾಸೆಯಿಂದ ಹೊರಬರಲು ನಮ್ಮಲ್ಲೇ ಇದೆ ಪ್ರಬಲ ಅಸ್ತ್ರ: ಏನದು?
ನಮ್ಮೆಲ್ಲರ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ನಿರಾಸಭಾವ ಕಾಡಿರುತ್ತದೆ. ಆದರೆ ಕೆಲವರು ಅದರಿಂದ ಬಹುಬೇಗ ಹೊರಗೆ ಬಂದಿದ್ದರೆ, ಮತ್ತೆ ಕೆಲವರು ನಿರಾಸಭಾವರಾಗಿ ಕುಗ್ಗಿ ಹೋಗಿ ಬದುಕನ್ನೇ ಕಳೆದುಕೊಂಡು ಬಿಡುತ್ತಾರೆ. ಇದು ಆಗಬಾರದೆಂದಾದರೆ ನಾವು ಸದಾ ಆಶಾಭಾವನೆಯಿಂದ ಬದುಕುವುದನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ.
ಬದುಕಿನಲ್ಲಿ ಮೇಲಿಂದ ಮೇಲೆ ಬರುವ ಸೋಲು.. ಕಷ್ಟ ಕಾರ್ಪಣ್ಯಗಳು.. ಹಲವರ ಬದುಕನ್ನೇ ಮೂರಾಬಟ್ಟೆ ಮಾಡಿಬಿಡುತ್ತದೆ. ಈ ವೇಳೆ ಏನು ಮಾಡಿದರೂ ಯಶಸ್ಸು ಸಿಗುತ್ತಿಲ್ಲ. ಗೆಲುವಿಗಿಂತ ಹೆಚ್ಚಾಗಿ ಸೋಲೇ ಅಪ್ಪಿಕೊಳ್ಳುತ್ತಾ ಹೋದರೆ ಮುಂದೇನಾಪ್ಪಾ ಎಂಬ ಭಯ ಕಾಡುವುದಂತು ನಿಜ. ಜತೆಗೆ ಏನು ಮಾಡಿದರೂ ಕೈಗೂಡುತ್ತಿಲ್ಲವಲ್ಲ ಎಂಬ ನಿರಾಸಭಾವ ಮನಸ್ಸನ್ನು ಆವರಿಸಿ ಬಿಡುತ್ತದೆ. ಆಗ ಬದುಕು ಸಾಕು ಎಂಬ ತೀರ್ಮಾನಕ್ಕೂ ಬಂದು ಬಿಡುತ್ತೇವೆ.

ನಿಜವಾಗಿ ಹೇಳಬೇಕೆಂದರೆ, ಒಮ್ಮೆ ನಮ್ಮನ್ನು ನಿರಾಸೆ ಕಾಡಿತೆಂದರೆ ಮತ್ತೆ ನಾವು ಮೇಲೇಳುವುದು ಕಷ್ಟ ಸಾಧ್ಯ. ಬಹಳಷ್ಟು ಮಂದಿಯ ಬದುಕಿನ ಇತಿಶ್ರೀಗೂ ನಿರಾಸೆ ಕಾರಣವಾಗಿ ಬಿಡುತ್ತದೆ. ಬದುಕಿನಲ್ಲಿ ನಿರಾಸೆ ಇಣುಕಿತೆಂದರೆ ಏನೇನು ಮಾಡಲು ಸಾಧ್ಯವಾಗುವುದಿಲ್ಲ. ಒಂದೊಂದು ಕ್ಷಣವೂ ನರಕವಾಗಿ ಪರಿಣಮಿಸುತ್ತದೆ. ಮುಂದೆ ನಡೆಯಲು ಮಾರ್ಗ ಇಲ್ಲವೇನೋ ಎಂಬ ಭಾವ ಕಾಡುತ್ತದೆ.
