ದೀಪಾವಳಿಯ ಮೊದಲು ಬೇ ಎಲೆಯಿಂದ ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದು ಹೇಗೆ?
ಪಲಾವ್ ಎಲೆ... ಪಲಾವ್ ಎಲೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇದು ಇಲ್ಲದೇ ಇದ್ದರೆ ಅಡುಗೆಯಲ್ಲಿ ಘಮ ಮಾತ್ರವಲ್ಲದೆ ರುಚಿ ಕೂಡ ಇರುವುದಿಲ್ಲ. ಕೇವಲ ಅಡುಗೆಗೆ ಮಾತ್ರವಲ್ಲದೆ ಈ ಎಲೆ ಮನೆಯ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವುದು, ಜೊತೆಗೆ ಹಲವಾರು ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ಹೌದು.. ವೈಯಕ್ತಿಕ ಜೀವನದಲ್ಲಿ ಬರುವ ಆರ್ಥಿಕ ಸಮಸ್ಯೆಗಳಿಂದ ಹಿಡಿದು ಅನಾವಶ್ಯಕ ಜಗಳದವರೆಗೆ ಹಲವಾರು ಸಮಸ್ಯೆಗಳನ್ನು ತಡೆಯಲು ಪಲಾವ್ ಎಲೆ (Bay Leaf ) ಕೆಲಸ ಮಾಡುತ್ತದೆ. ಹೀಗಾಗಿ ಜ್ಯೋತಿಷ್ಯದಲ್ಲಿ ಇದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಹಾಗಾದರೆ ಪಲಾವ್ ಎಲೆಯನ್ನು ಯಾವ ರೀತಿ ಬಳಕೆ ಮಾಡಬೇಕು. ಅದರಿಂದಾಗುವ ಪ್ರಯೋಜನಗಳ ಬಗ್ಗೆ ಈಗ ತಿಳಿಯೋಣ.

ಪಲಾವ್ ಎಲೆ ಸಂಬಂಧಿಸಿದ ಪರಿಹಾರಗಳು
ನಿಮ್ಮ ಪ್ರಗತಿಯು ಸ್ಥಗಿತಗೊಂಡಿದ್ದರೆ ಮತ್ತು ಹಣದ ಹರಿವಿನಲ್ಲಿ ಅನೇಕ ಅಡೆತಡೆಗಳು ಇದ್ದಲ್ಲಿ, ಈ ಪಲಾವ್ ಎಲೆಯನ್ನು (Tej Patta) ಪರಿಹಾರಗಳಾಗಿ ಬಳಸಬಹುದು. ಪ್ರತಿ ಶನಿವಾರ ನೀವು 5 ಪಲಾವ್ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು 5 ಕರಿಮೆಣಸುಗಳೊಂದಿಗೆ ಸುಡಬೇಕು. ಅದರ ಹೊಗೆಯನ್ನು ಮನೆಯಾದ್ಯಂತ ಹರಡಬೇಕು. ಈ ಪರಿಹಾರದಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರವಾಗುತ್ತವೆ.
ಅನಾವಶ್ಯಕ ಜಗಳ
ಮನೆಯಲ್ಲಿ ಅನಾವಶ್ಯಕ ಜಗಳಗಳಿದ್ದರೆ ಅಥವಾ ನೀವು ದುಃಸ್ವಪ್ನಗಳನ್ನು ಹೊಂದಿದ್ದರೆ, ಈ ಸುಲಭ ಪರಿಹಾರವನ್ನು ಪ್ರಯತ್ನಿಸಿ. ದಿಂಬಿನ ಕೆಳಗೆ ಪಲಾವ್ ಎಲೆಯನ್ನು ಇರಿಸಿ. ಈ ಸುಲಭ ಪರಿಹಾರದಿಂದ ದುಃಸ್ವಪ್ನಗಳು ಬರುವುದಿಲ್ಲ ಮತ್ತು ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಹಣದ ಕೊರತೆಗೆ ಪರಿಹಾರ
ಮನೆಯಲ್ಲಿ ಮತ್ತು ಕೈಯಲ್ಲಿ ಹಣವಿಲ್ಲದಿದ್ದರೆ ಮತ್ತು ನಿರಂತರವಾಗಿ ಹಣದ ನಷ್ಟವಾಗುತ್ತಿದ್ದರೆ, ಲಕ್ಷ್ಮಿ ದೇವಿಯ ಪಾದಗಳಿಗೆ ಒಂದು ಎಲೆಯನ್ನು ಅರ್ಪಿಸಿ ಮತ್ತು ನಿಮ್ಮ ಪರ್ಸ್‌ನಲ್ಲಿ ಒಂದು ಎಲೆಯನ್ನು ಇರಿಸಿ. ಈ ಪಲಾವ್ ಎಲೆ ಸಂಪತ್ತನ್ನು ಸೃಷ್ಟಿಸುತ್ತದೆ. ಮನೆಯಲ್ಲಿ ಯಾವತ್ತೂ ಹಣದ ಕೊರತೆ ಇರುವುದಿಲ್ಲ.
