Weight loss: ಬಾರ್ಲಿಯ ಗಂಜಿ ಬೊಜ್ಜು ಕರಗಿಸಲು ಸಹಾಯಕ: ಮಾಡುವುದು ಹೇಗೆ?
ದೇಹದಲ್ಲಿನ ಕೊಬ್ಬು ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ಖಾಯಿಲೆ ರೀತಿ ಕಾಣಿಸಿಕೊಂಡಿದೆ. ಈ ಸಮಸ್ಯೆಯಿಂದ ಹೇಗೆ ಹೊರ ಬರುವುದು ಎಂದು ಅಸಂಖ್ಯಾತರು ತಲೆ ಕೆಡಿಸಿಕೊಂಡಿದ್ದಾರೆ. ಕೊಬ್ಬನ್ನು ನಿಯಂತ್ರಿಸಲು ದಿನವೂ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಕೈ ಸುಟ್ಟುಕೊಂಡವರೇ ಹೆಚ್ಚು. ಅದೇನೇ ಪ್ರಯೋಗ ಮಾಡಿದರೂ ದೆಹದ ಕೊಬ್ಬು ಅಲಗಾಡುವ ಮಾತನ್ನೇ ಆಡುವುದಿಲ್ಲ.
ಕೊಬ್ಬನ್ನು ಕರಗಿಸಲು ಶತ ಪ್ರಯತ್ನ ಪಡುತ್ತಿರುವ ಅದೇಷ್ಟೋ ಜನ, ವಾಕಿಂಗ್, ಜಿಮ್, ಯೋಗಾ, ಪ್ರಾಣಾಯಾಮ, ಹೆಲ್ತಿ ಡಯೇಟ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದು ಕೈ ಹಿಡಿಯುತ್ತಿಲ್ಲ ಎಂಬ ಆತಂಕ ಅವರ ಮುಖದಲ್ಲಿ ಕಾಡುತ್ತಲೇ ಇರುತ್ತದೆ. ಹಾಗಿದ್ದವರಿಗೆ ಇಲ್ಲೊಂದು ಉಪಾಯ. ಈ ಒಂದು ವಿಧಾನವನ್ನು ಸಹ ಒಮ್ಮೆ ಪ್ರಯೋಗ ಮಾಡಿ ನೋಡಿ, ನಿಮ್ಮ ದೇಹದ ತೂಕದಲ್ಲಿ ವ್ಯತ್ಯಾಸ ಕಾಣಬಹುದು.

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಗಂಜಿ ಸೇವನೆಯು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಗಂಜಿ ಆರೋಗ್ಯಕರ ಮಾತ್ರವಲ್ಲ, ಅದರ ರುಚಿ ಕೂಡ ಅತ್ಯುತ್ತಮ. ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಗೋಧಿ ಗಂಜಿ, ಬೊಜ್ಜು ಕಡಿಮೆ ಮಾಡಲು ಬಾರ್ಲಿ ಗಂಜಿ ಹೆಚ್ಚು ಪ್ರಯೋಜನಕಾರಿ. ಐರನ್, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ, ಮೆಗ್ನೀಸಿಯಮ್, ಅಂಶಗಳು ಈ ಗಂಜಿಯಲ್ಲಿ ಹೇರಳವಾಗಿ ಇರುತ್ತವೆ. ಬಾರ್ಲಿ ಗಂಜಿಯನ್ನು ಸೇವಿಸುವುದರಿಂದ ಆಗುವ ಲಾಭವೇನು?, ಮಾಡುವ ವಿಧಾನ ಯಾವುದು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಬಾರ್ಲಿ ಗಂಜಿ ಸೇವಿಸುವುದರಿಂದ ಏನು ಲಾಭ?
ನಿಮ್ಮ ರಕ್ತದಲ್ಲಿರು ಸಕ್ಕರೆ ಅಂಶ, ಕೆಟ್ಟ ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳಿಂದ ಅದೆಷ್ಟೋ ಜನ ಬಳಲುತ್ತಿದ್ದಾರೆ. ಅಂತಹವಾರಿಗೆ , ಬಾರ್ಲಿ ಗಂಜಿ ನಿಮಗೆ ಉತ್ತಮ ಆಯ್ಕೆ. ಇದನ್ನು ಸೇವಿಸುವುದರಿಂದ ಈ ಮೇಲಿನ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.

ಬಾರ್ಲಿ ಗಂಜಿಯಲ್ಲಿ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುತ್ತದೆ. ಅಲ್ಲದೆ ಬೊಜ್ಜನ್ನು ಕರಗಿಸಲು ಸಹಾಯಕವಾಗುತ್ತದೆ. ಬಾರ್ಲಿ ಗಂಜಿ ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ದುರ್ಬಲ ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ತೂಕ ನಷ್ಟದ ಕಷ್ಟಕರ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಬಾರ್ಲಿ ಗಂಜಿ ಮಾಡಲು ಬೇಕಾಗುವ ಪದಾರ್ಥಗಳು:
1 ಚಮಚ ದೇಸಿ ತುಪ್ಪ, 1 ಕ್ಯಾಪ್ಸಿಕಂ, 1 ಈರುಳ್ಳಿ, 1 ಹಸಿರು ಮೆಣಸಿನಕಾಯಿ, 1 ಕ್ಯಾರೆಟ್ ಮತ್ತು 3 ರಿಂದ 4 ಬೀನ್ಸ್, ಅರ್ಧ ಕಪ್ ಬಾರ್ಲಿ
ಬಾರ್ಲಿ ಗಂಜಿ ಮಾಡುವುದು ಹೇಗೆ?
ಅರ್ಧ ಕಪ್ ಬಾರ್ಲಿಯನ್ನು 1 ಚಮಚ ದೇಸಿ ತುಪ್ಪದಲ್ಲಿ ಹುರಿದು ಇಟ್ಟುಕೊಂಡು ಬಿಡಿ. ಈಗ 1 ಕ್ಯಾಪ್ಸಿಕಂ, 1 ಈರುಳ್ಳಿ, 1 ಹಸಿರು ಮೆಣಸಿನಕಾಯಿ, 1 ಕ್ಯಾರೆಟ್ ಮತ್ತು 3 ರಿಂದ 4 ಬೀನ್ಸ್ ಕತ್ತರಿಸಿಕೊಳ್ಳಲಿ. ಈಗ ಬಾಣಲೆಯಲ್ಲಿ 1 ಚಮಚ ಸಾಸಿವೆ ಎಣ್ಣೆಯನ್ನು ಹಾಕಿ ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಕಂದು ಬಣ್ಣಕ್ಕೆ ತಿರುಗುವವರೆಗೂ ಫ್ರೈ ಮಾಡಿ. ಈ ಮಿಶ್ರಣಕ್ಕೆ ಒಂದು ಲೋಟ ನೀರ ಬೇರಿಸಿ, ರುಚಿಗೆ ತಕ್ಕಂತೆ ಉಪ್ಪು ಹಾಕಿ ಕುಡಿಯಿರಿ.












Click it and Unblock the Notifications