ನಿರಾಸೆ ಕಾಡಲು ಅಜ್ಞಾನವೇ ಕಾರಣವಂತೆ
ಹಾಗಾದರೆ ನಿರಾಸೆಗೆ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕರು ಅಜ್ಞಾನವೇ ಕಾರಣ ಎಂಬ ಉತ್ತರವನ್ನು ನೀಡುತ್ತಾರೆ. ಅಷ್ಟೇ ಅಲ್ಲ. ನಮ್ಮಲ್ಲಿರುವ ಅಪಾರವಾದ ಪ್ರತಿಭೆ, ಸೃಜನಶೀಲತೆ ಇವುಗಳನ್ನು ಗುರುತಿಸಿಕೊಳ್ಳದಿರುವುದು ನಿರಾಸೆಗೆ ಕಾರಣವಾಗಿ ಬಿಡುತ್ತದೆ. ನಮ್ಮನ್ನು ಅನಾರೋಗ್ಯ ಕಾಡಬಹುದು. ಅದು ಭಯಂಕರ ರೋಗವೂ ಆಗಿರಬಹುದು. ರೋಗ ಬಂದಿದೆ ಎಂದ ತಕ್ಷಣ ಜೀವನದಲ್ಲೇನಿದೆ? ನಾನು ಸಾಯುವುದು ಖಂಡಿತಾ ಎಂಬ ನಿರಾಸೆ ನಮ್ಮನ್ನು ಕಾಡಿದರೆ ಬಹಳಷ್ಟು ಬೇಗನೇ ಆರೋಗ್ಯ ಹದಗೆಟ್ಟು ಸಾವಿಗೆ ಶರಣಾಗಿ ಬಿಡುತ್ತೇವೆ.
ಇದರ ಬದಲಿಗೆ ಆ ಬಗ್ಗೆ ಯೋಚಿಸದೆ ನಗು ನಗುತ್ತಾ ಇರಬೇಕು. ಏಕೆಂದರೆ ಆರೋಗ್ಯ ಹದಗೆಟ್ಟಿದ್ದರೂ ಜೀವನದಲ್ಲಿ ನಗು ನಗುತ್ತಾ ಬದುಕುತ್ತಿರುವವರು ಇದ್ದಾರೆ ಎಂಬುದನ್ನು ನಾವು ಮರೆಯಬಾರದು. ಬದುಕೆಂದ ಮೇಲೆ ಕಷ್ಟಗಳು ಬರುತ್ತವೆ. ನೋವುಗಳಿರುತ್ತವೆ. ಆತಂಕ, ತಂಟೆ, ತಕರಾರು, ಸಮಸ್ಯೆ ಎಲ್ಲವೂ ಇದ್ದೇ ಇರುತ್ತದೆ. ಆದರೆ ಅದನ್ನೇ ಯೋಚಿಸುತ್ತಾ ನರಳಾಡಿದರೆ ಯಾವುದೇ ಪರಿಹಾರ ಸಿಗದು.
ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇದೆ
ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಬೆಳಕಿನ ದಾರಿ ಇದ್ದೇ ಇದೆ. ಬುದ್ದಿವಂತರು ತಮ್ಮ ಬುದ್ದಿವಂತಿಕೆಯನ್ನು ಬಳಸಿಕೊಂಡು ಬೆಳಕಿನ ದಾರಿ ಹಿಡಿಯುತ್ತಾರೆ, ಮುನ್ನಡೆಯುತ್ತಾರೆ, ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ. ಬುದ್ದಿವಂತನಾದವನು, ವಿವೇಕಿಯಾದವನು, ಚತುರನಾದವನು, ಕ್ರಿಯಾಶೀಲನಾದವನು, ಜ್ಞಾನಿಯಾದವನು ಒಂದು ಸಮಸ್ಯೆಗೆ ನೂರಾರು ಪರಿಹಾರದ ದಾರಿಗಳನ್ನು ಕಂಡು ಹಿಡಿಯುತ್ತಾನೆ. ಆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುತ್ತಾನೆ.

