ಉದ್ದವಾದ ದಪ್ಪ ಕೂದಲು ಬೇಕೇ? ಹಾಗಾದರೆ ಈ 5 ಹಣ್ಣುಗಳನ್ನು ಸೇವಿಸಿ...
ಉದ್ದವಾದ ಹೊಳೆಯುವ ಕೂದಲನ್ನು ಹೊಂದಲು ಯಾರು ತಾನೆ ಬಯಸುವುದಿಲ್ಲ ಹೇಳಿ? ಪುರುಷರು ಮತ್ತು ಮಹಿಳೆಯರು ಆರೋಗ್ಯಕರ ಕೂದಲನ್ನು ಬಯಸುತ್ತಾರೆ. ಆದಾಗ್ಯೂ ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ.
ದಪ್ಪ, ಉದ್ದ, ಹೊಳೆಯುವ ಕೂದಲನ್ನು ಹೊಂದುವುದು ಹೆಚ್ಚಿನ ಮಹಿಳೆಯರ ಕನಸು. ಆದರೆ ಆ ಕನಸು ಕೆಲ ಬಾರಿ ನನಸಾಗದೆ ನಿರಾಸೆಯಾಗಬಹುದು. ಅದಕ್ಕಾಗಿ ಅವರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಕೂದಲಿನ ಆರೈಕೆಗಾಗಿ ವಿವಿಧ ನೈಸರ್ಗಿಕ ಪರಿಹಾರಗಳಿವೆ. ಉತ್ತಮ ಕೂದಲು ಆರೈಕೆ ಮತ್ತು ಸರಿಯಾದ ಉತ್ಪನ್ನಗಳ ಬಳಕೆ ನಿಮ್ಮ ಕೂದಲಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ನೀವು ಸೇವಿಸುವ ಆಹಾರಗಳು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ದೇಹದ ಆರೋಗ್ಯ ಸಮತೋಲಿತ ಆಹಾರ ಮೇಲೆ ಹೇಗೆ ಅವಲಂಬಿತವಾಗಿರುತ್ತದೆಯೋ ಹಾಗೆ, ಸರಿಯಾದ ಪೋಷಕಾಂಶಗಳನ್ನು ನೀಡಿದಾಗ ಮಾತ್ರ ನಿಮ್ಮ ಕೂದಲು ಬೆಳೆಯುತ್ತದೆ. ಇಲ್ಲದಿದ್ದರೆ ಕೂದಲು ಉದುರುವ ಸಮಸ್ಯೆ ಎದುರಾಗಬಹುದು.
ಹಾಗಾದರೆ ನಿಮ್ಮ ಕೂದಲಿಗೆ ಯಾವ ಆಹಾರಗಳು ಉತ್ತಮ. ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುವ ಅತ್ಯುತ್ತಮ ಹಣ್ಣುಗಳ ಬಗ್ಗೆ ತಿಳಿಯಿರಿ.
ಬೆರ್ರಿ
ಬೆರಿಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ರಾಸ್್ಬೆರ್ರಿಸ್ ಸೇರಿದಂತೆ ಬೆರ್ರಿಗಳು ಕೇವಲ ರುಚಿಯನ್ನು ಮಾತ್ರ ನೀಡುವುದಿಲ್ಲ. ಅವು ನಿಮ್ಮ ಕೂದಲಿಗೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಬೆರ್ರಿಗಳು ರೋಗ ನಿರೋಧಕಗಳ ಪ್ರಬಲ ಮೂಲವಾಗಿದ್ದು, ಹಾನಿಯಿಂದ ನಿಮ್ಮ ಕೂದಲಿನ ಬೇರುಗಳನ್ನು ರಕ್ಷಿಸುತ್ತದೆ. ಹೀಗಾಗಿ ದಪ್ಪ ಹಾಗೂ ಉದ್ದವಾದ ಕೂದಲು ಹೊಂದಲು ನಿಮ್ಮ ಬೆಳಗಿನ ಉಪಾಹಾರದಲ್ಲಿ ಬೆರ್ರಿಗಳನ್ನು ಸೀವಿಸಿ.
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಹಣ್ಣುಗಳು ವಿಟಮಿನ್ ಸಿ ಯಿಂದ ತುಂಬಿರುತ್ತವೆ. ಇದು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಈ ಸುಧಾರಿತ ರಕ್ತ ಪರಿಚಲನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮ ಕೂದಲಿಗೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.
