ಕಿಡ್ನಿ ಕಲ್ಲು ಸಮಸ್ಯೆ ಇದೆಯಾ? ಈ 5 ಸರಳ ಮನೆಮದ್ದು ತಿಳಿದುಕೊಳ್ಳಿ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಕಡಿಮೆ ನೀರು ಕುಡಿಯುವುದು, ಅತಿಯಾದ ಉಪ್ಪು ತಿನ್ನುವುದು, ಹೆಚ್ಚಾಗಿ ಮಸಾಲೆ ಪದಾರ್ಥಗಳ ಸೇವನೆ ಹಾಗೂ ವ್ಯಾಯಾಮ ಕೊರತೆ ಸೇರಿದಂತೆ ಹಲವು ಕಾರಣಗಳಿಗೆ ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳಲು ಪ್ರಮುಖ ಕಾರಣಗಳಾಗಿವೆ. ಕಲ್ಲಿನ ಗಾತ್ರ ಸಣ್ಣದಾಗಿದ್ದರೆ ಕೆಲವು ಸರಳ ಮನೆಮದ್ದುಗಳ ಮೂಲಕ ಅದನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ಕಿಡ್ನಿ ಸಮಸ್ಯೆ ಕಡಿಮೆ ಮಾಡಲು ಸಹಕಾರಿಯಗುವ 5 ಸುಲಭ ಮನೆಮದ್ದುಗಳು
1 ಹೆಚ್ಚು ನೀರು ಕುಡಿಯಬೇಕು
ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರು ಕಡಿಯುವುದು ಉತ್ತಮ ಇದರಿಂದ ಮೂತ್ರದ ಪ್ರಮಾಣ ಹೆಚ್ಚಾಗಿ ಸಣ್ಣ ಕಲ್ಲುಗಳು ಹೊರಬರಲು ಸಹಾಯಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರು ಕುಡಿಯುವುದು ಉತ್ತಮ ಅಭ್ಯಾಸ.
2 ನಿಂಬೆರಸ ಸೇವನೆ
ನಿಂಬೆರಸದಲ್ಲಿರುವ ಸಿಟ್ರಿಕ್ ಆಸಿಡ್ ಕಲ್ಲು ರೊಪಗೊಳ್ಳುವುದನ್ನು ತಡೆಯಲು ಸಹಾಯವಾಗುತ್ತದೆ, ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣು ರಸ ಸೇರಿಸಿ ಕುಡಿಯಬಹುದು.

3 ಎಳನೀರು ಕುಡಿಯುವುದು ಒಳ್ಳೆಯದು
ಎಳನೀರು ದೇಹಕ ತಂಪು ನೀಡುವ ನೈಸರ್ಗಿಕ ಪಾನೀಯವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮೂತ್ರ ವಿರ್ಸಜನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಎಳನೀರು ಕುಡಿಯುವುದು ಒಳ್ಳೆಯದು.
4 ಜೀರಿಗೆ ಮಿಶ್ರಿತ ನೀರು
ಜೀರಿಗೆ ನೀರು ಜೀರ್ಣಕ್ರಿಯೆ ಸುಧಾರಿಸಲು ಮತ್ತು ದೇಹದ ವಿಷ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ರಾತ್ರಿ ನೀರಿನಲ್ಲಿ ಜೀರಿಗೆಯನ್ನು ನೆನೆಸಿಟ್ಟು ಬೆಳಿಗ್ಗೆ ಕುದಿಸಿ ಕುಡಿಯಬಹುದು.
5 ತುಳಸಿ ಎಲೆ ರಸ
ತುಳಸಿ ಎಲೆಗಳು ಔಷಧೀಯ ಗಣಗಳನ್ನು ಹೊಂದಿದ್ದು ಮೂತ್ರಪಿಂಡವನ್ನು ಶುದ್ಧವಾಗಿರಸಲು ಸಹಾಯ ಮಾಡಬಹುದು. ತುಳಸಿ ಎಲೆ ರಸಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸಬಹುದಾಗಿದೆ.
ಈ ತರಹದ ಆಹಾರಗಳಿಂದ ದೂರವಿರಿ
ಕಿಡ್ಮಿ ಕಲ್ಲು ಸಮಸ್ಯೆ ಇರುವವರು ಉಪ್ಪು ಹೆಚ್ಚಾಗಿ ಇರುವ ಆಹಾರ, ಜಂಕ್ ಫುಡ್ ಮತ್ತು ಸೋಡಾ ಪಾನೀಯಗಳ ಸೇವಿಸುವುದನ್ನು ಕಡಿಮೆ ಮಾಡಬೇಕು. ಕೆಲವು ಸಂದರ್ಭಗಳಲ್ಲಿ ಪಾಲಕ್ ಸೊಪ್ಪು, ಬೀಟ್ರೂಟ್ ಮತ್ತು ಟೊಮೆಟೊಗಳನ್ನು ಮಿತವಾಗಿ ಸೇವಿಸುವುದು ಉತ್ತಮ.
ವಿಶೇಷ ಸೂಚನೆ: ಮನೆಮದ್ದುಗಳು ಸಹಾಯಕ ಮಾತ್ರ. ಯಾವುದೇ ಚಿಕಿಸ್ಥೆ ಆರಂಭಿಸುವ ಮೊದಲು ನಿಮ್ಮ ಹತ್ತಿರದ ಬಳಿ ವ್ಯದ್ಯರ ಸಲಹೆ ಪಡೆಯುವುದು ಸುರಕ್ಷಿತ.












Click it and Unblock the Notifications