ನಮ್ಮೊಳಗಿನ ಮರ್ಕಟದಂತಹ ಮನಸ್ಸಿನತ್ತ ನಿಗಾವಿರಲಿ: ಯಾಕೆ ಗೊತ್ತಾ?

ನಮಗೆ ಕಾಣದೆ ನಮ್ಮೊಳಗೆ ಇರುವ ಮನಸ್ಸು ನಮ್ಮನ್ನು ಆಗಾಗ್ಗೆ ಬೊಂಬೆಯಂತೆ ಆಡಿಸುತ್ತಿರುತ್ತದೆ. ಇಂತಹ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಂಡು ಸಾಗುವುದೇ ಜೀವನ. ಈ ಮನಸ್ಸು ಒಂಥರಾ ಮರ್ಕಟದಂತೆ. ಅದು ಎಲ್ಲೆಲ್ಲೋ ಹರಿದಾಡುತ್ತಲೇ ಇರುತ್ತದೆ. ಇಂತಹ ಮನಸ್ಸನ್ನು ಆಯಾಯ ಸಂದರ್ಭಕ್ಕೆ ತಕ್ಕಂತೆ ಸ್ಥಿಮಿತದಲ್ಲಿಟ್ಟುಕೊಳ್ಳದೆ ಹೋದರೆ ಅಪಾಯ ತಪ್ಪಿದಲ್ಲ. ಆದ್ದರಿಂದ ಮನಸ್ಸನ್ನು ಹತೋಟಿಗೆ ತಂದುಕೊಂಡು ಒಳ್ಳೆಯದರ ಕಡೆಗೆ ಹೊರಳಿಸುವುದು ಬಹುಮುಖ್ಯವಾಗಿದೆ.

ನಿಜಹೇಳಬೇಕೆಂದರೆ, ನಮ್ಮ ಎಲ್ಲ್ಲ ಚಟುವಟಿಕೆಗಳಿಗೂ ಮನಸ್ಸೇ ಕಾರಣ. ನಾವು ಮಾಡುವ ಎಲ್ಲ ರೀತಿಯ ಕಾರ್ಯಗಳಿಗೆ ಮನಸ್ಸೇ ಸಾರಥಿ. ಹೀಗಾಗಿ ನಮ್ಮ ಶರೀರವನ್ನು ಸನ್ಮಾರ್ಗದಲ್ಲಿ ಅಥವಾ ದುರ್ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಇದರ ಪಾತ್ರ ಲ್ಲದಿಲ್ಲ. ಹೀಗಾಗಿ ಒಬ್ಬ ವ್ಯಕ್ತಿ ದುಷ್ಟನಾಗಿ ಗುರುತಿಸಿಕೊಳ್ಳುವಲ್ಲಿಯೂ ಮನಸ್ಸೇ ಕಾರಣವಾಗಿರುತ್ತದೆ. ಕೆಲವೊಮ್ಮೆ ನಮ್ಮ ಶರೀರವನ್ನು ಆಕ್ರಮಿಸುವ ದುಷ್ಟ ಆಲೋಚನೆಗಳು ಮನಸ್ಸಿನ ಮೇಲೆ ಪ್ರಭಾವ ಬೀರಿ ದುಷ್ಟ ಕಾರ್ಯಗಳನ್ನು ಶರೀರದ ಮೂಲಕ ಮೂಡಿಸಿ ಬಿಡುತ್ತದೆ.