ಜೀವನದಲ್ಲಿ ಆಶಾಭಾವನೆ ಬೇಕು. ಏಕೆಂದರೆ ಬದುಕಿನಲ್ಲಿ ಆಶಾಕಿರಣಗಳ ಹೊಂಬಿಸಿಲು ತುಂಬಿರಬೇಕು. ನಿರಾಶವಾದಿಯಾಗಬಾರದು. ಆಶಾಭಾವನೆಯೇ ಜೀವನ, ನಿರಾಸಭಾವನೆಯೇ ಮರಣ ಎಂದರೆ ತಪ್ಪಾಗಲಾರದು. ಏನೇ ಬಂದರೂ ಹೆಜ್ಜೆ ಮುಂದಿಡುತ್ತೇನೆ. ಸೋಲನ್ನು ಗೆಲ್ಲುತ್ತೇನೆ. ಸೋಲು ಗೆಲುವಿಗೆ ಪ್ರೇರಣೆಯಾಗುತ್ತದೆ. ಸೋಲಿಗೆ ಕಾರಣವನ್ನು ಅವಲೋಕಿಸಿ ಗೆಲುವಿನ ಗುರಿಯನ್ನು ತಲುಪುತ್ತೇನೆ. 'ಸಾಧಿಸಿದರೆ ಸಿದ್ದಿ' ಎಂಬ ಗೆಲುವನ್ನು ಪಡೆದೇ ತೀರುತ್ತೇನೆ ಎಂಬ ಆತ್ಮವಿಶ್ವಾಸದಿಂದ ಬದುಕನ್ನು ಸವಾಲಾಗಿ ಸ್ವೀಕರಿಸಿದರೆ ನಿರಾಸೆಗೆ ಸ್ಥಳವಿಲ್ಲದೆ ಅದು ಪಲಾಯನಗೈಯ್ಯುತ್ತದೆ.
ನಿರಂತರ ಕ್ರಿಯಾಶೀಲರಾಗಿರುವುದು ಅಗತ್ಯ
ಯಾವ ರೀತಿಯ ವ್ಯಕ್ತಿತ್ವವುಳ್ಳವರು ನಿರಾಸೆಗೆ ಶರಣಾಗುವುದಿಲ್ಲ ಎಂಬುವುದನ್ನು ಆಧ್ಯಾತ್ಮಿಕ ಚಿಂತಕರು ಹೀಗೆಯೇ ವಿವರಿಸಿದ್ದಾರೆ. ಸಮಯ ಪರಿಪಾಲನೆ ಮಾಡುವವರಿಗೆ ನಿರಾಸೆಗೆ ಅವಕಾಶವಿಲ್ಲ. ಸಮಸ್ಯೆಗಳು ವಕ್ಕರಿಸಿದರೂ ಸಮಯ ಪರಿಪಾಲನಾಶೀಲವುಳ್ಳವರು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಸಮಯ ನಿಯೋಜನೆಯ ಗುಣಶೀಲನು ಉನ್ನತ ಮನೋಬಲವುಳ್ಳವನಾಗಿರುತ್ತಾನೆ. ಸಮಯಶೀಲನಿಗೆ ಜೀವನದಲ್ಲಿ ಆತ್ಮವಿಶ್ವಾಸದ ಭರವಸೆಯಿರುತ್ತದೆ.
ಆಶಾಭಾವನೆಯು ರೂಪುಗೊಳ್ಳಲು ಸಮಯಪ್ರಜ್ಞೆ ಮುಖ್ಯವಾಗಿದ್ದು, ಸಮಯ ಪರಿಪಾಲನೆ, ಸದುಪಯೋಗ ಕಾಪಾಡುತ್ತದೆ. ಸಮಯ ಪ್ರಜ್ಞೆಯು ಆಶಾಜ್ಯೋತಿಯನ್ನು ಬೆಳಗಿಸುತ್ತದೆ. ಸೋಮಾರಿಯಾಗಿರದೆ ನಿರಂತರ ಕ್ರಿಯಾಶೀಲ ಚಟುವಟಿಕೆಯಿಂದ ಆಸಕ್ತಿಯಿಂದ ಎಲ್ಲರೊಂದಿಗೆ ಬೆರೆಯುವವರು ನಿರಾಸೆಗೆ ಬಲಿಯಾಗುವುದಿಲ್ಲ. ನೆನಪಿರಲಿ ನಮ್ಮ ದೈಹಿಕ ಶಕ್ತಿಯನ್ನು ಮನೋಬಲದೊಂದಿಗೆ ಬಳಸಿಕೊಂಡರೆ ಸೋಲು ಖಂಡಿತಾ ಬರಲಾರದು. ಸೋಲೇ ಇಲ್ಲ ಎಂದ ಮೇಲೆ ನಿರಾಸೆ ತಾನೆ ಹೇಗೆ ಕಾಡುತ್ತದೆ ಅಲ್ವಾ?.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications