Get Updates
Get notified of breaking news, exclusive insights, and must-see stories!

ಆಹಾರ, ಜೀವನ ಶೈಲಿ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆಯಾ? ವೈದ್ಯರು ಹೇಳುವುದೇನು?

ಇವತ್ತಿನ ಪರಿಸ್ಥಿತಿಯಲ್ಲಿ ಆರೋಗ್ಯ ಎಲ್ಲರಿಗೂ ಬಹುಮುಖ್ಯವಾಗಿದೆ. ಹೀಗಾಗಿ ಆರೋಗ್ಯಕ್ಕಾಗಿ ಹಲವು ರೀತಿಯ ಕಸರತ್ತುಗಳನ್ನು ಜನ ಮಾಡುತ್ತಿರುವುದು ಗೋಚರಿಸುತ್ತಿದೆ. ಮೊದಲೆಲ್ಲ ಕೆಲವೊಂದು ಕಾಯಿಲೆಗಳು ವಯಸ್ಸಾದವರಲ್ಲಿ ಕಾಣಿಸುತ್ತಿತ್ತು ಆದರೀಗ ಯಾವುದೇ ವಯೋಮಾನದ ವ್ಯತ್ಯಾಸ ಕಾಯಿಲೆಗೆ ಇಲ್ಲದಂತಾಗಿದೆ. ಇದಕ್ಕೆ ಕಾರಣವಾಗಿರುವುದು ಬದಲಾಗುತ್ತಿರುವ ಜೀವನ ಮತ್ತು ಆಹಾರದ ಶೈಲಿ ಎಂದರೆ ತಪ್ಪಾಗಲಾರದು. ಕೊರೊನಾ ಬಳಿಕ ನಾವೆಲ್ಲರೂ ಶೀತ, ಜ್ವರ ಯಾವುದನ್ನೂ ನಿರ್ಲಕ್ಷ್ಯ ವಹಿಸದಂತಹ ಸ್ಥಿತಿಗೆ ಬಂದು ತಲುಪಿದ್ದೇವೆ. ಇದರ ನಡುವೆ ಅಪರೂಪಕ್ಕೆ ಕೇಳಿ ಬರುತ್ತಿದ್ದ ಕ್ಯಾನ್ಸರ್ ಕಾಯಿಲೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.

ನಮ್ಮ ಸುತ್ತಮುತ್ತ, ಸಂಬಂಧಿಕರ ನಡುವೆ ಕ್ಯಾನ್ಸರ್ ಗೆ ಬಲಿಯಾಗುತ್ತಿರುವವರು, ಕ್ಯಾನ್ಸರ್ ಗೆ ತುತ್ತಾಗಿರುವವರು ಹೀಗೆ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮೊದಲೆಲ್ಲ ಕ್ಯಾನ್ಸರ್ ಬಗ್ಗೆ ಅಪರೂಪವಾಗಿ ಕೇಳುತ್ತಿದ್ದೆವು. ಆದರೆ ಈಗ ಅದು ಸಾಮಾನ್ಯ ಕಾಯಿಲೆಯಂತಾಗಿದೆ. ಆದರೆ ಕ್ಯಾನ್ಸರ್ ಕಾಯಿಲೆ ಬಂದರೆ ಅದು ಸಂಸಾರದಲ್ಲಿ ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುವುದು ಮಾತ್ರವಲ್ಲ ಇಡೀ ಸಂಸಾರದ ನೆಮ್ಮದಿಯನ್ನು, ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿ ಬಿಡುತ್ತದೆ.

