ಒಂದು ಲೋಟಾ ನೀರಿಗೆ, ಒಂದು ಚಮಚ ಸೋಂಪು ಹಾಕಿ ಬೆಳಗ್ಗೆ ಕುಡಿದರೆ ಏನೆಲ್ಲಾ ಲಾಭ?
ಬದಲಾಗುತ್ತಿರುವ ಜೀವನ ಶೈಲಿ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಈ ತೊಂದರೆಗಳಿಂದ ಬಚಾವ್ ಆಗಲು ಜನ ಬೇರೆ ಬೇರೆ ಮಾರ್ಗಗಳ ಮೊರೆ ಹೋಗುತ್ತಾರೆ. ಕೆಲವರು ಮಾತ್ರೆಗಳನ್ನು ತೆಗೆದುಕೊಂಡು ತಮ್ಮ ಸಮಸ್ಯೆಯ ಶಮವನ್ನು ಮಾಡಿಕೊಂಡರೆ, ಇನ್ನು ಕೆಲವರು ಯೋಗ, ವಾಕ್ ಹೀಗೆ ಆರೋಗ್ಯಕ್ಕೆ ಉತ್ತಮವಾದ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ.
ಜೀವನ ಶೈಲಿ ಬದಲಾದಂತೆ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಿವೆ. ಜೀವನ ಶೈಲಿ ಬದಲಾದಂತೆ ಆಹಾರ, ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಅದರ ಜೊತೆ ಅಸಿಡಿಟಿ ಇತ್ತೀಚಿನ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ತೊಂದರೆಯನ್ನು ಅನುಭವಿಸುತ್ತಿರುವ ಮನುಷ್ಯರು ಬೆಳಗ್ಗೆ ಉಗುರು ಬೆಚ್ಚಿಗಿನ ನೀರನ್ನು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಬಿಸಿ ನೀರಿನ ಬದಲು ಸೊಂಪು ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಆಹಾರ ತಜ್ಞೆ ಡಾ.ಸ್ವಾತಿ ಸಿಂಗ್ ನ್ಯೂಸ್ 24ಗೆ ನೀಡಿದ ಮಾಹಿತಿಯಂತೆ, ಗ್ಯಾಸ್ ಸಮಸ್ಯೆ ಹೊಂದಿದವರಿಗೆ ಸೊಂಪು ಅತಿ ಹೆಚ್ಚು ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ಸೋಂಪಿನಲ್ಲಿ ಔಷಧಿಯ ಗುಣಗಳಿದ್ದು, ಗ್ಯಾಸ್ ತಪ್ಪಿಸಲು ಸಹಾಯ ಮಾಡುತ್ತದೆ. ಅಲ್ಲದೆ ತೂಕ ನಷ್ಟಕ್ಕೂ ಇದು ಸಹಾಯಕ. ಬೆಳಿಗ್ಗೆ 1 ಗ್ಲಾಸ್ ಫೆನ್ನೆಲ್ ನೀರನ್ನು ಕುಡಿಯುವುದು ಗ್ಯಾಸ್, ಅಸಿಡಿಟಿ, ಉಬ್ಬುವಿಕೆಯನ್ನು ತಡೆಯುತ್ತದೆ ಮತ್ತು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಇದನ್ನು ಮೌತ್ ಫ್ರೆಷನರ್ ಆಗಿಯೂ ಬಳಸಬಹುದು.
ಇದನ್ನು ತಯಾರಿಸುವುದು ಹೇಗೆ?
ಒಂದು ಲೋಟಾ ನೀರಿನಲ್ಲಿ ಒಂದು ಚಮಚ ಸೊಂಪನ್ನು ಬೆರಿಸಿ. ಇಡಿ ರಾತ್ರಿ ಸೊಂಪನ್ನು ನೀರಿನಲ್ಲಿ ನೆನೆಯಲು ಬಿಡಿ. ಬೆಳಗ್ಗೆ ಇದನ್ನು ಉಗುರು ಬೆಚ್ಚಗೆ ಮಾಡಿ ಸೇವಿಸಿ. ಇಲ್ಲ ಹಾಗೆ ಸೋಸಿ ಸೇವಿಸಿದರೂ ನಡೆಯುತ್ತದೆ. ನೀವು ಸೋಸದೆ ಸಹ ಕುಡಿಯಬಹುದು. ನಿಮಗೆ ಬೇಕಿದ್ದಲ್ಲಿ ಜಗಿದು ಸೋಂಪು ತಿನ್ನಿ ಇಲ್ಲದಿದ್ದರೆ ಎಸೆದು ಬಿಡಿ.

ಅತಿಯಾದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಇದ್ದರೆ ಖಂಡಿತಾ ಊಟದ ನಂತರ 1 ಚಮಚ ಸೊಂಪ ಅನ್ನು ಸೇವಿಸಿ. ಇದರಿಂದ ನಿಮ್ಮ ಹೊಟ್ಟೆಯುಬ್ಬರ ಸಮಸ್ಯೆ ಕಡಿಮೆಯಾಗುತ್ತದೆ. ಗ್ಯಾಸ್ ಮತ್ತು ಅಸಿಡಿಟಿಯಿಂದಲೂ ಪರಿಹಾರ ದೊರೆಯುತ್ತದೆ.
ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಏನು ಲಾಭ
ಪ್ರತಿ ದಿನ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೆ ನಿಮ್ಮ ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಬಹುದು. ಯಕೃತ್ತನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಸೊಂಪಿನ ನೀರಿನ ಸೇವನೆ ಹಾಲುಣಿಸುವ ತಾಯಿಗೆ ಸಹ ಪ್ರಯೋಜನಕಾರಿ. ಏಕೆಂದರೆ ಇದು ಹೆಚ್ಚು ಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ಸಾಹಯಕ. ಇದನ್ನು ಸೇವಿಸುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ನಾರಿನಾಂಶ ಇರುತ್ತದೆ. ಇದು ದೇಹಕ್ಕೆ ಒಳ್ಳೆಯದು.












Click it and Unblock the Notifications