ಗೊರಕೆ ಹೊಡೆಯುವುದನ್ನು ತಪ್ಪಿಸುವುದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್!
ನಿದ್ದೆ ಮಾಡುವಾಗ ಗೊರಕೆ ಹೊಡೆಯುವ ರೂಢಿ ಹಲವರಿಗೆ ಇದೆ. ಇದು ಗೊರಕೆ ಹೊಡೆಯುವವರಷ್ಟೇ ಉಳಿದವರಿಗೂ ಸಮಸ್ಯೆ. ಯಾರಾದರು ಪಕ್ಕದಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದರೆ ಮನೆಯಲ್ಲಿ ಇರುವವರಿಗೆ ನಿದ್ರೆಯೇ ಬರಲ್ಲ. ಅಷ್ಟೇ ಅಲ್ಲ ಇದು ಗೊರಕೆ ಹೊಡೆಯುವವರಿಗೂ ಸಂಕಷ್ಟ ಇದು ದೇಹದಲ್ಲಿನ ಸಮಸ್ಯೆ. ಮನೆಯಲ್ಲಿ ಯಾರಾದರು ಗೊರಕೆ ಹೊಡೆಯುತ್ತಲ್ಲೇ ಇದ್ದರೆ, ಅವರನ್ನು ಪದೇ ಪದೇ ನಿದ್ದೆಯಿಂದ ಎದ್ದೇಳುವಂತೆ ಮಾಡುವುದು ಇದೆ. ಗೊರಕೆ ಹೊಡೆಯುವುದನ್ನು ಈ ಸರಳ ವಿಧಾನದಿಂದ ನೀವು ತಪ್ಪಿಸಬಹುದು. ಗೊರಕೆ ಹೊಡೆಯುವುದನ್ನು ತಪ್ಪಿಸುವುದಕ್ಕೆ ಏನು ಮಾಡಬೇಕು ಹಾಗೂ ಇದನ್ನು ತಡೆಯಲು ಇರುವ ಸರಳ ಮಾರ್ಗಗಳೇನು ಎನ್ನುವುದನ್ನು ತಿಳಿಯೋಣ.
ಗೊರಕೆ ಹೊಡೆಯುವುದು ಹಾಸ್ಯದ ವಿಷಯವಾಗಿ ಉಳಿದಿಲ್ಲ. ಇದು ಕುಟುಂಬಗಳಲ್ಲಿ ಸಮಸ್ಯೆಯ ಹಂತಕ್ಕೆ ಹೋಗಿದೆ. ಹೌದು ಗೊರಕೆಯ ವಿಚಾರಕ್ಕೆ ಗಂಡ ಹಾಗೂ ಹೆಂಡತಿಯ ನಡುವೆ ಜಗಳಗಳು ನಡೆಯುವುದು ಇದೆ. ಗೊರಕೆ ಶಬ್ದದಿಂದ ನಿದ್ರೆ ಇಲ್ಲದೆ ಜನ ರಾತ್ರಿ ಎಲ್ಲ ಕಳೆಯುವುದು, ನಿದ್ದೆ ಆಗದೆ ಆಫೀಸ್ ಅಥವಾ ಕೆಲಸಗಳಲ್ಲಿ ಸಮಸ್ಯೆ ಎದುರಿಸುವುದು ಇದೆ. ಈ ಸಮಸ್ಯೆಗಳನ್ನು ಮನೆಯಲ್ಲಿ ಇರುವ ಜೇನುತುಪ್ಪದಿಂದಲೇ ಪರಿಹರಿಸಿ ಕೊಳ್ಳಬಹುದಾಗಿದೆ. ಗೊರಕೆ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜೇನುತುಪ್ಪ ಸಿಂಪಲ್ ರೆಮಿಡಿ. ಜೇನುತುಪ್ಪ ಹೇಗೆ ಗೊರಕೆ ಶಬ್ದಕ್ಕೆ ಬ್ರೇಕ್ ಹಾಕುತ್ತದೆ ಎನ್ನುವ ವಿವರ ಇಲ್ಲಿದೆ.

ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ನೀವು ನಿಮ್ಮ ಗೊರಕೆಗೆ ಬ್ರೇಕ್ ಹಾಕಬಹುದಾಗಿದೆ. ನಿಯಮಿತವಾಗಿ ನೀವು ಜೇನುತುಪ್ಪವನ್ನು ಸೇವಿಸುವುದರಿಂದ ಗೊರಕೆ ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು. ಜೇನುತುಪ್ಪದಲ್ಲಿ ಉರಿಯೂತ ನಿವಾರಕ ಗುಣಗಳು ಇವೆ. ಇದನ್ನು ಸೇವಿಸುವುದರಿಂದ ನಿಮ್ಮ ಗೊರಕೆಯ ಪ್ರಮಾಣ ಅಲ್ಪ ಅಲ್ಪವಾಗಿ ಕಡಿಮೆಯಾಗುತ್ತದೆ. ಗಂಟಲಿನಲ್ಲಿನ ಉಂಟಾಗುವ ಕಿರಿಕಿರಿ ಅಥವಾ ಗಂಟಲಿನಿಂದ ಬರುವ ಕರ್ಕಶ ಶಬ್ದವನ್ನು ತಡೆಯುವುದಕ್ಕೆ ಜೇನುತುಪ್ಪ ಸಹಕಾರಿಯಾಗಿದೆ.
ಗೊರಕೆ ತಪ್ಪಿಸಲು ಜೇನುತುಪ್ಪ ಸಹಕಾರಿ
ಗೊರಕೆ ಹೊಡೆಯುವ ಸಮಸ್ಯೆಯನ್ನು ತಪ್ಪಿಸಲು ನೀವು ಜೇನುತುಪ್ಪವನ್ನು ಸೇವಿಸಬಹುದು. ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ಒಂದು ಟೀ ಚಮಚದಷ್ಟು ಜೇನುತುಪ್ಪ, ಕ್ಯಾಮೊಮೈಲ್ (ಹೂವು) ಅಥವಾ ಶುಂಠಿ ಮಿಶ್ರಣ ಮಾಡಿ ನಿತ್ಯ ಸೇವಿಸಬಹುದು. ಈ ರೀತಿ ದಿನಕ್ಕೆ ಒಮ್ಮೆ ಮಾಡುವುದರಿಂದ ಗೊರಕೆ ಹೊಡೆಯುವುದನ್ನು ತಪ್ಪಿಸಬಹುದಾಗಿದೆ. ಇನ್ನು ಕೆಲವೊಬ್ಬರಿಗೆ ಇದು ಸಾಧ್ಯವಾಗದೆ ಇರಬಹುದು ಅಥವಾ ಆರೋಗ್ಯ ಹೊಂದಾಣಿಕೆ ಆಗದೆಯೂ ಇರಬಹುದು. ಜೇನುತುಪ್ಪ ಬೇಡ ಆದರೆ, ಗೊರಕೆ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇನ್ನಷ್ಟು ಸರಳ ಮಾರ್ಗಗಳು ಇಲ್ಲಿವೆ.
ಗೊರಕೆ ತಪ್ಪಿಸಲು ಸಿಂಪಲ್ ಟಿಪ್ಸ್
* ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ
* ಡ್ರಿಂಕ್ಸ್ ಮಾಡುವುದನ್ನು ತಪ್ಪಿಸಿ
* ನೇರವಾಗಿ ಮಲಗದೆ ಎಡಕ್ಕೆ ಅಥವಾ ಬಲಕ್ಕೆ ಮಲಗಿ
* ಮಲಗುವಾಗ ನಿಮ್ಮ ತಲೆಯ ಭಾಗ ಮೇಲಿರುವಂತೆ ನೋಡಿಕೊಳ್ಳಿ ಅಂದರೆ, ದಿಂಬಿನ ಎತ್ತರವನ್ನು ಸ್ವಲ್ಪ ಎತ್ತರಿಸಿ. ಆದರೆ, ನಿಮಗೆ ಮಲಗುವುದಕ್ಕೆ ಹಾಗೂ ಕುತ್ತಿಗೆ ನೋವು ಬರದಷ್ಟು ಎತ್ತರ ಮಾತ್ರ ಇರಲಿ.
* ಎಣ್ಣೆಯುಕ್ತ ಆಹಾರಗಳನ್ನು ಕಡಿಮೆ ಮಾಡುದು
* ಮನೆಯಲ್ಲಿ ಪುದೀನಾ ಹಾಗೂ ಏಲಕ್ಕಿಯನ್ನು ಸೇವಿಸುವುದರಿಂದಲೂ ಗೊರಕೆ ಹೊಡೆಯುವುದನ್ನು ತಪ್ಪಿಸಬಹುದಾಗಿದೆ.












Click it and Unblock the Notifications