Food and Lifestyle Do They Increase Cancer Risk Insights from Experts

ಬಹಳಷ್ಟು ಜನರಿಗೆ ಕ್ಯಾನ್ಸರ್ ಬಂದಿದ್ದರೂ ಅದು ಕ್ಯಾನ್ಸರ್ ಎನ್ನುವುದು ಗೊತ್ತಾಗುವ ಹೊತ್ತಿಗೆ ನಾಲ್ಕನೇ ಹಂತ ತಲುಪಿಯಾಗಿರುತ್ತದೆ. ಕ್ಯಾನ್ಸರ್ ನ್ನು ಆರಂಭದಲ್ಲಿ ಪತ್ತೆ ಹಚ್ಚದಿರುವುದೇ ಇದಕ್ಕೆ ಕಾರಣವಾಗಿದೆ. ತುಂಬಾ ಜನ ನೋವು ಕಾಣಿಸಿದರೆ ಯಾವುದೋ ನೋವು ನಿವಾರಕ ಮಾತ್ರೆ ನುಂಗಿ ಕ್ಷಣಿಕ ಶಮನ ಪಡೆದುಕೊಳ್ಳುತ್ತಿರುತ್ತಾರೆ. ಆದರೆ ಅವರು ತಮಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಹೋಗುವುದೇ ಇಲ್ಲ. ಹಾಗೆಯೇ ಹೆಚ್ಚಿನ ಜನಕ್ಕೆ ಕ್ಯಾನ್ಸರ್ ನ ಗುಣಲಕ್ಷಣಗಳೇ ಗೊತ್ತಿರುವುದಿಲ್ಲ.

ಉತ್ತಮ ಹವ್ಯಾಸದಿಂದ ಉತ್ತಮ ಆರೋಗ್ಯ

ಉತ್ತಮ ಆರೋಗ್ಯ ಬೇಕಾದರೆ ನಾವು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಜತೆಗೆ ಜೀವನ ಶೈಲಿ, ಆಹಾರಪದ್ಧತಿಗಳ ಬಗ್ಗೆಯೂ ನಿಗಾವಹಿಸಬೇಕಾಗುತ್ತದೆ. ಈ ವಿಚಾರದಲ್ಲಿ ನಾವು ಎಡವಿ ದುಶ್ಚಟ ಮತ್ತು ಆಹಾರಗಳ ಬಗ್ಗೆ ಗಮನಹರಿಸದೇ ಹೋದಾಗ ಅನಾರೋಗ್ಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಇಂತಹ ಅನಾರೋಗ್ಯದಲ್ಲಿ ಕ್ಯಾನ್ಸರ್ ಕೂಡ ಇರುತ್ತದೆ ಎನ್ನವುದೇ ಆತಂಕಕಾರಿಯಾಗಿದೆ. ಆದ್ದರಿಂದ ಇತ್ತೀಚೆಗೆ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿರುವ ಆರೋಗ್ಯ ಇಲಾಖೆ ಕ್ಯಾನ್ಸರ್‌ ನ್ನು ಪ್ರಥಮ ಹಂತದಲ್ಲಿಯೇ ಪತ್ತೆ ಹಚ್ಚಲು ಉಪ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಖುಷಿಯ ವಿಚಾರವೇ.

Food and Lifestyle Do They Increase Cancer Risk Insights from Experts

ನಾರಾಯಣ ಆಸ್ಪತ್ರೆಯ ಕ್ಯಾನ್ಸರ್‌ ರೋಗ ತಜ್ಞ ಡಾ. ನಿಶ್ಚಲರಾಜ್‌ ಅವರು ಹೇಳುವಂತೆ 1 ಅಥವಾ 2ನೇ ಹಂತದಲ್ಲಿ ಕ್ಯಾನ್ಸರ್‌ ಪತ್ತೆಯಾದರೆ, ರೋಗಿಯು ಸಹಜ ಜೀವನ ನಡೆಸುವಷ್ಟು ಗುಣಮುಖರಾಗಿಸಬಹುದು ಆದ್ದರಿಂದ ರೋಗಿಯು ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ತಜ್ಞರನ್ನು ಭೇಟಿಯಾದರೆ ಒಳ್ಳೆಯದು ಎಂದು ಸಲಹೆ ನೀಡುತ್ತಾರೆ. ಜತೆಗೆ ಕ್ಯಾನ್ಸರ್‌ ಕೇವಲ ದೈಹಿಕ ತೊಂದರೆ ಮಾತ್ರ ಅಲ್ಲ. ಅದು ರೋಗಿಯಲ್ಲಿ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ.

