Bendekayi Bajji Recipe: ಈ ಮಳೆಗೆ ನಿಮ್ಮ ಮನಸ್ಸು ಬಯಸೋದು ಬೆಂಡೆಕಾಯಿ ಬಜ್ಜಿನಾ? ತಯಾರಿಸುವ ವಿಧಾನ ಇಲ್ಲಿದೆ...
ಜೋರು ಮಳೆ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ತೀವ್ರಗೊಂಡಿದೆ. ಮಳೆ ಹಾಗೂ ಮೋಡ ಕವಿದ ವಾತಾವರಣದಲ್ಲಿ ಮನಸ್ಸು ಬಯಸೋದು ಬಿಸಿ ಬಿಸಿ ಬಜ್ಜಿಯನ್ನ. ನಿಮಗೂ ಕೂಡ ಈ ಮಳೆಯಲ್ಲಿ ಬಜ್ಜಿ ತಿನ್ನಬೇಕು ಅನಿಸುತ್ತಿದ್ದರೆ ಈ ಬೆಂಡೆಕಾಯಿ ಬಜ್ಜಿಯನ್ನೊಮ್ಮೆ ಟ್ರೈ ಮಾಡಿ.
ಬೆಂಡೆಕಾಯಿ ಕೆಲವರ ಅಚ್ಚುಮೆಚ್ಚಿನ ತರಕಾರಿ. ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದನ್ನು ಬಳಸಿ ಬಜ್ಜಿ ತಯಾರಿಸಿದರೆ ಹಾಹಾ... ಅದರ ರುಚಿ ತಿಂದವರಿಗೇ ಗೊತ್ತು. ಈ ವಿಧಾನದಲ್ಲಿ ನೀವು ಬೆಂಡೆಕಾಯಿ ಬಜ್ಜಿ ತಯಾರಿಸಿದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ತಡ ಮಾಡುವುದು ಬೇಡ ಕರಂಕುರುಂ ಬೆಂಡೆಕಾಯಿ ಬಜ್ಜಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಬೆಂಡೆಕಾಯಿ 10-15
* ಕಡಲೆಬೇಳೆ ಹಿಟ್ಟು ಅರ್ಧ ಕಪ್
* ಕಾರ್ನ್‌ಫ್ಲೋರ್ 2 ಚಮಚ
* ಅಕ್ಕಿ ಹಿಟ್ಟು 1 ಚಮಚ
* ಓಂಕಾಳು ಅರ್ಧ ಟೇಬಲ್ ಸ್ಪೂನ್
* ಅಡುಗೆ ಸೋಡ ಚಿಟಿಕೆಯಷ್ಟು
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ ಕರಿಯಲು ಬೇಕಾಗುವಷ್ಟು
* ಟೊಮೆಟೋ 2
* ಜೀರಿಗೆ ಪುಡಿ
*ಹಸಿಮೆಣಸಿನಕಾಯಿ 3

ತಯಾರಿಸುವ ವಿಧಾನ:-
* ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಹಾಕಿ ಒಣಗಲು ಬಿಡಿ
* ಒಂದು ಪಾತ್ರೆಯಲ್ಲಿ ಕಡಲೇಬೇಳೆ ಹಿಟ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕಾರ್ನ್‌ಫ್ಲೋರ್, ಅಕ್ಕಿ ಹಿಟ್ಟು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಓಂಕಾಳು ಹಾಕಿ ಚೆನ್ನಾಗಿ ಕಲಸಿ ಒಂದು ಪಾತ್ರೆಯನ್ನು ಮುಚ್ಚಿ 20 ನಿಮಿಷ ಬಿಡಿ.
* ನಂತರ ಬೆಂಡೆಕಾಯಿಯನ್ನು ಮಧ್ಯಭಾಗದಲ್ಲಿ ಸೀಳಿಕೊಳ್ಳಿ
* ಅದರೊಳಗೆ ಜೀರಿಗೆ ಹಾಗೂ ಉಪ್ಪು ಮಿಶ್ರಣವನ್ನು ತುಂಬಿ
*ಬಳಿಕ ಟೊಮೆಟೊವನ್ನು ಕಟ್ ಮಾಡಿಕೊಂಡು ಅದನ್ನು ಎಣ್ಣೆಯಲ್ಲಿ ಹಾಕಿ ಬಾಡಿಸಿ, ಅದಕ್ಕೆ ಕಟ್ ಮಾಡಿ ಹಸಿಮೆಣಸಿನಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಎರಡನ್ನೂ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿ.
* ಈ ರುಬ್ಬಿದ ಮಿಶ್ರಣವನ್ನು ಎಲ್ಲಾ ಬೆಂಡೆಕಾಯಿಯಲ್ಲಿ ಸ್ವಲ್ಪ ಸ್ವಲ್ಪ ತುಂಬಿ
* ಇದಾದ ಬಳಿಕ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬೆಂಡೆಕಾಯಿಯನ್ನು ಹುರಿದುಕೊಳ್ಳಿ.
* ನಂತರ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿ
* ಎಣ್ಣೆ ಬಿಸಿ ಆದ ಮೇಲೆ ಹಿಟ್ಟಿನಲ್ಲಿ ಹುರಿದ ಬೆಂಡೆಕಾಯಿಗಳನ್ನು ಅದ್ದಿ ಕರಿಯಿರಿ.
* ಕಂದು ಬಣ್ಣ ಬರುವವರೆಗೂ ಹುರಿದರೆ ಬಿಸಿ ಬಿಸಿ ಬೆಂಡೆಕಾಯಿ ಬಜ್ಜಿ ಸವಿಯಲು ಸಿದ್ಧ.












Click it and Unblock the Notifications