ಈ ಸಣ್ಣ ಬದಲಾವಣೆಗಳು ನಿಮ್ಮ ಆಯಸ್ಸನ್ನು ವೃದ್ಧಿಸಬಹುದು: ಟ್ರೈ ಮಾಡಿ
ಮೊದಲೆಲ್ಲಾ ನಮ್ಮ ಪೂರ್ವಜರ ವಯಸ್ಸು ಕೇಳಿದರೆ ನಾವು ಶಾಕ್ ಆಗುತ್ತೇವೆ. ಅವರು ಅಷ್ಟು ವರ್ಷಗಳ ಕಾಲ ಹೇಗೆ ಜೀವನ ನಡೆಸಿದರು. ರೋಗಗಳಿಗೆ ಅವರು ಯಾವಾಗಲು ಹೆದರುತ್ತಿರಲಿಲ್ಲ. ಕಾರಣ ಅವರ ಜೀವನ ಶೈಲಿ ಉಚ್ಛ ಮಟ್ಟದಾಗಿತ್ತು. ಆದರೆ ಬದಲಾದ ಜೀವನ ಶೈಲಿ, ಅನಾರೋಗ್ಯದ ಗೂಡಾಗಿದೆ. ಹಾಗಿದ್ದಾರೆ, ಆರೋಗ್ಯವನ್ನು ಸುಧಾರಿಸಿಕೊಂಡು ಹೆಚ್ಚು ವರ್ಷ ಬಾಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅನುವಂಶಿಕವಾಗಿ ಚಿಕ್ಕ ವಯಸ್ಸಿನಲ್ಲಿ ಸಾಯುವ ಭಯ ಇರುವು ಜನರು ಆರೋಗ್ಯಕರ ಅಭ್ಯಾಸವನ್ನು ಅಳವಡಸಿಕೊಳ್ಳುವುದು ಮುಖ್ಯ. ಹಾಗಿದ್ದರೆ ಉತ್ತಮ ಜೀವನ ಶೈಲಿಯನ್ನು ಹೇಗೆ ಪ್ರಾರಂಭಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಇತ್ತೀಚಿಗೆ ನಡೆದ ಒಂದು ಅಧ್ಯಯನ ಸುಲಭ ಉಪಾಯವನ್ನು ತಿಳಿಸಿದೆ. ಈ ಸುಲಭ ಮಾರ್ಪಾಡುಗಳನ್ನು ನೀವು ನಿಮ್ಮ ಜೀವನದಲ್ಲಿ ಮಾಡಿಕೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ನೀವು ಸುಧಾರಿಸಬಹುದು.

ಅಧ್ಯಯನ ವರದಿಯಲ್ಲಿ ಏನಿದೆ?
BMJ ಎವಿಡೆನ್ಸ್-ಬೇಸ್ಡ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು 13 ವರ್ಷಗಳವರೆಗೆ 350,000 ಕ್ಕೂ ಹೆಚ್ಚು ಜನರ ಡೇಟಾವನ್ನು ಸಂಶೋಧನಗೆ ಒಳಪಡಿಸಿದೆ. ಅಧ್ಯಯನಕ್ಕೆ ಒಳ ಪಟ್ಟ ಜನರ ಹಿನ್ನಲೆಯನ್ನು ಸಹ ಅಧ್ಯಯನ ತಂಡ ವರದಿಯಲ್ಲಿ ಉಲ್ಲೇಖಿಸಿದೆ. ಅವರ ಸಾಮಾಜಿಕ-ಆರ್ಥಿಕ ಸ್ಥಿತಿ, ಶಿಕ್ಷಣ ಮತ್ತು ರೋಗದ ಇತಿಹಾಸದ ಬಗ್ಗೆ ಮಾಹಿತಿ ಪಡೆದು ವರದಿ ಸಿದ್ಧ ಪಡಿಸಲಾಗಿದೆ. ಈ ಅಧ್ಯಯನದ ಆಧಾರದ ಮೇಲೆ ವ್ಯಕ್ತಿಗೆ ಪಾಲಿಜೆನೆಟಿಕ್ ಸ್ಕೋರ್ ನೀಡಲಾಯಿತು. ಇದು ಅವರ ಜೀನ್‌ಗಳನ್ನು ಕ್ಯಾಲ್‌ಕುಲೇಟ್ ಮಾಡಿ ಪ್ರಭಾವ ಬೀರುವ ಅಂಶಗಳನ್ನು ಪಟ್ಟಿ ಮಾಡುತ್ತದೆ.
ಯಾವ ಅಂಶಗಳ ಮೇಲೆ ವರದಿ ಬೆಳಕು ಚೆಲ್ಲಿದೆ
ಈ ಅಧ್ಯಯನ ಜೀವನಶೈಲಿಯ ಅಭ್ಯಾಸದ ಆಧಾರದ ಮೇಲೆ ಅಂಕವನ್ನು ನೀಡಲಾಗಿದೆ. ಈ ವರದಿಯಲ್ಲಿ ಅನುವಂಶಿಯವಾಗಿ ಚಿಕ್ಕ ವಯಸ್ಸಿನಲ್ಲಿ ಸಾಯುವ ಭೀತಿ ಎದುರುಸುತ್ತಿರುವ, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳ ಜೀವಿತಾವಧಿಯು ಹೆಚ್ಚಿರುತ್ತದೆ. ಇವರ ಜೀವಿತಾವಧಿಯ ಗುಣಮಟ್ಟ ಎಲ್ಲವೂ ಚೆನ್ನಾಗಿದ್ದು, ಅನಾರೋಗ್ಯಕರ ಜೀವನ ಶೈಲಿ ಹೊಂದಿದ ಜನರಿಗಿಂತ ಎಷ್ಟು ಉತ್ತಮವಾಗಿರುತ್ತದೆ ಎಂದು ವರದಿ ತಿಳಿಸಿದೆ.
ನೀವು ಸಹ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಂಡು ನಿಮ್ಮ ಆಯಸ್ಸನ್ನು ವೃದ್ಧಿಸಿಕೊಳ್ಳುವ ಆಸಕ್ತಿ ಇದ್ದರೆ ಈ ಚಿಕ್ಕ ಬದಲಾವಣೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು.
ಈ ಬದಲಾವಣೆ ಮಾಡಿ, ರಿಸಲ್ಟ್ ನೋಡಿ
ಆರೋಗ್ಯದ ವೃದ್ಧಿಗೆ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ಸೇವನೆ ಉತ್ತಮ. ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಆಹಾರದಲ್ಲಿ ಸಮತೋಲನ ಬಹು ಮುಖ್ಯವಾಗಿದೆ.
ದಿನ ನಿತ್ಯ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಸಧೃಡವಾಗುತ್ತದೆ. ಇದರಿಂದ ಮುಂಬರುವ ಕಾಯಿಲೆಗಳಿಂದ ನೀವು ದೂರ ಇರಬಹುದು. ಹೃದ್ರೋಗ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವುದಲ್ಲದೆ, ಹೃದ್ರೋಗ, ಪಾರ್ಶ್ವವಾಯು ಮತ್ತು ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಇದನ್ನು ಬಿಡುವುದು ಬೆಸ್ಟ್.
ಅತಿಯಾದ ಆಲ್ಕೊಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ಅಧ್ಯಯನಗಳ ಪ್ರಕಾರ, ಕಡಿಮೆ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವನೆಯು ಸಹ ಹಲವು ಉಪಯೋಗಗಳನ್ನು ನೀಡಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications