Chili Sambar Recipe: ಮನೆಯಲ್ಲಿ ಮೆಣಸಿನಕಾಯಿ ಇದಿಯಾ? ಹಾಗಾದ್ರೆ ಸಾಂಬಾರ್ ಮಾಡಿ- ಟೇಸ್ಟ್ ಮಾತ್ರ ಸೂಪರ್
ಮನೆಯಲ್ಲಿ ಮೆಣಸಿನಕಾಯಿ ಇದ್ದರೆ ಅದರಿಂದ ಸಾಂಬಾರ್ ಮಾಡಬಹುದು. ಮೆಣಸಿನಕಾಯಿಯಿಂದ ಸಾಂಬಾರ್ ಮಾಡುವುದು ಹೊಸ ವಿಧಾನ. ಮೆಣಸಿನಕಾಯಿ ಹುರಿದರೆ ಘಾಟ ಹೆಚ್ಚು, ಮುಟ್ಟಿದರೆ ಉರಿ, ತಿಂದರೆ ಖಾರ ಇರುತ್ತದೆ. ಆದರೆ ಇದರಿಂದ ಸಾಂಬಾರ್ ಮಾಡಿದರೆ ರುಚಿ ಜಾಸ್ತಿ. ಮಾಡುವ ವಿಧಾನ ತಿಳಿದರೆ ಮೆಣಸಿನಕಾಯಿಯಿಂದ ಟೇಸ್ಟಿಯಾದ ಸಾಂಬಾರ್ ತಯಾರಿಸಬಹುದು.
ಮೆಣಸಿನಕಾಯಿ ಬಜ್ಜಿ, ಉಪ್ಪಿನಕಾಯಿ, ಚಟ್ನಿ, ಪಲ್ಯಾ ಮಾಡುವ ವಿಧಾನ ಎಲ್ಲರಿಗೂ ಗೊತ್ತಿದೆ. ಇದೀಗ ಮೆಣಸಿನಕಾಯಿ ಸಾಂಬಾರ್ ಮಾಡುವ ವಿಧಾನ ತಿಳಿಯೋಣ. ಮೊದಲಿಗೆ ಮೆಣಸಿನಕಾಯಿ ಸಾಂಬಾರ್ ತಯಾರಿಸಲು ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಹಸಿ ಕೆಂಪು ಗುಂಡೂರು ಮೆಣಸಿನಕಾಯಿ 10
* ಒಣ ಕೊಬ್ಬರಿ ಒಂದು ಕಪ್
* ಟೊಮೆಟೋ 3
* ಈರುಳ್ಳಿ 1
* ನಿಂಬೆ ಹಣ್ಣು 1
* ಕಾಳು ಮೆಣಸು 3
* ಲವಂಗ 3
* ಚಕ್ಕೆ ಒಂದು ಇಂಚು
* ಕೊತ್ತಂಬರಿ ಸ್ವಲ್ಪ
* ಕರಿಬೇವು ಸ್ವಲ್ಪ
* ಜೀರಿಗೆ ಅರ್ಧ ಚಮಚ
* ಸಾಸಿವೆ ಅರ್ಧ ಚಮಚ
* ಉಪ್ಪು ರುಚಿಗೆ
*ಅರಿಶಿಣ ಚಿಟಕೆ
* ಅಡುಗೆ ಎಣ್ಣೆ 5 ಟೇಬಲ್ ಸ್ಟೂನ್
ತಯಾರಿಸುವ ವಿಧಾನ:-
* ಒಂದು ತವೆಯನ್ನು ಒಲೆಯ ಮೇಲೆ ಇಟ್ಟು ಮೆಣಸಿನಕಾಯಿಯನ್ನು ಸ್ವಲ್ಪ ಹುರಿದುಕೊಂಡು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ (ಮೆಣಸಿನಕಾಯಿ ಸಿಡಿಯಬಹುದು ಜಾಗರೂಕರಾಗಿ ಹುರಿಯಿರಿ)
* ನಂತರ ಇದೇ ತವೆಯ ಮೇಲೆ ಸಣ್ಣದಾಗಿ ರುಬ್ಬಿದ ಒಣ ಕೊಬ್ಬರಿ ಹಾಕಿ ಹಸಿ ವಾಸನೆ ಹೋಗುವವರೆಗೂ ಸಣ್ಣ ಉರಿಯಲ್ಲಿ ಬಿಸಿ ಮಾಡಿ ತೆಗೆದು ಇಡಿ
* ಬಳಿಕ ಇದೇ ತವೆಯ ಮೇಲೆ ಕಾಳು ಮೆಣಸು, ಕರಿಬೇವು, ಜೀರಿಗೆ, ಲವಂಗ, ಚಕ್ಕೆ ಹಾಕಿ ಹುರಿದು ರುಬ್ಬಿ ಸ್ವಲ್ಪ ಉಪ್ಪು ಹಾಗೂ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ
* ಈ ಮಿಶ್ರಣವನ್ನು ಹುರಿದ ಮೆಣಸಿನಕಾಯಿಯನ್ನು ಸೀಳಿ ಅದರೊಳಗೆ ಸ್ವಲ್ಪ ಸ್ವಲ್ಪ ಮಾತ್ರ ತುಂಬಿಕೊಳ್ಳಿ

* ಒಲೆಯ ಮೇಲೆ ಒಂದು ಪ್ರತ್ಯೇಕ ಪಾತ್ರೆ ಇಟ್ಟು ಅದಕ್ಕೆ ಅಡುಗೆ ಎಣ್ಣೆ ಹಾಕಿ, ಜೀರಿಗೆ ಸಾಸಿವೆ ಹಾಕಿ ಚಟಪಟ ಅಂದ ಬಳಿಕ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ
* ಬಳಿಕ ಇದಕ್ಕೆ ಟೊಮೆಟೋ ಸೇರಿಸಿ ಬಾಡಿಸಿ. ಮಿಶ್ರಣ ತುಂಬಿದ ಮೆಣಸಿನಕಾಯಿ ಕಾಯಿ ಹಾಕಿ.
* ನಂತರ ಹುರಿದ ಕಾಯಿ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಅರಿಶಿಣ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಎರಡು ನಿಮಿಷ ಬಿಟ್ಟುಬಿಡಿ.
* ಬಳಿಕ ಇದಕ್ಕೆ ಎರಡು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ.
ಗ್ಯಾಸ್ ಆಫ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಅನ್ನದೊಂದಿಗೆ ಈ ಸಾಂಬಾರ್ ಸೇವಿಸಿದರೆ ಸಖತ್ ಟೇಸ್ಟಿಯಾಗಿರುತ್ತದೆ. ನೀವು ಕೂಡ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.












Click it and Unblock the Notifications