Coconut Chutney Recipe: ಇಡ್ಲಿಗೆ ತೆಂಗಿನಕಾಯಿ ಚಟ್ನಿ ಒಮ್ಮೆ ಹೀಗೆ ಮಾಡಿ.. ಆಗಾಗ ಈ ರೀತಿ ಮಾಡ್ತೀರಾ...
ಮನೆಯಲ್ಲಿ ನಿತ್ಯ ಬೆಳಗಿನ ಉಪಾಹಾರಕ್ಕಾಗಿ ಇಡ್ಲಿ ಅಥವಾ ದೋಸೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಿತ್ಯ ಒಂದೇ ಬಗೆಯ ಚಟ್ನಿ ತಿನ್ನಲು ಮನಸ್ಸಾಗದೇ ಇರಬಹುದು. ಹೀಗಾಗಿ ನೀವೇನಾದರೂ ಇದರೊಂದಿಗೆ ಯಾವ ಸೈಡ್ ಡಿಶ್ ಮಾಡಬೇಕೆಂದು ಯೋಚಿಸುತ್ತಿದ್ದರೆ. ಇಲ್ಲಿದೆ ಸಲಹೆ. ನಿಮ್ಮ ಮನೆಯಲ್ಲಿರುವವರಿಗೆ ಚಟ್ನಿ ಇಷ್ಟವಾಗಿದ್ದರೆ ಇದನ್ನು ಒಮ್ಮೆ ಟ್ರೈ ಮಾಡಿ.
ನೀವು ಆಗಾಗ್ಗೆ ಮನೆಯಲ್ಲಿ ತೆಂಗಿನಕಾಯಿ ಚಟ್ನಿ ಮಾಡಿರುತ್ತೀರಿ. ಹಾಗಾದರೆ ಒಮ್ಮೆ ಈ ಶೈಲಿಯಲ್ಲಿ ತೆಂಗಿನಕಾಯಿ ಚಟ್ನಿ ಮಾಡಿ. ಇದು ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಹಾಗೆನೇ ಮನೆಯಲ್ಲಿದ್ದ ಎಲ್ಲರೂ ಕೂಡ ಇದನ್ನು ತಿನ್ನಲು ಇಷ್ಟಪಡುತ್ತಾರೆ.

ಹಾಗಾದರೆ ತಡ ಮಾಡುವುದು ಬೇಡ ತೆಂಗಿನ ಚಟ್ನಿ ಮಾಡುವುದು ಹೇಗೆಂದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಮಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ತೆಂಗಿನ ಕಾಯಿ ಚಟ್ನಿ ಮಾಡುವ ವಿಧಾನ ತಿಳಿಯೋಣ.
ಅಗತ್ಯವಿರುವ ವಸ್ತುಗಳು:
* ಎಣ್ಣೆ - 1/2 ಟೀಸ್ಪೂನ್
* ಬೆಳ್ಳುಳ್ಳಿ - 7
* ಶುಂಠಿ ಸ್ವಲ್ಪ
* ಹಸಿ ಮೆಣಸಿನಕಾಯಿ -10
* ತೆಂಗಿನಕಾಯಿ - 1/4 ಕಪ್ (ತುರಿದ)
* ಶೆಂಗಾ - 1/4 ಕಪ್
* ಉಪ್ಪು - ರುಚಿಗೆ ತಕ್ಕಂತೆ
ಒಗ್ಗರಣೆಗಾಗಿ...
* ಎಣ್ಣೆ - 1 tbsp
* ಸಾಸಿವೆ - 1 tbsp
* ಉದ್ದಿನ ಬೇಳೆ - 1 tbsp
* ಇಂಗು ಪುಡಿ - ಸ್ವಲ್ಪ
* ಕರಿಬೇವಿನ ಎಲೆಗಳು - 1 ಕಟ್ಟು
* ಕೊತ್ತಂಬರಿ - ಸ್ವಲ್ಲಪ
* ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)
* ಉಪ್ಪು - ಸ್ವಲ್ಪ
ಪಾಕವಿಧಾನ:
* ಮೊದಲು ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ.

* ನಂತರ ಮಿಕ್ಸರ್ ಜಾರ್ ನಲ್ಲಿ ಹುರಿದ ಬೆಳ್ಳುಳ್ಳಿ ಹಸಿಮೆಣಸಿನಕಾಯಿ, ಶುಂಠಿ, ತೆಂಗಿನ ತುರಿ, ಹುರಿದ ಶೇಂಗಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ನಂತರ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. ಇದು ಹೆಚ್ಚು ನೀರಿನಂಶವಿರುವ ಚಟ್ನಿಯಾಗಿರುವುದರಿಂದ ಅದರಲ್ಲಿ ಸ್ವಲ್ಪ ಹೆಚ್ಚು ನೀರು ಹಾಕಿ ಕಲಸಬೇಕು.
* ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಒಗ್ಗರಣೆಗೆ ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿಯಾದಾಗ ಸಾಸಿವೆ ಮತ್ತು ಉದ್ದಿನಬೇಳೆಯನ್ನು ಹಾಕಿ ಒಗ್ಗರಣೆ ಮಾಡಿ.
* ನಂತರ ಅದಕ್ಕೆ ಇಂಗು ಪುಡಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ.
* ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಉಪ್ಪು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದನ್ನು ಚಟ್ನಿಯೊಂದಿಗೆ ಬೆರೆಸಿದರೆ, ರುಚಿಕರವಾದ ತೆಂಗಿನಕಾಯಿ ಚಟ್ನಿ ರೆಡಿ.












Click it and Unblock the Notifications