Get Updates
Get notified of breaking news, exclusive insights, and must-see stories!

ಕಿಡ್ನಿ ಸಮಸ್ಯೆಗೆ ತರಕಾರಿಯಿಂದ ಪೊಟ್ಯಾಸಿಯಂ ಪ್ರತ್ಯೇಕಿಸುವುದು ಹೇಗೆ?

ಇವತ್ತು ಮೂತ್ರಾಂಗ ಅರ್ಥಾತ್ ಕಿಡ್ನಿ ಸಮಸ್ಯೆಯಿಂದ ಬಳಲುವವರು ಚಿಕಿತ್ಸೆ ಜತೆಗೆ ತಾವು ಸೇವಿಸುವ ಆಹಾರದಲ್ಲಿ ಪಥ್ಯಾಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದು ಬಹಳಷ್ಟು ಮುಖ್ಯವಾಗಿದ್ದು, ತಾವು ಸೇವಿಸುವ ಆಹಾರವು ಪೊಟ್ಯಾಸಿಯಂ ಮುಕ್ತವಾಗಿರುವಂತೆ ನೋಡಿಕೊಳ್ಳುವುದು ಅಷ್ಟೇ ಒಳ್ಳೆಯದು. ಹಾಗಾದರೆ ಹಣ್ಣು ತರಕಾರಿಗಳಿಂದ ಪೊಟ್ಯಾಸಿಯಂನ್ನು ಪ್ರತ್ಯೇಕಿಸುವುದು ಹೇಗೆ ಎಂಬ ಪ್ರಶ್ನೆಯೂ ಮೂಡದಿರದು.

ಕಿಡ್ನಿ ಸಮಸ್ಯೆ ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣಗಳು ಹಲವಾರು ಇದ್ದು, ಮುಖ್ಯವಾಗಿ ಜೀವನಕ್ರಮವೇ ಇವತ್ತು ಹಲವು ಕಾಯಿಲೆಗಳಿಗೆ ಬಹುಬೇಗ ಆಹ್ವಾನ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಹದಲ್ಲಿ ರೋಗನಿರೋಧಕ ಶಕ್ತಿಯಿರುವ ವರೆಗೂ ನಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಬಗ್ಗೆ ನಮಗೆ ಗೊತ್ತೇ ಆಗುವುದಿಲ್ಲ. ಯಾವುದೋ ಮಾತ್ರೆ ಸೇವಿಸಿ ಅದನ್ನು ನಿಯಂತ್ರಿಸಿಕೊಳ್ಳುತ್ತಿರುತ್ತೇವೆ. ಆದರೆ ಹೀಗೆ ಸ್ವಯಂ ಮಾತ್ರೆ ಎಷ್ಟೊಂದು ಅನಾಹುತಕಾರಿ ಎನ್ನುವುದು ಕಿಡ್ನಿ ಸಮಸ್ಯೆಗಳು ಕಾಡಿದಾಗ ಗೊತ್ತಾಗುತ್ತದೆ.

Health Tips How To Isolate Potassium From Vegetables

ಅತಿಯಾದ ನೋವು ನಿವಾರಕ ಮಾತ್ರೆ ಸೇವನೆ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ಅನ್ಯ ಮಾರ್ಗವಿಲ್ಲದೆ ಸೇವಿಸಿ ನೋವುಗಳನ್ನು ನಿಯಂತ್ರಿಸುತ್ತಿರುತ್ತಾರೆ. ಆದರೆ ಸಮಸ್ಯೆ ಉಲ್ಭಣಗೊಂಡಾಗ ಅದರ ಪರಿಣಾಮಗಳು ಗೊತ್ತಾಗುತ್ತವೆ. ಈ ವೇಳೆ ಆಸ್ಪತ್ರೆಗೆ ಹೋಗುತ್ತೇವೆ. ಪರೀಕ್ಷೆ ವೇಳೆ ನಮ್ಮ ದೇಹದಲ್ಲಿರುವ ಕಾಯಿಲೆಯ ಬಗ್ಗೆ ಗೊತ್ತಾಗುತ್ತದೆ. ಆದ್ದರಿಂದ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದನ್ನು ಬಿಟ್ಟು ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಂಡು ಬರುವುದರಿಂದ ಮುಂದೆ ಬರಲಿರುವ ದೊಡ್ಡ ಪ್ರಮಾಣದ ಸಮಸ್ಯೆಗೆ ಮೊದಲೇ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ಕಿಡ್ನಿ ಸಮಸ್ಯೆಗೆ ಪ್ರತ್ಯೇಕ ಆಹಾರ ಕ್ರಮ