ಹೀಗಾಗಿ ತಾಜಾ ಕಿತ್ತಳೆ ರಸದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಇಲ್ಲದಿದ್ದರೆ, ನೀವು ಕುಡಿಯುವ ನೀರಿಗೆ ನಿಂಬೆ ರಸ ಸೇರಿಸಿ ನಿಂಬೆ ನೀರನ್ನು ಕುಡಿಯಬಹುದು. ರಸಭರಿತವಾದ ದ್ರಾಕ್ಷಿಹಣ್ಣನ್ನು ಮಧ್ಯಾಹ್ನದ ಊಟದ ನಂತರ ಸೇವಿಸಬಹುದು.
ಕಿವಿ
ಕಿವಿ ಕಡಿಮೆ ತಿಳಿದಿರುವ ಹಣ್ಣು, ಆದರೆ ಕೂದಲಿನ ಆರೋಗ್ಯಕ್ಕೆ ಅನೇಕ ನಂಬಲಾಗದ ಪ್ರಯೋಜನಗಳನ್ನು ನೀಡುತ್ತದೆ. ಇದು ವಿಟಮಿನ್ ಇ ಯ ಅತ್ಯುತ್ತಮ ಮೂಲವಾಗಿದೆ. ಇದು ನೆತ್ತಿಯ ರಕ್ತ ಪರಿಚಲನೆ ಸುಧಾರಿಸಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಕಿವಿಯಲ್ಲಿರುವ ಹೆಚ್ಚಿನ ವಿಟಮಿನ್ ಸಿ ಕಾಲಜನ್ ರಚನೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಕೂದಲಿನ ಬಲವನ್ನು ಉತ್ತೇಜಿಸುತ್ತದೆ. ನಿಮ್ಮ ಹಣ್ಣಿನ ಸಲಾಡ್‌ಗೆ ನೀವು ಕಿವಿ ಸೇರಿಸಬಹುದು. ಕಿವಿ ಸಿಪ್ಪೆ ಸುಲಿದು ಸಣ್ಣ ತುಂಡುಗಳಾಗಿ ಸೇವಿಸಬಹುದು ಅಥವಾ ನೀವು ಕಿವಿ ರಸವನ್ನು ಕುಡಿಯಬಹುದು.
ಆವಕಾಡೊ
ಆವಕಾಡೊ ಆರೋಗ್ಯಕರ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಕೂದಲಿನ ರಚನೆಯನ್ನು ಸುಧಾರಿಸಲು ಮತ್ತು ಕೂದಲು ಒಡೆಯುವುದನ್ನು ತಡೆಯಲು ಇದು ಅತ್ಯುತ್ತಮ ಹಣ್ಣಿನ ಆಯ್ಕೆಯಾಗಿದೆ. ಇದರಲ್ಲಿ ಹೆಚ್ಚಿನ ವಿಟಮಿನ್ ಇ ಅಂಶವು ನೆತ್ತಿಯನ್ನು ಪೋಷಿಸುತ್ತದೆ. ಜೊತೆಗೆ ಇದು ಕೂದಲಿನ ಬೆಳವಣಿಗೆ ಮತ್ತು ಶಕ್ತಿಯನ್ನು ಉತ್ತೇಜಿಸುತ್ತದೆ.
ಪಪ್ಪಾಯ
ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕೂದಲಿನ ಬೇರುಗಳನ್ನು ನಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ಸಮೃದ್ಧವಾಗಿರುವ ವಿಟಮಿನ್ ಎ ಮೇದೋಗ್ರಂಥಿಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿದೆ. ಪಪ್ಪಾಯಿ ನಿಮ್ಮ ಕೂದಲು ಹೊಳೆಯುವಂತೆ ಮತ್ತು ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ನೀವು ಸಲಾಡ್‌ಗೆ ಪಪ್ಪಾಯಿಯನ್ನು ಸೇರಿಸಬಹುದು. ಜೊತೆಗೆ ಜ್ಯೂಸ್ ಅಥವಾ ಸ್ಮೂಥಿಯಲ್ಲಿ ಕೂಡ ಸೇವಿಸಬಹುದು.












Click it and Unblock the Notifications