ಇಷ್ಟಾರ್ಥಗಳು ಈಡೇರಿಕೆ
ಬೇವಿನ ಎಲೆಯ ಮೇಲೆ ಸಿಂಧೂರ ತಿಲಕವನ್ನು ಹಚ್ಚಿ ಅದರ ಮೇಲೆ ನಿಮ್ಮ ಮನದಾಳದ ಆಸೆಯನ್ನು ಬರೆದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಥವಾ ನಿಮ್ಮ ಮನೆ ದೇವರ ದೇವಸ್ಥಾನದಲ್ಲಿ ಇಡಿ. ಇದರಿಂದ ಇಷ್ಟಾರ್ಥಗಳು ಶೀಘ್ರದಲ್ಲೇ ಈಡೇರುತ್ತವೆ.
ಕೆಟ್ಟ ದೃಷ್ಟಿ ತಪ್ಪಿಸಲು
ನಿಮ್ಮ ಮನೆಗೆ ಮತ್ತೆ ಮತ್ತೆ ಕೆಟ್ಟ ಕಣ್ಣು ಬೀಳುತ್ತಿದ್ದರೆ, 7 ಪಲಾವ್ ಎಲೆಗಳು ಮತ್ತು ಒಂದು ಚಮಚ ಉಪ್ಪನ್ನು ತೆಗೆದುಕೊಳ್ಳಿ. ಅದನ್ನು ತಲೆಯ ಮೇಲೆ 7 ಬಾರಿ ಸುತ್ತಿಸಿ. ಇದರ ನಂತರ ಈ ಎಲೆಗಳನ್ನು ಮನೆಯ ಹೊರಗೆ ಮರದ ಕೆಳಗೆ ಇರಿಸಿ. ಈ ಪರಿಹಾರವನ್ನು ಅನುಸರಿಸುವುದರಿಂದ ಮನೆಯ ಮೇಲೆ ಕೆಟ್ಟ ಕಣ್ಣು ಬೀಳುವುದಿಲ್ಲ.
ವೈವಾಹಿಕ ಜೀವನದಲ್ಲಿ ಸಮಸ್ಯೆ
ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಅಥವಾ ನಿಮ್ಮ ಸಂಗಾತಿಯೊಂದಿಗೆ ಯಾವುದೇ ರೀತಿಯ ಉದ್ವೇಗದ ಸಂದರ್ಭದಲ್ಲಿ, 2 ಒಣ ಪಲಾವ್ ಎಲೆಗಳನ್ನು ತೆಗೆದುಕೊಂಡು ಕನಿಷ್ಠ 7 ದಿನಗಳ ಕಾಲ ಸಂಜೆ ಮನೆಯಲ್ಲಿ ಸುಟ್ಟುಹಾಕಿ. ಇದನ್ನು ಮಾಡುವುದರಿಂದ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಹೊಂದಿದೆ. ಮಾಹಿತಿಯನ್ನು ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಪಟ್ಟ ಪರಿಣಿತರನ್ನು ಸಂಪರ್ಕಿಸಿ)











Click it and Unblock the Notifications