ಇವತ್ತು ಕಿಡ್ನಿ ಸಮಸ್ಯೆಯಿಂದ ಬಳಲುವವರು ಮುಖ್ಯವಾಗಿ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಇದರಿಂದ ಕಾಯಿಲೆಯನ್ನು ಸಂಪೂರ್ಣ ವಾಸಿ ಮಾಡಲು ಸಾಧ್ಯವಾಗದಿದ್ದರೂ ನಿಯಂತ್ರಿಸಿಕೊಂಡು ಜೀವನ ಸಾಗಿಸಲು ಸಹಕಾರಿಯಾಗುತ್ತದೆ. ಪ್ರತಿಯೊಂದು ಕಾಯಿಲೆಗೂ ಆಹಾರಕ್ರಮಗಳಿದ್ದು ಅದರಂತೆ ಮುನ್ನಡೆದರೆ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರು ಹೇಳುವಂತೆ ಆಹಾರದಲ್ಲಿ ಪಥ್ಯಾಕ್ರಮ ಅಳವಡಿಸಿಕೊಳ್ಳುವುದು ಒಳ್ಳೆಯದು.

ಒಂದೊಂದು ಕಾಯಿಲೆಯ ಸ್ವರೂಪವೂ ವಿಭಿನ್ನವಾಗಿರುವುದರಿಂದ ಆಯಾಯ ಕಾಯಿಲೆಗೆ ಏನೇನು ಆಹಾರ ಪದಾರ್ಥಗಳನ್ನು ವರ್ಜಿಸಬೇಕೆಂಬುವುದನ್ನು ವೈದ್ಯರು ಸಲಹೆ ನೀಡುತ್ತಾರೋ ಅದನ್ನು ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ. ಅದರಲ್ಲೂ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ವೈದ್ಯಕೀಯ ಉಪಚಾರದೊಂದಿಗೆ ತಾವು ಸೇವಿಸುವ ಆಹಾರದಲ್ಲಿ ಒಂದಷ್ಟು ಕಟ್ಟುನಿಟ್ಟು ಪಾಲಿಸಿಕೊಂಡು ವೈದ್ಯರು ಹೇಳುವ ಆಹಾರಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಕಾಯಿಲೆಯನ್ನು ನಿಯಂತ್ರಿಸಿಕೊಂಡು ಬದುಕಲು ಸಾಧ್ಯವಾಗುತ್ತದೆ.

Health Tips How To Isolate Potassium From Vegetables

ಪೊಟ್ಯಾಸಿಯಂ ಪ್ರತ್ಯೇಕಿಸುವುದು ಹೇಗೆ?

ಸಾಮಾನ್ಯವಾಗಿ ವೈದ್ಯರು ಮೂತ್ರಾಂಗ ರೋಗಗಳಿಂದ ಬಳಲುವವರು ಪೊಟ್ಯಾಸಿಯಂಯುಕ್ತ ಆಹಾರವನ್ನು ಸೇವಿಸಬಾರದು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಆಹಾರವನ್ನು ಪೊಟ್ಯಾಸಿಯಂ ಮುಕ್ತವನ್ನಾಗಿ ಮಾಡುವುದು ಹೇಗೆ ಪ್ರಶ್ನೆ ಹಲವರನ್ನು ಕಾಡಬಹುದು. ಇದಕ್ಕೆ ಸುಲಭೋಪಾಯವಿದ್ದು, ಅದೇನೆಂದರೆ ತರಕಾರಿ ಅಥವಾ ಬೇಳೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಆ ನೀರನ್ನು ಬಗ್ಗಿಸಿ ತೆಗೆದು ಮತ್ತೆ ಬೇಯಿಸಿ ಉಪಯೋಗಿಸುವುದರಿಂದ ಪೊಟ್ಯಾಸಿಯಂನ್ನು ಪ್ರತ್ಯೇಕಿಸಬಹುದಾಗಿದೆ.

ನಾವು ನಿತ್ಯ ಉಪಯೋಗಿಸುವ ಆಹಾರಗಳಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವ ಪದಾರ್ಥಗಳ ದೊಡ್ಡ ಪಟ್ಟಿಯೇ ಇವೆ. ಅವುಗಳೆಂದರೆ ರಾಗಿ, ಗೋಧಿ, ಸಜ್ಜೆ ಹಿಟ್ಟು, ತರಕಾರಿಗಳಲ್ಲಿ ಬದನೆಕಾಯಿ, ನುಗ್ಗೆಕಾಯಿ, ಸುವರ್ಣಗೆಡ್ಡೆ, ಆಲೂಗೆಡ್ಡೆ, ಹಾಗಲಕಾಯಿ, ಹಣ್ಣುಗಳಲ್ಲಿ ನೆಲ್ಲಿಕಾಯಿ, ಸಪೋಟ, ಮೋಸಂಬಿ, ಕರಬೂಜ, ಪೀಚ್, ಪ್ಲಮ್, ಮಾವಿನ ಹಣ್ಣು ಮೊದಲಾದವುಗಳಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿಯೇ ಇದೆ.

