ಮಳೆಗಾಲದಲ್ಲಿ ನೆಗಡಿ, ಕೆಮ್ಮು ತಡೆಗಟ್ಟಲು ಈ ದೇಸಿ ಕಷಾಯವನ್ನು ಸೇವಿಸಿ; ಮಾಡುವುದು ಹೇಗೆ ಗೊತ್ತಾ?
ಋತು ಬದಲಾಗುತ್ತಿದೆ. ಇದರಿಂದ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ದಿನ ಚೆನ್ನಾಗಿ ಇದ್ದ ದೇಹ ಇನ್ನು ಹಲವು ತೊಂದರೆಗಳನ್ನು ಅನುಭಿಸುತ್ತದೆ. ಇದಕ್ಕೆ ವಾತವರಣವೂ ಪೂರಕ ಸಾಥ್ ನೀಡುತ್ತದೆ. ಈ ಋತುವಿನಲ್ಲಿ ಆಪ್ತ ಸ್ನೇಹಿತನ ರೀತಿ ಖಾಯಿಲೆಗಳು ಸಹ ನಮ್ಮ ಹಿಂದೆ ಬೀಳುತ್ತವೆ. ಅದರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತ, ಕೆಮ್ಮು, ನೆಗಡಿ ಮರಿಯದೆ ತಮ್ಮ ಹಾಜರಿಯನ್ನು ಹಾಕಿ ಹೋಗುತ್ತವೆ.
ಮಳೆ ಬಂದರೆ ಬಿಸಿಲಿನ ತಾಪದಿಂದ ಮುಕ್ತಿ ದೊರೆಯುತ್ತದೆ ಆದರೆ ಈ ಮಳೆಗಾಲದಲ್ಲಿ ಜನ ಬೇರೆ ಬೇರೆ ರೋಗಗಳಿಗೆ ಬಲಿಯಾಗುತ್ತಾರೆ. ವಿಶೇಷವಾಗಿ, ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಈ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಮುಖ್ಯ. ಇದರಿಂದ ನಿಮ್ಮ ದೇಹ ಗಟ್ಟಿ ಮುಟ್ಟಾಗಿರುತ್ತದೆ. ಅಲ್ಲದೆ ಋತುಮಾನದ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಅಜವಾನ ಸೇವಿಸುವುದು ಉತ್ತಮ. ನೆಗಡಿ ಮತ್ತು ಕೆಮ್ಮನ್ನು ತಡೆಯುವಲ್ಲಿ ಇದು ಪ್ರಯೋಜನಕಾರಿ.

ಅಜವಾನ ಸೇವನೆಯಿಂದ ದೇಹಕ್ಕೆ ಹಲವು ಲಾಭಗಳು ಆಗುತ್ತವೆ. ಇದರಲ್ಲಿ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಇದ್ದು, ಋತುಮಾನದ ಸೊಂಕನಿಂದ ಬಚಾವ್ ಆಗಬಹುದು. ಬೆಳ್ಳುಳ್ಳಿ ನಂಜುನಿರೋಧಕ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ತುಂಬಿರುತ್ತದೆ. ಇದು ದೇಹವನ್ನು ವೈರಸ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಲವಂಗ ಶ್ವಾಸಕೋಶವನ್ನು ಆರೋಗ್ಯವಾಗಿರಿಸುತ್ತದೆ. ಇದರ ಸೇವನೆಯಿಂದ ಶೀತ, ಕೆಮ್ಮು, ಬ್ರಾಂಕೈಟಿಸ್, ಸೈನಸೈಟಿಸ್ ಮತ್ತು ಅಸ್ತಮಾದಿಂದ ಮುಕ್ತಿ ಪಡೆಯಬಹುದು.
ಬಯೋಮೆಡ್ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಜವಾನದಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಈ ಅಧ್ಯಯನದ ಪ್ರಕಾರ, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕೊಬ್ಬು, ಪ್ರೋಟೀನ್, ಫೈಬರ್, ರಂಜಕ, ಕಬ್ಬಿಣ, ಮ್ಯಾಂಗನೀಸ್, ಅಯೋಡಿನ್ ಮತ್ತು ತಾಮ್ರದಂತಹ ಅಂಶಗಳು ಮತ್ತು ಖನಿಜಗಳು ಅಜವಾನದಲ್ಲಿ ಕಂಡುಬರುತ್ತವೆ.

ಅಜವಾನ ಕಷಾಯ ಮಾಡುವುದು ಹೇಗೆ?
4 ಸ್ಪೂನ್ ಅಜವಾನ, 3 ಬೆಳ್ಳುಳ್ಳಿ ಎಸಳು, 2 ಲವಂಗ, 2 ಕರಿಮೆಣಸು, 1 ಗ್ಲಾಸ್ ನೀರು
ಈ ಕಷಾಯ ಮಾಡಲು, ಒಂದು ಪಾತ್ರೆಯಲ್ಲಿ ಒಂದು ಲೋಟಾ ನೀರನ್ನು ಹಾಕಿಕೊಂಡು, ಕುದಿಯಲು ಇಡಿ. ಇದಕ್ಕೆ 4 ಸ್ಪೂನ್ ಅಜವಾನ್, 3 ಬೆಳ್ಳುಳ್ಳಿ ಎಸಳು, 2 ಲವಂಗ, 2 ಕರಿಮೆಣಸುಗಳನ್ನು ರುಬ್ಬಿ ಸೇರಿಸಿ. ನೀರು ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಕುದ್ದ ನೀರನ್ನು ಸೋಸಿಕೊಂಡು ಕುಡಿದರೆ, ಉತ್ತಮ.
ಅಜವಾನ್ ಕಷಾಯ ಎಷ್ಟು ಬಾರಿ ಸೇವಿಸಿದರೆ ಬೆಸ್ಟ್?
ಹೀಗೆ ಮಾಡಿಟ್ಟ ಕಷಾಯವನ್ನು ದಿನಕ್ಕೆ ಎರಡು ಬಾರಿ ಮಾತ್ರ ಕುಡಿಯಬೇಕು. ಇದನ್ನು ಯಾವಾಗ ಬೇಕಾದರೂ ಸೇವಿಸಿದರೆ ಕೆಲವೇ ದಿನಗಳಲ್ಲಿ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಕುಡಿದರೆ ಆರೋಗ್ಯಕ್ಕೆ ಉತ್ತಮ. ಇಲ್ಲವಾದರೆ ಹೊಟ್ಟೆಯಲ್ಲಿ ಬಿಸಿಯಾಗಬಹುದು.
ಇನ್ನು ಈ ಮೇಲಿನ ಪದಾರ್ಥಗಳು ನಿಮ್ಮ ದೇಹ ಹಾಗೂ ಆರೋಗ್ಯಕ್ಕೆ ಹೊಂದಿಕೊಳ್ಳುತ್ತವೇಯೋ ಇಲ್ಲವೋ ಎಂದು ಒಮ್ಮೆ ನಿಮ್ಮ ವೈದ್ಯರ ಬಳಿ ಸಲಹೆಯನ್ನು ಪಡೆದರೆ ಒಳ್ಳೆಯದು.












Click it and Unblock the Notifications