ಗುಣಲಕ್ಷಣ ಅರಿತು ವೈದ್ಯರ ಭೇಟಿ ಮಾಡಬೇಕು

ರೋಗ ಲಕ್ಷಣಗಳು ಗುಣಮುಖವಾಗದಿದ್ದಾಗ ತಜ್ಞ ವೈದ್ಯರನ್ನು ಭೇಟಿಯಾಗಿ ಹಲವಾರು ತಪಾಸಣೆಗೊಳಗಾಗಿ ಕ್ಯಾನ್ಸರ್‌ ಎಂದು ತಿಳಿದು ಬಂದಾಗ ರೋಗಿ ಅಷ್ಟೇ ಅಲ್ಲದೆ ಆತನ ಕುಟುಂಬ ಸದಸ್ಯರು ಸಹ ಆಘಾತಕ್ಕೆ ಒಳಗಾಗ ಬೇಕಾಗುತ್ತದೆ. ರೋಗ ಪತ್ತೆಯಾದ ನಂತರ ಹಲವಾರು ಚಿಕಿತ್ಸಾ ಉಪಕ್ರಮಗಳಿಂದ ರೋಗವನ್ನು ಗುಣಪಡಿಸಲಾಗುತ್ತದೆ. ರೋಗದ ಹಂತ ಹಾಗೂ ರೋಗದಿಂದ ಸಮಸ್ಯೆಗೆ ಒಳಪಟ್ಟ ಅಂಗ ಇದರ ಮೇಲೆ ಕಿಮೋಥೇರಪಿ, ರೇಡಿಯೇಷನ್‌ ಥೆರಪಿ, ಶಸ್ತ್ರಚಿಕಿತ್ಸೆ ಅಥವಾ ಇವುಗಳನ್ನು ಒಳಗೊಂಡ ಸಂಯುಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಹೇಳುತ್ತಾರೆ.

ಮೆಡಿಕಲ್‌ ಅಂಕಾಲಿಜಿಸ್ಟ್‌ ಡಾ. ಲೇಪಾಕ್ಷಿ ಅವರು ಹೇಳುವಂತೆ ಜಗತ್ತಿನಲ್ಲಿ 20 ಮಿಲಿಯನ್‌ ಜನ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರಂತೆ. ಅಲ್ಲದೆ 10 ಮಿಲಿಯನ್‌ ಜನ ಸಾವನ್ನಪ್ಪುತ್ತಿದ್ದಾರೆ. ಭಾರತ ದೇಶದಲ್ಲಿ 16ಲಕ್ಷ ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸರಿಸುಮಾರು ಒಂಬತ್ತು ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್‌ ಲಕ್ಷಣಗಳು ಕಾಣಿಸುತ್ತದೆ. ಆದ್ದರಿಂದ ಇದರ ರೋಗ ಲಕ್ಷಣಗಳನ್ನು ಅರಿತು ಆದಷ್ಟು ಬೇಗ ಚಿಕಿತ್ಸೆಗೆ ಒಳಪಡುವುದು ಉತ್ತಮ ಎಂಬ ಸಲಹೆ ನೀಡುತ್ತಾರೆ.

ಸ್ಥನ ಕ್ಯಾನ್ಸರ್ ಬಗ್ಗೆ ಎಚ್ಚರಿಕೆ ಇರಲಿ

ಇದೆಲ್ಲದಕ್ಕೆ ಮೊದಲು ನಾವು ಕ್ಯಾನ್ಸರ್ ನ ಲಕ್ಷಣಗಳನ್ನು ಅರಿತುಕೊಂಡರೆ ಮುನ್ನಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಾವೆಲ್ಲರೂ ಕ್ಯಾನ್ಸರ್ ನ ಗುಣಲಕ್ಷಣಗಳನ್ನು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ. ಇಲ್ಲಿ ಮುಖ್ಯವಾಗಿ 3 ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು, . ಕೆಮ್ಮು ಅಥವಾ ಕೊಕ್ಕಿನ ಧ್ವನಿ 3 ವಾರಗಳಿಗಿಂತ ಹೆಚ್ಚು ಕಾಲ ಇರುವುದು, ಕಸಿದುಕೊಳ್ಳುವ ತೊಂದರೆ ಅಥವಾ ಅಜೀರ್ಣವನ್ನು ಮುಂದುವರೆಯುತ್ತಿದ್ದರೆ ಎಚ್ಚರಿಕೆ ವಹಿಸಬೇಕು.

