ಬೇಸಿಗೆಯಲ್ಲಿ ಶುಗರ್‌ ಹೈ ಆಗದಂತೆ ಹಣ್ಣುಗಳನ್ನು ಸೇವಿಸುವ ಸುರಕ್ಷಿತ ವಿಧಾನ ಇಲ್ಲಿದೆ

ಮಧುಮೇಹ ಹೊಂದಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಮಧುಮೇಹವು ಹೃದ್ರೋಗ, ನರ ಹಾನಿ, ಮೂತ್ರಪಿಂಡದ ಕಾಯಿಲೆ ಮತ್ತು ದೃಷ್ಟಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನಿರಂತರವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಧಿಕವಾಗಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗ್ಲೂಕೋಸ್ ಮಟ್ಟದ ನಿರ್ವಹಣೆ ಅತ್ಯಗತ್ಯ.

ಬೇಸಿಗೆಯಲ್ಲಿ ವಿವಿಧ ರೀತಿಯ ಹಣ್ಣುಗಳು ಸಿಗುತ್ತವೆ. ಬೇಸಿಗೆಯಲ್ಲಿ ಹಣ್ಣು ಸಾಮಾನ್ಯವಾಗಿ ಎಲ್ಲರ ಆಹಾರಕ್ರಮದ ನಿಯಮಿತ ಭಾಗವಾಗಿರುತ್ತದೆ. ಆದರೆ ಮಧುಮೇಹಿಗಳು ಹಣ್ಣುಗಳನ್ನು ಸೇವಿಸಬಹುದೇ ಎನ್ನುವುದು ಪ್ರಶ್ನೆ. ತಜ್ಞರ ಪ್ರಕಾರ ಬೇಸಿಗೆಯಲ್ಲಿ ಸಿಗುವ ಹಣ್ಣುಗಳ ರುಚಿಯನ್ನು ಮಧುಮೇಹಿಗಳು ಸವಿಯಬಹುದು. ಆದರೆ ಅದಕ್ಕೆ ಕೆಲವು ರೀತಿ ನೀತಿಗಳನ್ನು ಅನುಸರಿಸಬೇಕಾಗುತ್ತದೆ.

Diabetes Diet in Summer

ಹಣ್ಣುಗಳು ನೈಸರ್ಗಿಕ ಸಕ್ಕರೆ ಅಂದರೆ ಫ್ರಕ್ಟೋಸ್ ಅನ್ನು ಹೊಂದಿರುತ್ತವೆ. ಆದರೆ ಹಣ್ಣುಗಳಲ್ಲಿ ಅಗತ್ಯವಾದ ಫೈಬರ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ ಎಷ್ಟು ಪ್ರಮಾಣದಲ್ಲಿ ಹಣ್ಣು ಸೇವಿಸುತ್ತಾರೆ ಮತ್ತು ಯಾವ ಪ್ರಕಾರದ ಹಣ್ಣುಗಳನ್ನು ಸೇವಿಸುತ್ತಾರೆ ಎನ್ನುವ ಬಗ್ಗೆ ಜಾಗರೂಕರಾಗಿರಬೇಕು.

ಮಧುಮೇಹಿಗಳು ಸುರಕ್ಷಿತವಾಗಿ ಹಣ್ಣುಗಳನ್ನು ಹೇಗೆ ಸೇವಿಸಬಹುದು?:

ಮಧುಮೇಹ ಇರುವವರು ಎರಡು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ಬೇಸಿಗೆ ಹಣ್ಣುಗಳ ರುಚಿಯನ್ನು ಸವಿಯಬಹುದು. ಗ್ಲೈಸೆಮಿಕ್ ಸೂಚ್ಯಂಕ (GI), ಇದು ಹಣ್ಣು ರಕ್ತದಲ್ಲಿನ ಸಕ್ಕರೆಯನ್ನು ಎಷ್ಟು ಬೇಗನೆ ಹೆಚ್ಚಿಸುತ್ತದೆ ಎಂಬುದನ್ನು ಅಳೆಯುತ್ತದೆ ಮತ್ತು ಆಹಾರದ ಪ್ರಮಾಣವನ್ನು ನಿಯಂತ್ರಿಸುತ್ತದೆ.

"ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಸೇಬು, ಪೇರಳೆ, ಬೆರ್ರಿ ಹಣ್ಣುಗಳು ಮತ್ತು ಪಪ್ಪಾಯ ಹಣ್ಣುಗಳನ್ನು ಮಧುಮೇಹಿಗಳು ಸುರಕ್ಷಿತವಾಗಿ ತಿನ್ನಬಹುದು. ಏಕೆಂದರೆ ಈ ಹಣ್ಣುಗಳು ಸಕ್ಕರೆಯನ್ನು ರಕ್ತಕ್ಕೆ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಹಣ್ಣಿನ ರಸಗಳ ಬದಲಿಗೆ ಸಂಪೂರ್ಣ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಯಾಕೆಂದರೆ ಹಣ್ಣುಗಳಲ್ಲಿ ನಾರಿನ ಅಂಶವಿರುತ್ತದೆ. ಜ್ಯೂಸ್‌ ಬದಲು ಹಣ್ಣುಗಳನ್ನು ಹಾಗೆಯೇ ತಿಂದಾಗ ಹೆಚ್ಚುವರಿ ಸಕ್ಕರೆ ಸೇರಿಸುವ ಅಗತ್ಯ ಇರುವುದಿಲ್ಲ. ಜ್ಯೂಸ್‌ನಲ್ಲಿ ಸಕ್ಕರೆ ಹಾಕಬೇಕಾಗುತ್ತದೆ. ಜ್ಯೂಸ್‌ ತಯಾರಿಸುವಾಗ ಹಾಕುವ ಸಕ್ಕರೆ ಬ್ಲಡ್‌ ಶುಗರ್‌ ಅನ್ನು ಜಾಸ್ತಿ ಮಾಡಬಹುದು.

