Get Updates
Get notified of breaking news, exclusive insights, and must-see stories!

ಶ್ರೀರಾಮನ ಆಶೀರ್ವಾದ ಪಡೆಯಲು ಈ 10 ವಸ್ತುಗಳನ್ನು ಮನೆಗೆ ತನ್ನಿ...

ವಿಜಯದಶಮಿಯ ದಿನದಂದು ಶ್ರೀರಾಮನು ರಾವಣನನ್ನು ಕೊಂದನು. ಇದು ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸಂಕೇತಿಸುತ್ತದೆ. ದಸರಾ, ದೀಪಾವಳಿಯಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣನನ್ನು ಪೂಜಿಸಲಾಗುತ್ತದೆ. ಜೊತೆಗೆ ಈ ದಿನಗಳಲ್ಲಿ ಮನೆಗೆ ಕೆಲವು ವಸ್ತುಗಳನ್ನು ತರುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬ ನಂಬಿಕೆ ಇದೆ.

ಈ 10 ವಸ್ತುಗಳನ್ನು ಮನೆಗೆ ತನ್ನಿ

ಬಿಲ್ಲು ಬಾಣ

ಶ್ರೀರಾಮನ ಆಶೀರ್ವಾದ ಪಡೆಯಲು ಮನೆಗೆ ಬಿಲ್ಲು ಬಾಣವನ್ನು ತನ್ನಿ. ಮನೆಯ ಪೂರ್ವ ದಿಕ್ಕಿನಲ್ಲಿ ಇದನ್ನು ಇಡಿ. ಇದರಿಂದ ಮನೆಯ ಋಣಾತ್ಮಕ ಶಕ್ತಿ ನಾಶವಾಗುತ್ತದೆ. ಶ್ರೀರಾಮನು ರಾವಣನನ್ನು ಕೊಲ್ಲಲು ಉಪಯೋಗಿಸಿದ ಬಾಣವನ್ನು ಪ್ರಾಯಿಕವಾಗಿ 'ಬ್ರಹ್ಮಾಸ್ತ್ರ' ಎಂದು ಕರೆಯುತ್ತಾರೆ.

luck-will-change-with-the-blessings-of-shri-ram

ಆಲದ ಎಲೆ

ಶ್ರೀರಾಮನ ಆಶೀರ್ವಾದ ಪಡೆಯಲು ಮನೆಯೊಳಗೆ ಒಂದು ಆಲದ ಎಲೆಯನ್ನು ತಂದು ಕೆಂಪು ಚಂದನ ಮತ್ತು ಅಕ್ಷತವನ್ನು ಸಿಂಪಡಿಸಿ ಮನೆಯ ಮುಖ್ಯ ಬಾಗಿಲಿಗೆ ಕಟ್ಟಿ. ಇದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.

ವೀಳ್ಯದೆಲೆ

ಮನೆಯಲ್ಲಿ ಪೂಜೆಗೆ ವೀಳ್ಯದೆಲೆಯನ್ನು ತಂದು ಬಟ್ಟಲಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ.

ಎಳ್ಳಿನ ಎಣ್ಣೆ

ಶ್ರೀರಾಮನ ಆಶೀರ್ವಾದ ಪಡೆಯಲು ಮನೆಗೆ ಎಳ್ಳೆಣ್ಣೆ ತನ್ನಿ. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ರಾಮಾಯಣ ಪಠ್ಯ

ದಸರಾ ದಿನದಂದು ರಾಮಾಯಣ ಪುಸ್ತಕವನ್ನು ಮನೆಗೆ ತಂದು ಪಠಿಸಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಶಿವಲಿಂಗ

ದಸರಾ ದಿನದಂದು ಮನೆಯಲ್ಲಿ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಬೇಕು. ಶಿವಲಿಂಗವು ಈಗಾಗಲೇ ಇದ್ದರೆ ಅದನ್ನು ವಿಧಿ ವಿಧಾನಗಳ ಪ್ರಕಾರ ಪೂಜಿಸಿ.

luck-will-change-with-the-blessings-of-shri-ram

ಅಂಲಕಾರಿಕ ವಸ್ತು

ದಸರಾ ದಿನದಂದು ಅಂಲಕಾರಿಕ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟ ಮತ್ತು ಐಶ್ವರ್ಯವನ್ನು ತರುತ್ತದೆ ಎಂದು ನಂಬಲಾಗಿದೆ.

ವಾಹನ

ಶ್ರೀರಾಮನ ಆಶೀರ್ವಾದ ಪಡೆಯಲು ದಸರಾ ದಿನದಂದು ಹೊಸ ವಾಹನವನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ವಾಹನವು ಈಗಾಗಲೇ ಇದ್ದರೆ ಅದನ್ನು ಸ್ವಚ್ಚಗೊಳಿಸಿ ಪೂಜಿಸಿ.

ತೆಂಗಿನ ಕಾಯಿ

ದಸರಾ ದಿನದಂದು ತೆಂಗಿನಕಾಯಿಯನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ದಸರಾ ದಿನದಂದು ಮನೆಗೆ ತೆಂಗಿನಕಾಯಿ ತಂದರೆ ಚಿನ್ನ ತಂದಂತೆ.

ಈ ವಿಗ್ರಹವನ್ನು ಮನೆಗೆ ತನ್ನಿ

ಈ ದಿನ ಶ್ರೀರಾಮ ಮತ್ತು ಸೀತಾ ಮಾತೆಯ ವಿಗ್ರಹವನ್ನು ಮನೆಗೆ ತಂದು ಪ್ರತಿಷ್ಠಾಪಿಸಿ. ಇದರ ನಂತರ ಪೂಜೆಯನ್ನು ಮಾಡಬೇಕು.

ರಾಮಾಯಣ ಕಥೆ:-

ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮಾಯಣದಲ್ಲಿ ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಬೇಕಾಯಿತು.

ಕೈಕೇಯಿಯು ಶ್ರೀರಾಮನು 14 ವರ್ಷಗಳ ವನವಾಸವನ್ನು ತೆಗೆದುಕೊಳ್ಳಬೇಕೆಂದು ದಶರಥನಿಂದ ವರವನ್ನು ಪಡೆದುಕೊಳ್ಳುತ್ತಾಳೆ. ಈಕೆ 14 ವರ್ಷ ಕೇಳಲು ಮುಖ್ಯ ಕಾರಣವೇನೆಂದರೆ, ಒಬ್ಬ ವ್ಯಕ್ತಿಯು ತನ್ನ ಯೌವನದಲ್ಲಿ ತನ್ನ 14 ಅಂದರೆ ಐದು ಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಅಹಂಕಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ರಾಮನಿಗೆ ರಾವಣನನ್ನು ಸಂಹಾರ ಮಾಡಲು ಸಹಕಾರಿ ಎಂಬುದು ಆಕೆಗೆ ತಿಳಿದಿತ್ತು. ಈ ಕಾರಣದಿಂದ ರಾಮನಿಗೆ 14 ವರ್ಷಗಳ ವನವಾಸವನ್ನು ವಿಧಿಸಿದಳು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+