ಉಸಿರು ಸಮಸ್ಯೆ, ಕೆಮ್ಮಿದಾಗ ರಕ್ತಬರುವುದು, ಸ್ತನಗಳ ಗಾತ್ರ, ಆಕಾರದಲ್ಲಿ ವ್ಯತ್ಯಾಸ ಗಂಟುಗಳು ಕಾಣಿಸುವುದು, ಸ್ತನಗಳ ಮೇಲೆ ಚರ್ಮ ಮಬ್ಬಾಗುವುದು, ಕೆಂಪಾಗುವುದು, ಮೊಲೆತೊಟ್ಟುಗಳ ಸ್ಥಾನದಲ್ಲಿ ಬದಲಾವಣೆ, ಒಂದು ದದ್ದು ಅಥವಾ ತೊಟ್ಟುಗಳ ಡಿಸ್ಚಾರ್ಜ್ ಆಗುವುದು. ಋತುಬಂಧದ ನಂತರ ಅಥವಾ ಋತುಬಂಧದ ನಂತರ, ಲೈಂಗಿಕತೆಯ ನಂತರ ಯೋನಿಯ ರಕ್ತಸ್ರಾವ, ಸಾಮಾನ್ಯವಾಗಿ 4-6 ವಾರಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ಕರುಳಿನ ಚಲನೆ ಕಾಣಿಸಿದರೆ ಎಚ್ಚರವಾಗಿರಬೇಕು.

ಆರಂಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು

ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳು, ಗಾತ್ರ, ಆಕಾರ ಅಥವಾ ಬಣ್ಣದಲ್ಲಿ ಬದಲಾವಣೆ, ವಿವರಿಸಲಾಗದ ನೋವು ಅಥವಾ ನೋವು 4 ವಾರಗಳಿಗಿಂತ ಹೆಚ್ಚು ಕಾಲ ಇರುವುದು, ದೇಹದಲ್ಲಿ ಊತ, ತೂಕ ನಷ್ಟ, ಭಾರೀ ಪ್ರಮಾಣದಲ್ಲಿ ರಾತ್ರಿ ಬೆವರುವಿಕೆ, ಹಲವಾರು ವಾರಗಳ ನಂತರ ಗುಣವಾಗದೇ ಇರುವ ನೋಯುತ್ತಿರುವ ನೋವು ಲಕ್ಷಣಗಳಾಗಿರುತ್ತವೆ. ವೈದ್ಯರು ಹೇಳುವ ಪ್ರಕಾರ ಕ್ಯಾನ್ಸರ್ ಕೋಶಗಳಿಗೆ ಸಾಮಾನ್ಯವಾದ ರೂಪಾಂತರದ ನಿಖರವಾದ ಕಾರಣ, ಅಂದರೆ ಅನೇಕ ಕ್ಯಾನ್ಸರ್ ಗಳಿಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದಿಲ್ಲವಂತೆ ಅದು ಏನೇ ಇರಲಿ ಸಮಸ್ಯೆ ಕಾಣಿಸಿಕೊಂಡಾಗ ಪರೀಕ್ಷಿಸಿ ಮನದಟ್ಟು ಮಾಡಿಕೊಳ್ಳುವುದು ನೆಮ್ಮದಿಯನ್ನು ನೀಡಲಿದೆ ಎನ್ನುವುದನ್ನು ಮರೆಯಬಾರದಷ್ಟೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+