Ellu Holige Recipe: ಮಕರ ಸಂಕ್ರಾಂತಿಗೆ ಎಳ್ಳು ಹೋಳಿಗೆ ತಯಾರಿಸುವ ವಿಧಾನ
ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಇದು ವರ್ಷದ ಮೊದಲನೇ ಹಬ್ಬವಾಗಿದ್ದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಈ ವರ್ಷ ಜನವರಿ 15ರಂದು ಆಚರಿಸಲಾಗುತ್ತದೆ. ಈ ದಿನ ನಾನಾ ಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಖಾದ್ಯಗಳಲ್ಲಿ ಎಳ್ಳು ಹೋಳಿಗೆ ಮಾಡುವುದು ರೂಢಿ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಎಳ್ಳು ಹೋಳಿಗೆಯನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ನೀವೇನಾದರೂ ಹಬ್ಬ ಆಚರಿಸುತ್ತಿದ್ದು ನಿಮಗೆ ಎಳ್ಳು ಹೋಳಿಗೆ ಮಾಡುವ ಆಸೆ ಇದ್ದರೆ ನಾವು ನಿಮಗೆ ಮಾಡುವ ವಿಧಾನವನ್ನು ಹೇಳಿ ಕೊಡುತ್ತೇವೆ. ಇದನ್ನು ಅನುಸರಿಸಿ ಮನೆಯಲ್ಲೇ ಹೋಳಿಗೆ ಮಾಡಬಹುದು. ಹಾಗಾದರೆ ತಡ ಮಾಡುವುದು ಬೇಡ, ಎಳ್ಳು ಹೋಳಿಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:
*ಬಿಳಿ ಎಳ್ಳು ಒಂದು ಕಪ್
*ಬೆಲ್ಲ ಅರ್ಧ ಕಪ್
* ಶೆಂಗಾ ಅರ್ಧ ಕಪ್
*ಮೈದಾ ಹಿಟ್ಟು ಒಂದು ಕಪ್
*ಏಲಕ್ಕಿ 2
* ತುಪ್ಪ ಸ್ವಲ್ಪ
* ಎಣ್ಣೆ

ತಯಾರಿಸುವ ವಿಧಾನ
* ಮೊದಲಿಗೆ ಎಳ್ಳನ್ನು ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ ಹುರಿದುಕೊಳ್ಳಿ
*ಬಳಿಕ ಶೆಂಗಾವನ್ನು ಹುರಿದು ಒಂದು ಪಾತ್ರೆಗೆ ತೆಗೆದುಕೊಳ್ಳಿ
* ನಂತರ ಇದನ್ನು ತಣ್ಣಗಾಗಲು ಬಿಡಿ
* ಮೈದಾ ಹಿಟ್ಟಿಗೆ ನೀರು ಹಾಕಿ ಚಾಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಂಡು ಪಾತ್ರೆಗೆ ಎಣ್ಣೆ ಹಚ್ಚಿ ಅದರಲ್ಲಿ ಇದನ್ನು ಇಟ್ಟು ಮುಚ್ಚಿಡಿ.
* ಒಂದು ಮಿಕ್ಸಿ ಜಾರ್‌ಗೆ ಹುರಿದ ಎಳ್ಳು, ಶೆಂಗಾ ಹಾಕಿ ರುಬ್ಬಿಕೊಳ್ಳಿ
* ಬಳಿಕ ಇದಕ್ಕೆ ಬೆಲ್ಲ ಸೇರಿಸಿ ರುಬ್ಬಿ ಏಲಕ್ಕಿ ಪುಡಿ ಹಾಕಿ ಒಂದು ಪಾತ್ರೆಗೆ ತೆಗೆದುಕೊಳ್ಳಿ
* ಇದಕ್ಕೆ ಸ್ವಲ್ಪ ಬಿಸಿಯಾದ ನೀರನ್ನು ಸ್ವಲ್ಪ ಸ್ವಲ್ಪ ಹಾಕಿ ಕಲಸಿ ಹೂರಣ ರೆಡಿ ಮಾಡಿಕೊಳ್ಳಿ
* ಮೈದಾ ಹಿಟ್ಟನ್ನು ಚಿಕ್ಕ ಚಿಕ್ಕ ಉಂಟೆ ಮಾಡಿಕೊಂಡು ಅದರಲ್ಲಿ ಹೂರಣ ತುಂಬಿ ಮುಚ್ಚಿ.
* ಒಂದು ಕಾಗದದ ಮೇಲೆ ಈ ಉಂಡೆಯನ್ನು ಚೆನ್ನಾಗಿ ಚಪಾತಿ ಆಕಾರದಲ್ಲಿ ಹರಡಿ
* ಹೀಗೆ ಹರಡುವಾಗ ಕೈಗೆ ಹಾಗೂ ಹಾಳೆಗೂ ಎಣ್ಣೆಯನ್ನು ಹಚ್ಚಿಕೊಳ್ಳಿ
* ಒಲೆಯ ಮೇಲೆ ಹೆಂಚನ್ನು ಇಟ್ಟು ಸಣ್ಣ ಉರಿಯಲ್ಲಿ ಈ ಹೋಳಿಗೆಯನ್ನು ಬೇಯಿಸಿ, ನಂತರ ಇದರ ಮೇಲೆ ತುಂಬಾ ಹಾಕಿದರೆ ಬಿಸಿ ಬಿಸಿ ಎಳ್ಳು ಹೋಳಿಗೆ ಸವಿಯಲು ಸಿದ್ಧ.












Click it and Unblock the Notifications