Get Updates
Get notified of breaking news, exclusive insights, and must-see stories!

Dream Horoscope: ಕನಸಿನಲ್ಲಿ ಈ ವಸ್ತು ಕಂಡರೆ ಸುಖದ ಸುಪ್ಪಿಗೆಯಲ್ಲಿ ಜೀವನ

ಅನೇಕ ಕನಸುಗಳು ಭವಿಷ್ಯದ ಘಟನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತವೆ. ಕನಸಿನಲ್ಲಿ ಕಾಣುವ ವಸ್ತುಗಳು ಅದೃಷ್ಟ ಬದಲಾಯಿಸಲಿವೆ. ಹೀಗಾಗಿ ಕನಸಿನಲ್ಲಿ ಯಾವುದಾದರು ವಸ್ತು ಕಂಡರೆ ಅದು ನಿಮ್ಮ ಅದೃಷ್ಟದ ಸಂಕೇತವಾಗಿರಬಹುದು. ಹಾಗಾದರೆ ಸಂತೋಷದ ಸಂಕೇತ ನೀಡುವ ಆ ವಸ್ತುಗಳು ಯಾವುವು ಎಂದು ಈಗ ತಿಳಿಯೋಣ.

ಸಹಜವಾಗಿ ನಾವು ಮಲಗಿದಾಗ ಕನಸುಗಳು ಬೀಳುತ್ತವೆ. ನಮ್ಮ ಜೀವನದಲ್ಲಿ ನಡೆಯದ ಘಟನೆಗಳಿಗೆ ಹೊಂದಿಕೆಯಾಗುವಂತಹ ಕೆಲವೊಂದು ಘಟನೆಗಳು ಕನಸಿನಲ್ಲಿ ಬರಬಹುದು. ಅಲ್ಲದೆ ಅತ್ಯಂತ ಕೆಟ್ಟ ಸಂದರ್ಭಗಳನ್ನು ಕನಸಿನಲ್ಲಿ ಕಾಣುತ್ತೇವೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ ಕೆಲವೊಬ್ಬರೂ ಹಗಲಿನಲ್ಲಿ ಕಣ್ಮುಚ್ಚಿದಾಗಲೂ ಕನಸುಗಳನ್ನು ಕಾಣುತ್ತಾರೆ.

ಕೆಲವರು ಕನಸುಗಳನ್ನು ಹಗುರವಾಗಿ ತೆಗೆದುಕೊಂಡರೆ, ಇನ್ನು ಕೆಲವರು ತಾವು ಕಂಡ ಕನಸುಗಳ ಅರ್ಥವನ್ನು ಹುಡುಕಿಕೊಂಡು ಹೋಗುತ್ತಾರೆ. ಕೆಲವೊಮ್ಮೆ ನಾವು ನಮ್ಮ ಕನಸಿನಲ್ಲಿ ಕೆಲ ವಸ್ತುಗಳನ್ನು ನೋಡುತ್ತೇವೆ. ಇಂತಹ ಕನಸುಗಳು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಕನಸಿನಲ್ಲಿ ಯಾವ ವಸ್ತು ಕಂಡರೆ ಅದೃಷ್ಟ ಬದಲಾಗಲಿದೆ ಎಂದು ತಿಳಿಯೋಣ.

Dream Horoscope lucky thing to see in dream you will have a harvest of happiness in your life

ಕನಸಿನಲ್ಲಿ ಯಾವ ವಸ್ತು ಕಂಡರೆ ಉತ್ತಮ?

ಕನಸಿನಲ್ಲಿ ಪೊರಕೆ:-

ಕನಸಿನಲ್ಲಿ ಪೊರಕೆ ನೋಡುವುದು ಬಹಳ ಶುಭ ಸಂಕೇತ. ಪೊರಕೆಯನ್ನು ನೋಡುವುದು ಎಂದರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂದು ಅರ್ಥ. ಯಾಕೆಂದರೆ ಪೊರಕೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ ಕನಸಿನಲ್ಲಿ ಪೊರಕೆಯನ್ನು ನೋಡುವುದರ ಅರ್ಥ ಲಕ್ಷ್ಮೀಯನ್ನು ನೋಡಿದಂತೆ. ಹೀಗಾಗಿ ಅದು ನಿಮ್ಮ ಅದೃಷ್ಟವನ್ನು ಬದಲಾಯಿಸಲಿದೆ.

ಖಾಲಿ ಪಾತ್ರೆ:-

ಕನಸಿನಲ್ಲಿ ಖಾಲಿ ಪಾತ್ರೆಯನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಕನಸಿನಲ್ಲಿ ಕಂಡರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂದರ್ಥ. ಇದು ಆರ್ಥಿಕ ಲಾಭದ ಸಂಕೇತವೂ ಆಗಿದೆ. ನಿಮ್ಮ ಹಾಳಾದ ಕೆಲಸ ಮತ್ತೆ ಚೇತರಿಸಿಕೊಳ್ಳಲಿದೆ.

Dream Horoscope lucky thing to see in dream you will have a harvest of happiness in your life

ಕನಸಿನಲ್ಲಿ ಗೂಬೆ:-

ಕನಸಿನ ವಿಜ್ಞಾನದಲ್ಲಿ ಗೂಬೆಯನ್ನು ನೋಡುವುದು ತುಂಬಾ ಶುಭವೆನ್ನಲಾಗುತ್ತದೆ. ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಗೂಬೆಯನ್ನು ನೋಡುವುದು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದಂತೆ. ನಿಮ್ಮ ಮೇಲೆ ಹಣದ ಮಳೆಯಾಗಲಿದೆ ಎನ್ನುವುದರ ಸೂಚನೆಯಾಗಿದೆ. ಶೀಘ್ರದಲ್ಲೇ ನಿಮಗೆ ಹಣದ ಲಾಭವಾಗಲಿದೆ.

ಬಿಳಿ ಸಿಹಿತಿಂಡಿ:-

ಕನಸಿನಲ್ಲಿ ಬಿಳಿ ಸಿಹಿತಿಂಡಿಗಳನ್ನು ನೋಡುವುದು ಬಹಳ ಶುಭ ಸಂಕೇತ. ಇದರರ್ಥ ನಿಮ್ಮ ಜೀವನದಲ್ಲಿ ಸಂತೋಷ ಬರಲಿದೆ. ಲಕ್ಷ್ಮಿ ದೇವಿಯು ಆಶೀರ್ವಾದವನ್ನು ನೀಡಲಿದ್ದಾಳೆ ಎಂದು ಹೇಳಲಾಗುತ್ತದೆ.

ಚಿನ್ನ ಮತ್ತು ಬೆಳ್ಳಿ:-

ನಿಮ್ಮ ಕನಸಿನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ನೋಡುವುದು ಎಂದರೆ ಭವಿಷ್ಯದಲ್ಲಿ ನೀವು ಸಂಪತ್ತು, ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯಲಿದ್ದೀರಿ ಎಂದರ್ಥ. ಶೀಘ್ರದಲ್ಲೇ ನಿಮ್ಮ ಕಠಿಣ ಪರಿಶ್ರಮದ ಫಲ ಸಿಗುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರ್ಥವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+