Effective Mind Control Techniques For Personal Growth And Achieving Success

ಒಂದು ಕ್ಷಣ ಹಿಡಿತ ಕಳೆದುಕೊಂಡು ಮನಸ್ಸು ಮೂಡಿಸುವ ಕಾರ್ಯವಿದೆಯಲ್ಲ ಅದು ನಮ್ಮನ್ನು ಇರುವಷ್ಟು ದಿನವೂ ಕಾಡದೆ ಬಿಡುವುದಿಲ್ಲ.ಮನಸ್ಸನ್ನು ಆದಷ್ಟೂ ಪರಿಶುದ್ಧವಾಗಿಟ್ಟುಕೊಳ್ಳುವುದರಿಂದ ನಮ್ಮಲ್ಲಿ ಹುಟ್ಟುವ ದುಷ್ಟತನವನ್ನು ತಡೆದು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗಲಿದೆ. ಮನಸ್ಸಿನ ಬಗ್ಗೆ ನಮಗೆಲ್ಲರಿಗೂ ಒಂಥರಾ ಗೊಂದಲವಿದೆ. ನಮ್ಮ ಎದುರಿಗಿರುವ ವ್ಯಕ್ತಿಯ ವರ್ತನೆಗೂ ಒಳಗಿನ ಮನಸ್ಸಿನ ಭಾವನೆಗೂ ವ್ಯತ್ಯಾಸವಿರುತ್ತದೆ. ಕೆಲವರು ಮನಸ್ಸಿನಲ್ಲಿರುವುದನ್ನೇ ಹೊರಗೆಡವಿ ನಿಷ್ಠುರವಾದರೆ, ಮತ್ತೆ ಕೆಲವರು ಮನಸ್ಸಿನಲ್ಲೊಂದು ಹೊರಗೊಂದು ಎಂಬಂತೆ ಇದ್ದು ಬಿಡುತ್ತಾರೆ.

ಸ್ವಾಮಿ ವಿವೇಕಾನಂದರು ಹೇಳಿದ್ದೇನು?

ಸ್ವಾಮಿ ವಿವೇಕಾನಂದರು ಮನಃಶಾಸ್ತ್ರವನ್ನು ಕುರಿತು ವ್ಯಾಖ್ಯಾನಿಸಿರುವ ಸಂಗತಿಗಳನ್ನೇ ತೆಗೆದುಕೊಂಡದ್ದೇ ಆದರೆ ಮನಸ್ಸು ಎನ್ನುವುದು ಈ ಸ್ಥೂಲ ಶರೀರದ ಒಳಗೆ ಇರುವ ಒಂದು ಸೂಕ್ಷ್ಮವಾದ ಅಂಗ. ಶರೀರವೆನ್ನುವುದು ಅದರ ಹೊರಗಿನ ಹೊದಿಕೆ ಅಥವಾ ಕವಚ ಮಾತ್ರ. ಮನಸ್ಸೆಂಬುವುದು ಶರೀರದ ಸೂಕ್ಷ್ಮತರ ಭಾಗವಾಗಿರುವುದರಿಂದ ಈ ದೇಹ ಮತ್ತು ಮನಸ್ಸುಗಳೆರಡೂ ಒಂದು ಮತ್ತೊಂದರ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಕೆಲವೊಮ್ಮೆ ಶಾರೀರಿಕ ಅಸ್ವಾಸ್ಥ್ಯ ಮನಸ್ಸಿನ ಮೇಲೆ, ಮಾನಸಿಕ ಅಸ್ವಾಸ್ಥ್ಯ ಅಥವಾ ಉದ್ವೇಗ ಶರೀರದ ಮೇಲೆ ಪರಿಣಾಮವನ್ನುಂಟು ಮಾಡುವ ಪ್ರಸಂಗಗಳು ನಡೆಯುತ್ತವೆ ಎಂದಿದ್ದಾರೆ.

ಮನಸ್ಸಿನ ಹಿಂದೆ ಆತ್ಮವಿದೆ. ಅದೇ ಮನುಷ್ಯನ ನಿಜವಾದ ಅಸ್ತಿತ್ವ, ಶರೀರ ಮತ್ತು ಮನಸ್ಸು ಅದರ ಮೂಲ ದ್ರವ್ಯಗಳು. ಆತ್ಮವೆಂಬುವುದು ಶುದ್ಧವಾದ ಒಂದು ಚೈತನ್ಯ. ಮನಸ್ಸು ಎಂಬುವುದು ಆತ್ಮ ಅಲ್ಲ. ಅದು ಆತ್ಮದಿಂದ ಬೇರೆಯೇ ಆದದ್ದು. ಮನಸ್ಸು ಎಂಬುವುದು ಆತ್ಮದ ಒಂದು ಉಪಕರಣದಂತಿದ್ದು, ಅದರ ಮೂಲಕ ಆತ್ಮವು ಬಹಿರಂಗ ಜಗತ್ತನ್ನು ಗ್ರಹಿಸುತ್ತದೆ. ತಮಸ್ಸು ಮತ್ತು ಚಂಚಲತೆಗಳು ಮನಸ್ಸಿನ ಸಾಮಾನ್ಯ ಸ್ಥಿತಿಯಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