ಪೊಟ್ಯಾಸಿಯಂ ಇರುವ ಆಹಾರ ಮಾರಕ

ಮೂತ್ರಾಂಗ ಸಮಸ್ಯೆಯಿರುವ ರೋಗಿಗಳು ಗೋಧಿಯನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿದರೆ ಉತ್ತಮ. ಇನ್ನು ಸಾಂಬಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಸಿಯಂ ಇರುವುದರಿಂದ ಅವುಗಳ ಬಳಕೆ ಕಡಿಮೆ ಮಾಡುವುದು ಬಹಳ ಅಗತ್ಯವಾಗಿದೆ. ಸಜ್ಜೆ, ಜೋಳ, ರಾಗಿ ಸೇವಿಸಬಾರದು, ಕಾಳುಗಳು ಅಥವಾ ಮೊಳಕೆ ಕಾಳುಗಳ ಬಳಕೆಯನ್ನು ಸಂಪೂರ್ಣ ಕಡಿಮೆ ಮಾಡಬೇಕು, ಹಸಿ ಅಥವಾ ಒಣಗಿಸಿದ ಕೊಬ್ಬರಿ, ಎಳನೀರನ್ನು ದೂರವಿಡಬೇಕು.

Health Tips How To Isolate Potassium From Vegetables

ಮಸಾಲೆ ಪದಾರ್ಥಗಳನ್ನು ಸೇವಿಸಬಾರದು. ಸೇಬು, ಅನಾನಸ್, ಪಪಾಯ, ಸೀಬೆ, ಕಿತ್ತಳೆ ಹಣ್ಣುಗಳ ಪೈಕಿ ದಿನಕ್ಕೆ ಯಾವುದಾದರು ಒಂದು ಹಣ್ಣನ್ನು ಸೇವಿಸಬಹುದು. ಸಾಮಾನ್ಯವಾಗಿ ಮೂತ್ರಪಿಂಡ ಕಾಯಿಲೆಗಳಲ್ಲಿ ಹಲವು ವಿಧಗಳಿದ್ದು, ಕಾಯಿಲೆಯ ತೀವ್ರತೆ ಅಥವಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ದೇಹಸ್ಥಿತಿಯನ್ನು ಗಮನಿಸಿ ವೈದ್ಯರು ಯಾವ ರೀತಿಯ ಆಹಾರವನ್ನು ಸೇವಿಸಬೇಕು.

ವೈದ್ಯರ ಸಲಹೆಯಂತೆ ಆಹಾರ ಸೇವಿಸಿ

ವೈದ್ಯರು ಯಾವ ಆಹಾರ ಮತ್ತು ಹೇಗೆ ಸೇವಿಸಬೇಕು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸಲಹೆಯನ್ನು ನೀಡುತ್ತಾರೆ ಅದರಂತೆ ರೋಗಿಗಳು ಕಟ್ಟು ನಿಟ್ಟಾಗಿ ಆಹಾರ ಕ್ರಮಗಳನ್ನು ಪಾಲಿಸಿದರೆ ತಮ್ಮನ್ನು ಬಾಧಿಸುತ್ತಿರುವ ಕಾಯಿಲೆಯನ್ನು ನಿಯಂತ್ರಣ ಮಾಡಿ ರಿಲ್ಯಾಕ್ಸ್ ಆಗಬಹುದು. ಇವತ್ತು ಮೂತ್ರಾಂಗದ ಸಮಸ್ಯೆಯಿಂದ ಹಲವರು ಬಳಲುತ್ತಿದ್ದಾರೆ. ಇಂತಹವರು ವೈದ್ಯರು ನೀಡುವ ಸಲಹೆಯನ್ನು ಪಾಲಿಸಿಕೊಂಡು ಅದರಂತೆ ಆಹಾರಕ್ರಮಗಳನ್ನು ಅಳವಡಿಸಿಕೊಂಡು ಮುನ್ನಡೆಯ ಬೇಕಾಗುತ್ತದೆ.

ಬಾಯಿ ಚಪಲಕ್ಕೆ ಸಿಕ್ಕಿದೆಲ್ಲವನ್ನು ತಿಂದರೆ ಅದರ ಪರಿಣಾಮವನ್ನು ರೋಗಿಯೇ ಎದುರಿಸಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಪೊಟ್ಯಾಸಿಯಂ ಮುಕ್ತ ಆಹಾರ ಸೇವನೆಗೆ ಆದ್ಯತೆ ನೀಡುವ ಮೂಲಕ ಹೊಸ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಇದು ಸುಲಭವಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+