ಕಡಿಮೆ "ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣುಗಳಲ್ಲಿ ನೇರಳೆ, ಪೇರಳೆ, ಪೀಚ್, ಪ್ಲಮ್, ಪೇರಳೆ ಮತ್ತು ಸೇಬು ಸೇರಿವೆ.

ಈ ಹಣ್ಣುಗಳನ್ನು ತಿನ್ನುವಾಗ ಎಚ್ಚರಿಕೆ ಅಗತ್ಯ:

ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಕೆಲವು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಅಂದರೆ ಈ ಹಣ್ಣುಗಳಲ್ಲಿ GI ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅವು ವೇಗವಾಗಿ ರಕ್ತದಲ್ಲಿನ ಸಕ್ಕರೆ ಹೆಚ್ಚಾಗಲು ಕಾರಣವಾಗಬಹುದು. ಈ ಹಣ್ಣುಗಳು ಮಧುಮೇಹಿಗಳು ಸೇವಿಸುವಾಗ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿರುತ್ತದೆ.

ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಿರುವ ಹಣ್ಣುಗಳು:

ಮಾವಿನಹಣ್ಣುಗಳು
ಕಲ್ಲಂಗಡಿ
ದ್ರಾಕ್ಷಿಗಳು
ಅನಾನಸ್
ಪಪ್ಪಾಯ

ಹೆಚ್ಚುವರಿಯಾಗಿ, ಈ ಹಣ್ಣುಗಳಲ್ಲಿ ಫೈಬರ್‌ ಅಂಶ ಸಮೃದ್ಧವಾಗಿರುತ್ತವೆ. ಇದು ಮಧುಮೇಹಿಗಳಿಗೆ ಸಹಾಯ ಮಾಡುವ ರಹಸ್ಯ ಅಸ್ತ್ರವಾಗಿದೆ. ಫೈಬರ್‌ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಮಧುಮೇಹಿಗಳಿಗೆ ಅಪಾಯಕಾರಿಯಾದ ತೀಕ್ಷ್ಣವಾದ ಗ್ಲೂಕೋಸ್ ಸ್ಪೈಕ್‌ಗಳನ್ನು ತಡೆಯುತ್ತದೆ.

ಮಧುಮೇಹಿಗಳು ತಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಬೇಸಿಗೆಯ ಹಣ್ಣುಗಳನ್ನು ಸೇವಿಸಬೇಕಾದರೆ ಈ ಮಾರ್ಗಗಳನ್ನು ಅನುಸರಿಸಬಹುದು.

* ಬ್ಲಡ್‌ ಸ್ಟ್ರೀಮ್‌ನಲ್ಲಿ ಗ್ಲೂಕೋಸ್ ಹೀರಿಕೊಳ್ಳುವುದನ್ನು ನಿಧಾನಗೊಳಿಸಲು ಹಣ್ಣುಗಳನ್ನು ಪ್ರೋಟೀನ್ ಮತ್ತು ಬೀಜಗಳು ಅಥವಾ ಮೊಸರಿನಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಸವಿಯಬಹುದು.

* ಮಧುಮೇಹಿಗಳು ಒಮ್ಮೆಲೇ ಅಷ್ಟೂ ಹಣ್ಣುಗಳನ್ನು ಸೇವಿಸಬಾರದು. ಬದಲಿಗೆ 24 ಗಂಟೆಗಳ ಅವಧಿಯಲ್ಲಿ ಬಿಟ್ಟು ಬಿಟ್ಟು ಹಣ್ಣುಗಳನ್ನು ಸೇವಿಸಬಹುದು. ಹಣ್ಣುಗಳನ್ನು ತಿನ್ನುವಾಗ ಅದಕ್ಕೆ ಸಕ್ಕರೆ ಅಥವಾ ಉಪ್ಪನ್ನು ಸೇರಿಸಬಾರದು.

* ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆಯಾಗುವುದನ್ನು ತಡೆಗಟ್ಟಲು ಹಣ್ಣುಗಳನ್ನು ಮಧ್ಯಾಹ್ನದ ವೇಳೆಯಲ್ಲಿ ಅಥವಾ ಅದಕ್ಕಿಂತ ಮೊದಲು ತಿನ್ನಬೇಕು.

* ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ಮಾಡಿದ ತಕ್ಷಣ ಹಣ್ಣುಗಳನ್ನು ಸೇವಿಸಬಾರದು.

* ಒಮ್ಮೆ ಒಂದು ಹಣ್ಣನ್ನು ಮಾತ್ರ ಸೇವಿಸಬೇಕು. ಉದಾಹರಣೆಗೆ, 1 ಮಧ್ಯಮ ಕಿತ್ತಳೆ ಅಥವಾ 1 ಸಣ್ಣ ಸೇಬು ಹೀಗೆ.

ಕೆಲವು ಹೆಚ್ಚುವರಿ ಸಲಹೆಗಳು:

* ಬೇಸಿಗೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಸೌತೆಕಾಯಿ ಮತ್ತು ಕಲ್ಲಂಗಡಿಗಳಂತಹ ಹೈಡ್ರೇಟಿಂಗ್ ಹಣ್ಣುಗಳನ್ನು ತಿನ್ನಬೇಕು.

* ಹೊಸ ಹಣ್ಣನ್ನು ಪ್ರಯತ್ನಿಸಿದ ನಂತರ, ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಲು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಿ. ಇದು ಯಾವ ಹಣ್ಣುಗಳು ಬ್ಲಡ್‌ ಶುಗರ್‌ ಅನ್ನು ಜಾಸ್ತಿ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+