Chutney Pudi Recipe: ಊಟಕ್ಕೆ ಉಪ್ಪಿನಕಾಯಿಯಂತೆ ಉತ್ತರ ಕರ್ನಾಟಕದ ಹಿಂಡಿ: ತಯಾರಿಸುವುದು ಹೀಗೆ..... ಎರಡೇ ನಿಮಿಷ ಸಾಕು...
ಊಟಕ್ಕೆ ಉಪ್ಪಿನಕಾಯಿಯಂತೆ ಉತ್ತರ ಕರ್ನಾಟಕದಲ್ಲಿ ಹಿಂಡಿ ತುಂಬಾನೇ ಫೇಮಸ್. ಇದನ್ನು ಚಟ್ನಿ ಪುಟಿ, ಪುಡಿ ಚಟ್ನಿ, ಪುಡಿ ಅಂತಲೂ ಕರೆಯಲಾಗುತ್ತದೆ. ಇದನ್ನು ಪುಟಾಣಿ (ಹುರಿಗಡಲೆ), ಶೆಂಗಾ, ಗೂರೆಳ್ಳುವಿನಿಂದ ತಯಾರಿಸಲಾಗುತ್ತದೆ. ಇದು ಬಿಸಿ ಬಿಸಿ ಅನ್ನ, ರೊಟ್ಟಿ ಜೊತೆಗೆ ಸಖತ್ ರುಚಿಯಾಗಿರುತ್ತದೆ..
ಚೂರು ಮೊಸರು, ಅಥವಾ ಶೆಂಗಾ ಎಣ್ಣೆ ಇದ್ದಬಿಟ್ಟರೆ ಇದರಷ್ಟು ರುಚಿಯಾದ ಊಟ ಬೇರೆಲ್ಲೂ ನೀವು ತಿಂದಿರಲಾರಿರಿ. ಆಧುನಿಕ ಯುಗದ ಫಾಸ್ಟ್ ಫುಡ್‌ಗಳಾದ ಮ್ಯಾಗಿ ನ್ಯೂಡಲ್ಸ್, ಪಿಸ್ತಾಗಿಂತ ಈ ಹಿಂಡಿ ತಯಾರಿಸುವುದು ತುಂಬಾ ಸುಲಭ ಹಾಗೂ ರುಚಿಯಾಗಿ ಆರೋಗ್ಯರಕವಾಗಿಯೂ ಇರುತ್ತದೆ.

ಹಾಗಾದರೆ ಉತ್ತರ ಕರ್ನಾಟಕ ಶೈಲಿಯ ಹಿಂಡಿ ತಯಾರಿಸುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳು ಯಾವವು? ಇದನ್ನು ಯಾವ ಖ್ಯಾದದಲ್ಲಿ ಬಳಕೆ ಮಾಡಬಹುದು ಎಂದು ತಿಳಿಯೋಣ. ಮನೆಯಲ್ಲಿ ತಯಾರಿಸಿ, ರುಚಿ ನೋಡಿ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಬೇಕಾಗುವ ಪದಾರ್ಥಗಳು:
* ಶೆಂಗಾ ಒಂದು ಕಪ್
* ಬಾಡಗಿ ಮೆಣಸಿನ ಕಾಯಿ 2 tblsn
* ಬೆಳ್ಳುಳ್ಳಿ 4 ಎಸಳು
* ಉಪ್ಪು ರುಚಿಗೆ ತಕ್ಕಷ್ಟು
* ಒಣ ಕರಿಬೇವು 2

ತಯಾರಿಸುವ ವಿಧಾನ:
* ಒಂದು ಹೆಂಚು ಒಲೆಯ ಮೇಲೆ ಇಡಿ. ಬಿಸಿಯಾದ ಬಳಿಕ ಶೆಂಗಾವನ್ನು ಹಾಕಿ ಹುರಿದುಕೊಳ್ಳಿ. ಇದನ್ನು ಪಂದು ಪಾತ್ರೆಗೆ ತೆಗೆದು ಇದರಲ್ಲಿ ಬ್ಯಾಡಗಿ ಮೆಣಸಿನಕಾಯಿ ಹಾಕಿ ಸ್ವಲ್ಪ ಮೆಚ್ಚಗಾಗಿಸಿ ತೆಗೆಯಿರಿ.
* ನಂತರ ಇದನ್ನು ತೆಗೆದು ಆರಲು ಬಿಡಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ (ಸಿಪ್ಪೆ ತೆಗೆಯದೇ ಬಳಸಬಹುದು)

* ಬಳಿಕ ಒಂದು ಮಿಕ್ಸಿ ಜಾರ್‌ಗೆ ಹುರಿದ ಶೆಂಗಾ, ಉಪ್ಪು, ಬೆಳ್ಳುಳ್ಳಿ (ಸಿಪ್ಪೆ ತೆಗೆಯದೇ ಹಾಕಬಹುದು), ಒಣ ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ.
* ಇದನ್ನು ಹೆಚ್ಚು ಪುಡಿ ಮಾಡಬೇಡಿ ತರಿ ತರಿಯಾಗಿದ್ದರೆ ಚೆನ್ನಾಗಿರುತ್ತದೆ.
ಇದೇ ರೀತಿ ಶೆಂಗಾ ಬದಲಿಗೆ ಪುಟಾಣಿ(ಹುರಿಗಡಲೆ), ಗೂರೆಳ್ಳು ಹುರಿದುಕೊಂಡು ಹಿಂಡಿ ತಯಾರಿಸಿಕೊಳ್ಳಬಹುದು. ಇದು ಬೇಗ ತಯಾರಾಗುತ್ತದೆ. ಜೊತೆಗೆ ಅನ್ನ, ಚಪಾತಿ, ರೊಟ್ಟಿ, ಪೂರಿ ಜೊತೆಗೆ ತುಂಬಾ ರುಚಿಯಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ಇದೇ ವಿಧಾನದಲ್ಲೇ ಶೆಂಗಾ ಬದಲಿಗೆ ಹಸಿ ಮೆಣಸಿನಕಾಯಿ ಎಣ್ಣೆಯಲ್ಲಿ ಹುರಿದುಕೊಂಡು ಹಸಿ ಮೆಣಸಿನಕಾಯಿ ಚಟ್ನಿ ಕೂಡ ತಯಾರಿಸಬಹುದು.












Click it and Unblock the Notifications