Effective Mind Control Techniques For Personal Growth And Achieving Success

ಏಕಾಗ್ರತೆಯಿಂದ ಮನಸ್ಸಿನ ಉನ್ನತಿ ಸಾಧ್ಯ

ತಮಸ್ಸು ಸ್ಥಿತಿಯಲ್ಲಿ ಮನುಷ್ಯನು ಜಡನೂ ನಿಸ್ತೇಜನೂ ಆಗುತ್ತಾನೆ. ಚಾಂಚಲ್ಯದ ಸಮಯಗಳಲ್ಲಿ ಆತ ಹೋಯ್ದಾಡುವ ಸ್ವಭಾವದವನಾಗುತ್ತಾನೆ. ಬಹಳಷ್ಟು ಮಂದಿ ಏಕಾಗ್ರತೆಗೊಳಿಸುವಲ್ಲಿ ಸೋಲುತ್ತಾರೆ. ಮನಸ್ಸಿನ ಹತೋಟಿ ಅಷ್ಟೊಂದು ಸುಲಭವಲ್ಲ. ಹಾಗೆಂದು ಕಷ್ಟವೂ ಅಲ್ಲ. ಯಾವ ಮನುಷ್ಯ ಮನಸ್ಸನ್ನು ಏಕಾಗ್ರತೆಗೆ ತರುತ್ತಾನೆಯೋ ಅವನು ತಮ್ಮ ಏಕಾಗ್ರ ಮನಸ್ಸಿನೊಂದಿಗೆ ಯಾವ ಕ್ಷೇತ್ರದ ವ್ಯವಹಾರಕ್ಕೆ ಇಳಿದರೂ ಅಲ್ಲಿ ಯಶಸ್ಸು ಪಡೆಯುತ್ತಾನೆ. ಒಬ್ಬ ವ್ಯಾಪಾರಿ ಏಕಾಗ್ರವಾದ ಮನಸ್ಸಿನಿಂದ ತನ್ನ ವ್ಯಾಪಾರದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದುತ್ತಾನೆ. ಏಕಾಗ್ರ ಮನಸ್ಸಿನ ಸಂಗೀತಗಾರ ಮಹಾನ್ ಸಂಗೀತಗಾರನಾಗುತ್ತಾನೆ. ಹೀಗೆ ಏಕಾಗ್ರತೆಯ ಮನಸ್ಸು ಉನ್ನತಿಗೆ ಕೊಂಡೊಯುತ್ತದೆ ಎಂಬುದನ್ನು ಹೇಳಿದ್ದಾರೆ.

ಮನಸ್ಸು ಹತೋಟಿಗೆ ತರುವ ಬಗ್ಗೆ ಹೇಳುತ್ತಾ ಎಲ್ಲೆಲ್ಲೋ ಅಂಡಲೆಯುವ ಮನಸ್ಸನ್ನು ಹಿಡಿದು ಎಳೆದು ತಂದು ಒಂದು ವಿಚಾರದ ಗೂಟಕ್ಕೆ ಮೊದಲು ಕಟ್ಟಿ ಹಾಕಬೇಕು. ಈ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕು. ನಮ್ಮ ಸಂಕಲ್ಪ ಶಕ್ತಿಯಿಂದ ಮನಸ್ಸನ್ನು ದೃಢವಾಗಿ ನಿಲ್ಲಿಸಿ ಭಗವಂತನ ಮಹಿಮೆಗಳನ್ನು ಕುರಿತು ಧ್ಯಾನಿಸಬೇಕು. ಒಮ್ಮೆ ಮನಸ್ಸನ್ನು ಗೆದ್ದೆನೆಂದರೆ ಆತ ಅತ್ಯುನ್ನತ ಸ್ಥಿತಿಯನ್ನು ತಲುಪಲು ಸಾಧ್ಯವಾಗುತ್ತದೆ. ಅದು ಏನೇ ಇರಲಿ ಎಲ್ಲದಕ್ಕೂ ಮನಸ್ಸೇ ಕಾರಣವಾಗಿರುವುದರಿಂದ ಅದರ ಬಗ್ಗೆ ಎಚ್ಚರಿಕೆ ವಹಿಸಲೇ ಬೇಕಾಗುತ್ತದೆ.

Photo credit:This is an AI generated aticle image through WISE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+