Butter Fruit Payasa Recipe: ಬೆಣ್ಣೆ ಹಣ್ಣಿನ ಪಾಯಸ ಕುಡಿದರೆ ಆಗದು ಆಯಾಸ... ಒಮ್ಮೆ ಟ್ರೈ ಮಾಡಿ ನೋಡಿ...
ಬೆಣ್ಣೆ ಹಣ್ಣು.. ಈ ಹಣ್ಣಿನ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇಲ್ಲ. ಈ ಹಣ್ಣು ನೋಡಲು ಹಸಿರಾಗಿರುತ್ತದೆ. ಮಾಗಿದ ಬಳಿಕ ಈ ಹಣ್ಣಿನ ಬಣ್ಣ ಕಪ್ಪು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಹೀಗೆ ಇದು ನೋಡಲು ಎಷ್ಟು ಚಂದವೋ ತಿನ್ನಲು ಕೂಡ ಅಷ್ಟೇ ರುಚಿ. ಈ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಹಾಲಿನಿಂದ ಜ್ಯೂಸ್ ಮಾಡಿಕೊಂಡು ಕುಡಿಯಲು ತುಂಬಾ ಜನ ಇಷ್ಟಪಡುತ್ತಾರೆ. ಆದರೀಗ ನಾವು ನಿಮಗೆ ಈ ಹಣ್ಣಿನಿಂದ ಪಾಯಸ ಮಾಡುವುದನ್ನು ಹೇಳಿ ಕೊಡುತ್ತೇವೆ.
ಹೌದು... ದಸರಾ ಹಬ್ಬಕ್ಕೆ ನೀವು ಈ ಬೆಣ್ಣೆ ಹಣ್ಣಿ (Butter Fruit)ನಿಂದ ಪಾಯಸ ಮಾಡಬಹುದು. ಇದು ವಿಭಿನ್ನವಾದ ರುಚಿಯನ್ನು ನೀಡಲಿದ್ದು ಮನೆ ಮಂದಿಗೆಲ್ಲಾ ಮೆಚ್ಚುಗೆಯಾಗುತ್ತದೆ. ಜೊತೆಗೆ ನಿಮ್ಮ ಮನೆಗೆ ಬರುವ ಅತಿಥಿಗಳೂ ಇದನ್ನು ಮೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ತಡ ಮಾಡುವುದು ಬೇಡ, ಬೆಣ್ಣೆ ಹಣ್ಣಿ (Avocado Fruit)ನ ಪಾಯಸ ಮಾಡುವ ವಿಧಾನವನ್ನು ಈಗ ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಬೆಣ್ಣೆ ಹಣ್ಣು 2
* ಹಾಲು 1 ಲೀಟರ್
* ಬಾದಾಮಿ 10 tblsn
* ಗೋಡಂಬಿ 10 tblsn
* ಪಿಸ್ತಾ 10 tblsn
* ತುಪ್ಪ 2 tblsn
* ತುಳಸಿ ಬೀಜ ಕಾಲ್ tblsn
* ದನಿಯಾ ದಾಲ್ 1tblsn
* ಸೂರ್ಯಪಾನ್ ಬೀಜ 1tblsn
* ಸಕ್ಕರೆ ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:-
*ತುಳಿಸಿ ಬೀಜಗಳನ್ನು ಒಮ್ಮೆ ನೀರಿನಲ್ಲಿ ತೊಳಿದು ಸ್ವಲ್ಪ ನೀರು ಹಾಕಿ ನೆನೆಯಲು ಬಿಡಿ.
* ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಎರೆಡೆರೆಡು ಬಾದಾಮಿ, ಗೋಡಂಬಿ, ಪಿಸ್ತಾವನ್ನು ಚಿಕ್ಕದಾಗಿ ಕಟ್ ಮಾಡಿ ತುಪ್ಪದಲ್ಲಿ ಪ್ರೈ ಮಾಡಿ ತೆಗೆದಿಡಿ. ಉಳಿದ ಬಾದಾಮಿ, ಗೋಡಂಬಿ, ಪಿಸ್ತಾವನ್ನು ಪ್ರತ್ಯೇಕವಾಗಿ ಮಿಕ್ಸಿ ಜಾರ್‌ಗೆ ಹಾಕಿ ಪೌಡರ್ ಮಾಡಿಕೊಳ್ಳಿ.
* ಮತ್ತೊಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಹಾಲನ್ನು ಹಾಕಿ ಬಿಸಿ ಮಾಡಿ.
* ಹಾಲು ಕುದಿಯುವಾಗ ಸಕ್ಕರೆಯನ್ನು ಬೇರೆಸಿ ಮತ್ತೊಂದು ಕುದಿ ಬರುವವರೆಗೂ ಬಿಡಿ.
* ನಂತರ ಹಾಲು ಕುದಿಯುವಾಗ ಬಾದಾಮಿ, ಗೋಡಂಬಿ, ಪಿಸ್ತಾ ಪೌಡರ್ ಅನ್ನು ಒಂದೊಂದಾಗಿ ಬೆರೆಸಿ ಚೆನ್ನಾಗಿ ಕುದಿಸಿ.
* ಹಾಲು ಸ್ವಲ್ಪ ಗಟ್ಟಿಯಾಗುವವರೆಗೂ ಇದನ್ನು ಕುದಿಸಬೇಕು, ಬಳಿಕ ಇದಕ್ಕೆ ದನಿಯಾ ದಾಲ್ ಹಾಕಿ
* ಬಳಿಕ ಒಲೆಯನ್ನು ಆಫ್ ಮಾಡಿ. ಇದಕ್ಕೆ ತುಪ್ಪದಲ್ಲಿ ಹಿರಿದ ಬಾದಾಮಿ, ಗೋಡಂಬಿ, ಪಿಸ್ತಾ ಚೂರುಗಳನ್ನು ಮಿಕ್ಸ್ ಮಾಡಿ. ಇದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟುಬಿಡಿ
* ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಬೆಣ್ಣೆ ಹಣ್ಣನ್ನು ಪೇಸ್ಟ್ ಮಾಡಿ
* ಪಾಯಸ ಸಂಪೂರ್ಣವಾಗಿ ತಣ್ಣಗಾದ ಬಳಿಕ ತುಳಸಿ ಬೀಜ, ಸೂರ್ಯಪಾನ್ ಬೀಜ ಹಾಕಿ ಮಿಕ್ಸ್ ಮಾಡಿ, ಬಳಿಕ ಇದಕ್ಕೆ ಬೆಣ್ಣೆ ಹಣ್ಣಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಜ್‌ನಲ್ಲಿ ಇಟ್ಟು ಸ್ವಲ್ಪ ತಣ್ಣಗಾಗಿಸಿ ತಿಂದರೆ ಹಾಹಾ... ಹಾಹಾ.... ಅದ್ಬುತವಾಗಿರುತ್ತೆ ಬೆಣ್ಣೆ ಹಣ್ಣಿನ ಪಾಯಸ.












Click it and Unblock the Notifications