Chicken Spicy Gravy Recipe: ತಡ ಆದ್ರೂ ಪರವಾಗಿಲ್ಲ ಚಿಕನ್ನೇ ತಿನ್ಬೇಕು ಅನ್ಕೊಂಡಿದ್ರೆ ಇಲ್ಲಿದೆ ಒಂದು ಸೂಪರ್ ಡೂಪರ್ ರೆಸಿಪಿ..
ಇವತ್ತು ಭಾನುವಾರ. ಬೇಗ ಎದ್ದು ತಿಂಡಿ ಮಾಡಿಕೊಂಡು ತಿನ್ನೋರಿಗಿಂತ ಕೊಮಚ ತಡವಾಗಿ ಎದ್ದು ಊಟ ಮಾಡೋರೇ ಅಧಿಕ. ಕೆಲವರಂತೂ ಭಾನುವಾರ ಬಂದರೆ ಸಾಕು ಚಿಕನ್ ತಿನ್ಬೇಕು ಅಂತ ಆಸೆ ಪಡ್ತಾರೆ. ತಡ ಆದರೂ ಪರವಾಗಿಲ್ಲ. ಚಿಕನ್ನೇ ತಿನ್ಬೇಕು ಅಂದುಕೊಳ್ತಾರೆ.
ಹೀಗೆ ಚಿಕನ್ ತಿನ್ನಲು ಆಸೆ ಪಡೋರಿಗೆ ಇಲ್ಲಿದೆ ಒಂದು ಅದ್ಬುತವಾದ ರೆಸಿಪಿ. ಈ ಚಿಕನ್ ಸ್ಪೈಸಿ ಗ್ರೇವಿ ಮಾಡಿದರೆ ಅನ್ನ, ಚಪಾತಿ ಹಾಗೂ ಪರೋಟಾ ಜೊತೆಗೂ ತಿನ್ಬಹುದು. ಹಾಗಾದರೆ ತಡ ಮಾಡುವುದು ಬೇಡ ಚಿಕನ್ ಸ್ಪೈಸಿ ಗ್ರೇವಿ ಮಾಡುವ ವಿಧಾನವನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಮಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಚಿಕನ್ ಸ್ಪೈಸಿ ಗ್ರೇವಿಗೆ ಬೇಕಾಗುವ ಪದಾರ್ಥಗಳು:
* ಚಿಕನ್ ಒಂದು ಕೆಜಿ
*ಟೊಮೆಟೊ 5
*ಈರುಳ್ಳಿ 3
*ಶುಂಠಿ ಒಂದು ಇಂಚು
* ಬೆಳ್ಳುಳ್ಳಿ 5 ಎಸಳು
* ಪುದೀನಾ ಸ್ವಲ್ಪ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಕಾಳುಮೆಣಸು ಪೌಡರ್ ಅರ್ಧ ಚಮಚ
* ಖಾರ ಒಂದು ಚಮಚ
* ಲವಂಗ 3
* ಅರಿಶಿಣ ಸ್ವಲ್ಪ
* ದನಿಯಾ ಪೌಡರ್ ಕಾಲ್ ಚಮಚ
* ಗರಂ ಮಸಾಲ ಪೌಡರ್ ಅರ್ಧ ಚಮಚ
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ
* ಲಿಂಬೆಹಣ್ಣು ಒಂದು

ತಯಾರಿಸುವ ವಿಧಾನ:
*ಚಿಕನ್ ಚೆನ್ನಾಗಿ ತೊಳೆದು ಲಿಂಬೆಹಣ್ಣಿನ ರಸ ಹಿಂಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಪಾತ್ರೆ ಮುಚ್ಚಿಡಿ.
* ಒಂದು ಮಿಕ್ಸಿ ಜಾರ್‌ಗೆ ಶುಂಠಿ-ಬೆಳ್ಳುಳ್ಳಿ ಹಾಕಿಕೊಂಡು ರುಬ್ಬಿ ಒಂದೆಡೆ ತೆಗೆದಿಡಿ, ನಂತರ ಈರುಳ್ಳಿ ರುಬ್ಬಿಕೊಂಡು ಒಂದೆಡೆ ಇಡಿ. ಬಳಿ ಟೊಮೆಟೊ ಹಾಕಿ ರುಬ್ಬಿಕೊಳ್ಳಿ.
* ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಸ್ವಲ್ಪ ಕೆಂಪಾಗಲು ಬಿಡಿ.
* ನಂತರ ಇದಕ್ಕೆ ರುಬ್ಬಿಕೊಂಡ ಈರುಳ್ಳಿ ಹಾಕಿ, ಇದು ಕೆಂಪಾದ ಬಳಿಕ ಟೊಮೆಟೊ ಹಾಕಿ ಹಸಿ ವಾಸನೆ ಹೋಗುವವರೆಗೂ ಕದಡಿ.
* ಬಳಿಕ ಇದಕ್ಕೆ ಇದಕ್ಕೆ ಪೆಪ್ಪರ್ ಪೌಡರ್, ಲವಂಗ, ಅರಿಶಿಣ, ದನಿಯಾ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಇದಕ್ಕೆ ಪುದೀನಾ ಹಾಕಿ ನೆನಸಿಟ್ಟ ಚಿಕನ್ ಹಾಕಿ ಚೆನ್ನಾಗಿ ಕಲಸಿ.
* ಸ್ವಲ್ಪ ಹೊತ್ತು ಬಿಟ್ಟು ಇದಕ್ಕೆ ಖಾರ, ಉಪ್ಪು, ಗರಂ ಮಸಾಲ ಪೌಡರ್ ಹಾಕಿ ಕುಕ್ಕರ್ ಮುಚ್ಚಿಡಿ. ಬೇಕಿದ್ದಲ್ಲಿ ಸ್ವಲ್ಪ ನೀರು ಬೆರೆಸಿಕೊಳ್ಳಿ.
* ಮೂರು ವಿಸಿಲ್ ಆದ ಬಳಿಕ ಕುಕ್ಕರ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಉದುರಿಸಿದರೆ ಚಿಕನ್ ಸ್ಪೈಸಿ ಗ್ರೇವಿ ಸವಿಯಲು ಸಿದ್ಧ.












Click it and Unblock the Notifications