Beauty Tips: ನೈಸರ್ಗಿಕ ಅರಿಶಿನ ಫೇಸ್ ಪ್ಯಾಕ್ ಮನೆಯಲ್ಲೇ ತಯಾರಿಸಿ- ಪ್ರಯೋಜನ ಏನು ಗೊತ್ತಾ?
ಸುಂದರವಾಗಿ ಕಾಣಬೇಕು ಅಂತ ಯಾರಿಗೆ ತಾನೆ ಆಸೆ ಇರಲ್ಲ ಹೇಳಿ. ಇದಕ್ಕಾಗಿ ಹುಡುಗಿಯರು ಮುಖಕ್ಕೆ ಅನೇಕ ವಿಧದ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ದುಬಾರಿ ಹಣ ನೀಡಿ ಕ್ರೀಂ, ಫೇಶಿಯಲ್, ಬ್ಲೀಚ್ ಹಾಗೂ ಸೌಂದರ್ಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಇದರಿಂದ ಪ್ರಯೋಜನವಾಗುವುದಕ್ಕಿಂತ ತ್ವಚೆ ಹಾಳಾಗುವ ಸಂದರ್ಭಗಳೇ ಹೆಚ್ಚು. ನೀವೇನಾದ್ರು ನಿಮ್ಮ ತ್ವಚೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದರೆ ಅರಿಶಿನ ಫೇಸ್ ಪ್ಯಾಕ್ ಬಳಸಿ. ಇದನ್ನು ನೀವು ಮನೆಯಲ್ಲೇ ತಯಾರಿಸಬಹುದು.
ತಕ್ಷಣ ಪಾರ್ಟಿ, ಫಂಕ್ಷನ್‌ಗಳಿಗೆ ಹೋಗುವ ಸಂದರ್ಭ ಬಂದಲ್ಲಿ ಈ ಫೇಸ್ ಪ್ಯಾಕ್ ತಯಾರಿಸಿ ಬಳಸಬಹುದು. ಹಾಗಾದರೆ ಇದನ್ನು ತಯಾರಿಸುವುದು ಹೇಗೆ? ಜೊತೆಗೆ ಇದನ್ನು ತ್ವಚೆಗೆ ಅನ್ವಯಿಸುವ ವಿಧಾನವನ್ನು ತಿಳಿಯಿರಿ. ಹಾಗಾದರೆ ಮೊದಲಿಗೆ ಅರಿಶಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಶುದ್ಧ ಅರಿಶಿನ ಪುಡಿ 50 ಗ್ರಾಂ
* ಅಕ್ಕಿ ಒಂದು ಕಪ್
* ಕೊಬ್ಬರಿ ಎಣ್ಣೆ 2 ಟೇಬಲ್ ಸ್ಪೂನ್
* ನಿಂಬೆಹಣ್ಣು
ತಯಾರಿಸುವ ವಿಧಾನ:-
* ಅರಿಶಿನ ಪುಡಿಗೆ ಅಕ್ಕಿ ತೊಳೆದ ನೀರನ್ನು ಹಾಕಿ ಹಾಗೂ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ಬಿಡಿ. ನಂತರ ಇದಕ್ಕೆ ಮೂರು ಹನಿ ನಿಂಬೆಹಣ್ಣಿನ ರಸವನ್ನು ಬೆರೆಸೆ ಮಿಕ್ಸ್ ಮಾಡಿದರೆ ನೈಸರ್ಗಿಕ ಅರಿಶಿನ ಫೇಸ್ ಪ್ಯಾಕ್ ರೆಡಿಯಾಗುತ್ತದೆ.
ತ್ವಚೆಗೆ ಅನ್ವಯಿಸುವ ವಿಧಾನ:-
*ಅದನ್ನು ನಿಮ್ಮ ಇಡೀ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
*10-15 ನಿಮಿಷಗಳ ನಂತರ ಮುಖ ಮತ್ತು ಕುತ್ತಿಗೆಯನ್ನು ಚೆನ್ನಾಗಿ ತೊಳೆಯಿರಿ.
*ನಂತರ, ಮುಖಕ್ಕೆ ಮಾಯಿಶ್ಚರೈಸರ್ ಕ್ರೀಂ ಹಚ್ಚಿ.
ಪ್ರಯೋಜನಗಳು:-
ಅರಿಶಿನ ತ್ವಚೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಹಿಂದಿನ ಕಾಲದ ಮಹಿಳೆಯರು ಹಸಿ ಅರಿಶಿನದ ಕೊಂನನ್ನು ಕಲ್ಲಿನಲ್ಲಿ ರುಬ್ಬಿಕೊಂಡು ತ್ವಚೆಗೆ ಅನ್ವಯಿಸುತ್ತಿದ್ದರು. ಅರಿಶಿನದ ಫೇಸ್ ಪ್ಯಾಕ್ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖದ ಕಲೆಗಳನ್ನು ತೆಗೆದುಹಾಕಲು ಈ ಫೇಸ್ ಪ್ಯಾಕ್ ಸಹಾಯ ಮಾಡುತ್ತದೆ ಮತ್ತು ಅದರಿಂದ ಇನ್ನೂ ಅನೇಕ ಪ್ರಯೋಜನಗಳು ಸಿಗಲಿದೆ.
*ಮುಖದಲ್ಲಿ ನೆರಿಗೆಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಮೂಡದಂತೆ ತಡೆಯಲು ಸಹಾಯ ಮಾಡುತ್ತದೆ.
*ಸೋಂಕುಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ.
* ಮುಖದಲ್ಲಿ ಮೊಡವೆ ಮತ್ತು ಗುಳ್ಳೆಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅರಿಶಿನದ ಫೇಸ್ ಪ್ಯಾಕ್ ಬಹಳ ಪ್ರಯೋಜನಕಾರಿಯಾಗಿದೆ.
* ಅರಿಶಿನದ ಫೇಸ್ ಪ್ಯಾಕ್ ಚರ್ಮವನ್ನು ಬಿಳಿಯಾಗಿಸುವ ಗುಣಗಳನ್ನು ಹೊಂದಿದೆ.
* ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ, ಇದು ಒಣ ಚರ್ಮದ ಸಮಸ್ಯೆಗಳನ್ನು ದೂರ ಮಾಡುತ್ತದೆ.
* ಇದು ಚರ್ಮದ ನೈಸರ್ಗಿಕ ತೈಲವನ್ನು ಕಾಪಾಡಿ ಹೆಚ್ಚುವರಿ ತೈಲವನ್ನು ಹೀರಿಕೊಳ್ಳುತ್ತದೆ.












Click it and Unblock the Notifications